ವಿಶೇಷವಾಗಿ ಸೆಲೆಬ್ರಿಟಿಗಳು ಮದುವೆಯ ಬಗ್ಗೆ ಎಷ್ಟು ಉತ್ಸುಕರಾಗಿರುತ್ತಾರೆಂದು ಎಲ್ಲರಿಗೂ ತಿಳಿದಿದೆ. ಕೆಲವರಂತೂ ಮದುವೆಗೆ ಒಂದು ವರ್ಷ ಇರುವಾಗಲೇ ಯೋಜನೆ ರೂಪಿಸಲು ಪ್ರಾರಂಭಿಸಿದರೆ, ಮತ್ತೆ ಕೆಲವು ನಟಿಯರು ಮದುವೆಯ ಬಟ್ಟೆಗಳನ್ನು ತಿಂಗಳ ಮುಂಚೆಯೇ ತಯಾರಿಸಿಟ್ಟುಕೊಂಡಿರುತ್ತಾರೆ. ಈಗ ಐಶ್ವರ್ಯಾ ಕೂಡ ಇದೇ ರೀತಿ ಮಾಡಿದ್ದನ್ನು ನೆನಪಿಸಿಕೊಂಡಿದ್ದಾರೆ. ಹೌದು, ತನ್ನ ಮದುವೆಗೆ ಸಂಬಂಧಿಸಿದ ಸೀಕ್ರೆಟ್ ಅನ್ನು ಬಹಿರಂಗವಾಗಿ ರಿವೀಲ್ ಮಾಡಿದ್ದಾರೆ ಐಶ್ವರ್ಯಾ. ‘ಬಿಗ್ ಬಾಸ್’, ʼಖತ್ರೋನ್ ಕೆ ಖಿಲಾಡಿʼಯಂತಹ ರಿಯಾಲಿಟಿ ಶೋಗಳಲ್ಲಿ ಮಿಂಚಿದ್ದ ಜನಪ್ರಿಯ ಹಿಂದಿ ಕಿರುತೆರೆ ನಟಿ ಐಶ್ವಯಾ ಶರ್ಮಾ ಈಗ ಯಾರೂ ಕೇಳಿರದ ಕಥೆಯೊಂದನ್ನು ಹೇಳಿದ್ದಾರೆ.

ಮೂರ್ಛೆ ಹೋಗಿದ್ದು ಯಾಕೆ?
ಐಶ್ವರ್ಯಾ ಶರ್ಮಾ ಅವರು ತಮ್ಮ ಮದುವೆಯ ಲೆಹೆಂಗಾಗೆ ಸಂಬಂಧಿಸಿದಂತೆ ಎಷ್ಟು ಸಮಸ್ಯೆಗಳನ್ನು ಎದುರಿಸಬೇಕಾಯಿತು ಮತ್ತು ಈ ಸಮಯದಲ್ಲಿ ಅವರು ಎಷ್ಟು ಒತ್ತಡದಲ್ಲಿದ್ದರು ಎಂಬುದನ್ನು ಬಹಿರಂಗಪಡಿಸಿದ್ದಾರೆ. ಜೊತೆಗೆ ಅವರು ಮದುವೆಗೆ ಮೊದಲು ಒಮ್ಮೆ ಮೂರ್ಛೆ ಹೋಗಿದ್ದಾಗಿಯೂ ತಿಳಿಸಿದ್ದಾರೆ. “ಅಯ್ಯೋ…ಅಷ್ಟಕ್ಕೂ ಐಶ್ವರ್ಯಾಗೆ ಯಾವ ರೀತಿಯ ಟೆನ್ಷನ್ ಆಗಿತ್ತು, ಅದು ತಲೆಸುತ್ತು ಬಂದು ಬೀಳುವಷ್ಟು?” ಎಂದು ಪ್ರಶ್ನೆ ನಿಮ್ಮನ್ನು ಕಾಡುತ್ತಿರಬಹುದು. ಆದರೆ ಅದಕ್ಕೂ ಐಶ್ವರ್ಯಾ ಅವರೇ ಉತ್ತರಿಸಿದ್ದಾರೆ. ನಿಜವಾಗಿ ಏನಾಯಿತು ಎಂದರೆ ಐಶ್ವರ್ಯಾ ತನ್ನ ಕನಸಿನ ಲೆಹೆಂಗಾದ ಬಗ್ಗೆ ತುಂಬಾ ಚಿಂತಿತರಾಗಿದ್ದರು ಮತ್ತು ಈ ಉದ್ವೇಗದಿಂದಾಗಿ ಅವರಿಗೆ ಈ ಸ್ಥಿತಿ ಬಂತು.

ಅರೆ, ಲೆಹೆಂಗಾ ಟೆನ್ಷನಾ… ಹೌದು, ವಾಸ್ತವವಾಗಿ, ಐಶ್ವರ್ಯಾ ಶರ್ಮಾ ತನ್ನ ಮದುವೆಯಲ್ಲಿ ಸಾಂಪ್ರದಾಯಿಕ ಲೆಹೆಂಗಾವನ್ನು ಧರಿಸಲು ಬಯಸಿದ್ದರು ಮತ್ತು ಭಾರೀ ವಿನ್ಯಾಸದ ಲೆಹೆಂಗಾ ಧರಿಸುವುದಿಲ್ಲವಂತೆ. ಈ ಒತ್ತಡದಿಂದಾಗಿ ಆಕೆಗೆ ರಾತ್ರಿ ನಿದ್ದೆಯೂ ಬರುತ್ತಿರಲಿಲ್ಲ. ಹಾಗೆ ನೋಡಿದರೆ ಆರು ತಿಂಗಳ ಹಿಂದೆಯೇ ಲೆಹೆಂಗಾವನ್ನು ವಿನ್ಯಾಸಗೊಳಿಸಲು ಪ್ರಾರಂಭಿಸಿದರು. ಇಂದೋರ್ ಮತ್ತು ಮುಂಬೈನಿಂದ ತನ್ನ ಲೆಹೆಂಗಾ ಬಟ್ಟೆಯನ್ನು ಖರೀದಿಸಿದ್ದರು. ಟೈಲರ್ ಮದುವೆಗೆ ಎರಡು ತಿಂಗಳ ಮೊದಲು ಬಟ್ಟೆಯನ್ನು ಹೊಲಿಯದೆ ತನ್ನ ಬಳಿ ಇಟ್ಟುಕೊಂಡಿದ್ದ. ಆದ್ದರಿಂದ ಮದುವೆ ಹತ್ತಿರವಾಗಿರುವುದರಿಂದ ಮತ್ತು ಧರಿಸಲು ಬಟ್ಟೆಯಿಲ್ಲದ ಕಾರಣ ಸಮಯ ವ್ಯರ್ಥ ಆಗುತ್ತಿರುವ ಬಗ್ಗೆ ಚಿಂತಿಸುತ್ತಿದ್ದರಂತೆ.
ಅಡುಗೆಮನೆಯಲ್ಲಿ ಪ್ರಜ್ಞಾಹೀನಳಾಗಿ ಬಿದ್ದ ಐಶ್ವರ್ಯಾ
ಕಡೆಗೆ ಒಂದು ದಿನ ಬ್ಲೌಸ್ ವಿನ್ಯಾಸ ತೆಗೆದುಕೊಳ್ಳಲು ಟೈಲರ್ ತನ್ನ ಮನೆಗೆ ಬಂದಾಗ ತುಂಬಾ ಆತಂಕಗೊಂಡಿದ್ದರಂತೆ ಐಶ್ವರ್ಯಾ. ಏನಾಯಿತೆಂದರೆ ಉಡುಪನ್ನು ಧರಿಸಲು ಟ್ರೈ ಮಾಡುವಾಗ ರಕ್ತದೊತ್ತಡ ಕಡಿಮೆಯಾಗಿದೆ. ಐಶ್ವರ್ಯಾ ಭಯಗೊಂಡು ತಾನು ಮೂರ್ಛೆ ಹೋಗಬಹುದು ಎಂದು ಭಾವಿಸಿದ್ದಾರೆ. ಹೀಗಿರುವಾಗ ಅಡುಗೆ ಮನೆಯತ್ತ ಓಡಿ ಸಕ್ಕರೆ ತಿಂದ ಕೂಡಲೇ ಅಲ್ಲೇ ಬಿದ್ದಿದ್ದಾರೆ. ಆ ವೇಳೆ ಫ್ರಿಡ್ಜ್ ಗೆ ಡಿಕ್ಕಿ ಹೊಡೆದು ಐಶ್ವರ್ಯಾ ಬಿದ್ದಿದ್ದರು. 5-10 ನಿಮಿಷಗಳ ನಂತರ ಪ್ರಜ್ಞೆ ಬಂದಿತು. ಆದರೆ ಟೈಲರ್ ಹೊರಗೆ ಕುಳಿತುಕೊಂಡಿದ್ದರಂತೆ ಮತ್ತು ನಟಿ ಪ್ರಜ್ಞಾಹೀನರಾಗಿದ್ದಾರೆಂದು ಅವರಿಗೆ ತಿಳಿದಿರಲಿಲ್ಲ.