ಕನ್ನಡ ಸಿನಿಮಾ ರಂಗದ ಖ್ಯಾತ ನಟ ವಿಜಯ ರಾಘವೇಂದ್ರ ಅವರ ಪತ್ನಿ ಸ್ಪಂದನಾ ಅವರು ಇತ್ತೀಚೆಗಷ್ಟೇ ಬ್ಯಾಂಕಾಕ್ ಪ್ರವಾಸದ ವೇಳೆ ಹೃದಯಾಘಾತದಿಂದ ನಿಧನರಾದರು. ಇವರ ದಿಢೀರ್ ಸಾವಿನ ಸುದ್ದಿ ಇಡೀ ಕರ್ನಾಟಕವನ್ನು ಆವರಿಸಿಕೊಂಡಿದೆ. ಅತ್ಯಂತ ಸೌಮ್ಯ ಸ್ವಭಾವದ, ಸದ್ಗುಣವಂತರಾಗಿದ್ದ ಸ್ಪಂದನಾ ಸಾವಿಗೆ ಇಡೀ ಕರ್ನಾಟಕ ಕಂಬನಿ ಮಿಡಿದಿದೆ. ಇದೀ ವೇಳೆ ಸ್ಪಂದನಾ ಅವರ ಕೆಲವು ಅಪರೂಪದ ಫೋಟೋಗಳು ವೈರಲ್ ಆಗುತ್ತಿವೆ.

ಸ್ಪಂದನಾ ಅವರು ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ನಿವೃತ್ತ ಐಪಿಎಸ್ ಅಧಿಕಾರಿ ಬಿ.ಕೆ.ಶಿವರಾಂ ಪುತ್ರಿಯಾಗಿರುವ ಇವರು ನಟ ವಿಜಯ ರಾಘವೇಂದ್ರ ಅವರನ್ನು ಪ್ರೀತಿಸಿ ಮದುವೆಯಾದರು. ಸದ್ಯ, ವೈರಲ್ ಆಗಿರುವ ಒಂದು ಫೋಟೋ ಸ್ಪಂದನಾ ಶಾಲಾ ಜೀವನದಲ್ಲಿ ಪ್ರವಾಸಕ್ಕೆ ಹೋದಾಗ ತೆಗೆಸಿದ್ದು. ಈ ಫೋಟೋದಲ್ಲಿ ಸ್ಪಂದನಾ ಗೆಳತಿಯರೊಂದಿಗೆ ನದಿ ತೀರದಲ್ಲಿ ನಿಂತು ಫೋಟೋಗೆ ಪೋಸ್ ಕೊಟ್ಟಿರುವುದನ್ನು ಕಾಣಬಹುದು.
ಜೊತೆಗೆ ಇನ್ನೊಂದು ಫೋಟೋ ಸ್ಪಂದನಾ ಅವರ ಮನೆಯಲ್ಲಿ ತೆಗೆಯಲಾಗಿದ್ದು. ಇದು ಇವರ ಕಾಲೇಜು ದಿನದ ಫೋಟೋ ಎನ್ನಲಾಗುತ್ತಿದೆ. ಈ ಫೋಟೋದಲ್ಲಿ ಸ್ಪಂದನಾ ಅವರು ನೀಲಿ ಬಣ್ಣದ ಸಾರಿ ತೊಟ್ಟು ಮುದ್ದಾಗಿ ಕಾಣುತ್ತಿದ್ದಾರೆ. ಸ್ಪಂದನಾ ಸಾವಿನ ನಂತರ ಈ ಎರಡು ಫೋಟೋಗಳು ಬಾರೀ ವೈರಲ್ ಆಗುತ್ತಿದ್ದು, ನಟ್ಟಿಗರು ಸ್ಪಂದನಾ ಸರಳತೆಯನ್ನು ಕೊಂಡಾಡುವುದರೊಂದಿಗೆ ಅವರ ಆತ್ಮಕ್ಕೆ ಶಾಂತಿ ಕೋರುತ್ತಿದ್ದಾರೆ.