ಕಷ್ಟದಿಂದ ಬಂದು ಸ್ಟಾರ್ ಆದವರಲ್ಲಿ ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ಕೂಡ ಒಬ್ಬರು. ಬಿಗ್ ಬಿ ತನ್ನ ಪ್ರಾರಂಭದ ದಿನಗಳ ಬಗ್ಗೆ ಬಹಿರಂಗ ಪಡಿಸಿದ್ದಾರೆ. ತನ್ನ ಬ್ಲಾಗ್ ನಲ್ಲಿ ಕಷ್ಟದ ದಿನಗಳನ್ನು ರಿವೀಲ್ ಮಾಡಿದ್ದಾರೆ. ಅಂದಿನಿಂದ ಇಂದಿನವರೆಗೂ ಜೀವನ ಹೇಗೆ ಬದಲಾಗಿದೆ ಎನ್ನುವುದನ್ನು ಅಮಿತಾಭ್ ಬಚ್ಚನ್ ಹೇಳಿದ್ದಾರೆ. 1968 ರಲ್ಲಿ ತಿಂಗಳಿಗೆ 1640 ರೂ. ಸಂಬಳ ಪಡೆಯುತ್ತಿದ್ದ ಬಗ್ಗೆ ಅಮಿತಾಭ್ ಬಚ್ಚನ್ ಬಹಿರಂಗ ಪಡಿಸಿದ್ದಾರೆ. ಅಮಿತಾಭ್ ಕೋಲ್ಕತ್ತಾದಲ್ಲಿ ಕೆಲಸ ಮಾಡುತ್ತಿದ್ದ ತಮ್ಮ ಆರಂಭಿಕ ದಿನಗಳನ್ನು ನೆನಪಿಸಿಕೊಂಡರು. ಇತರ 7 ಜನರೊಂದಿಗೆ ಸಣ್ಣ ಕೋಣೆಯನ್ನು ಹಂಚಿಕೊಳ್ಳುತ್ತಿದ್ದೆ ಎಂದು ಅವರು ಹೇಳಿಕೊಂಡಿದ್ದಾರೆ. ಕೋಲ್ಕತ್ತಾದ ಬ್ಲ್ಯಾಕ್ಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಅಮಿತಾಬ್ ನವೆಂಬರ್ 30ರಂದು ಪಡೆದ ಕೊನೆಯ ಸಂಬಳದ ಸ್ಕ್ರೀನ್ ಶಾಟ್ ಗಳನ್ನು ಶೇರ್ ಮಾಡಿದ್ದಾರೆ.

ಅಮಿತಾಭ್ ಪಡೆದ ಕೊನೆಯ ಸಂಬಳ 1968 ರೂಪಾಯಿ ಆಗಿತ್ತು. ಇದರ ದಾಖಲೆ ಇನ್ನೂ ಇದೆ ಎಂದು ಹೇಳಿದ್ದಾರೆ. ಕೋಲ್ಕತ್ತಾದಲ್ಲಿನ ಆ ದಿನಗಳು ತಮ್ಮ ಜೀವನದ ಅತ್ಯಂತ ಸ್ವತಂತ್ರ, ಮುಕ್ತ ಸಮಯಗಳಾಗಿದ್ದವು ಎಂದು ಹೇಳಿದ್ದಾರೆ. ಕೆಲವು ಸ್ಥಳಗಳಿಗೆ ಹೋಗಲು, ತಿನ್ನಲು ಹಣವಿಲ್ಲದಿದ್ದರೂ ಆಫೀಸ್ ಕೆಲಸ ಮುಗಿಸಿ ಕೋಲ್ಕತ್ತಾದ ಜನಪ್ರಿಯ ತಿನಿಸುಗಳನ್ನು ನೋಡಿ ತಿನ್ನುತ್ತಿದ್ದೆವು ಎಂದು ಹೇಳಿದ್ದಾರೆ.
ನಾವು 8 ಮಂದಿ ’10 ಬೈ 10′ ಕೊಠಡಿಯಲ್ಲಿ ವಾಸವಿದ್ದೆವು. ಆ ದಿನಗಳು ನನ್ನ ಸ್ನೇಹಿತ, ಆಫೀಸ್ ಸಮಯ, ನಂತರ ಸಂಜೆ ಹುಡುಗರೊಂದಿಗೆ ಮಸ್ತಿ ಮಾಡುತ್ತಿದ್ದೆವು. ಗೇಟ್ ಕೀಪರ್ಗಳಿಗೆ ಬೆಣ್ಣೆ ಹಚ್ಚುವುದು, ಆ ಸಮಯ ಅದ್ಭುತವಾಗಿತ್ತು. ಹ್ಹಾ ಮತ್ತೆ ಇದು ಎಂದಿಗೂ ಸಂಭವಿಸಲಿಲ್ಲ’ ಎಂದು ಬಿಗ್ ಬಿ ಹೇಳಿದ್ದಾರೆ.