ಬಿಗ್ ಬಾಸ್ ತಾರೆ, ಸೋಶಿಯಲ್ ಮೀಡಿಯಾದ ಸೆನ್ಸೇಷನಲ್ ಸ್ಟಾರ್ ಉರ್ಫಿ ಜಾವೇದ್ ಸದಾ ಒಂದಲ್ಲಾ ಒಂದು ವಿಚಾರವಾಗಿ ಸುದ್ದಿಯಾಗುತ್ತಲೇ ಇರುತ್ತಾರೆ. ಹಣ್ಣು, ತರಕಾರಿ, ತಿಂಡಿ ಹೀಗೆ ಕೈಗೆ ಸಿಕ್ಕ ವಸ್ತುಗಳನ್ನು ಬಟ್ಟೆಯಂತೆ ಧರಿಸಿ ಕಾಣಿಸಿಕೊಳ್ಳುವ ವೈರಲ್ ಹುಡುಗಿ ಇದೀಗ ಮೀನಿನ ರಾಣಿಯಾಗಿ ಎಂಟ್ರಿ ಕೊಟ್ಟಿದ್ದಾರೆ. ಸದ್ಯ, ಈ ವಿಡಿಯೋ ವೈರಲ್ ಆಗುತ್ತಿದೆ.

https://www.instagram.com/reel/CwuWaYtSkv4/?utm_source=ig_web_copy_link&igshid=MzRlODBiNWFlZA==
ಜಗತ್ತಿನಲ್ಲೇ ಅದ್ಯಾವ ಕಾಸ್ಟ್ಯೂಮ್ ಇದೆಯೋ ಇಲ್ವೋ? ಆದರೆ ಉರ್ಫಿ ಜಾವೇದ್ ಬಳಿ ಬಗೆ ಬಗೆಯ ಉಡುಪುಗಳಿವೆ. ಎಲ್ಲೂ ಇಲ್ಲದ ಬಟ್ಟೆಗಳನ್ನು ಧರಿಸಿ ಕ್ಯಾಮರಾ ಮುಂದೆ ಕಣಿಸಿಕೊಳ್ಳುವ ಉರ್ಫಿ ಸದಾ ಸುದ್ದಿಯಲ್ಲಿರುತ್ತಾರೆ. ಇದೀಗ ಮೀನಿನ ಅಕ್ವೇರಿಯಮ್ ಅನ್ನ ಒಳ ಉಡುಪಾಗಿ ನಟಿ ಧರಿಸಿ ಬಂದಿದ್ದಾರೆ. ಮೀನಿನ ರಾಣಿಯಾಗಿ ಉರ್ಫಿ ಕಾಣಿಸಿಕೊಂಡಿದ್ದಾರೆ. ಹಾಟ್ ಬೆಡಗಿಯ ಹೊಸ ಅವತಾರ ಕಂಡು ನೆಟ್ಟಿಗರು ಕಂಗಾಲಾಗಿದ್ದಾರೆ.
ಉರ್ಫಿ ತೊಟ್ಟಿರುವ ಹೊಸ ಅಕ್ವೇರಿಯಂ ಬಟ್ಟೆಯಲ್ಲಿ ಮೀನುಗಳು ಓಡಾಡುವುದನ್ನು ಕೂಡ ನೀವು ಕಾಣಬಹುದು. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಮನೆ ಬಂದಂತೆ ಕಾಮೆಂಟ್ ಹಾಕಿದ್ದಾರೆ. ಕೆಲವರು, ‘ಉರ್ಫಿಯ ಬಟ್ಟೆಯಲ್ಲಿರುವ ಮೀನುಗಳು ಪುಣ್ಯ ಮಾಡಿರಬೇಕು’ ಎಂದರೆ, ಮತ್ತೆ ಕೆಲವರು, ‘ಇವಳು ಮಾನಸಿಕ ರೋಗಿ ಆ ಕಾರಣ ಚಿತ್ರವಿಚಿತ್ರ ಬಟ್ಟೆ ತೊಡುತ್ತಾಳೆ’ ಎಂದಿದ್ದಾರೆ. ಒಟ್ಟಿನಲ್ಲಿ ಉರ್ಫಿ ಜಾವೆದ್ ಮತ್ತೆ ಸುದ್ದಿಯಲ್ಲಿದ್ದಾರೆ.