ಕನ್ನಡ ಚಿತ್ರರಂಗದಲ್ಲಿ ಬಾಲನಟನಾಗಿ ಗುರುತಿಸಿಕೊಂಡಿರುವ ಮಾಸ್ಟರ್ ಆನಂದ್ ಅವರು, ನಾಯಕನಾಗಿ ಕೆಲವು ಸಿನಿಮಾಗಳಲ್ಲಿ ಅಭಿನಯಿಸಿದರು ಜೊತೆಗೆ ಕೆಲವು ಧಾರಾವಾಹಿಗಳನ್ನು ಕೂಡ ನಿರ್ದೇಶನ ಮಾಡಿದರು. ಕಿರುತೆರೆಯಲ್ಲಿ ನಿರೂಪಕರಾಗಿ ಕೂಡ ಗುರುತಿಸಿಕೊಂಡಿದ್ದಾರೆ. ಆನಂದ್ ಅವರು ಜೀಕನ್ನಡ ವಾಹಿನಿಯ ಕಾಮಿಡಿ ಕಿಲಾಡಿಗಳು ಹಾಗೂ ಡ್ರಾಮ ಜ್ಯೂನಿಯರ್ಸ್ ಶೋ ನಿರೂಪಣೆ ಮಾಡುತ್ತಾರೆ. ಇವರು ಕಾಮಿಡಿ ಕಿಲಾಡಿಗಳು ಶೋ ಮೂಲಕ ಪರಿಚಯವಾದ ನಯನ ಅವರ ಬಗ್ಗೆ ಇದೀಗ ಹೊಸ ಸುದ್ದಿಯೊಂದು ಕೇಳಿಬಂದಿದೆ.
ಮಾಸ್ಟರ್ ಆನಂದ್ ಅವರ ಪತ್ನಿ ಯಶಸ್ವಿನಿ ಅವರ ಬಗ್ಗೆ ಕೂಡ ನಮಗೆಲ್ಲಾ ಗೊತ್ತೇ ಇದೆ. ಇವರು ನನ್ನಮ್ಮ ಸೂಪರ್ ಸ್ಟಾರ್ ಶೋನಲ್ಲಿ ಮಗಳ ಜೊತೆ ಸ್ಪರ್ಧಿಸಿದ್ದರು. ಯಶಸ್ವಿನಿ ಹಾಗೂ ಅವರ ಮಗಳು ವಂಶಿಕಾ ಎಷ್ಟರ ಮಟ್ಟಿಗೆ ಫೇಮಸ್ ಆಗಿದ್ದರು ಎಂದರೆ, ಸೋಷಿಯಲ್ ಮೀಡಿಯಾದಲ್ಲಿ ವಂಶಿಕಾ ಪಟಪಟ ಅಂತ ಮಾತಾಡೋ ವಿಡಿಯೋಗಳು ವೈರಲ್ ಆಗಿದ್ದವು. ನನ್ನಮ್ಮ ಸೂಪರ್ ಸ್ಟಾರ್ ನಂತರ ವಂಶಿಕಾ ಗಿಚ್ಚಿ ಗಿಲಿಗಿಲಿ ಶೋನಲ್ಲಿ ಸಹ ಕಾಣಿಸಿಕೊಂಡಿದ್ದರು. ಮಗಳ ಜೊತೆಗೆ ಅಮ್ಮ ಕೂಡ ವೈರಲ್ ಆಗಿದ್ದರು. ಸೋಷಿಯಲ್ ಮೀಡಿಯಾದಲ್ಲಿ ಇವರಿಬ್ಬರು ಫೇಮಸ್ ಆಗಿದ್ದಾರೆ.

ಹಾಗೆಯೇ ಯಶಸ್ವಿನಿ ಅವರು ಯೂಟ್ಯೂಬ್ ಚಾನೆಲ್ ಸಹ ಶುರು ಮಾಡಿದ್ದು, ಕನೆಕ್ಟ್ ಕನ್ನಡ ಹೆಸರಿನ ಇವರ ಯೂಟ್ಯೂಬ್ ಚಾನೆಲ್ ನಲ್ಲಿ ಅತಿಥಿಗಳನ್ನು ಕರೆಸಿ, ಪಾಡ್ ಕಾಸ್ಟ್ ನಡೆಸುತ್ತಾರೆ. ಒಳ್ಳೆಯ ವ್ಯಕ್ತಿಗಳನ್ನೇ ಇವರು ಕಾರ್ಯಕ್ರಮಕ್ಕೆ ಕರೆಸಿದ್ದು, ಯಶಸ್ವಿನಿ ಅವರ ಯೂಟ್ಯೂಬ್ ಚಾನೆಲ್ ಶೋಗೆ ಇತ್ತೀಚೆಗೆ ಕಾಮಿಡಿ ಕಿಲಾಡಿಗಳು ಖ್ಯಾತಿಯ ನಯನ ಬಂದಿದ್ದರು. ಇವರು ಹಾಗೂ ಯಶಸ್ವಿನಿ ಇಬ್ಬರು ಬಹಳ ಕ್ಲೋಸ್. ಹಾಗೆಯೇ ನಯನಾ ಅವರಿಗೆ ಆನಂದ್ ಅವರ ಮೇಲೆ ಬಹಳ ಕ್ರಶ್ ಇದೆ ಎನ್ನುವ ಹಾಗೆ ಕಾರ್ಯಕ್ರಮದಲ್ಲಿ ತೋರಿಸಲಾಗಿತ್ತು. ಇದೀಗ ಯಶಸ್ವಿನಿ ಅವರ ಜೊತೆಗೆ ಮಾತನಾಡುವಾಗ, ನಯನಾ ಮತ್ತೊಂದು ವಿಚಾರ ತಿಳಿಸಿದ್ದಾರೆ.
ಕಾಮಿಡಿ ಕಿಲಾಡಿಗಳು ಶೋನಲ್ಲಿ ನಯನಾ ಅವರ ಅಭಿನಯ ನೋಡಿ, ಆನಂದ್ ಅವರು ಈ ಹುಡುಗಿ ಶೋನಲ್ಲಿ ಇರಬೇಕು ಎಂದು ನಯನಾ ಅವರಃ ಸೆಲೆಕ್ಟ್ ಆಗೋಕೆ ಹೆಲ್ಪ್ ಮಾಡಿದರಂತೆ. ನಯನಾ ಅವರಿಗೆ ತಮ್ಮ ಮೇಲೆ ತಮಗೆ ಇಲ್ಲದ ನಂಬಿಕೆ ಆನಂದ್ ಅವರಿಗೆ ಇತ್ತು ಎಂದು ಸಂತೋಷದಿಂದ ಹೇಳಿದ್ದಾರೆ. ಆಗ ಯಶಸ್ವಿನಿ ಆಗಿನಿಂದಲೇ ಆನಂದ್ ಅವರಿಗೆ ನನ್ನಮೇಲೆ ಇಂಟರೆಸ್ಟ್ ಕಡಿಮೆ ಆಗಿರಬಹುದು ಎಂದಿದ್ದು, ಅದಕ್ಕೆ ನಯನಾ ಇಂಟೆರೆಸ್ಟ್ ಕಡಿಮೆ ಆಗಿದ್ದರೆ, ಇಬ್ಬರು ಮಕ್ಕಳು ಹೇಗಾದ್ವು, ಇಂಟೆರೆಸ್ಟ್ ಇಲ್ಲ ಅಂತ ಅವರನ್ನ ದೂರ ಹಾಕಿದ್ರೆ, ನಾನೇ ಅವರನ್ನ ನೋಡಿಕೊಳ್ತಾ ಇದ್ದೆ ಎಂದು ತಮಾಷೆ ಮಾಡಿದ್ದಾರೆ.

ನಯನಾ ಅವರಿಗೆ ಮಾಸ್ಟರ್ ಆನಂದ್ ಅವರ ಬಗ್ಗೆ ಗೌರವ ಅಭಿಮಾನ ಇತ್ತು. ಆದರೆ ಶೋನಲ್ಲಿ ಏನೇನೋ ಹೇಳಿ ಬೇರೆ ಫೀಲಿಂಗ್ ಬರೋ ಹಾಗೆ ಮಾಡಿದ್ರು, ಆನಂದ್ ಅವರ ಹೆಂಡತಿಯಾಗಿ ನೀವಾದ್ರೂ ಬೈತೀರ ಅಂದುಕೊಂಡ್ರೆ ನೀವು ಎಂಜಾಯ್ ಅಂತ ಹೇಳಿಬಿಟ್ರಿ. ನಿಮ್ಮಬ್ಬರಿಗೆ ಒಬ್ಬರ ಮೇಲೆ ಮತ್ತೊಬ್ಬರಿಗೆ ಇರುವ ನಂಬಿಕೆ ನೋಡಿದ್ರೆ ತುಂಬಾ ಸಂತೋಷ ಆಗುತ್ತೆ. ಇದರ ಬಗ್ಗೆ ನಾನು ಆನಂದ್ ಅವರ ಜೊತೆಗೆ ಕೂಡ ಹೇಳಿದ್ದೀನಿ ಎಂದು ನಯನಾ ಅವರು ಹೇಳಿದ್ದಾರೆ. ಇದೆಲ್ಲಾ ತಮಾಷೆ ಅಷ್ಟೇ ಆಗಿದ್ದರೂ, ಈ ಸುದ್ದಿ ಈಗ ಬಹಳ ವೈರಲ್ ಆಗಿದೆ.