ನಟ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮೀ ದರ್ಶನ್ ಅವರು ಎಷ್ಟು ಒಳ್ಳೆಯ ವ್ಯಕ್ತಿ ಎಂದು ನಮಗೆಲ್ಲಾ ಗೊತ್ತೇ ಇದೆ. ದರ್ಶನ್ ಅವರ ಜೀವನದ ದೇವತೆ ಇವರು ಎಂದು ಹೇಳಿದರೂ ತಪ್ಪಲ್ಲ. ದರ್ಶನ್ ಅವರು ಇಂದು ಸುರಕ್ಷಿತವಾಗಿ ಇರೋದಕ್ಕೆ ಕಾರಣ ವಿಜಯಲಕ್ಷ್ಮೀ ದರ್ಶನ್ ಅವರೇ. ಅವರು ಪಟ್ಟ ಕಠಿಣ ಪರಿಶ್ರಮ, ಗಂಡನನ್ನು ಬಿಡಿಸಿಕೊಂಡು ಬಂದೆ ಬರುತ್ತೇನೆ ಎಂದು ಚಲದಿಂದ ಅಂದುಕೊಂಡಿದ್ದನ್ನು ಸಾಧಿಸಿದರು. ದರ್ಶನ್ ಅವರಿಂದ ಕೆಲವು ಸಾರಿ ತಪ್ಪುಗಳು ನಡೆದರೂ ಸಹ, ಅದನ್ನೆಲ್ಲಾ ಕ್ಷಮಿಸಿ ಹೆಂಡತಿಯಾಗಿ, ಪತಿ ಧರ್ಮವನ್ನು ಅಚ್ಚುಕಟ್ಟಾಗಿ ನಿಭಾಯಿಸಿಕೊಂಡು ಹೋಗುತ್ತಿದ್ದಾರೆ. ವಿಜಯಲಕ್ಷ್ಮಿ ಅವರ ಮೇಲೆ ಎಲ್ಲರಿಗೂ ಗೌರವ ಇದೆ. ಅಭಿಮಾನಿಗಳು ಮಾತ್ರ ಅತ್ತಿಗೆಯೇ ದೇವತೆ ಎನ್ನುತ್ತಿದ್ದಾರೆ.
ಇನ್ನು ಕುಟುಂಬದಲ್ಲಿ ಕೂಡ ವಿಜಯಲಕ್ಷ್ಮಿ ಅವರನ್ನು ಎಲ್ಲರೂ ಗೌರವಿಸುತ್ತಾರೆ. ದರ್ಶನ್ ಅವರಿಗೆ ಸಮಸ್ಯೆ ಆದ ಸಮಯದಲ್ಲಿ ಎಲ್ಲರೂ ಏನಾಗುತ್ತದೆಯೋ ಏನೋ, ಹೊರಗೆ ಕರೆದುಕೊಂಡು ಬರುವುದು ಹೇಗೆ ಎಂದು ಯೋಚನೆ ಮಾಡುತ್ತಿದ್ದಾಗ, ವಿಜಯಲಕ್ಷ್ಮೀ ಅವರು ತುಂಬಾ ಪಾಸಿಟಿವ್ ಆಗಿದ್ದರಂತೆ, ದಿನಕರ್ ಅವರಿಗೆ ನೀನು ಚಿಂತೆ ಮಾಡಬೇಡ ದಿನು ನಿನ್ನ ಅಣ್ಣನನ್ನ ನಾನು ಹೊರಗಡೆ ಕರೆದುಕೊಂಡು ಬಂದೇ ಬರ್ತೀನಿ ಎಂದು ಹೇಳಿದ್ದರಂತೆ. ಇನ್ನು ಮಗ ವಿನೀಶ್ ಕೂಡ ಅದೇ ರೀತಿ, ತಾಯಿಯ ಹಾಗೆ ಧೈರ್ಯವಂತ, ಅಪ್ಪನಿಗೆ ಏನು ಆಗೋದಿಲ್ಲ, ಸತ್ಯ ಹೊರಗಡೆ ಬಂದೇ ಬರುತ್ತದೆ ಎಂದು ಹೇಳಿದರಂತೆ. ಇನ್ನು ದರ್ಶನ್ ಅವರ ತಾಯಿ ಮೀನಾ ತೂಗುದೀಪ ಅವರು ವಿಜಿ ಅಂಥ ಸೊಸೆ ಪಡೆಯೋಕೆ ಪುಣ್ಯ ಮಾಡಿದ್ದೆ ಎಂದು ಹೇಳಿದ್ದರಂತೆ.
ಅತ್ತೆ ಆದವರು ಸೊಸೆಗೆ ಈ ರೀತಿ ಹೇಳುತ್ತಾರೆ ಅಂದ್ರೆ ಅದು ಸಾಮಾನ್ಯ ವಿಷಯ ಅಂತೂ ಅಲ್ಲ. ಅತ್ತೆ ಸೊಸೆಯರ ಜಗಳ ನಡೆಯೋದೆ ಹೆಚ್ಚು, ಅಂಥದ್ರಲ್ಲಿ ಅತ್ತೆಯಿಂದ ಈ ಮಾತು ಕೇಳಿದ ವಿಜಯಲಕ್ಷ್ಮೀ ಅವರು ನಿಜಕ್ಕೂ ಗ್ರೇಟ್ ಎಂದರೆ ತಪ್ಪಲ್ಲ. ಧೈರ್ಯವಂತ ಮಹಿಳೆ ಆಗಿ ಹೆಸರುವಾಸಿ ಆಗಿರುವ ವಿಜಯಲಕ್ಷ್ಮಿ ಅವರು ದರ್ಶನ್ ಅವರು ಹೊರಗಡೆ ಬಂದ ನಂತರ, ಅವರು ಕೂಡ ಆರಾಮಾಗಿ ಸಮಯ ಕಳೆಯುತ್ತಿದ್ದಾರೆ. ಮೊದಲಿನ ಹಾಗೆ ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿದ್ದು, ಅನೇಕ ವಿಚಾರಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಹಾಗೆಯೇ ಮದುವೆ ಸಮಾರಂಭಗಳಲ್ಲಿ ಕೂಡ ಜೋಡಿಯಾಗಿ ದರ್ಶನ್ ಅವರ ಜೊತೆಗೆ ಕಾಣಿಸಿಕೊಳ್ಳುತ್ತಿದ್ದಾರೆ. ಈ ಜೋಡಿಯನ್ನ ಜೊತೆಯಾಗಿ ನೋಡೋದು ಖುಷಿ ಅಂತಾರೆ ಫ್ಯಾನ್ಸ್.
ಇನ್ನು ವಿಜಯಲಕ್ಷ್ಮೀ ದರ್ಶನ್ ಅವರು ನಿನ್ನೆ ಕೆಲವು ಫೋಟೋಸ್ ಶೇರ್ ಮಾಡಿದ್ದು, ನೀಲಿ ಬಣ್ಣದ ವೆಸ್ಟರ್ನ್ ವೇರ್ ಧರಿಸಿ ಮಿಂಚಿದ್ದಾರೆ. ಬಹಳ ಸುಂದರವಾಗಿ ಕಾಣುತ್ತಿದ್ದಾರೆ. ವಿಜಯಲಕ್ಷ್ಮೀ ದರ್ಶನ್ ಅವರು ಸ್ಟೈಲ್ ಸ್ಟೇಟ್ಮೆಂಟ್ ಇಂದ ಕೂಡ ಸುದ್ದಿಯಾಗುತ್ತಾರೆ, ಇವರು ಧರಿಸುವ ಬಟ್ಟೆಗಳು, ಡ್ರೆಸ್ ಗಳು, ಸೀರೆಗಳು, ಒಡವೆಗಳು ಇದೆಲ್ಲ ಕಲೆಕ್ಷನ್ ಬಹಳ ಸುಂದರವಾಗಿರುತ್ತದೆ ಎಂದು ಹಲವು ಸಾರ್ಜ್ ಫ್ಯಾನ್ಸ್ ಹೇಳಿರೋದನ್ನು ಕೇಳಿರುತ್ತೇವೆ. ಇದೀಗ ಕೂಡ ಅದೇ ವಿಚಾರಕ್ಕೆ ಸುದ್ದಿಯಾಗಿದ್ದಾರೆ. ವಿಜಯಲಕ್ಷ್ಮಿ ಅವರು ಆಗಾಗ ವಿವಿಧ ರೆಸ್ಟೋರೆಂಟ್ ಗಳಿಗೆ ಹೋಗೋದನ್ನ ಕಂಡಿರುತ್ತೇವೆ. ನಿನ್ನೆ ಕೂಡ ಅದೇ ರೀತಿ ಒಂದು ರೆಸ್ಟೋರೆಂಟ್ ಗೆ ಬ್ರಂಚ್ ಗಾಗಿ ಹೋಗಿದ್ದು, ಅಲ್ಲಿನ ಮೆನು ಕಾರ್ಡ್ ಹಾಗೂ ಇನ್ನಿತರ ಕೆಲವು ಫೋಟೋಸ್ ಗಳನ್ನು ಸಹ ಶೇರ್ ಮಾಡಿಕೊಂಡಿದ್ದಾರೆ.
ಈ ಫೋಟೋಸ್ ಗಳಲ್ಲಿ ವಿಜಯಲಕ್ಷ್ಮೀ ಅವರು ಧರಿಸಿರುವ ಡಿಸೈನರ್ ಡ್ರೆಸ್ ಬಗ್ಗೆ ಭಾರಿ ಚರ್ಚೆ ಆಗುತ್ತಿದೆ. ಈ ನೀಲಿ ಬಣ್ಣದ ವೆಸ್ಟರ್ನ್ ವೇರ್ ಬೆಲೆ ಬರೋಬ್ಬರಿ ₹30,000 ಸಾವಿರ ರೂಪಾಯಿಗಳು ಎಂದು ಮಾಹಿತಿ ಸಿಕ್ಕಿದೆ. ಇಷ್ಟು ದುಬಾರಿ ಬೆಲೆಯಲ್ಲಿ ಮಿಡ್ಲ್ ಕ್ಲಾಸ್ ನ ಒಂದು ಕುಟುಂಬ ಒಂದು ಇಡೀ ತಿಂಗಳು ಸಂಸಾರ ನಡೆಸಬಹುದು ಎನ್ನುವುದು ಜನರ ಅಭಿಪ್ರಾಯ ಆಗಿದೆ. ಅದು ನಿಜವು ಹೌದು, ಸೆಲೆಬ್ರಿಟಿಗಳು ಎಂದರೆ ದುಬಾರಿ ಬೆಲೆಯ ಬಟ್ಟೆಗಳನ್ನು ಅದಕ್ಕೆ ತಕ್ಕಂಥ ಡಿಸೈನರ್ ಜ್ಯುವೆಲ್ಸ್, ದುಬಾರಿ ಚಪ್ಪಲಿ ಇದೆಲ್ಲವನ್ನು ಧರಿಸುತ್ತಾರೆ. ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಅವರಿಗೂ ಅದೇ ರೀತಿ ಕ್ರೇಜ್ ಇದ್ದು, ದುಬಾರಿ ಬೆಲೆಯ ಬಟ್ಟೆ ಧರಿಸಿದ್ದಾರೆ.