ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಂದ್ರೆ ಡ್ಯಾನ್ಸ್, ಡ್ಯಾನ್ಸ್ ಅಂದ್ರೆ ಪುನೀತ್ ರಾಜ್ ಕುಮಾರ್. ಇದು ನಮಗೆಲ್ಲಾ ಗೊತ್ತಿರುವ ವಿಷಯ. ಚಿಕ್ಕ ವಯಸ್ಸಿನಿಂದಲು ಅಪ್ಪು ಅವರು ಎಷ್ಟು ಚೆನ್ನಾಗಿ ಡ್ಯಾನ್ಸ್ ಮಾಡುತ್ತಿದ್ದರು ಎಂದು ನಮಗೆಲ್ಲಾ ಗೊತ್ತೇ ಇದೆ. ಕನ್ನಡ ಚಿತ್ರರಂಗದ ಎಲ್ಲಾ ಹೀರೋಗಳ ಪೈಕಿ ಪುನೀತ್ ರಾಜ್ ಕುಮಾರ್ ಅವರ ಹಾಗೆ ಡ್ಯಾನ್ಸ್ ಮಾಡೋರು ಯಾರು ಇಲ್ಲ ಅನ್ನೋದು ತುಂಬಾ ಸತ್ಯ. ಹೀಗಿರುವಾಗ ಅಪ್ಪು ಅವರ ಡ್ಯಾನ್ಸ್ ಬಗ್ಗೆ ನಾವು ಎಷ್ಟೇ ಹೇಳಿದರು ಕಡಿಮೆಯೇ. ಅಪ್ಪು ಅವರ ಫ್ಯಾಮಿಲಿಯಲ್ಲಿ ಅವರು ಮಾತ್ರವಲ್ಲ, ಅಪ್ಪು ಅವರ ಮಗಳು ಧೃತಿ ಅವರು ಸಹ ಒಳ್ಳೆಯ ಡ್ಯಾನ್ಸರ್. ಇವರಿಗೆ ಡ್ಯಾನ್ಸ್ ಕಲಿಸಿದ್ದು ಕಿರುತೆರೆ ಹಾಗೂ ಸೋಷಿಯಲ್ ಮೀಡಿಯಾ ಮೂಲಕ ಎಲ್ಲರಿಗು ಪರಿಚಯ ಇರುವ ಒಬ್ಬ ವ್ಯಕ್ತಿ. ಡ್ಯಾನ್ಸ್ ಹೇಳಿಕೊಟ್ಟ ಆ ವ್ಯಕ್ತಿಯೇ ಈ ವಿಷಯವನ್ನು ರಿವೀಲ್ ಮಾಡಿದ್ದಾರೆ. ಹಾಗಿದ್ರೆ ಅವರು ಯಾರು ಗೊತ್ತಾ?

ನಮ್ಮ ಪ್ರೀತಿಯ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹಾಗೂ ಅಶ್ವಿನಿ ದಂಪತಿಗೆ ಇಬ್ಬರು ಮಕ್ಕಳು. ಧೃತಿ ಹಾಗೂ ವಂದನಾ. ಧೃತಿ ಮೊದಲ ಮಗಳು, ವಂದನಾ ಎರಡನೇ ಮಗಳು. ಧೃತಿ ಅವರು ವಿದೇಶದಲ್ಲಿ ಓದುತ್ತಿದ್ದಾರೆ. ಇವರ ಬಗ್ಗೆ ಒಂದು ವಿಶೇಷತೆ ಏನು ಎಂದರೆ, ಧೃತಿ ಅವರು ಅಮೆರಿಕಾದ ಪ್ರತಿಷ್ಠಿತ ಯೂನಿವರ್ಸಿಟಿಯಲ್ಲಿ ಓದುತ್ತಿದ್ದಾರೆ. ಆದರೆ ಇದಕ್ಕಾಗಿ ತಂದೆ ತಾಯಿಯಿಂದ ಒಂದೇ ಒಂದು ರೂಪಾಯಿಯನ್ನು ಸಹ ಪಡೆದಿಲ್ಲ. ಚೆನ್ನಾಗಿ ಓದಿ ಸ್ಕಾಲರ್ಶಿಪ್ ಪಡೆದು, ವಿದೇಶದ ಯೂನಿವರ್ಸಿಟಿಯಲ್ಲಿ ಸ್ಕಾಲರ್ಶಿಪ್ ಮೂಲಕ ಸೆಲೆಕ್ಟ್ ಆಗಿದ್ದಾರೆ. ಅಮ್ಮ ಅಪ್ಪನಿಂದ ದುಡ್ಡು ಖರ್ಚು ಮಾಡಿಸುವ ಮಕ್ಕಳೇ ಇರುವಾಗ, ಧೃತಿ ಅವರು ವಿಭಿನ್ನ. ಅವರಿಗೆ ಇರುವ ಶ್ರದ್ಧೆಯನ್ನು ನಾವು ಮೆಚ್ಚಿಕೊಳ್ಳಲೇಬೇಕು.

ಇನ್ನು ತಂದೆಯ ಹಾಗೆ ಮಕ್ಕಳಿಗೂ ಸಹ ಡ್ಯಾನ್ಸ್ ಬಗ್ಗೆ ಆಸಕ್ತಿ ಇತ್ತು. ಪುನೀತ್ ಅವರಿಗೂ ಮಕ್ಕಳಿಗೆ ಡ್ಯಾನ್ಸ್ ಕಲಿಸಬೇಕು ಎಂದು ಇತ್ತು. ಧೃತಿ ಅವರನ್ನು ಡ್ಯಾನ್ಸ್ ಕ್ಲಾಸ್ ಗೆ ಸಹ ಕಲಿಸಿದರು. ಧೃತಿ ಅವರಿಗೆ ಡ್ಯಾನ್ಸ್ ಕಲಿಸಿದ್ದು ಮತ್ಯಾರು ಅಲ್ಲ, ಬಿಗ್ ಬಾಸ್ ನಿನಗಾಗಿ ಧಾರಾವಾಹಿ ಇವುಗಳ ಮೂಲಕ ಜೊತೆಗೆ ಸೋಶಿಯಲ್ ಮೀಡಿಯಾದಲ್ಲಿ ಡ್ಯಾನ್ಸ್ ರೀಲ್ಸ್ ಗಳ ಮೂಲಕ ಎಲ್ಲರಿಗೂ ಚಿರಪರಿಚಿತರಾಗಿರುವ ಕಿಶನ್ ಬೆಳಗಲಿ ಅವರು. ಹೌದು, ಇದು ಯಾರಿಗೂ ಗೊತ್ತೇ ಇರದ ವಿಷಯ. ಪುನೀತ್ ರಾಜ್ ಕುಮಾರ್ ಅವರ ಮಗಳು ಧೃತಿ ಅವರಿಗೆ ಡ್ಯಾನ್ಸ್ ಕಲಿಸಿದ್ದು ಕಿಶನ್, ಹಾಗೆಯೇ ಕಿಶನ್ ಅವರ ಮೊದಲ ಸ್ಟೂಡೆಂಟ್ ಧೃತಿ ಅವರೇ. ಈ ವಿಚಾರವನ್ನು ಇತ್ತೀಚೆಗೆ ಕಿಶನ್ ಅವರು ರಿವೀಲ್ ಮಾಡಿದ್ದು, ಅಭಿಮಾನಿಗಳು ಸಹ ಈ ವಿಷಯ ಕೇಳಿ ಆಶ್ಚರ್ಯ ಪಟ್ಟಿದ್ದಾರೆ.

ಮೊನ್ನೆ ಅಪ್ಪು ಅವರ ಹುಟ್ಟುಹಬ್ಬ ಇತ್ತು. ಈ ವಿಶೇಷವಾದ ಸಮಯಕ್ಕೆ ಅಭಿಮಾನಿಗಳಿಗಾಗಿ ಅಪ್ಪು ಸಿನಿಮಾ ರೀರಿಲೀಸ್ ಮಾಡಲಾಗಿದೆ. ಹುಟ್ಟುಹಬ್ಬಕ್ಕಿಂತ ಮುಂಚಿತವಾಗಿ, ಮಾರ್ಚ್ 14 ರಂದು ಅಪ್ಪು ಸಿನಿಮಾ ಬಿಡುಗಡೆ ಆಯಿತು. ಅಂದು ಅಶ್ವಿನಿ ಅವರ ಹುಟ್ಟುಹಬ್ಬ ಅನ್ನೋದು ಮತ್ತೊಂದು ವಿಶೇಷ. ಆ ದಿವಸ ಇಡೀ ಕರ್ನಾಟಕದಲ್ಲಿ ಸಂಭ್ರಮ ಇತ್ತು. ಪುನೀತ್ ರಾಜ್ ಕುಮಾರ್ ಅವರ ಮೊದಲ ಸಿನಿಮಾ ಅಪ್ಪು ಸಿನಿಮಾವನ್ನು ಮತ್ತೆ ತೆರೆ ಮೇಲೆ ನೋಡೋ ಅವಕಾಶ ಸಿಗುತ್ತೆ ಅಂದ್ರೆ ಯಾವ ಅಭಿಮಾನಿಗೆ ತಾನೇ ಖುಷಿ ಆಗೋದಿಲ್ಲ ಹೇಳಿ.. ಬಹಳಷ್ಟು ಸೆಲೆಬ್ರಿಟಿಗಳು, ಜನರು ಎಲ್ಲರೂ ಸಹ ಅಪ್ಪು ಸಿನಿಮಾ ಫಸ್ಟ್ ಡೇ ಫಸ್ಟ್ ನೋಡಿದರು. ಒಂದು ರೀರಿಲೀಸ್ ಸಿನಿಮಾಗೆ ಈ ಪರಿ ಓಪನಿಂಗ್ ಸಿಕ್ಕಿದ್ದು ಇದೇ ಮೊದಲು ಎಂದು ಹೇಳಿದರ್ ಖಂಡಿತ ತಪ್ಪಲ್ಲ. ಅಷ್ಟರ ಮಟ್ಟಿಗೆ ಇದೆ ಅಪ್ಪು ಸರ್ ಕ್ರೇಜ್.

ಅಪ್ಪು ಸಿನಿಮಾವನ್ನು ಮೊದಲ ದಿವಸ ಮೇನ್ ಥಿಯೇಟರ್ ನಲ್ಲಿ ನೋಡೋಕೆ ಸೆಲೆಬ್ರಿಟಿಗಳ ದಂಡೇ ಬಂದಿತ್ತು. ಎಲ್ಲರಿಗೂ ಮತ್ತೊಮ್ಮೆ ಅಪ್ಪು ಸಿನಿಮಾ ನೋಡಬೇಕು ಅನ್ನೋ ಆಸೆ, ಹಂಬಲ. ಅದೇ ರೀತಿ ಬಿಗ್ ಬಾಸ್ ಸ್ಪರ್ಧಿಗಳು ಸಹ ಬಂದಿದ್ದರು. ನಮ್ರತಾ ಗೌಡ, ಕಾರ್ತಿಕ್ ಮಹೇಶ್, ಕಿಶನ್ ಬೆಳಗಲಿ ಇವರೆಲ್ಲರೂ ಬಂದು ಸಿನಿಮಾ ನೋಡಿ ಸಖತ್ ಎಂಜಾಯ್ ಮಾಡಿದರು. ಸಿನಿಮಾ ಉದ್ದಕ್ಕೂ ಶಿಳ್ಳೆ, ಚಪ್ಪಾಳೆ, ಕಿರುಚಾಟ ಇದಕ್ಕೆಲ್ಲಾ ಕಡಿಮೆಯೇ ಇರಲಿಲ್ಲ. ಅಪ್ಪು ಅವರ ಸಿನಿಮಾ ಕ್ರೇಜ್ ಅಂದ್ರೆ ಹಾಗೆ ಅಲ್ವಾ.
ಎಲ್ಲವೂ ಸ್ಪೆಷಲ್ ಆಗಿಯೇ ಇರುತ್ತದೆ. ಸಿನಿಮಾ ಮುಗಿದ ಬಳಿಕ ಮಾಧ್ಯಮದವರ ಜೊತೆಗೆ ಸೆಲೆಬ್ರಿಟಿಗಳು ಮಾತನಾಡಿದರು. ಆಗ ಮಾತನಾಡಿದ ಕಿಶನ್ ಬೆಳಗಲಿ ಈ ವಿಚಾರವನ್ನು ರಿವೀಲ್ ಮಾಡಿದ್ದಾರೆ. ಅಪ್ಪು ಸರ್ ಮಗಳು ಧೃತಿ ನನ್ನ ಮೊದಲ ಸ್ಟೂಡೆಂಟ್ ಎಂದು ರಿವೀಲ್ ಮಾಡಿದ್ದಾರೆ.

ಮಾಧ್ಯಮದವರು ಸಿನಿಮಾ ಬಗ್ಗೆ ಕೇಳಿ ನಂತರ ಅಪ್ಪು ಅವರ ಬಗ್ಗೆ ಕೇಳಿದಾಗ, “ಅಪ್ಪು ಸರ್ ಅಂದ್ರೆ ಡ್ಯಾನ್ಸ್. ನನಗೆ ಡ್ಯಾನ್ಸ್ ಅಂದ್ರೆ ತುಂಬಾ ಇಷ್ಟ. ಇದೇ ಕಾರಣಕ್ಕೆ ನಾನು ಅಪ್ಪು ಸರ್ ಗೆ ಬಹಳ ಆತ್ಮೀಯನಾಗಿದ್ದೆ. ಅವರ ಜೊತೆಗೆ ಒಳ್ಳೆಯ ಒಡನಾಟ ಇತ್ತು. ಬಹಳ ವರ್ಷಗಳ ಹಿಂದೆ, ನನಗೆ 23 ವರ್ಷ ಆಗಿದ್ದಾಗ ನಾನು ಡ್ಯಾನ್ಸ್ ಹೇಳಿಕೊಡಬೇಕು ಎಂದು ಡಿಸೈಡ್ ಮಾಡಿದಾಗ, ಅಶ್ವಿನಿ ಅಕ್ಕ ಮತ್ತು ಅಪ್ಪು ಸರ್ ಅವರ ಮಗಳು ಧೃತಿ ನನ್ನ ಮೊದಲ ಸ್ಟೂಡೆಂಟ್ ಆಗಿದ್ರು. ಇದು ಯಾರಿಗೂ ಗೊತ್ತಿರದ ಒಂದು ವಿಷಯ..” ಎಂದು ಹೇಳಿದ್ದಾರೆ ಕಿಶನ್ ಬೆಳಗಲಿ. ಇದನ್ನ ಕೇಳಿ ಫ್ಯಾನ್ಸ್ ನಿಜಕ್ಕೂ ಆಶ್ಚರ್ಯ ಪಟ್ಟಿದ್ದಾರೆ. ಪುನೀತ್ ರಾಜ್ ಕುಮಾರ್ ಅವರು ಇನ್ನು ಅದೆಷ್ಟು ಜನರಿಗೆ ಸಪೋರ್ಟ್ ಮಾಡಿದ್ದಾರೋ ಎನ್ನುವ ಸಂತೋಷದ ಪ್ರಶ್ನೆ ನಮ್ಮೆಲ್ಲರನ್ನು ಕಾಡುತ್ತದೆ. ಹಾಗೆ ಅವರು ಇನ್ನು ಇರಬೇಕಿತ್ತು ಎಂದು ಕೂಡ ಅನ್ನಿಸುತ್ತದೆ.

ಕಿಶನ್ ಅವರು ಈ ವಿಚಾರ ಹೇಳಿ, ಜೊತೆಗೆ ಅಪ್ಪು ಸರ್ ಅಂದ್ರೆ ತುಂಬಾ ಇಷ್ಟ. ಅಪ್ಪು ಸಿನಿಮಾದ ಹಾಡನ್ನು ಆದಷ್ಟು ಬೇಗ ರೀಕ್ರಿಯೇಟ್ ಮಾಡುತ್ತೇನೆ ಎಂದು ಸಹ ಹೇಳಿದ್ದಾರೆ. ಕಿಶನ್ ಒಬ್ಬ ಅದ್ಭುತ ಡ್ಯಾನ್ಸರ್. ಬೇಗ ಅಪ್ಪು ಸರ್ ಸಾಂಗ್ ರೀಕ್ರಿಯೇಟ್ ಮಾಡಲಿ ಎನ್ನುವುದು ಅಭಿಮಾನಿಗಳ ಆಸೆ. ಇನ್ನು ಕಿಶನ್ ಬಿಗ್ ಬಾಸ್ ಶೋ ಗೆ ಸ್ಪರ್ಧಿಯಾಗಿ ಬಂದಿದ್ದರು, ಹಿಂದಿಯ ಡ್ಯಾನ್ಸ್ ಶೋನಲ್ಲಿ ಸ್ಪರ್ಧಿಸಿದ್ದರು. ಕನ್ನಡದ ಬಿಗ್ ಬಾಸ್ ಇವರಿಗೆ ದೊಡ್ಡ ಮಟ್ಟದಲ್ಲಿಯೇ ಹೆಸರು ತಂದುಕೊಟ್ಟಿತು. ಇನ್ನು ಡ್ಯಾನ್ಸ್ ವಿಷಯಕ್ಕೆ ಬಂದರೆ, ಅವರ ಸೋಶಿಯಲ್ ಮೀಡಿಯಾ ಖಾತೆ ನೋಡಿದರೆ, ಬಹುತೇಕ ಎಲ್ಲಾ ಸೆಲೆಬ್ರಿಟಿಗಳ ಜೊತೆಗೆ ಕಿಶನ್ ಡ್ಯಾನ್ಸ್ ಮಾಡಿ, ಸ್ಪೆಷಲ್ ವಿಡಿಯೋಗಳನ್ನು ಶೇರ್ ಮಾಡಿದ್ದಾರೆ. ಅದೆಲ್ಲವೂ ವೈರಲ್ ಸಹ ಆಗುತ್ತದೆ.