ಈ ಸೋಷಿಯಲ್ ಮೀಡಿಯಾ ಯುಗದಲ್ಲಿ ನಾವು ಅಂದುಕೊಂಡಿದ್ದಕ್ಕಿಂತ ವಿಭಿನ್ನವಾಗಿಯೇ ಎಲ್ಲವೂ ನಡೆಯುತ್ತದೆ. ಹಳೆಯ ಹಾಡುಗಳು, ನಾವು ಊಹೆ ಕೂಡ ಮಾಡಿರದ ಹಾಡುಗಳು, ಸಿನಿಮಾ ದೃಶ್ಯಗಳು ಈಗ ವೈರಲ್ ಆಗುತ್ತಿದೆ. ಇದಕ್ಕೆ ಹಲವು ಉದಾಹರಣೆಗಳನ್ನು ಈಗಾಗಲೇ ನೋಡಿದ್ದೇವೆ. 25 ವರ್ಷಗಳ ಹಿಂದೆ ತೆರೆಕಂಡಿದ್ದ ರಿಯಲ್ ಸ್ಟಾರ್ ಉಪೇಂದ್ರ ಅವರ ಏನಿಲ್ಲ ಏನಿಲ್ಲ ಹಾಡು ಇತ್ತೀಚೆಗೆ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಕರಿಮಣಿ ಮಾಲೀಕ ಯಾರು ಎನ್ನುವ ಪ್ರಶ್ನೆ ಸಿಕ್ಕಾಪಟ್ಟೆ ನಗುವನ್ನು ತರಿಸಿತ್ತು. ಅದೇ ರೀತಿ ಇದೀಗ ಒಂದು ತಮಿಳು ಹಾಡು ವೈರಲ್ ಆಗಿದೆ. ಈ ಹಾಡು ಕನ್ನಡದ ನಟಿ ರಕ್ಷಿತಾ ಅವರದ್ದು ಎನ್ನುವುದು ವಿಶೇಷ..

22 ವರ್ಷಗಳ ಹಿಂದೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ನಾಯಕನಾಗಿ ಅಭಿನಯಿಸಿದ ಮೊದಲ ಸಿನಿಮಾ ಅಪ್ಪು ಸಿನಿಮಾ ಮೂಲಕ ನಾಯಕಿಯಾಗಿ ಚಂದನವನಕ್ಕೆ ಎಂಟ್ರಿ ಕೊಟ್ಟವರು ನಟಿ ರಕ್ಷಿತಾ. ಕನ್ನಡದಲ್ಲಿ ಬ್ಲಾಕ್ ಬಸ್ಟರ್ ಹೀರೋಯಿನ್ ಆಗಿ ಎಲ್ಲಾ ನಟರ ಜೊತೆಗೆ ತೆರೆ ಹಂಚಿಕೊಂಡು, ಸೂಪರ್ ಹಿಟ್ ಹೀರೋಯಿನ್ ಆಗಿದ್ದ ರಕ್ಷಿತಾ ಅವರು ಮದುವೆ ನಂತರ ನಟನೆ ಇಂದ ದೂರ ಉಳಿದಿದ್ದಾರೆ. ಈಗ ರಕ್ಷಿತಾ ಅವರು ಪ್ರೊಡ್ಯುಸರ್ ಆಗಿ ಹೆಚ್ಚು ಆಕ್ಟಿವ್ ಆಗಿದ್ದಾರೆ. ಜೀಕನ್ನಡದ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಮತ್ತು ಕಾಮಿಡಿ ಕಿಲಾಡಿಗಳು ಶೋನಲ್ಲಿ ಜಡ್ಜ್ ಆಗಿ ಕಾಣಿಸಿಕೊಳ್ಳುತ್ತಾರೆ ರಕ್ಷಿತಾ.
ಹಾಗೆಯೇ ತಮ್ಮ ಪ್ರೊಡಕ್ಷನ್ ಕಂಪನಿಯ ಮೂಲಕ ಒಳ್ಳೆಯ ಸಿನಿಮಾಗಳನ್ನು ನಿರ್ಮಾಣ ಮಾಡುತ್ತಿದ್ದಾರೆ. ಇತ್ತೀಚೆಗೆ ತಮ್ಮ ಸಹೋದರ ರಾಣಾ ಅವರನ್ನು ಏಕ್ ಲವ್ ಯಾ ಸಿನಿಮಾ ಮೂಲಕ ಚಿತ್ರರಂಗಕ್ಕೆ ಪ್ರವೇಶ ಮಾಡಿದರು. ಈ ಸಿನಿಮಾವನ್ನು ತಾವೇ ಪ್ರೊಡ್ಯುಸರ್ ಮಾಡಿದರು, ರಕ್ಷಿತಾ ಅವರ ಪತಿ ಪ್ರೇಮ್ ಅವರು ನಿರ್ದೇಶನ ಮಾಡಿದರು. ಧ್ರುವ ಸರ್ಜಾ ಅಭಿನಯಿಸಲಿರುವ ಕೆಡಿ ದಿ ಡೆವಿಲ್ ಸಿನಿಮಾವನ್ನು ಸಹ ಪ್ರೇಮ್ ಅವರೇ ನಿರ್ದೇಶನ ಮಾಡುತ್ತಿದ್ದು, ರಕ್ಷಿತಾ ಅವರೇ ನಿರ್ಮಾಣ ಮಾಡುತ್ತಿದ್ದಾರೆ. ಈ ಸಿನಿಮಾ ಪೋಸ್ಟ್ ಪ್ರೊಡಕ್ಷನ್ ಸ್ಟೇಜ್ ನಲ್ಲಿದೆ. ಮುಂದೆ ದರ್ಶನ್ ಅವರ ಸಿನಿಮಾ ನಿರ್ಮಾಣ ಮಾಡಲಿದ್ದಾರೆ.
ಉತ್ತಮ ಸಂಬಂಧಗಳನ್ನು ಕಾಯ್ದುಕೊಳ್ಳಲು, ವಯಸ್ಸಾದ ಕಾಲದಲ್ಲಿ ನೆಮ್ಮದಿಯಾಗಿ ಬದುಕಲು ಕೌಟುಂಬಿಕ ವಿವಾದಗಳನ್ನು ನಿರ್ವಹಿಸಿದ ಕರ್ನಾಟಕ ಉಚ್ಚ ನ್ಯಾಯಲಯದಲ್ಲಿ ಹಿರಿಯ ವಕೀಲರಾಗಿ ಸೇವೆ ಸಲ್ಲಿಸುತ್ತಿರುವ ಶ್ರೀಮತಿ ಸುಶೀಲರವರು ಕೊಟ್ಟಿದ್ದಾರೆನ್ನುವ ಸಲಹೆಗಳು ಇಲ್ಲಿವೆ.
ಸಂಗಾತಿಯ ಚುಚ್ಚು ಮಾತುಗಳಿಂದ ನರಳಬೇಡಿ..!
ಹೀಗೆ ಪ್ರೊಡ್ಯುಸರ್ ಆಗಿ ಬ್ಯುಸಿ ಇದ್ದಾರೆ, ಹಾಗೆಯೇ ರಕ್ಷಿತಾ ಅವರು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್. ಅನೇಕ ವಿಚಾರಗಳನ್ನು ಶೇರ್ ಮಾಡಿಕೊಳ್ಳುತ್ತಾರೆ. ಇವರ ಹಳೆಯ ಫೋಟೋಗಳು, ಹಾಡುಗಳು ಆಗಾಗ ವೈರಲ್ ಆಗುತ್ತದೆ. ಅದೇ ರೀತಿ ಈಗ ರಕ್ಷಿತಾ ಅವರ ತಮಿಳು ಹಾಡೊಂದು ವೈರಲ್ ಆಗಿದೆ. ಇದು ತಮಿಳಿನ ಧಮ್ ಸಿನಿಮಾದ ಹಾಡು, ಈ ಸಿನಿಮಾದಲ್ಲಿ ರಕ್ಷಿತಾ ಅವರಿಗೆ ನಾಯಕನಾಗಿ ತಮಿಳಿನ ಖ್ಯಾತ ನಟ ಸಿಂಬು ನಟಿಸಿದ್ದಾರೆ. ಇದು ನಮ್ಮ ಕನ್ನಡದ ಅಪ್ಪು ಸಿನಿಮಾದ ರಿಮೇಕ್ ಆಗಿದೆ. ಅಪ್ಪು ಸಿನಿಮಾ ತೆಲುಗು ಮತ್ತು ತಮಿಳಿಗೆ ರಿಮೇಕ್ ಆಗಿತ್ತು, ಎರಡು ಭಾಷೆಯಲ್ಲಿ ರಕ್ಷಿತಾ ಅವರೇ ಹೀರೋಯಿನ್ ಆಗಿದ್ದರು.
ಈ ಧಮ್ ಸಿನಿಮಾದ ಚಾಣಕ್ಯ ಚಾಣಕ್ಯ ಹಾಡು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಹಾಡನ್ನು ಚೈನಾ ಅಥವಾ ಜಪಾನ್ ನಲ್ಲಿ ಶೂಟಿಂಗ್ ಮಾಡಲಾಗಿದೆ. ವೈಟ್ ಡ್ರೆಸ್ ಧರಿಸಿ ಬಹಳ ಸುಂದರವಾಗಿ ಕಾಣುತ್ತಿದ್ದಾರೆ ನಟಿ ರಕ್ಷಿತಾ. ಈ ವಿಡಿಯೋ ನೋಡಿದ ನೆಟ್ಟಿಗರು, ಇದು ನಮ್ಮೆಲ್ಲರ ಮೆಚ್ಚಿನ ಹಾಡು, ರಕ್ಷಿತಾ ಅವರು ತುಂಬಾ ಗ್ಲಾಮರಸ್ ಆಗಿ, ಹಾಟ್ ಆಗಿ ಕಾಣುತ್ತಿದ್ದಾರೆ ಎಂದು ಕಾಮೆಂಟ್ಸ್ ಬರೆಯುತ್ತಿದ್ದಾರೆ. ರಕ್ಷಿತಾ ಅವರು ಆಗ ಅಷ್ಟು ಸುಂದರವಾಗಿದ್ದರು, ಎಲ್ಲರ ಹಾಟ್ ಫೇವರೆಟ್ ನಟಿ ಆಗಿದ್ದರು ರಕ್ಷಿತಾ. ಮದುವೆ ನಂತರ ಇವರು ಬ್ರೇಕ್ ತೆಗೆದುಕೊಂಡಿದ್ದು, ಹಲವರಿಗೆ ಇನ್ನು ಬೇಸರ ಇದೆ..