ಈಗಾಗಲೇ ರಾಜ್ಯದಲ್ಲಿ ಕೃತಕ ಬಣ್ಣಗಳ ಹಾವಳಿಯಿಂದ ಹಲವು ಖಾದ್ಯಗಳನ್ನು ಬ್ಯಾನ್ ಮಾಡಲಾಗಿದೆ. ಹಾಗೆಯೇ, ಇತ್ತೀಚೆಗೆ ಹಸಿರು ಬಣ್ಣದ ಕರಿದ ಬಟಾಣಿಯೂ ಪರೀಕ್ಷೆಗೆ ಒಳಗಾಗಿದೆ. ಇದೀಗ ದಕ್ಷಿಣ ಭಾರತದ ಜನಪ್ರಿಯ ತಿಂಡಿ ಎಂದು ಕರೆಸಿಕೊಳ್ಳುವ ಉಪಹಾರ ಕೂಡ ಪರೀಕ್ಷೆಗೆ ಒಳಾಗಿದ್ದು,ತಲೆನೋವು ತಂದೊಡ್ಡುವ ಸಾಧ್ಯತೆಯಿದೆ ಎಂಬ ಭಯಂಕರ ಸುದ್ದಿ ಹೊರ ಬಿದಿದೆ. ಹಾಗಾದ್ರೆ ಯಾವುದು ಆ ಉಪಹಾರ ಎಂದು ಯೋಚಿಸುತ್ತಿದ್ದೀರಾ…? ನಿಮ್ಮ ಪ್ರಶ್ನೆಗೆ ಉತ್ತರ ಇಡ್ಲಿ…
ಹೌದು, ಜ್ವರದಿಂದ ಹಿಡಿದು ಎಂತಹ ಅನಾರೋಗ್ಯ ಬಾಧಿಸುತ್ತಿದ್ದರು ಬಹುತೇಕ ವೈದ್ಯರು ಸೂಚಿಸುವ ಆಹಾರವೆಂದರೆ ಇಡ್ಲಿ. ಜೀರ್ಣಕ್ರಿಯೆಗೆ ಸುಲಭವೆಂದೋ ಅಥವಾ ಎಣ್ಣೆ-ಬೆಣ್ಣೆಯಿಲ್ಲದೆ ತಯಾರಾಗುವುದೆಂದೋ ಇಡ್ಲಿಗೆ ಬೆಂಗಳೂರಿನಲ್ಲಿ ಬೇಡಿಕೆಯೂ ಇದೆ. ಇನ್ನು ಕೆಲವರ ನೆಚ್ಚಿನ ಉಪಹಾರ ಇಡ್ಲಿ-ವಡೆ-ಸಾಂಬರ್. ಆದರೀಗ ಇದೇ ಇಡ್ಲಿಯನ್ನು ಎಚ್ಚರ ತಪ್ಪಿ ತಿಂದರೇ ಕ್ಯಾನ್ಸರ್ ಬರಬಹುದು ಎಂಬ ವಿಷಯ ಬೆಳಕಿಗೆ ಬಂದಿದೆ.

ಆಗಲೇ ಹೇಳಿದಂತೆ ಗೋಬಿ ಮಂಚೂರಿ, ಪಾನಿ ಪುರಿ, ಮಿಠಾಯಿಯನ್ನು ಕೃತಕ ಬಣ್ಣ ಬಳಸಿ ತಯಾರಿಸಲಾಗುತ್ತದೆ. ಇದರಿಂದ ಜನರ ಆರೋಗ್ಯದ ಮೇಲೆ ಗಂಭಿರ ಪ್ರಭಾವ ಬೀರಲಿದೆ ಎಂಬ ವರದಿ ಅವುಗಳನ್ನು ಬ್ಯಾನ್ ಮಾಡುವಂತೆ ಮಾಡಿತ್ತು. ಹಾಗಾದ್ರೆ, ಇಡ್ಲಿಯಲ್ಲಿ ಏನನ್ನು ಕಲಬೆರಕೆ ಮಾಡಲಾಗತ್ತಿದೆ ಎಂದು ಯೋಚಿಸುತ್ತೀದ್ದೀರಾ…?
ಇಲ್ಲಾ….ಇಡ್ಲಿಯಲ್ಲಿ ಏನನ್ನು ಬೆರೆಸಲಾಗುತ್ತಿಲ್ಲಾ. ಆದರೆ, ಇಡ್ಲಿಯನ್ನು ಬೇಯಿಸಲು ಬಳಸಲಾಗುತ್ತಿರುವ ವಸ್ತು ಕ್ಯಾನ್ಸರ್ ಹರಡಲು ಪೂರಕ ಎಂದು ತನಿಖೆಯಿಂದ ತಿಳಿದು ಬಂದಿದೆ. ಆಹಾರ ಇಲಾಖೆ ಈ ಶಾಕಿಂಗ್ ಸುದ್ದಿ ನೀಡಿದ್ದು, ಹೊಟೇಲ್ ಹಾಗೂ ಬೀದಿ ಬದಿಗಳಲ್ಲಿ ತಯಾರಾಗುವ ಇಡ್ಲಿ ಅಸುರಕ್ಷಿತ ಎಂಬುದು ಇಲಾಖೆಯ ಪ್ರಯೋಗದಿಂದ ದೃಢಪಟ್ಟಿದೆ.

ಬೆಂಗಳೂರಿನ ಹಲವೆಡೆಯಿಂದ ಇಡ್ಲಿಯ ಸ್ಯಾಂಪಲ್ಗಳನ್ನು ಸಂಗ್ರಹಿಸಿದ್ದ ಆಹಾರ ಇಲಾಖೆ ಪ್ರಯೋಗಾಲಯಕ್ಕೆ ಕಳುಹಿಸಿಕೊಟ್ಟಿತ್ತು. ಇವುಗಳಲ್ಲಿ 35ಕ್ಕೂ ಹೆಚ್ಚು ಇಡ್ಲಿಗಳು ಅಪಾಯಕಾರಿ ಅಂಶಗಳನ್ನು ಒಳಗೊಂಡಿದೆ ಎಂಬುದು ವರದಿಯಲ್ಲಿ ಕಂಡು ಬಂದಿದೆ.
ಇಡ್ಲಿಯಲ್ಲಿ ಕ್ಯಾನ್ಸರ್ ಕಾರಕ ಅಂಶಗಳಿಗೆ ಕಾರಣ:
ಬೆಂಗಳೂರಿನ ಹೊಟೇಲ್ ಹಾಗೂ ಬೀದಿ ಬದಿಗಳಲ್ಲಿ ಇಡ್ಲಿ ಹಿಟ್ಟನ್ನು ಪ್ಲೇಟ್ಗಳ ಮೇಲೆ ಹಾಕಲು ಪ್ಲಾಸ್ಟಿಕ್ ಕವರ್ಗಳನ್ನು ಬಳಸುತ್ತಿದ್ದಾರೆ. ಮೊದಲ ಬಟ್ಟೆಗಳನ್ನು ಬಳಸಲಾಗುತ್ತಿತ್ತು. ಆದರೀಗ ಪ್ಲಾಸ್ಟಿಕನ್ನು ಬಳಸುತ್ತಿದ್ದಾರೆ. ಹಾಗೆಯೇ, ಬಡಿಸುವಾಗ ಮತ್ತು ಪ್ಯಾಕ್ ಮಾಡುವಾಗಲು ಪ್ಲಾಸ್ಟಿಕ್ ಬಳಸಲಾಗುತ್ತಿದೆ. ಆಹಾರದ ಶಾಖಕ್ಕೆ ಪ್ಲಾಸ್ಟಿಕ್ ಹಾಳೆಯು ಹಾನಿಕಾರಕ ಅಂಶವನ್ನು ಬಿಡುಗಡೆ ಮಾಡುತ್ತಿದೆ. ಇದೇ ಕ್ಯಾನ್ಸರ್ ಕಾರಕ ಅಂಶವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಆಹಾರ ತಜ್ಞರು ತಿಳಿಸಿದ್ದಾರೆ.

500ಕ್ಕೂ ಹೆಚ್ಚು ಇಡ್ಲಿ ಸ್ಯಾಂಪಲ್ಸ್ ಸಂಗ್ರಹ:
ಆಹಾರ ಹಾಗೂ ಗುಣಮಟ್ಟ ಇಲಾಖೆ ಬೆಂಗಳೂರಿನ ವಿವಿಧೆಡೆಯಿಂದ 500ಕ್ಕೂ ಹೆಚ್ಚು ಇಡ್ಲಿ ಸ್ಯಾಂಪಲ್ ಗಳನ್ನು ಕಲೆಕ್ಟ್ ಮಾಡಿದ್ದು, ಇವುಗಳಲ್ಲಿ ಪ್ರಸ್ತುತ 35ಕ್ಕೂ ಹೆಚ್ಚು ಇಡ್ಲಿಗಳು ಹಾನಿಕಾರಕ ಅಂಶ ಒಳಗೊಂಡಿರುವುದು ದೃಢಪಟ್ಟಿದೆ. ಇನ್ನೂ ಮಿಕ್ಕಿರುವ ಇಡ್ಲಿಗಳ ಪರೀಕ್ಷಾ ವರದಿಗೆ ಆಹಾರ ಇಲಾಖೆ ಕಾಯುತ್ತಿದ್ದು, ವರದಿ ಬಂದ ನಂತರ ಪ್ಲಾಸ್ಟಿಕ್ ಪೇಪರ್ ನಿಷೇಧದ ಕುರಿತು ಕ್ರಮಕೈಗೊಳ್ಳುವ ಸಾಧ್ಯತೆಯಿದೆ.