ಬಾಲಿವುಡ್ ನಟಿಯಾಗಿರಲಿ ಅಥವಾ ಸಾಮಾನ್ಯ ಮಹಿಳೆಯಾಗಿರಲಿ ಪ್ರತಿಯೊಬ್ಬರೂ ಎಷ್ಟೇ ವಯಸ್ಸಾದರೂ ಸುಂದರವಾಗಿ ಕಾಣಬೇಕೆಂದು ಬಯಸುತ್ತಾರೆ. ಇದಕ್ಕಾಗಿ ಅವರು ಹಲವಾರು ಮನೆಮದ್ದುಗಳನ್ನು ಬಳಸುತ್ತಾರೆ. ಇನ್ನು ನಟಿಯರ ಬಗ್ಗೆ ಹೇಳಬೇಕೇ ಅವರು ಸುಂದರವಾಗಿ ಕಾಣುವುದು, ಫಿಟ್ ಆಗಿರುವುದು ಹೆಚ್ಚು ಮುಖ್ಯವಾಗಿದೆ. ತ್ವಚೆಯ ಆರೈಕೆಗಾಗಿ ಅವರು ವಿಶೇಷ ಕಾಳಜಿವಹಿಸುತ್ತಾರೆ. ನಾವಿಲ್ಲಿ ಹೇಳುತ್ತಿರುವುದು ಸಹ 35 ವರ್ಷ ವಯಸ್ಸಿನ ಖ್ಯಾತ ನಟಿಯ ಬಗ್ಗೆ. ಅವರ ಸೌಂದರ್ಯದ ರಹಸ್ಯ ಕೇಳಿದ್ರೆ ನಿಮಗೆ ಸರ್ಪ್ರೈಸ್ ಆಗುತ್ತದೆ. ಆ ನಟಿ ಸಂದರ್ಶನವೊಂದರಲ್ಲಿ ಸ್ವತಃ ತನ್ನ ಮುಖವನ್ನು ಉಗುಳು ಹಚ್ಚುವ ಮೂಲಕ ಹೇಗೆ ಸುಂದರವಾಗಿಟ್ಟುಕೊಳ್ಳುತ್ತೇನೆ ಎಂಬುದನ್ನು ತಿಳಿಸಿದ್ದರು.
ಯಾರು ಈ ನಟಿ ?
ನಿಮಗೀಗ ಈ ನಟಿ ಯಾರಿರಬಹುದು ಎಂಬ ಕುತುಹೂಲ ಹೆಚ್ಚುತ್ತಿದ್ದರೆ ಅದಕ್ಕಿಲ್ಲಿದೆ ಉತ್ತರ. ದಕ್ಷಿಣ ಮತ್ತು ಬಾಲಿವುಡ್ನಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಮಿಲ್ಕಿ ಬ್ಯೂಟಿ ಅಂತಾನೇ ಫೇಮಸ್ ಇವ್ರು. ಇಷ್ಟು ಹೇಳಿದ ಮೇಲೆ ಆ ನಟಿ ಯಾರೆಂದು ನಿಮಗೆ ಗೊತ್ತಾಯಿತಲ್ವ..ಯೆಸ್ ಅವರೇ ತಮನ್ನಾ ಭಾಟಿಯಾ…ತಮನ್ನಾ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ. ಈ ನಟಿ ನಟನೆಯ ಹೊರತಾಗಿ ಸ್ಪೆಷಲ್ ಸಾಂಗ್ಗೆ ಸಹ ಹೆಸರುವಾಸಿಯಾಗಿದ್ದಾರೆ. ಸ್ತ್ರೀ 2 ಚಿತ್ರದ ಐಟಂ ಸಾಂಗ್ ಆಜ್ ಕಿ ರಾತ್ ನೋಡಿದರೆ ನಿಮಗೆ ತಿಳಿಯುತ್ತದೆ. ಅಂದಹಾಗೆ ಈ ಹಾಡು ಭಾರೀ ಹಿಟ್ ಆಯಿತು.
ಪಿಂಕ್ವಿಲ್ಲಾಗೆ ನೀಡಿದ ಸಂದರ್ಶನದಲ್ಲಿ ತಮನ್ನಾ ಚರ್ಮದ ಬಗ್ಗೆ ಹೆಚ್ಚು ಕಾಳಜಿ ವಹಿಸುವುದಾಗಿ ಹೇಳಿದ್ದಾರೆ. ಇದಕ್ಕಾಗಿ ಅವರು ಬೆಳಗ್ಗೆ ಎದ್ದಾಗ ಮಾಡುವ ಮೊದಲ ಕೆಲಸವೆಂದರೆ ಮುಖದ ಮೇಲೆ ಲಾಲಾರಸವನ್ನು ಅಂದರೆ ಉಗುಳು ಲೇಪಿಸುವುದು. ಮೊದಮೊದಲು ತನಗೂ ಈ ರೀತಿ ಮಾಡುವುದು ವಿಚಿತ್ರ ಎನಿಸಿತು. ಆದರೆ ಇದರ ಲಾಭ ತಿಳಿದ ತಕ್ಷಣ ಅದನ್ನು ಕಾರ್ಯರೂಪಕ್ಕೆ ತರಲು ಆರಂಭಿಸಿದೆ ಎಂದು ನಟಿ ಹೇಳಿದ್ದಾರೆ.

ಮೊಡವೆಗಳನ್ನು ಹೋಗಲಾಡಿಸಲು ಸುಲಭ ಮಾರ್ಗ
ತಮನ್ನಾ ಭಾಟಿಯಾ ಅವರು ತಮ್ಮ ಮುಖದ ಮೇಲೆ ಮೊಡವೆ ಕಾಣಿಸಿಕೊಂಡಾಗ ಅವರು ಕೆಲವು ದಿನಗಳವರೆಗೆ ಹಾಗೆ ಮಾಡುತ್ತಾರಂತೆ. ಅವರ ಚರ್ಮವನ್ನು ನೋಡಿದರೆ ನೀವು ಇದನ್ನು ಊಹಿಸಬಹುದು. ತಮನ್ನಾ ತಾನು ಈ ಸ್ಥಾನಕ್ಕೆ ಬರಬಹುದು ಮತ್ತು ಜನರಿಂದ ಇಷ್ಟೊಂದು ಪ್ರೀತಿಯನ್ನು ಪಡೆಯುತ್ತೇನೆ ಎಂಬ ಕಲ್ಪನೆಯೂ ಇರಲಿಲ್ಲ ಎಂದು ಸಹ ಹೇಳಿದ್ದಾರೆ. 10 ವರ್ಷಕ್ಕಿಂತ ಹೆಚ್ಚು ಸಮಯಗಳ ಕಾಲ ಇಂಡಸ್ಟ್ರಿಯಲ್ಲಿ ಇರುವುದಿಲ್ಲ. ಮದುವೆಯಾಗಿ ಸೆಟಲ್ ಆಗುತ್ತೇನೆ ಎಂಬ ಭಯ ಆಕೆಗಿತ್ತಂತೆ.

ಲಾಲಾರಸ ಹಚ್ಚುವುದರಿಂದ ಸಿಗುವ ಪ್ರಯೋಜನಗಳು
ಆಯುರ್ವೇದ ಮತ್ತು ಸಾಂಪ್ರದಾಯಿಕ ವೈದ್ಯಕೀಯ ಪದ್ಧತಿಯಲ್ಲಿ ಲಾಲಾರಸವನ್ನು ನೈಸರ್ಗಿಕ ಔಷಧವೆಂದು ಪರಿಗಣಿಸಲಾಗುತ್ತದೆ. ಇದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ ಎಂಬ ಅಂಶ ಗೊತ್ತು. ಆದರೆ ಚರ್ಮದ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಇದು ಪರಿಣಾಮಕಾರಿ ಎಂದು ಪರಿಗಣಿಸಲಾಗಿದೆ. ಲಾಲಾರಸವು ನೈಸರ್ಗಿಕ ಕಿಣ್ವಗಳನ್ನು ಹೊಂದಿರುತ್ತದೆ. ಅದು ಚರ್ಮಕ್ಕೆ ತೇವಾಂಶವನ್ನು ನೀಡುತ್ತದೆ ಮತ್ತು ಒಣ ಚರ್ಮವನ್ನು ಗುಣಪಡಿಸಲು ಸಹಾಯ ಮಾಡುತ್ತದೆ. ಇದು ಚರ್ಮವನ್ನು ಮೃದುವಾಗಿಸುತ್ತದೆ. ಲಾಲಾರಸವು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನೂ ಹೊಂದಿದೆ, ಇದು ಮೊಡವೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ಮುಖದ ಮೇಲಿನ ಕಲೆಗಳನ್ನು ಮತ್ತು ಕಪ್ಪು ಕಲೆಗಳನ್ನು ಮಸುಕುಗೊಳಿಸುತ್ತದೆ. ಬೆಳಗ್ಗೆ ಲಾಲಾರಸವನ್ನು ಕಣ್ಣುಗಳ ಕೆಳಗೆ ಹಚ್ಚುವುದರಿಂದ ಕಪ್ಪು ವರ್ತುಲಗಳು ಮತ್ತು ಊತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ಚರ್ಮದ ಹೊಳಪನ್ನು ಹೆಚ್ಚಿಸುತ್ತದೆ.