ಸೋಷಿಯಲ್ ಮೀಡಿಯಾದಲ್ಲಿ ಕಳೆದ ಕೆಲವು ದಿನಗಳಿಂದ ಮೊನಾಲೀಸಾ ಸಿಕ್ಕಾಪಟ್ಟೆ ಸುದ್ದಿಯಾಗುತ್ತಿದ್ದಾರೆ. ಮಹಾಕುಂಭಮೇಳದಲ್ಲಿ ಕಾಣಿಸಿಕೊಂಡ ಈ ಹುಡುಗಿಯ ಬ್ಯೂಟಿಗೆ ನೆಟ್ಟಿಗರು ಫಿದಾ ಆಗಿದ್ದರು. ಈಕೆಯ ಫೋಟೋಗಳು ಮತ್ತು ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಸೃಷ್ಟಿಸಿದ್ದರು. ಇದೀಗ ಈ ಹುಡುಗಿಗೆ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿದೆ. ಈಗಾಗಲೇ ಎರಡು ಸಿನಿಮಾಗಳಲ್ಲಿ ನಟಿಸುವ ಅವಕಾಶ ಇವರಿಗೆ ಸಿಕ್ಕಿದೆ ಎಂದು ಮಾಹಿತಿ ಸಿಕ್ಕಿದ್ದು, ಶಿವಣ್ಣ ಅಭಿನಯಿಸಲಿರುವ ಸಿನಿಮಾದಲ್ಲಿ ಕೂಡ ಚಾನ್ಸ್ ಗಿಟ್ಟಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಪೂರ್ತಿ ಡೀಟೇಲ್ಸ್ ಇಲ್ಲಿದೆ ನೋಡಿ..
ಮೊನಾಲಿಸಾ ಮೂಲತಃ ಮಧ್ಯಪ್ರದೇಶದ ಇಂದೋರ್ ನ ಹುಡುಗಿ. ಮೊನಾಲಿಸಾ ಹಾಗೂ ಆಕೆಯ ಇಡೀ ಕುಟುಂಬ ರುದ್ರಾಕ್ಷಿ ಮಾಲೆಗಳನ್ನು ಮಾರುವುದಕ್ಕಾಗಿ ಮಹಾಕುಂಭಮೇಳಕ್ಕೆ ಬಂದಿದ್ದಾರೆ. ಈಕೆ ಮಾಲೆ ಮಾರುವುದನ್ನು ನೋಡಿದ ನೆಟ್ಟಿಗರು, ಬಹಳ ಸುಂದರವಾಗಿದ್ದಾಳೆ, ಈಕೆಯ ಕಣ್ಣುಗಳು ಬಹಳ ಚೆನ್ನಾಗಿವೆ ಎಂದು ಕೆಲವು ಫೋಟೋ ಹಾಗೂ ವಿಡಿಯೋ ಶೇರ್ ಮಾಡಿದ್ದರು. ಅವುಗಳೆಲ್ಲಾ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಎಲ್ಲರೂ ಈಕೆಯ ಮುಗ್ಧ ಸೌಂದರ್ಯಕ್ಕೆ ಫಿದಾ ಆಗಿದ್ದರು ಎಂದರೆ ತಪ್ಪಲ್ಲ. ಮೊನಾಲಿಸಾ ಅವರನ್ನು ಐಶ್ವರ್ಯ ರೈ ಅವರಿಗೆ ಹೋಲಿಸಿ ಹಲವು ಜನ ಮಾತನಾಡಿದ್ದರು. ಇವರ ಕಣ್ಣುಗಳು ಬಹಳ ಆಕರ್ಷಕವಾಗಿದೆ.
ಮೊನಾಲಿಸಾ ಕಣ್ಣುಗಳನ್ನು ನೋಡಿದ ನೆಟ್ಟಿಗರು ಐಶ್ವರ್ಯ ರೈ ಗಿಂತ ಇವರೇನು ಕಂಮ್ಜ ಇಲ್ಲ ಎಂದಿದ್ದರು. ನಿಜವಾದ ನ್ಯಾಷನಲ್ ಕ್ರಶ್ ಈ ಮೊನಾಲಿಸಾ ಎಂದು ಕೂಡ ಹೇಳಲಾಯಿತು. ಇಷ್ಟು ಜನಪ್ರಿಯತೆ ಸಿಕ್ಕಿರುವ ಹುಡುಗಿಗೆ ಇದೀಗ ಸಿನಿಮಾದಲ್ಲಿ ಅಭಿನಯಿಸುವ ಅವಕಾಶ ಸಿಕ್ಕಿದೆ. ಅದು ನಮ್ಮ ಶಿವಣ್ಣ ಅಭಿನಯಿಸಲಿರುವ ಸಿನಿಮಾದಲ್ಲಿ. ಈ ಸಿನಿಮಾ ಮತ್ಯವುದು ಅಲ್ಲ ಟಾಲಿವುಡ್ ನ ಸ್ಟಾರ್ ನಟ ರಾಮ್ ಚರಣ್ ಅಭಿನಯಿಸಲಿರುವ ಆರ್.ಸಿ16 ಸಿನಿಮಾ ಆಗಿದೆ. ಈ ಸಿನಿಮಾದಲ್ಲಿ ಶಿವಣ್ಣ ಮುಖ್ಯವಾದ ಪಾತ್ರ ಒಂದರಲ್ಲಿ ನಟಿಸುತ್ತಾರೆ ಎಂದು ಗೊತ್ತಿದೆ. ಬಚ್ಚಿ ಬಾಬು ಅವರು ಈ ಸಿನಿಮಾ ನಿರ್ದೇಶನ ಮಾಡಲಿದ್ದು, ಇದೊಂದು ರೊಮ್ಯಾಂಟಿಕ್ ಆಕ್ಷನ್ ಮೂವಿ ಎಂದು ಹೇಳಲಾಗುತ್ತಿದೆ.
ಆರ್.ಸಿ 16 ಸಿನಿಮಾಗೆ ನಾಯಕಿಯಾಗಿ ಆಯ್ಕೆ ಆಗಿರುವುದು ಬಾಲಿವುಡ್ ಬೆಡಗಿ ಜಾನ್ವಿ ಕಪೂರ್. ಶಿವಣ್ಣ ಹಾಗೂ ಜಗಪತಿ ಬಾಬು ಇವರೆಲ್ಲರೂ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದು ಈ ಸಿನಿಮಾದಲ್ಲಿ ಮತ್ತೊಂದು ಪ್ರಮುಖ ಪಾತ್ರದಲ್ಲಿ ಮೊನಾಲಿಸಾ ನಟಿಸುತ್ತಾರೆ ಎಂದು ಹೇಳಲಾಗುತ್ತಿದೆ. ಬಚ್ಚಿ ಬಾಬು ಅವರು ಒಳ್ಳೆಯ ಪಾತ್ರವನ್ನು ಈ ನಟಿಗೆ ನೀಡಿದ್ದು, ಇದರಿಂದ ಮೊನಾಲಿಸಾ ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ರೀಚ್ ಆಗುವುದು ಖಂಡಿತ. ಏಕೆಂದರೆ ಆರ್.ಸಿ16 ಸಿನಿಮಾ ಪ್ಯಾನ್ ಇಂಡಿಯಾ ಸಿನಿಮಾ ಆಗಿರುತ್ತದೆ ಎಂದು ಮಾಹಿತಿ ಸಿಕ್ಕಿದೆ. ಇದೊಂದೇ ಅಲ್ಲ ಮತ್ತೊಂದು ಸಿನಿಮಾ ಅವಕಾಶ ಈಕೆಗೆ ಸಿಕ್ಕಿದೆ.
ಬಾಲಿವುಡ್ ನಿರ್ದೇಶಕ ಸನೊಜ್ ಮಿಶ್ರಾ ಅವರು ಡೈರಿ ಆಫ್ ಮಣಿಪುರ್ ಎನ್ನುವ ಸಿನಿಮಾ ನಿರ್ದೇಶನ ಮಾಡುತ್ತಿದ್ದು, ಆ ಸಿನಿಮಾದ ಒಂದು ಪಾತ್ರಕ್ಕೆ ಮೊನಾಲಿಸಾ ಅವರಂಥ ಹುಡುಗಿ ಸರಿ ಹೊಂದುತ್ತಾರಂತೆ, ಹಾಗಾಗಿ ಆಕೆಯನ್ನೇ ಆಯ್ಕೆ ಮಾಡಿದ್ದಾರಂತೆ. ಒಂದೆರಡು ದಿನಗಳಲ್ಲಿ ಸನೊಜ್ ಮಿಶ್ರ ಅವರು ಮೊನಾಲಿಸಾ ಅವರನ್ನು ಭೇಟಿ ಮಾಡುತ್ತಾರೆ ಎಂದು ಕೂಡ ಹೇಳಲಾಗುತ್ತದೆ. ರುದ್ರಾಕ್ಷಿ ಮಾರಲು ಬಂದ ಹುಡುಗಿ ಮುಗ್ಧತೆ ಇಂದ ವೈರಲ್ ಆಗಿ, ಮಾಡೆಲ್ ಆಗಿ ಅವಕಾಶ ಸಿಕ್ಕಿ, ಈಗ ಈಕೆಗೆ ಸಿನಿಮಾದಲ್ಲಿ ಸಹ ಅವಕಾಶ ಸಿಕ್ಕಿರುವುದು ಅದ್ಭುತವಾದ ವಿಷಯ. ಒಲಿದು ಬಂದಿರುವ ಈ ಅದೃಷ್ಟವನ್ನು ಈಕೆ ಉತ್ತಮವಾಗಿ ಉಳಿಸಿಕೊಂಡು, ಒಳ್ಳೆಯ ಸ್ಥಾನಕ್ಕೆ ಏರಲಿ ಎನ್ನುವುದೇ ಎಲ್ಲರ ಆಶಯ.