ಬಿಗ್ ಬಿ ಅಮಿತಾಬ್ ಬಚ್ಚನ್ ಅವರ ಅತ್ತೆ, (ಜಯಾ ಬಚ್ಚನ್ ಅವರ ತಾಯಿ) ಇಂದಿರಾ ಬಾಧುರಿ ವಿಧಿವಶರಾಗಿದ್ದಾರೆ. ಅವರಿಗೆ 94 ವರ್ಷ ವಯಸ್ಸಾಗಿತ್ತು.ವಯೋಸಹಜ ಕಾಯಿಲೆಯಿಂದ ದೀರ್ಘ ಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಇಂದಿರಾ ಬಾಧುರಿ ಅವರನ್ನು ಭೋಪಾಲ್ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

2023 ರಲ್ಲಿ ಇಂದಿರಾ ಬಾಧುರಿ ಅವರನ್ನು ಮುಂಬೈನ ಹಿಂದೂಜಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೃದಯದ ಲಯವನ್ನು ನಿಯಂತ್ರಿಸಲು ಪೇಸ್ಮೇಕರ್ ಅನ್ನು ಅಳವಡಿಸಲಾಗಿತ್ತು. ಫೆಬ್ರವರಿ 2020 ರಲ್ಲಿ, ಬಚ್ಚನ್ ಕುಟುಂಬ ಇಂದಿರಾ ಬಾಧುರಿ ಅವರ 90 ನೇ ಹುಟ್ಟುಹಬ್ಬವನ್ನು ಭೋಪಾಲ್ ನ ಅವರ ನಿವಾಸದಲ್ಲಿ ಆಚರಿಸಿತ್ತು.
ವರದಿಗಳ ಪ್ರಕಾರ ಅಭಿಷೇಕ್ ಬಚ್ಚನ್ ಭೋಪಾಲ್ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ಇಂದಿರಾ ಬಾಧುರಿ ಅವರ ಪತಿ ತರೂನ್ ಭಾದುರಿ ಅವರು 1996 ರಲ್ಲಿ ನಿಧನರಾಗಿದ್ದರು. ಇಂದಿರಾ ಅವರು ಇಬ್ಬರು ಹೆಣ್ಣುಮಕ್ಕಳಾದ ಜಯಾ ಬಚ್ಚನ್ ಮತ್ತು ರೀಟಾ ಬಾಧುರಿ ಅವರನ್ನು ಅಗಲಿದ್ದಾರೆ.
ಇಂದಿರಾ ಭಾದುರಿ ಅವರ ಮದುವೆ ಪೂರ್ವದ ಹೆಸರು ಇಂದಿರಾ ಗೋಸ್ವಾಮಿ. ಅವರ ವಿದ್ಯಾಭ್ಯಾಸ ಪಾಟ್ನಾದಲ್ಲಿ ನಡೆಯಿತು. ಪತ್ರಕರ್ತ ಮತ್ತು ಲೇಖಕ ತರುಣ್ ಕುಮಾರ್ ಭಾದುರಿ ಅವರನ್ನು ಮದುವೆಯಾದರು. ಇಂದಿರಾ ಮತ್ತು ತರುಣ್ ದಂಪತಿಗೆ ಜಯಾ, ರೀತಾ ಮತ್ತು ನೀತಾ ಎಂಬ ಮೂವರು ಹೆಣ್ಣು ಮಕ್ಕಳು. ಮಕ್ಕಳ ಮದುವೆಯಾದ ನಂತರ, 1996 ರಲ್ಲಿ ಇಂದಿರಾ ಅವರ ಪತಿ ತರುಣ್ ಭಾದುರಿ ನಿಧನರಾದರು. ಅಂದಿನಿಂದ ಅವರು ಭೋಪಾಲ್ನ ಶ್ಯಾಮಲಾ ಹಿಲ್ಸ್ನಲ್ಲಿರುವ ಅನ್ಸಲ್ ಅಪಾರ್ಟ್ಮೆಂಟ್ನಲ್ಲಿ ಒಬ್ಬಂಟಿಯಾಗಿದ್ದರು. ಆದಾಗ್ಯೂ, ಅವರನ್ನು ನೋಡಿಕೊಳ್ಳಲು ಒಬ್ಬ ಕೇರ್ಟೇಕರ್ ಇದ್ದರು.



