ಕನ್ನಡದ ‘ಕಿರಿಕ್ ಪಾರ್ಟಿ’ ಮೂಲಕ ಸಿನಿ ಜರ್ನಿ ಆರಂಭಿಸಿದ ಕನ್ನಡತಿ ರಶ್ಮಿಕಾ ಮಂದಣ್ಣ ಸದ್ಯ, ಭಾರತೀಯ ಚಿತ್ರರಂಗದ ಟಾಪ್ ಹಿರೋಹಿನ್. ಕನ್ನಡಕ್ಕಿಂತ ಹೆಚ್ಚು ಪರಭಾಷಾ ಸಿನಿಮಾಗಳಲ್ಲಿ ಮಿಂಚುತ್ತಿರುವ ರಶ್ಮಿಕಾಗೆ ಎಲ್ಲಿಲ್ಲದ ಬೇಡಿಕೆ ಸೃಷ್ಟಿಯಾಗಿದೆ. ಸದ್ಯ, ಪುಷ್ಪಾ-2 ಸಿನಿಮಾದಲ್ಲಿ ತೊಡಗಿಸಿಕೊಂಡಿರುವ ನ್ಯಾಷನಲ್ ಕ್ರಶ್ ಈ ನಡುವೆ ದುಬೈಗೆ ಹಾರಿದ್ದಾರೆ. ಅಲ್ಲಿನ ಸುಂದರ ತಾಣದಲ್ಲಿ ಗೋಲ್ಡನ್ ಸಾರಿ ಉಟ್ಟು ಸೂರ್ಯನಿಗೆ ಮುತ್ತಿಟುವ ಫೋಟೋ ಗನ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.


ಹಿಂದಿ ಹಾಗೂ ತೆಲುಗಿನ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರೋ ರಶ್ಮಿಕಾ ಮಂದಣ್ಣ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಬ್ಯೂಟಿಫುಲ್ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ದುಬೈನಲ್ಲಿದ್ದ ನಟಿ ಚಂದವಾಗಿ ಸೀರೆಯುಟ್ಟು ಟ್ರೆಡಿಷನ್ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ. ಗೋಲ್ಡನ್ ಕಲರ್ ಸೀರೆ, ಮಿರರ್ ವರ್ಕ್ ಬ್ಲೌಸ್ ಧರಿಸಿರುವ ರಶ್ಮಿಕಾ ಕ್ಯಾಮೆರಾ ನಾಚುವಂತೆ ಪೋಸ್ ಕೊಟ್ಟಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸಖತ್ ಆ್ಯಕ್ಟಿವ್ ಆಗಿರುವ ನಟಿ ರಶ್ಮಿಕಾರ ಹೊಸ ಫೋಟೋಗೆ ಫ್ಯಾನ್ಸ್ ಫಿದಾ ಆಗಿದ್ದಾರೆ.
ಸದ್ಯ ನಟಿ ರಶ್ಮಿಕಾ ಮಂದಣ್ಣ ಬಹುನಿರೀಕ್ಷಿತ ಸಿನಿಮಾ ಪುಷ್ಪ 2 ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ನೆಚ್ಚಿನ ನಟಿಯನ್ನು ಹೊಸ ಲುಕ್ನಲ್ಲಿ ನೋಡಲು ಅಭಿಮಾನಿಗಳು ಕಾತುರದಿಂದ ಕಾಯ್ತಿದ್ದಾರೆ. ರಣಬೀರ್ ಕಪೂರ್ ಜೊತೆಗಿನ ಅನಿಮಲ್ ಸಿನಿಮಾ ಶೀಘ್ರದಲ್ಲೇ ತೆರೆ ಮೇಲೆ ಬರಲಿದೆ. ಈ ನಡುವೆ ದುಬೈಗೆ ಹಾರಿರುವ ರಶ್ಮಿಕಾ ಅಭಿಮಾನಿಗಳಿಗಾಗಿ ಚಂದದ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.