ಬಿಗ್ ಬಾಸ್ ಕನ್ನಡ ಸೀಸನ್ 11ರ 11ನೇ ವಾರದ ಎಲಿಮಿನೇಷನ್ ನಡೆದಿದೆ. ಇದು ಬಹಳಷ್ಟು ಜನರಿಗೆ ಶಾಕ್ ಆಗಿದೆ ಎಂದು ಹೇಳಬಹುದು. ಯಾಕೆಂದರೆ ಶಿಶಿರ್ ಶಾಸ್ತ್ರಿ ಅವರು ಇಷ್ಟು ಬೇಗ ಎಲಿಮಿನೇಟ್ ಆಗುವಂಥ ಸ್ಪರ್ಧಿಯಲ್ಲ. ಬೇರೆ ಯಾರಾದರೂ ಎಲಿಮಿನೇಟ್ ಆಗಿ ಹೊರಬರಬಹುದು ಎಂದು ನಿರೀಕ್ಷೆ ಮಾಡಿದ್ದ ವೀಕ್ಷಕರಿಗೆ ಶಿಶಿರ್ ಶಾಸ್ತ್ರಿ ಅವರ ಎಲಿಮಿನೇಷನ್ ಬಹಳ ಆಶ್ಚರ್ಯ ತಂದಿದೆ ಎಂದು ಹೇಳಬಹುದು. ಈ ವಾರ ಗೋಲ್ಡ್ ಸುರೇಶ್ ಅವರು ಸಹ ಹೊರಬಂದಿದ್ದಾರೆ. ಗೋಲ್ಡ್ ಸುರೇಶ್ ಅವರ ಮನೆಯಲ್ಲಿ ತುರ್ತು ಪರಿಸ್ಥಿತಿ ಎದುರಾದ ಕಾರಣ ಅವರು ಸಹ ಮನೆಯಿಂದ ಹೊರಬಂದಿದ್ದಾರೆ. ಆದರೆ ಗೋಲ್ಡ್ ಸುರೇಶ್ ಅವರ ಬಗ್ಗೆ ಕೂಡ ಸುಳ್ಳು ಸುದ್ದಿ ಕೇಳಿಬಂದಿತ್ತು.

ಹೌದು, ಬಿಗ್ ಬಾಸ್ ನಲ್ಲಿ ಗೋಲ್ಡ್ ಸುರೇಶ್ ಅವರಿಗೆ ತಿಳಿಸಿದ್ದು ಇಷ್ಟೇ. ಮನೆಯಲ್ಲಿ ತುರ್ತು ಪರಿಸ್ಥಿತಿ ಎದುರಾಗಿದೆ, ಬಿಗ್ ಬಾಸ್ ಮನೆಗಿಂತ ಅವರ ಮನೆಗೆ ಗೋಲ್ಡ್ ಸುರೇಶ್ ಅವರ ಅವಶ್ಯಕತೆ ಜಾಸ್ತಿ ಇದೆ ಎನ್ನುವ ವಿಷಯವನ್ನು ತಿಳಿಸಿ, ಬಳಿಕ ಅವರನ್ನು ಮನೆಯಿಂದ ಹೊರಗೆ ಕಳಿಸಲಾಗಿದೆ. ಇನ್ನು ಎಲಿಮಿನೇಶನ್ ಪ್ರೊಸೆಸ್ ಅನ್ನು ಕಿಚ್ಚ ಸುದೀಪ್ ಅವರು ನಡೆಸಿದ್ದು, ಸಂಡೇ ಎಪಿಸೋಡ್ ನಲ್ಲಿ ಎಲಿಮಿನೇಟ್ ಆಗಿ ಹೊರಗಡೆ ಬಂದಿರುವುದು ಶಿಶಿರ್ ಶಾಸ್ತ್ರಿ ಅವರು. ಎಲ್ಲರೂ ಸಹ ಶಿಶಿರ್ ಶಾಸ್ತ್ರಿ ಇನ್ನಷ್ಟು ದಿನಗಳ ಕಾಲ ಬಿಗ್ ಬಾಸ್ ಮನೆಯೊಳಗೆ ಇರುತ್ತಾರೆ. ಫಿನಾಲೆ ತಲುಪುತ್ತಾರೆ, ವಿನ್ನರ್ ಆಗುವ ಲಕ್ಷಣ ಅವರಲ್ಲಿದೆ ಎಂದೇ ಭಾವಿಸಿದ್ದರು. ಆದರೆ ಎಲ್ಲರ ನಿರೀಕ್ಷೆಗೆ ವಿರುದ್ಧವಾಗಿ ಶಿಶಿರ್ ಅವರು ಎಲಿಮಿನೇಟ್ ಆಗಿದ್ದಾರೆ..
ಉತ್ತಮ ಸಂಬಂಧಗಳನ್ನು ಕಾಯ್ದುಕೊಳ್ಳಲು, ವಯಸ್ಸಾದ ಕಾಲದಲ್ಲಿ ನೆಮ್ಮದಿಯಾಗಿ ಬದುಕಲು ಕೌಟುಂಬಿಕ ವಿವಾದಗಳನ್ನು ನಿರ್ವಹಿಸಿದ ಕರ್ನಾಟಕ ಉಚ್ಚ ನ್ಯಾಯಲಯದಲ್ಲಿ ಹಿರಿಯ ವಕೀಲರಾಗಿ ಸೇವೆ ಸಲ್ಲಿಸುತ್ತಿರುವ ಶ್ರೀಮತಿ ಸುಶೀಲರವರು ಕೊಟ್ಟಿದ್ದಾರೆನ್ನುವ ಸಲಹೆಗಳು ಇಲ್ಲಿವೆ.
ಸಂಗಾತಿಯ ಚುಚ್ಚು ಮಾತುಗಳಿಂದ ನರಳಬೇಡಿ..!
ಪ್ರತಿ ವಾರ ಬಿಗ್ ಬಾಸ್ ಮನೆಯಿದ ಒಬ್ಬೊಬ್ಬ ಸ್ಪರ್ಧಿಗಳು ಎಲಿಮಿನೇಟ್ ಆಗಿ ಹೊರಬರುವುದು ಕಾಮನ್. ಕಡಿಮೆ ಅರ್ಹತೆ ಇರುವ ಸ್ಪರ್ಧಿಗಳು ಹೊರಬರುತ್ತಾರೆ. ಆದರೆ ಈ ಸೀಸನ್ ನಲ್ಲಿ ವೀಕ್ಷಕರ ಊಹೆಗೂ ಮೀರಿ, ಒಳ್ಳೆಯ ಸ್ಪರ್ಧಿಗಳೇ, ಫಿನಾಲೆ ತಲುಪುವ ಸಾಮರ್ಥ್ಯ ಇರುವ ಸ್ಪರ್ಧಿಗಳೇ ಎಲಿಮಿನೇಟ್ ಆಗಿ ಹೊರಬಂದಿರುವುದು ಬೇಸರದ ವಿಷಯ. ಮೊದಲಿಗೆ ಧರ್ಮ ಕೀರ್ತಿ ರಾಜ್ ಅವರು ಎಲಿಮಿನೇಟ್ ಆಗಿ ಹೊರಬಂದಿದ್ದು, ಎಲ್ಲರಿಗೂ ಶಾಕ್ ಆಗಿತ್ತು. ಅಷ್ಟು ಒಳ್ಳೆಯ ವ್ಯಕ್ತಿತ್ವ ಆಗಿರುವ ಧರ್ಮ ಅವರು ವಿನ್ನರ್ ಅಗಬಹುದು ಎಂದು ನಿರೀಕ್ಷೆ ಇಟ್ಟುಕೊಂಡಿದ್ದ ವೀಕ್ಷಕರಿಗೆ ಶಾಕ್ ಕಾದಿತ್ತು. ಇದೀಗ ಶಿಶಿರ್ ಅವರ ವಿಚಾರದಲ್ಲಿ ಸಹ ಅದೇ ರೀತಿ ಆಗಿದೆ.

ಶಿಶಿರ್ ಶಾಸ್ತ್ರಿ ಅವರು ಎಲ್ಲಾ ಸಾಮರ್ಥ್ಯವನ್ನು ಒಳಗೊಂಡಿದ್ದ ಸ್ಪರ್ಧಿ. ಟಾಸ್ಕ್ ಗಳಲ್ಲಿ ಉತ್ತಮ ಪ್ರದರ್ಶನ ಕೊಡುತ್ತಿದ್ದರು, ಮನೆಯೊಳಗೆ ಒಳ್ಳೆಯ ವ್ಯಕ್ತಿತ್ವ ಇಟ್ಟುಕೊಂಡಿದ್ದರು. ಯಾರ ಜೊತೆಗೂ ಅನಾವಶ್ಯಕವಾಗಿ ಮಾತನಾಡುತ್ತಾ ಇರಲಿಲ್ಲ. ಇಂಥ ಶಿಶಿರ್ ಶಾಸ್ರ್ತೀ ಅವರು ವ್ಯಕ್ತಿತ್ವದಿಂದ ಹೆಚ್ಚು ದಿನಗಳ ಕಾಲ ಇರುತ್ತಾರೆ ಅಂದುಕೊಂಡಿದ್ದರು ಎಲ್ಲರೂ. ಆದರೆ ಎಲಿಮಿನೇಟ್ ಆಗಿದ್ದಾರೆ, ಇದಕ್ಕೆ ಕಾರಣ ಶಿಶಿರ್ ಅವರು ಹೆಚ್ಚಾಗಿ ಐಶ್ವರ್ಯ ಅವರ ಜೊತೆಗಿನ ಫ್ರೆಂಡ್ಶಿಪ್ ಕಾರಣ ಎಂದು ಹೇಳಲಾಗುತ್ತಿದೆ. ಶಿಶಿರ್ ಅವರು ಹೆಚ್ಚಾಗಿ ಈ ವಿಚಾರದ ಬಗ್ಗೆ ಗಮನ ಕೊಟ್ಟು, ತಮ್ಮ ಆಟದ ಬಗ್ಗೆ ಹೆಚ್ಚು ಆಸಕ್ತಿ ವಹಿಸಲಿಲ್ಲ, ಇದೆ ಕಾರಣಕ್ಕೆ ಎಲಿಮಿನೇಟ್ ಆಗಿದ್ದಾರೆ ಎನ್ನುತ್ತಾರೆ ನೆಟ್ಟಿಗರು.
ಭವ್ಯ, ಚೈತ್ರಾ, ಮೋಕ್ಷಿತಾ, ಐಶ್ವರ್ಯ ಇವರೆಲ್ಲರಿಗಿಂತ ಕಳಪೆ ಸ್ಪರ್ಧಿ ಅಲ್ಲ ಶಿಶಿರ್ ಶಾಸ್ತ್ರಿ. ಆದರೆ ಅವರೇ ಎಲಿಮಿನೇಟ್ ಆಗಿದ್ದು, ಬಿಗ್ ಬಾಸ್ ಮನೆಯ ಒಳಗೆ ಇರುವುದಕ್ಕೆ ಒಳ್ಳೇತನ ಅಲ್ಲ, ಗಾಸಿಪ್ ಮಾಡೋದು, ಜಗಳ ಆಡೋದು ಇದೆಲ್ಲವನ್ನ ಮಾಡಿದ್ರೆ ಮಾತ್ರ ಬಿಗ್ ಬಾಸ್ ಮನೆಯಲ್ಲಿ ಇರೋಕೆ ಸಾಧ್ಯ. ಇಲ್ಲವಾದರೆ ಶಿಶಿರ್ ಅವರ ಹಾಗೆ ಎಲಿಮಿನೇಟ್ ಆಗಬೇಕಾಗುತ್ತದೆ ಎಂದು ನೆಟ್ಟಿಗರು ಬೇಸರ ವ್ಯಕ್ತಪಡಿಸಿದ್ದಾರೆ. ಶಿಶಿರ್ ಶಾಸ್ತ್ರಿ ಅವರು ಮುಂದಿನ ದಿನಗಳಲ್ಲಿ ಅವರಿಗೆ ಇನ್ನು ಯಾವ ಥರದ ಅವಕಾಶ ಸಿಗುತ್ತದೆ, ಮತ್ತೆ ಕನ್ನಡ ಕಿರುತೆರೆಗೆ ವಾಪಸ್ ಬರುತ್ತಾರ ಎಂದು ಕಾದು ನೋಡಬೇಕಿದೆ.