ಇತಿಹಾಸದ ಪುಟದಲ್ಲಿ ದಾಳಿ ಮಾಡಲು ಬಂದ ಹುಲಿಯನ್ನು ಏಕಾಂಗಿಯಾಗಿ ಕೊಂದ ಸಾಹಸಿ ಎಂದರೆ ಅದು ಮೈಸೂರಿನ ಹುಲಿ ಎಂದೇ ಖ್ಯಾತನಾದ ಅರಸ ಟಿಪ್ಪು ಸುಲ್ತಾನ್. ಇದೀಗ ಟಿಪ್ಪುವಿನ ಪರಾಕ್ರಮವನ್ನೇ ನೆನಪಿಸುವಂತಹ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಸಕ್ಕತ್ ಸದ್ದು ಮಾಡುತ್ತಿದೆ. ಹಸುವೊಂದನ್ನು ಹಿಡಿದು ತಿನ್ನಲು ಪ್ರಯತ್ನಿಸುತ್ತಿದ್ದ ಸಿಂಹವನ್ನು ಒಬ್ಬ ಸಾಮಾನ್ಯ ರೈತ ಧೈರ್ಯದಿಂದ ಎದುರಿಸಿ ಹಸುವನ್ನು ಸಾವಿನ ಬಾಯಿಯಿಂದ ರಕ್ಷಿಸಿದ್ದಾನೆ.

ಈ ಘಟನೆ ನಡೆದಿರುವುದು ಗುಜರಾತ್ ರಾಜ್ಯದ ಗಿರ್ ಸೋಮನಾಥ ಜಿಲ್ಲೆಯಲ್ಲಿ. ಇದೇ ಜಿಲ್ಲೆಯ ರೈತನೊಬ್ಬ ಹಸಿದ ಸಿಂಹದ ಬಾಯಿಯಿಂದ ಮುಗ್ದ ಹಸುವನ್ನು ರಕ್ಷಿಸಿ ಪರಾಕ್ರ ಮೆರೆದಿದ್ದಾನೆ.ಆ ಮೂಲಕ ಕಾಡಿನ ರಾಜನನ್ನು ಓಡಿಸಿ ಕಾಮದೇನುವನ್ನು ಕಾಪಾಡಿದ್ದಾನೆ. ರಸ್ತೆ ಬದಿಯಲ್ಲಿ ನಡೆದ ಈ ಕಾಳಗದ ವಿಡಿಯೋವನ್ನು ದಾರಿಹೋಕ ಕಾರು ಚಾಲಕನೊಬ್ಬ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಕ್ಕೆ ಅಪ್ಲೋಡ್ ಮಾಡಿದ್ದು, ಈ ವಿಡಿಯೋ ಸಕ್ಕತ್ ವೈರಲ್ ಆಗುತ್ತಿದೆ ಜೊತೆಗೆ ನೆಟ್ಟಿಗರ್ ಧೈರ್ಯಶಾಲಿ ರೈತನನ್ನು ಕೊಂಡಾಡಿದ್ದಾರೆ.
ವಿಡಿಯೋದಲ್ಲಿ ಏನಿದೆ?
ಈ ವೈರಲ್ ವಿಡಿಯೋವನ್ನು ಗಮನಿಸಿದಾಗ ಹಸಿದ ಸಿಂಹವೊಂದು ಒಂಟಿಯಾಗಿ ತಿರುಗುತ್ತಿದ್ದ ಹಸುವೊಂದನ್ನು ಹಿಡಿದು ಅದನ್ನು ಕೊಲ್ಲುವುದಕ್ಕಾಗಿ ಹಸುವಿನ ಕತ್ತಿಗೆ ಬಾಯಿ ಹಾಕಿದ್ದನ್ನು ಕಾಣಬಹುದು. ಸಿಂಹದ ಆಕ್ರಮಣದಿಂದ ಸುಸ್ತಾದ ಹಸು ರಕ್ಷಣೆಗಾಗಿ ಒದ್ದಾಡುತ್ತಿತ್ತು. ಆಗ ಅಖಾಡಕ್ಕೆ ಎಂಟ್ರಿಕೊಟ್ಟ ರೈತ ಸಿಂಹಕ್ಕೆ ಹೆದರದೆ ರಸ್ತೆ ಬದಿಯಲ್ಲಿದ್ದ ಕಲ್ಲುಗಳನ್ನು ಸಿಂಹದ ಮೇಲೆ ಎಸೆದಿದ್ದಾನೆ. ಈ ರೈತನ ದಿಢೀರ್ ಪ್ರತಿದಾಳಿಯಿಂದ ಬೆಚ್ಚಿಬಿದ್ದ ಸಿಂಹ ಹಸುವನ್ನು ಬಿಟ್ಟು ಪಲಾಯನ ಮಾಡಿದೆ. ರೈತನಿಂದಾಗಿ ಪ್ರಾಣ ಉಳಿಸಿಕೊಂಡ ಹಸು ನೆಮ್ಮದಿಯ ನಿಟ್ಟುಸಿರು ಬಿಟ್ಟಿದೆ.
ಸಿಂಹದ ದಾಳಿಯಿಂದ ಹಸುವನ್ನು ರಕ್ಷಿಸಿದ ಈ ಅಪರೂಪದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ರೈತನ ಧೈರ್ಯವನ್ನು ಹಾಡಿ ಹೊಗಳಿದ್ದಾರೆ. ರಸ್ತೆ ಬದಿಯಲ್ಲಿ ಈ ರೀತಿ ಸಾಹಸ ಮೆರೆದು ಮುಗ್ದ ಪ್ರಾಣಿ ಹಸುವನ್ನು ರಕ್ಷಿಸಿದ ರೈತನನ್ನು ಗುಜರಾತಿನ ಸೋಮನಾಥ ಜಿಲ್ಲೆಯ ಕಿರಿತ್ ಸಿಂಗ್ ಚೌಹಾಣ್ ಎಂದು ಗುರುತಿಸಲಾಗಿದೆ.