ಯಾವುದೋ ವಸ್ತುವೋ, ವ್ಯಕ್ತಿಯೋ ಚೆನ್ನಾಗಿದ್ದಾರೆ ಎಂದರೆ ಬಂಗಾರದಂತೆ ಇದೆ, ಬಂಗಾರದಂತೆ ಇದ್ದಾರೆ ಎಂದು ಹೇಳುತ್ತಿರುತ್ತಾರೆ. ಜನರ ಪಾಲಿಗೆ ಬಂಗಾರ ಎಂದರೆ ಪ್ಯೂರಿಟಿ ಎಂದರ್ಥ. ಏನಾದರೂ ಇಷ್ಟ ಆಯ್ತು ಅಂದ್ರೆ ಅದನ್ನು ಬಂಗಾರಕ್ಕೆ ಹೋಲಿಕೆ ಮಾಡುತ್ತಿರುತ್ತಾರೆ. ಆದರೆ ನಾವು ಕೊಳ್ಳುವ ಬಂಗಾರದ ಪ್ಯೂರಿಟಿ ಪರೀಕ್ಷೆ ಎಷ್ಟು ಶುದ್ಧ ಎಂಬುದನ್ನು ಹೇಗೆ ಲೆಕ್ಕ ಮಾಡುವುದು? ಹಾಲ್ ಮಾರ್ಕ್ ಇದ್ದ ತಕ್ಷಣ ಅದು ಪ್ಯೂರ್ ಬಂಗಾರವೇ? ಈ ಬಗ್ಗೆ ಬಹುತೇಕ ಜನರಿಗೆ ಮಾಹಿತಿ ಇರೋದಿಲ್ಲ. ಬಂಗಾರದ ಅಂಗಡಿಯವ ಕೊಟ್ಟ ಬಂಗಾರದ ಪ್ಯೂರಿಟಿ ಪರೀಕ್ಷೆ ಮಾಡಿದ ಬಂಗಾರವನ್ನು ತೆಗೆದುಕೊಂಡು ಬರುವವರೇ ಹೆಚ್ಚಿರುತ್ತಾರೆ. ಆದ್ರೆ ಬಂಗಾರದ ಪ್ಯೂರಿಟಿ ಪರೀಕ್ಷೆ ಮಾಡಿ ಖರೀದಿ ಮಾಡುವುದು ಒಳ್ಳೆಯದು. ಜೊತೆಗೆ ಮಾರುಕಟ್ಟೆಯಲ್ಲಿ ಯಾವ ಯಾವ ರೀತಿಯ ಬಂಗಾರ ಇರುತ್ತದೆ ಎಂಬ ಅವಗಹನೆ ನಮಗೆ ಇದ್ದರೆ ಮೇಲು.
ಬಂಗಾರದ ಅಂಗಡಿಗಳಲ್ಲಿ ಸಾಮಾನ್ಯವಾಗಿ ಬಂಗಾರದ ಪ್ಯೂರಿಟಿ ಚೆಕ್ ಮಾಡೋದಕ್ಕಾಗಿ ಒಂದು ಪ್ಯೂರಿಟಿ ಮಷಿನ್ ಇಟ್ಟುಕೊಂಡಿರುತ್ತಾರೆ.. ಅದರ ಮೂಲ ಕ್ಷಣಗಳಲ್ಲಿ ಬಂಗಾರದ ಪ್ಯೂರಿಟಿಯನ್ನು ಚೆಕ್ ಮಾಡಲಾಗುತ್ತದೆ.. ನಾವು ಬಂಗಾರವನ್ನು ಮಾರುವುದಿದ್ದರೆ ವ್ಯಾಪಾರಿಗಳು ಅದರಲ್ಲಿ ಚೆಕ್ ಮಾಡಿ ನಮಗೆ ಪ್ಯೂರಿಟಿ ಆಧಾರದ ಮೇಲೆ ಹಣ ನೀಡುತ್ತಾರೆ.. ಆದ್ರೆ ಅವರು ನೀಡೋ ಬಂಗಾರದ ಪ್ಯೂರಿಟಿಯನ್ನು ನಾವು ಚೆಕ್ ಮಾಡೋದಕ್ಕೇ ಹೋಗೋದಿಲ್ಲ.. ತುಂಬಾ ಜನಕ್ಕೆ 24 ಕ್ಯಾರೆಟ್ ಹಾಗೂ 22 ಕ್ಯಾರೆಟ್ ಚಿನ್ನದ ಬಗ್ಗೆ ಗೊತ್ತಿದೆ.. ಆದ್ರೆ ಇದರಲ್ಲಿ ಮೋಸಗಳು ಕೂಡಾ ನಡೆಯುತ್ತವೆ.. ಹೀಗಾಗಿ ಯಾವ ಕ್ಯಾರೆಟ್ ಚಿನ್ನ ಎಷ್ಟು ಪ್ಯೂರಿಟಿಯಾಗಿರುತ್ತದೆ ಎಂದು ತಿಳಿದುಕೊಳ್ಳಬೇಕಾಗುತ್ತದೆ..

ಹಾಲ್ ಮಾರ್ಕ್ ಇದ್ದರೆ ಮಾತ್ರವೇ ಒಳ್ಳೆಯ ಬಂಗಾರವೇ..?
ಅಷ್ಟಕ್ಕೂ ಬಂಗಾರ ಖರೀದಿ ಮಾಡುವ ಮೊದಲು ಏನೆಲ್ಲಾ ಪರೀಕ್ಷೆ ಮಾಡಬೇಕು ಎಂಬುದನ್ನು ಒಮ್ಮೆ ನೋಡೋಣ.. ಸಾಮಾನ್ಯವಾಗಿ ಮಾರುಕಟ್ಟೆಯಲ್ಲಿ 22 ಕ್ಯಾರೆಟ್ ಪ್ಯೂರಿಟಿ ಬಂಗಾರದಲ್ಲಿ ಮಾಡಿದ ಅಭರಣಗಳೇ ಹೆಚ್ಚಿರುತ್ತವೆ.. ಅಂತಹ ಆಭರಣಗಳನ್ನು ಮಾರಾಟ ಮಾಡಬೇಕು ಎಂದರೆ ಬಿಐಎಸ್ ಕಾನೂನಿನ ಪ್ರಕಾರ ಅವುಗಳಿಗೆ ಹಾಲ್ ಮಾರ್ಕ್ ಹಾಕುವುದು ಕಡ್ಡಾಯವಾಗಿದೆ.
ಹಾಲ್ ಮಾರ್ಕ್ನಲ್ಲಿ ಬಿಐಎಸ್ ಲೋಗೋ 22ಕೆ916, ಹಾಲ್ ಮಾರ್ಕಿಂಗ್ ಯೂನಿಕ್ ಐಡೆಂಟಿಫಿಕೇಷನ್ ನಂಬರ್ಈ ಮೂರನ್ನೂ ಕಡ್ಡಾಯವಾಗಿ ಮುದ್ರಿಸಬೇಕಾಗುತ್ತದೆ.. ಈ ಮೂರಲ್ಲಿ ಒಂದು ಇಲ್ಲದೇ ಮಾರಾಟ ಮಾಡಿದರೆ ಅದು ಅಪರಾಧವಾಗುತ್ತದೆ.. ಹೀಗಾಗಿ ಹಾಲ್ ಮಾರ್ಕಿಂಗ್ ಇರುವ ಆಭರಣಗಳನ್ನೇ ಮಾರಾಟ ಮಾಡಬೇಕು. ಹಾಗೂ ಹಾಲ್ ಮಾರ್ಕಿಂಗ್ ಇರುವ ಆಭರಣಗಳನ್ನೇ ಜನ ಖರೀದಿ ಮಾಡುವುದು ಒಳ್ಳೆಯದು. ಯಾಕಂದ್ರೆ ಹಾಲ್ ಮಾರ್ಕ್ ಇರುವ ಆಭರಣಗಳಷ್ಟೇ ನಂಬಿಕೆ ಅರ್ಹ ಆಭರಣಗಳು. ಉಳಿದವುಗಳ ಪ್ಯೂರಿಟಿ ಬಗ್ಗೆ ಸಂಶಯ ಮೂಡುತ್ತದೆ.

ಬಿಐಎಸ್ ಕಾನೂನು 2016ರ ಪ್ರಕಾರ ಹಾಲ್ ಮಾರ್ಕ್ ಇಲ್ಲದೆ ಆಭರಣಗಳನ್ನು ಮಾರುವುದು ಅಥವಾ ಖರೀದಿ ಮಾಡುವುದು ಅಪರಾಧವಾಗುತ್ತದೆ.. ಇದಕ್ಕೆ ಎರಡು ವರ್ಷ ಜೈಲು ಶಿಕ್ಷೆ ಇಲ್ಲವೇ ಎರಡು ಲಕ್ಷ ರೂಪಾಯಿ ಹಾಗೂ ಅದಕ್ಕಿಂತ ಹೆಚ್ಚು ದಂಡ ಕಟ್ಟಬೇಕಾಗುತ್ತದೆ. ಕೆಲವೊಮ್ಮೆ ದಂಡದ ಜೊತೆಗೆ ಜೈಲು ಶಿಕ್ಷೆ ಕೂಡಾ ಅನುಭವಿಸಬೇಕಾದ ಪರಿಸ್ಥಿತಿ ಬರಬಹುದು. ಆಭರಣದ ಮೇಲೆ ಇರುವ ಹೆಚ್ಯೂಐಡಿ ನಂಬರ್ ಅನ್ನು ಬಿಐಎಸ್ ಕೇರ್ ಮೊಬೈಲ್ ಆಪ್ನಲ್ಲಿ ನಮೂದು ಮಾಡಿ ಅದು ನಿಜವಾದುದಾ..? ಅಥವಾ ನಕಲಿಯಾ ಎಂದು ಪರೀಕ್ಷೆ ಮಾಡಿಕೊಳ್ಳುವುದಕ್ಕೂ ಅವಕಾಶವಿದೆ.. ಹೀಗೆ ಪರೀಕ್ಷೆ ಮಾಡುವುದರಿಂದ ಮೋಸ ಹೋಗುವುದರಿಂದ ತಪ್ಪಿಸಿಕೊಳ್ಳಬಹುದು.

ಬಂಗಾರದ ಈ ಕ್ಯಾರೆಟ್ ಲೆಕ್ಕಾಚಾರ ಏನು..?
ಪ್ಯೂರಿಟಿ ಆಧಾರದ ಮೇಲೆ ಬಂಗಾರದಲ್ಲಿ ಹಲವು ವಿಧಗಳಿವೆ.. 24 ಕ್ಯಾರೆಟ್, 23 ಕ್ಯಾರೆಟ್, 22 ಕ್ಯಾರೆಟ್, 20, 18, 14 ಕ್ಯಾರೆಟ್ ಚಿನ್ನ ಕೂಡಾ ಸಿಗುತ್ತದೆ.. ಇದರಲ್ಲಿ 22, 18, 14 ಕ್ಯಾರೆಟ್ ಬಂಗಾರದಲ್ಲಿ ಆಭರಣಗಳನ್ನು ತಯಾರು ಮಾಡಲಾಗುತ್ತದೆ.. ಅಪ್ಪಟ ಬಂಗಾರದಲ್ಲಿ ಅಭರಣಗಳನ್ನು ತಯಾರು ಮಾಡುವುದಕ್ಕೆ ಆಗೋದಿಲ್ಲ.. 24 ಕ್ಯಾರೆಟ್ ಬಂಗಾರವೇ ಅಪ್ಪ ಬಂಗಾರ. ಇದರಲ್ಲಿ 99.5 ಪ್ಯೂರಿಟಿ ಇರುತ್ತದೆ.. ಇದು ತುಂಬಾ ಮೆಥುವಾಗಿರುತ್ತದೆ.. ಇದನ್ನು ಗಟ್ಟಿ ಮಾಡಿದರೆ ಮಾತ್ರ ಆಭರಣ ತಯಾರಿಸಲು ಸಾಧ್ಯವಾಗುತ್ತದೆ.. ಇಲ್ಲದಿದ್ದರೆ ಬಂಗಾರದ ಆಭರಣ ತಯಾರು ಮಾಡೋದಕ್ಕೆ ಆಗೋದಿಲ್ಲ.. ಹೀಗಾಗಿ, 24 ಕ್ಯಾರೆಟ್ ಚಿನ್ನಕ್ಕೆ ಒಂದಷ್ಟು ಲೋಹಗಳನ್ನು ಮಿಕ್ಸ್ ಮಾಡಿ 22 ಕ್ಯಾರೆಟ್ ಚಿನ್ನ ಮಾಡಿ, ಅದರಿಂದ ಆಭರಣಗಳನ್ನು ತಯಾರು ಮಾಡಲಾಗುತ್ತದೆ.. ನಾವು ಇತರ ಲೋಹಗಳನ್ನು ಎಷ್ಟು ಪ್ರಮಾಣದಲ್ಲಿ ಮಿಕ್ಸ್ ಮಾಡುತ್ತೇವೆ ಎಂಬುದರ ಮೇಲೆ ಬಂಗಾರದ ಕ್ಯಾರೆಟ್ ನಿರ್ಧಾರವಾಗುತ್ತದೆ..
995 ಪ್ಯೂರಿಟಿ ಇದ್ದರೆ ಅದನ್ನು 24 ಕ್ಯಾರೆಟ್ ಬಂಗಾರ ಎಂದು ನಿರ್ಧಾರ ಮಾಡಲಾಗುತ್ತದೆ. ಅಂದರೆ 1000 ಮಿಲಿಗ್ರಾಂ ಬಂಗಾರದ ಮಿಶ್ರಣದಲ್ಲಿ 99.5% ಬಂಗಾರ ಇರುತ್ತದೆ, ಇದನ್ನು ಪ್ಯೂರ್ ಗೋಲ್ಡ್ ಎಂದು ಪರಿಗಣಿಸಲಾಗುತ್ತದೆ. ಅದೇ 958 ಇದ್ದರೆ ಅದು 23 ಕ್ಯಾರೆಟ್ ಗೋಲ್ಡ್, 916 ಇದ್ದರೆ ಅದು 22 ಕ್ಯಾರೆಟ್ ಗೋಲ್ಡ್, 833 ಇದ್ದರೆ ಅದು 20 ಕ್ಯಾರೆಟ್, 750 ಇದ್ದರೆ ಅದು 18 ಕ್ಯಾರೆಟ್, 585 ಇದ್ದರೆ ಅದು 14 ಕ್ಯಾರೆಟ್ ಗೋಲ್ಡ್ ಎಂದು ಪರಿಗಣಿಸಬಹುದು. ಬಂಗಾರದ ಪ್ಯೂರಿಟಿ ಪರೀಕ್ಷೆ ವೇಳೆ, ಇಂಪ್ಯೂರಿಟಿ ಲೋಹಗಳನ್ನು ಮಿಶ್ರಣ ಮಾಡಿದ ನಂತರ ಅದರಲ್ಲಿ ಬಂಗಾರ ಎಷ್ಟು ಪರ್ಸೆಂಟ್ ಇದೆ ಎಂಬುದು ಪ್ರಮುಖವಾಗುತ್ತದೆ. ಶುದ್ಧ ಬಂಗಾರ ಖರೀದಿಗೆ ಬಂಗಾರದ ಪ್ಯೂರಿಟಿ ಪರೀಕ್ಷೆ ಮಾಡುವುದು ಅತ್ಯಗತ್ಯ.