ತಾನು ತಾಯಿಯಾಗ್ತಿದ್ದೇನೆ ಅನ್ನೋದು ಅರಿವಿಗೇ ಬಾರದೆ ನಟಿಯೊಬ್ಬರು ಮೂರು ಸಿನೆಮಾ ಶೂಟಿಂಗ್ ಮಾಡಿ ಮುಗಿಸಿದ್ದಾರೆ. ಸಂದರ್ಶನವೊಂದರಲ್ಲಿ ರೋಚಕ ಸಂಗತಿಯನ್ನು ಬಂಗಾಳಿ ನಟಿ ಸುಭಾಶ್ರೀ ಗಂಗೂಲಿ ಬಹಿರಂಗಪಡಿಸಿದ್ದಾರೆ. ಸಂದರ್ಶನದಲ್ಲಿ ಸುಭಾಶ್ರೀ ಗಂಗೂಲಿ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಅನೇಕ ವಿಷಯಗಳನ್ನು ಮುಕ್ತವಾಗಿ ಹೇಳಿದ್ದಾರೆ. ಸುಭಾಶ್ರೀ ಅವರು ತಮ್ಮ ಗರ್ಭಾವಸ್ಥೆಯ ಆರಂಭಿಕ ತಿಂಗಳುಗಳಲ್ಲಿ, ಸತತ ಮೂರು ಚಿತ್ರಗಳಿಗೆ ಚಿತ್ರೀಕರಣ ಮಾಡಿದ್ದರಂತೆ. ಸುಭಾಶ್ರೀಗೆ ಮೊದಲ ಮೂರು ತಿಂಗಳು ತಾನು ಗರ್ಭಿಣಿ ಎಂದು ತಿಳಿದಿರಲಿಲ್ಲ. ಆರಾಮವಾಗಿ ಆಕೆ ಶೂಟಿಂಗ್ನಲ್ಲಿ ಪಾಲ್ಗೊಂಡಿದ್ದರು, ಸಾಮಾನ್ಯ ಜೀವನವನ್ನು ನಡೆಸುತ್ತಿದ್ದರು. ತನ್ನೊಳಗೆ ಇನ್ನೊಂದು ಜೀವ ಬೆಳೆಯುತ್ತಿದೆ ಅನ್ನೋದು ಆಕೆಯ ಅರಿವಿಗೇ ಬಂದಿರಲಿಲ್ಲ. ಸುಭಾಶ್ರೀ ಈಗ ಗಂಡು ಮಗುವಿನ ತಾಯಿ. ಇದೊಂದು ಆಕ್ಸಿಡೆಂಟಲ್ ಪ್ರೆಗ್ನೆನ್ಸಿ ಎನ್ನುತ್ತಾರೆ.

ಸುಭಾಶ್ರೀ ಗಂಗೂಲಿ, ನಿರ್ದೇಶಕ ರಾಜ್ ಚಕ್ರವರ್ತಿ ಅವರನ್ನು 2018 ರಲ್ಲಿ ವಿವಾಹವಾದರು. 2020ರ ಸಪ್ಟೆಂಬರ್ನಲ್ಲಿ ಅವರಿಗೆ ಗಂಡು ಮಗು ಜನಿಸಿದೆ. ಮಗನಿಗೆ ಯುವನ್ ಎಂದು ಅವರು ಹೆಸರಿಟ್ಟಿದ್ದಾರೆ.M ಚಿತ್ರವೊಂದರ ಶೂಟಿಂಗ್ ವೇಳೆ ಫೆಬ್ರವರಿ 14 ರಂದು ಸುಭಾಶ್ರೀ ಪ್ರೆಗ್ನೆನ್ಸಿ ಟೆಸ್ಟ್ ಮಾಡಿದ್ದರು, ಅದರಲ್ಲಿ ಪಾಸಿಟಿವ್ ರಿಸಲ್ಟ್ ಬಂದಿತ್ತು. ಅದಾಗ್ಲೇ ಸುಭಾಶ್ರೀ ಮೂರು ತಿಂಗಳ ಗರ್ಭಿಣಿಯಾಗಿದ್ದರು. ತಮ್ಮ ನಟನಾ ವೃತ್ತಿಜೀವನದ ಬಗ್ಗೆ ತೆರೆದಿಟ್ಟ ಸುಭಾಶ್ರೀ, “ಸಿನಿಮಾ ತಾರೆ” ಎಂಬ ಪದಗಳಲ್ಲಿ ನನಗೆ ನಂಬಿಕೆ ಇಲ್ಲ.
ಏಕೆಂದರೆ ನಾನು ಮನುಷ್ಯ ಎಂದು ಭಾವಿಸುತ್ತೇನೆ ಮತ್ತು ಇದು ನನ್ನ ಕೆಲಸ, ಮತ್ತು ದೇವರ ದಯೆಯಿಂದ ನನಗೆ ತುಂಬಾ ಪ್ರೀತಿ ಸಿಗುತ್ತಿದೆ. ನಾನು 17 ವರ್ಷದವನಾಗಿದ್ದಾಗ ನನ್ನ ಪ್ರಯಾಣವನ್ನು ಪ್ರಾರಂಭಿಸಿದೆ, ಆಗ ನಾನು ಏನು ಮಾಡುತ್ತಿದ್ದೇನೆಂದು ನನಗೆ ತಿಳಿದಿರಲಿಲ್ಲ, ಆದರೆ ನಾನು ಖಂಡಿತವಾಗಿಯೂ ಗಮನವನ್ನು ಆನಂದಿಸಿದೆ. ಕ್ರಮೇಣ ನಾನು ಕರಕುಶಲತೆಯನ್ನು ಹೆಚ್ಚು ಕಲಿತಿದ್ದೇನೆ ಮತ್ತು ಈಗ ನಾನು ಪ್ರತಿದಿನ ನನ್ನ ಕೆಲಸವನ್ನು ಸುಧಾರಿಸಲು ಪ್ರಯತ್ನಿಸುತ್ತೇನೆ. ಎಂದಿದ್ದಾರೆ.