ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಬಗ್ಗೆ ವಿಶೇಷವಾಗಿ ಹೇಳಬೇಕಿಲ್ಲ. ಇವರು ನಮ್ಮನ್ನು ಆಗಲಿ 3 ವರ್ಷ ಕಳೆದು ಹೋಗಿದ್ದರು, ಪುನೀತ್ ರಾಜ್ ಕುಮಾರ್ ಅವರನ್ನು ಯಾವ ಕನ್ನಡಿಗನು ಮರೆತಿಲ್ಲ. ಇಂದಿಗೂ ಎಲ್ಲರ ಪಾಲಿಗೆ ರಾಜಕುಮಾರನೇ ಆಗಿದ್ದಾರೆ ಅಪ್ಪು. ಪುನೀತ್ ಅವರ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರ ಬಗ್ಗೆ ಎಲ್ಲರಿಗೂ ಗೌರವವಿದೆ. ಅಶ್ವಿನಿ ಅವರು ಓದಿದ್ದೇನು? ಇವರು ಎಲ್ಲಿಯವರು? ಇವರ ತಂದೆ ಯಾರು ಗೊತ್ತಾ?
ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ಪುನೀತ್ ರಾಜ್ ಕುಮಾರ್ ಅವರ ಪತ್ನಿ ಎಂದು ಎಲ್ಲರಿಗೂ ಪರಿಚಿತ. ಅಶ್ವಿನಿ ಅವರನ್ನು ಕಂಡರೆ ಎಲ್ಲಾ ಅಭಿಮಾನಿಗಳಿಗೂ ಗೌರವ. ಅಪ್ಪು ಅವರು ಇದ್ದಾಗಲೇ ಅಶ್ವಿನಿ ಅವರು ಹಾಗೂ ಅಪ್ಪು ಅವರು ಸೇರಿ ಪಿ.ಆರ್.ಕೆ ಪ್ರೊಡಕ್ಷನ್ಸ್ ಸಂಸ್ಥೆಯನ್ನು ನಿರ್ಮಿಸಿದರು. ಈ ಒಂದು ಸಂಸ್ಥೆಯ ಮೂಲಕ ಅನೇಕ ಹೊಸಬರಿಗೆ ಅವಕಾಶ ಕೊಡಲಾಗುತ್ತಿದೆ. ಒಳ್ಳೆಯ ಕಥೆಗಳಿಗೆ ಪ್ರೋತ್ಸಾಹ ಸಿಗುತ್ತಿದೆ.

ಫ್ರೆಂಚ್ ಬಿರಿಯಾನಿ, ಮಾಯಾಬಜಾರ್, ಕವಲುದಾರಿ, ಓ2, ಆಚಾರ್ ಅಂಡ್ ಕೋ ಸೇರಿದಂತೆ ಹಲವು ಸಿನಿಮಾಗಳನ್ನು ಪಿ.ಆರ್.ಕೆ ಪ್ರೊಡಕ್ಷನ್ ವತಿಯಿಂದ ನಿರ್ಮಿಸಲಾಗಿದೆ. ಪುನೀತ್ ರಾಜ್ ಕುಮಾರ್ ಅವರ ಅಗಲಿಕೆ ನಂತರ ಈ ಸಂಸ್ಥೆಯನ್ನು ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರೇ ನಡೆಸಿಕೊಂಡು ಹೋಗುತ್ತಿದ್ದಾರೆ. ಕನ್ನಡ ಸಿನಿಪ್ರಿಯರಿಗೆ ಒಳ್ಳೆಯ ಸಿನಿಮಾಗಳನ್ನು ನೀಡುತ್ತಿದ್ದಾರೆ.
ಇನ್ನು ಅಶ್ವಿನಿ ಅವರ ಬಗ್ಗೆ ಹೇಳುವುದಾದರೆ, ಇವರು 1981ರ ಮಾರ್ಚ್ 14ರಂದು ಹುಟ್ಟಿದರು. ಅಶ್ವಿನಿ ಅವರ ಇಡೀ ಕುಟುಂಬ ಚಿಕ್ಕಮಗಳೂರಿನ ಕಡೆಯವರು. ಇವರ ತಂದೆ ಬಾಗೆಮನೆ ರೇವನಾಥ್, ಇವರು ಬೆಂಗಳೂರಿನ ಬಿಬಿಎಂಪಿ ನಲ್ಲಿ ಇಂಜಿನಿಯರ್ ಆಗಿ ಸೇವೆ ಸಲ್ಲಿಸಿದ್ದಾರೆ. ಅಶ್ವಿನಿ ಅವರಿಗೆ ಒಬ್ಬ ಸಹೋದರ ಸಹ ಇದ್ದಾರೆ. ಇನ್ನು ಅಶ್ವಿನಿ ಅವರು ಏನು ಓದಿದ್ದಾರೆ ಎನ್ನುವುದು ಹಲವರಿಗೆ ಗೊತ್ತಿಲ್ಲ.
ಅಶ್ವಿನಿ ಅವರು ಡಿಗ್ರಿ ಪೂರ್ಣಗೊಳಿಸಿರುವುದರ ಫ್ಯಾಶನ್ ಡಿಸೈನಿಂಗ್ ಕೂಡ ಮಾಡಿದ್ದಾರೆ. ಅಪ್ಪು ಅವರ ಜೊತೆಗೆ ಸದಾ ಇರುತ್ತಿದ್ದರು. ಪಾರ್ವತಮ್ಮ ರಾಜ್ ಕುಮಾರ್ ಅವರ ಹಾಗೆ ಅಶ್ವಿನಿ ಅವರು ಸಹ ದಿಟ್ಟ ಮಹಿಳೆ ಎಂದು ಹೇಳಿದರೆ ಖಂಡಿತ ತಪ್ಪಲ್ಲ. ಮುಂದೆ ಸ್ಯಾಂಡಲ್ ವುಡ್ ಗೆ ಅತ್ಯುತ್ತಮ ನಿರ್ಮಾಪಕಿಯಾಗುವ ಎಲ್ಲಾ ಲಕ್ಷಣವು ಇವರಲ್ಲಿದೆ. ಅನೇಕ ಒಳ್ಳೆಯ ಕೆಲಸಗಳಲ್ಲಿ ಕೂಡ ಅಶ್ವಿನಿ ಅವರು ಪಾಲ್ಗೊಳ್ಳುತ್ತಾರೆ.