ಇವಳಿಗೆ ಕಣ್ಣು ಕಾಣಿಸುವುದಿಲ್ಲ. ಈಕೆ ಏನು ಮಾಡಲು ಸಾಧ್ಯ? ಇವಳೊಂದು ವೇಸ್ಟ್? ಹೀಗೆ ಸಾಲು ಸಾಲು ತಿರಸ್ಕಾರದ ಮಾತುಗಳನ್ನು ಕೇಳುತ್ತಾ ಬೆಳೆಯುತ್ತಿದ್ದ ಹುಡುಗಿಯೊಬ್ಬಳು ಮುಂದೊಂದು ದಿನ ಪ್ಯಾರಾ ಅಥ್ಲೆಟ್ ಆಗಿ ಇಡೀ ದೇಶವೇ ಹೆಮ್ಮೆ ಪಡುವ ಕ್ರೀಡಾಪಟು ಆಗುತ್ತಾಳೆ ಎಂದು ಯಾರು ಊಹಿಸಿರಲಿಲ್ಲ. ಹೌದು, ಚಿನ್ನದ ಪದಕವನ್ನು ಮುಡಿಗೇರಿಸಿಕೊಂಡು ಪ್ಯಾರಿಸ್ ಒಲಿಂಪಿಕ್ಸ್ನಂತಹ ಪ್ರತಿಷ್ಠಿತ ಕ್ರೀಡಾಕೂಟದಲ್ಲಿಯೂ ತನ್ನ ಛಾಪು ಮೂಡಿಸಿರುವ ೨೪ ವರ್ಷದ ರಕ್ಷಿತಾ ರಾಜು, ಕುರುಡಿ ಎಂಬ ಹಣೆಪಟ್ಟಿಯೊಂದಿಗೆ ಸಾಕಷ್ಟು ಅಸಡ್ಡೆಯ ಮಾತುಗಳನ್ನು ಕೇಳಿಸಿಕೊಂಡು ಬೆಳದಿರುವ ಸಾಧಕಿ. ಕಠಿಣ ಪರಿಶ್ರಮದಿಂದ ಗೆಲುವಿನತ್ತ ಸಾಗಿದ ರಕ್ಷಿತಾ, ತಾನು ಅಪ್ರಯೋಜಕಿ ಎನ್ನಿಸಿಕೊಂಡವರ ಮೂಗು ಮುರಿದು, ಕ್ರೀಡೆ ಮೂಲಕ ಅವರಿಗೇ ಉತ್ತರ ನೀಡಿದ್ದಾರೆ.
ಇವಳೊಬ್ಬಳು ಅಪ್ರಯೋಜಕಿ….
೧೦ ವರ್ಷದವಳಾಗಿರುವಾಗಲೇ ತಂದೆ-ತಾಯಿಯನ್ನು ಕಳೆದುಕೊಂಡಿದ್ದ ರಕ್ಷಿತಾ ರಾಜು, ಅಜ್ಜಿಯ ಆಸರೆಯಲ್ಲಿ ಬೆಳೆದ ಹುಡುಗಿ. ಬಾಲ್ಯದಿಂದಲೇ ಅಂಧತ್ವಕ್ಕೆ ಗುರಿಯಾಗಿದ್ದ ರಕ್ಷಿತಾಳನ್ನು ಊರಿನವರು ಇವಳು ಕುರುಡಿ. ಇವಳೊಬ್ಬಳು ಅಪ್ರಯೋಜಕಿ ಎಂದು ಹಂಗಿಸುತ್ತಿದ್ದರAತೆ. ಹೀಗೆಂದು ಸಂದರ್ಶನವೊAದರಲ್ಲಿ ತಮ್ಮ ಮನಸ್ಸಿನ ಮಾತನ್ನು ಹಂಚಿಕೊAಡಿರುವ ರಕ್ಷಿತಾ, ತನ್ನ ಅಜ್ಜಿಯೂ ಸಹ ಶ್ರವಣ ದೋಷ ಹಾಗೂ ಮಾತು ಬಾರದೆ ಬಳಲುತ್ತಿದ್ದರು. ನಾವಿಬ್ಬರು ಅಂಗವಿಕಲರೇ ಆಗಿದಿದ್ದರಿಂದ ನನ್ನ ಅಜ್ಜಿ ನನ್ನನ್ನು ಅರ್ಥ ಮಾಡಿಕೊಎಂದು À್ಳಲು ಸಾಧ್ಯವಾಯಿತು ಎಂದು ಹೇಳಿಕೊಂಡಿದ್ದಾರೆ.

ಓಟಗಾರ್ತಿಯಾಗಿ ಸಾಧನೆ
ಅಂಗವೈಕಲ್ಯತೆಯನ್ನೇ ಸಾಧನೆಯ ಮೆಟ್ಟಿಲನ್ನಾಗಿಸಿಕೊಂಡಿರುವ ರಕ್ಷಿತಾ ರಾಜು ಹಲವು ಸಾಧನೆಯ ಕಿರೀಟಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ೨೦೧೮ ಹಾಗೂ ೨೦೨೩ರ ಏಷಿಯನ್ ಗೇಮ್ಸ್ನಲ್ಲಿ ಭಾಗವಹಿಸಿ ಚಿನ್ನದ ಪದಕವನ್ನು ಗೆದ್ದು ಭಾರತಕ್ಕೆ ಕೀರ್ತಿ ತಂದಿದ್ದಾರೆ. ಇನ್ನು ಪ್ಯಾರಿಸ್ ಪ್ಯಾರಲಿಂಪಿಕ್ಸ್ನಲ್ಲಿಯೂ ಸಹ ಭಾರತವನ್ನು ಪ್ರತಿನಿಧಿಸಿದ್ದಾರೆ ಎಂಬುದು ಹೆಮ್ಮೆಯ ಸಂಗತಿ.
ಕ್ರೀಡಾ ಶಿಕ್ಷಕರೇ ಪ್ರೇರಣೆ
ರಕ್ಷಿತಾ ಅವರ ಕ್ರೀಡಾ ಶಿಕ್ಷಕರು ಮೊದಲ ಬಾರಿಗೆ ಇವರ ಓಟದ ಬಗ್ಗೆ ಹುರಿದುಂಬಿಸಿ, ನಿನ್ನಲ್ಲಿ ಒಳ್ಳೆಯೇ ಕ್ರೀಡಾಪಟುವಾಗುವ ಸಾಮರ್ಥ್ಯವಿದೆ ಎಂದು ಹೇಳಿದ್ದರಂತೆ. ಆದರೆ, ಸ್ವತಃ ರಕ್ಷಿತಾ ಅವರೇ “ನಾನು ಕುರುಡಿಯಾಗಿದ್ದು, ಹೇಗೆ ಓಡಲು ಸಾಧ್ಯ ಎಂದು ಪ್ರಶ್ನೆಸಿದ್ದರಂತೆ”. ಆಗ ಒಬ್ಬರ ಮಾರ್ಗದರ್ಶನದಲ್ಲಿ ಅಂಗವಿಕಲರು ಸಹ ಓಟದ ಮೈದಾನದಲ್ಲಿ ಓಡಿ ಗೆಲ್ಲಬಹುದು ಎಂದು ಮನವರಿಕೆ ಮಾಡಿಕೊಟ್ಟಿದ್ದರು ಎಂದು ರಕ್ಷಿತಾ ನೆನಪಿಸಿಕೊಳ್ಳುತ್ತಾರೆ.
ಸಹಪಾಠಿಗಳೇ ಮಾರ್ಗದರ್ಶಿ ಓಟಗಾರರು
ಶಿಕ್ಷಕರ ಮಾರ್ಗದರ್ಶನದಲ್ಲಿ ತಯಾರಿ ಪ್ರಾರಂಭಿಸಿದ ರಕ್ಷಿತಾ ಅವರಿಗೆ ಸ್ವಲ್ಪ ಸಮಯದವರೆಗೂ ಅವರ ತರಗತಿಯ ಸಹಪಾಠಿಗಳೇ ಮಾರ್ಗದರ್ಶಿ ಓಟಗಾರರಾಗಿ ಸಾಥ್ ನೀಡುತ್ತಿದ್ದರು. ೨೦೧೬ರಲ್ಲಿ ರಾಹುಲ್ ಬಾಲಕೃಷ್ಣ ಎಂಬುವವರನ್ನು ಭೇಟಿಯಾದ ನಂತರ ಪರಿಸ್ಥಿತಿ ಬದಲಾಯಿತು. ಓಟಗಾರರಾಗಿದ್ದ ರಾಹುಲ್ ಅವರು ಇಂಜ್ಯೂರಿಯಿAದ ಪ್ಯಾರಾಲಿಂಪಿಕ್ ಸಮಿತಿಯನ್ನು ಸೇರಿದರು. ಅಲ್ಲಿಂದ ರಕ್ಷಿತಾ ಅವರ ತರಬೇತುದಾರ ಹಾಗೂ ಮಾರ್ಗದರ್ಶಕರಾಗಿ ಜೊತೆ ನಿಂತಿದ್ದಾರೆ. ರಾಹುಲ್ ಬಾಲಕೃಷ್ಣ ಅವರ ಬೆಂಬಲವನ್ನು ಸ್ಮರಿಸುವ ರಕ್ಷಿತಾ, “ನಾನು ನನ್ನ ಮಾರ್ಗದರ್ಶಿ ಓಟಗಾರರನ್ನು ನನಗಿಂತ ಹೆಚ್ಚಾಗಿ ನಂಬುತ್ತೇನೆ” ಎಂದು ಅಭಿಪ್ರಾಯ ಪಟ್ಟಿದ್ದಾರೆ.