ಬೇರೆ ಎಲ್ಲ ಸೀರಿಯಲ್ಗಳಿಗಿಂತಲೂ ‘ ಕನ್ನಡತಿ ಸೀರಿಯಲ್’ ಭಿನ್ನವಾಗಿ ಮೂಡಿಬರುತ್ತಿತ್ತು. ಇತ್ತೀಚಿನ ಎಪಿಸೋಡ್ಗಳಲ್ಲಿ ಹಲವು ಟ್ವಿಸ್ಟ್ಗಳನ್ನು ನೀಡಲಾಗಿದೆ. ವೀಕ್ಷಕರು ಇಷ್ಟಪಟ್ಟಿದ್ದ ಅಮ್ಮಮ್ಮನ ಪಾತ್ರ ಅಂತ್ಯವಾಯ್ತು. ಅದರಿಂದ ಕೆಲವರಿಗೆ ಬೇಸರ ಆಗಿದ್ದುಂಟು. ಅದಕ್ಕಿಂತಲೂ ಬೇಸರದ ವಿಚಾರ ಏನೆಂದರೆ, ‘ಕನ್ನಡತಿ’ ಧಾರಾವಾಹಿ ಶೀಘ್ರದಲ್ಲೇ ಅಂತ್ಯವಾಗಲಿದೆ. ಕನ್ನಡತಿ’ ಧಾರಾವಾಹಿ ಶೀಘ್ರದಲ್ಲೇ ಅಂತ್ಯವಾಗಲಿದೆ. ಇನ್ನೇನು ಕೆಲವೇ ದಿನಗಳು ಮಾತ್ರ ಈ ಸೀರಿಯಲ್ ಪ್ರಸಾರ ಆಗಲಿದೆ. ನಂತರ ‘ಕಲರ್ಸ್ ಕನ್ನಡ’ ವಾಹಿನಿಯಲ್ಲಿ ಹೊಸ ಧಾರಾವಾಹಿ ಬಿತ್ತರ ಆಗಲಿದೆ.

‘ಕನ್ನಡತಿ’ ಧಾರಾವಾಹಿ ಮುಕ್ತಾಯ ಆಗುತ್ತಿದೆ ಎಂಬುದನ್ನು ಮೂಲಗಳು ಖಚಿತ ಪಡಿಸಿವೆ. ಆರಂಭದಲ್ಲಿ ಅಂದುಕೊಂಡ ರೀತಿಯೇ ಕಥೆ ಈಗ ಮುಕ್ತಾಯ ಹಂತಕ್ಕೆ ಬಂದಿದೆ. ಆ ಕಾರಣದಿಂದ ಸೀರಿಯಲ್ ಮುಗಿಸಲಾಗುತ್ತಿದೆ ಎಂಬುದು ಮೂಲಗಳ ಮಾಹಿತಿ. ಇನ್ನು ಕೆಲವೇ ದಿನಗಳು ಮಾತ್ರ ‘ಕನ್ನಡತಿ’ ಧಾರಾವಾಹಿಯ ಸಂಚಿಕೆಗಳು ಪ್ರಸಾರ ಆಗಲಿವೆ. 2023ರ ಜನವರಿ ವೇಳೆಗೆ ಈ ಸೀರಿಯಲ್ ಅಂತ್ಯವಾಗುವುದು ಬಹುತೇಕ ಖಚಿತವಾಗಿದೆ.
ಇತ್ತ ಬಿಗ್ ಬಾಸ್ ಕೂಡ ಶೀಘ್ರದಲ್ಲೇ ಮುಗಿಯಲಿದೆ. ಆ ಸಮಯದಲ್ಲಿ ಪ್ರಸಾರವಾಗಲು ‘ತ್ರಿಪುರ ಸುಂದರಿ’ ಹಾಗೂ ‘ಪುಣ್ಯವತಿ’ ಎಂಬ ಎರಡು ಹೊಸ ಸೀರಿಯಲ್ಗಳು ಸಜ್ಜಾಗಿವೆ. ‘ಕನ್ನಡತಿ’ ಬದಲಿಗೆ ಯಾವ ಧಾರಾವಾಹಿ ಬರಲಿದೆ ಎಂಬುದು ಇನ್ನಷ್ಟೇ ಗೊತ್ತಾಗಬೇಕಿದೆ. ರಂಜನಿ ರಾಘವನ್ ಅವರು ‘ಕನ್ನಡತಿ’ ಸೀರಿಯಲ್ನಲ್ಲಿ ಭುವಿ ಎಂಬ ಪಾತ್ರ ಮಾಡಿದ್ದಾರೆ. ನಟ ಕಿರಣ್ ರಾಜ್ ಅವರು ಹರ್ಷನಾಗಿ ಜನಮೆಚ್ಚುಗೆ ಪಡೆದುಕೊಂಡಿದ್ದಾರೆ.
ಇವರಿಬ್ಬರ ಜೋಡಿಗೆ ಪ್ರತ್ಯೇಕ ಅಭಿಮಾನಿವರ್ಗವಿದೆ. ಈ ಮೊದಲು ರಂಜನಿ ರಾಘವನ್ ಅವರು ‘ಪುಟ್ಟಗೌರಿ ಮದುವೆ’ ಧಾರಾವಾಹಿಯಲ್ಲಿ ನಟಿಸುತ್ತಿದ್ದರು. ಆಗ ‘ಪುಟ್ಟಗೌರಿ ರಂಜನಿ’ ಎಂದೇ ಅವರು ಫೇಮಸ್ ಆಗಿದ್ದರು. ಆದರೆ ಆ ಇಮೇಜ್ ಅನ್ನು ಬದಲಿಸುವ ರೀತಿಯಲ್ಲಿ ‘ಕನ್ನಡತಿ’ ಸೀರಿಯಲ್ ಮೂಡಿಬಂತು. ‘ಕನ್ನಡತಿ ಭುವಿ’ ಎಂದು ಅವರನ್ನು ಗುರುತಿಸುವ ಹಾಗೆ ಅವರ ಪಾತ್ರ ಜನಪ್ರಿಯತೆ ಪಡೆದುಕೊಂಡಿತು.