ರೈಡ್ 2 ಚಿತ್ರದ ‘ನಶಾ’ ಎಂಬ ಸ್ಪೆಷಲ್ ಸಾಂಗ್ನಲ್ಲಿ ತಮನ್ನಾ ಭಾಟಿಯಾ ಮತ್ತೊಮ್ಮೆ ತಮ್ಮ ಅದ್ಭುತ ನೃತ್ಯ ಮತ್ತು ಗ್ಲಾಮರಸ್ ಲುಕ್ ಮೂಲಕ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. ಅಜಯ್ ದೇವಗನ್ ಮತ್ತು ರಿತೇಶ್ ದೇಶಮುಖ್ ಅಭಿನಯದ ಈ ಚಿತ್ರದ ಸ್ಪೆಷಲ್ ಸಾಂಗ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಇದಕ್ಕೂ ಮೊದಲು ತಮನ್ನಾ ‘ಸ್ತ್ರೀ 2’ ಚಿತ್ರದ ‘ಆಜ್ ಕಿ ರಾತ್’ ಹಾಡಿನಲ್ಲಿ ಇದೇ ರೀತಿಯ ಸಂಚಲನ ಮೂಡಿಸಿದ್ದರು. ವರದಿಗಳ ಪ್ರಕಾರ, ಈ ಹಾಡಿಗೆ ತಮನ್ನಾ ಭಾರಿ ಸಂಭಾವನೆ ಪಡೆದಿದ್ದಾರೆ. ಈ ಹಾಡಿಗೆ ತಮನ್ನಾ ಎಷ್ಟು ಹಣ ಪಡೆದಿದ್ದಾರೆ ಎಂಬ ಕುತೂಹಲ ನಿಮಗಿದ್ದರೆ ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ…
“ಮಿಲ್ಕಿ ಬ್ಯೂಟಿ” ಎಂದು ಪ್ರೀತಿಯಿಂದ ಕರೆಯಲ್ಪಡುವ ತಮನ್ನಾ ಭಾಟಿಯಾ ದಕ್ಷಿಣ ಚಿತ್ರರಂಗದ ಅತ್ಯಂತ ಯಶಸ್ವಿ ನಟಿಯರಲ್ಲಿ ಒಬ್ಬರು. ಅವರು ತೆಲುಗು ಮತ್ತು ತಮಿಳು ಚಿತ್ರಗಳಲ್ಲಿ ಅನೇಕ ಬ್ಲಾಕ್ಬಸ್ಟರ್ ಹಿಟ್ಗಳನ್ನು ನೀಡಿದ್ದಾರೆ. ದಕ್ಷಿಣದಲ್ಲಿ ಯಶಸ್ಸಿನ ನಂತರ, ತಮನ್ನಾ ಬಾಲಿವುಡ್ಗೆ ಪ್ರವೇಶಿಸಿದರು. ಆರಂಭದಲ್ಲಿ ಹಿಂದಿ ಚಲನಚಿತ್ರಗಳಲ್ಲಿ ಅವರ ಪ್ರಯಾಣ ನಿಧಾನವಾಗಿದ್ದರೂ, ಸ್ಪೆಷಲ್ ಸಾಂಗ್ಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ಅವರು ಅಪಾರ ಜನಪ್ರಿಯತೆಯನ್ನು ಗಳಿಸಿದರು.

‘ನಶಾ’ ಮುಂದಿನ ಸೂಪರ್ಹಿಟ್ ಸಾಂಗ್
ಈಗ, ತಮನ್ನಾ ಮತ್ತೊಂದು ಆಕರ್ಷಕ ಸ್ಪೆಷಲ್ ಸಾಂಗ್ ಜೊತೆ ಮರಳಿದ್ದಾರೆ – ‘ನಶಾ’, ಇದು ಮುಂಬರುವ ಚಿತ್ರ ರೈಡ್ 2 ರ ಭಾಗವಾಗಿದೆ. ಈ ಚಿತ್ರದಲ್ಲಿ ಅಜಯ್ ದೇವಗನ್ ಮತ್ತು ರಿತೇಶ್ ದೇಶಮುಖ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಪಿಯೂಷ್-ಶಾಜಿಯಾ ನೃತ್ಯ ಸಂಯೋಜನೆ ಮಾಡಿರುವ ಈ ಹಾಡಿನಲ್ಲಿ ತಮನ್ನಾ ಅವರ ಹಾಟ್ ಅವತಾರ ಅಂತರ್ಜಾಲದಲ್ಲಿ ವೈರಲ್ ಆಗುತ್ತಿದೆ.
ಈ ಹಾಡಿಗೆ …..ಕೋಟಿ ಸಂಭಾವನೆ ಪಡೆದ ತಮನ್ನಾ
ವರದಿಗಳ ಪ್ರಕಾರ, ತಮನ್ನಾ ‘ನಶಾ’ ಹಾಡಿಗೆ 1 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ, ಈ ಹಿಂದೆ ‘ಆಜ್ ಕಿ ರಾತ್’ ಹಾಡಿಗೆ ತಮನ್ನಾ 1 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದರು. ಅವರ ಜನಪ್ರಿಯತೆ, ಅದ್ಭುತ ಅಭಿವ್ಯಕ್ತಿ ಮತ್ತು ಪವರ್ ಫಲ್ ಡಾನ್ಸ್ ಪರಿಗಣಿಸಿ ತಯಾರಕರು ಈ ಸಂಭಾವನೆಗೆ ಯೆಸ್ ಎಂದಿದ್ದಾರೆ.

ಅಭಿಮಾನಿಗಳ ಹೃದಯ ಕದ್ದ ಮಿಲ್ಕಿ ಬ್ಯೂಟಿ
‘ರೈಡ್ 2’ ಮೇ 1 ರಂದು ಬಿಡುಗಡೆಯಾಗಲಿದೆ, ಆದರೆ ಅದಕ್ಕೂ ಮೊದಲು ಚಿತ್ರದ ವಿಶೇಷ ಹಾಡು ‘ನಶಾ’ ನಿನ್ನೆ ಬಿಡುಗಡೆಯಾಗಿದ್ದು, ಇದರಲ್ಲಿ ಬಾಲಿವುಡ್ ನಟಿ ತಮನ್ನಾ ಭಾಟಿಯಾ ತಮ್ಮ ಅದ್ಭುತ ನೃತ್ಯದಿಂದ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. ಅಭಿಮಾನಿಗಳು ರೈಡ್ 2 ರ ‘ನಶಾ’ ಹಾಡಿಗೆ ನಿರಂತರವಾಗಿ ಕಾಮೆಂಟ್ ಮಾಡುತ್ತಿದ್ದಾರೆ. 42 ನಿಮಿಷಗಳಲ್ಲಿ, ಈ ಹಾಡು ಯೂಟ್ಯೂಬ್ನಲ್ಲಿ 2 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ. “ತಮನ್ನಾ ಯಾವಾಗಲೂ ನಮ್ಮ ಹೃದಯ ಕದಿಯುತ್ತಾರೆ, “ಅವರ ನೃತ್ಯ ಕೌಶಲ್ಯ ಅದ್ಭುತವಾಗಿದೆ”, “ಅವರ ನೋಟ ಮತ್ತು ನೃತ್ಯ ಎರಡೂ ಅದ್ಭುತ”, “ತುಂಬಾ ಒಳ್ಳೆಯ ದೇಸಿ ಐಟಂ ಹಾಡು” ಎಂದೆಲ್ಲಾ ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.
ರೈಡ್ 2 ರಾಜ್ ಕುಮಾರ್ ಗುಪ್ತಾ ನಿರ್ದೇಶನದ ಮುಂಬರುವ ಥ್ರಿಲ್ಲರ್ ಚಿತ್ರ. ಈ ಚಿತ್ರವು ರೈಡ್ (2018) ಚಿತ್ರದ ಮುಂದುವರಿದ ಭಾಗವಾಗಿದೆ. ಅಜಯ್ ದೇವಗನ್ ಮತ್ತು ರಿತೇಶ್ ದೇಶಮುಖ್ ಜೊತೆಗೆ, ವಾಣಿ ಕಪೂರ್ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ‘ರೈಡ್ 2’ ಚಿತ್ರವು ಐಆರ್ಎಸ್ ಅಧಿಕಾರಿ ಅಮಯ್ ಪಟ್ನಾಯಕ್ (ದೇವಗನ್) ಅವರ ಕಂ ಬ್ಯಾಕ್ ಸೂಚಿಸುತ್ತದೆ, ಅವರು ಮತ್ತೊಂದು ವೈಟ್ ಕಾಲರ್ ಕ್ರೈಂ ಕೈಗೆತ್ತಿಕೊಳ್ಳುತ್ತಾರೆ. ಹಿಂದಿನ ಚಿತ್ರದಂತೆಯೇ, ಈ ಭಾಗವು ಕೂಡ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ನಡೆಸುವ ಆದಾಯ ತೆರಿಗೆ ದಾಳಿಗಳನ್ನು ಆಧರಿಸಿದೆ, ಅವರು ಗುಪ್ತಚರ ಸಂಸ್ಥೆಗಳೊಂದಿಗೆ ವೈಟ್-ಕಾಲರ್ ಕ್ರೈಂ ಮೇಲೆ ಕಣ್ಣಿಡುವ ಕೆಲಸ ಮಾಡುತ್ತಾರೆ.