ನಟ ಕಿಚ್ಚ ಸುದೀಪ್ ಅವರು ಇಂದು ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಭಾರತದ ಎಲ್ಲೆಡೆ ಹೆಸರು ಮಾಡಿದ್ದಾರೆ. ಸ್ಯಾಂಡಲ್ ವುಡ್ ಇಂದ ಟಾಲಿವುಡ್ ವರೆಗು ಸುದೀಪ್ ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ಇವರು ಎಂಥಾ ಅದ್ಭುತವಾದ ಕಲಾವಿದ ಎನ್ನುವುದು ನಮಗೆಲ್ಲಾ ಗೊತ್ತೇ ಇದೆ. ಮಿಸ್ಟರ್ ಪರ್ಫೆಕ್ಟ್ ಎಂದೇ ಕರೆಸಿಕೊಳ್ಳುವ ಕಿಚ್ಚ ಸುದೀಪ್ ಅವರು ಪತ್ನಿ ಪ್ರಿಯಾ ಅವರಿಗೆ ವಿಚ್ಛೇದನ ಕೊಡಲು ಮುಂದಾಗಿದ್ದರು. ಈ ನಿರ್ಧಾರ ತೆಗೆದುಕೊಂಡಿದ್ದು ನಿಜ, ಅಷ್ಟೇ ಬೇಗ ಇಬ್ಬರೂ ಒಂದಾಗಿದ್ದು ನಿಜ. ಆದರೆ ಸುದೀಪ್ ಪ್ರಿಯಾ ಮತ್ತೆ ಒಂದಾಗಲು ಈ ಒಬ್ಬರು ಪ್ರಮುಖ ಕಾರಣವಂತೆ. ಹಾಗಿದ್ರೆ ಅವರು ಯಾರು ಗೊತ್ತಾ?
ನಟ ಸುದೀಪ್ ಹಾಗೂ ಅವರ ಪತ್ನಿ ಪ್ರಿಯಾ ಇಬ್ಬರದ್ದು ಲವ್ ಮ್ಯಾರೇಜ್. ಸುದೀಪ್ ಅವರಿಗೆ ಸರಿಯಾದ ಸಿನಿಮಾ ಅವಕಾಶ ಸಿಗುವುದಕ್ಕಿಂತ ಮೊದಲಿನಿಂದಲೂ ಪ್ರಿಯಾ ಅವರ ಪರಿಚಯವಿದೆ. ಇಬ್ಬರು ಲವ್ ಮಾಡುತ್ತಿದ್ದರು, ಆಗ ಸುದೀಪ್ ಅವರ ಖರ್ಚಿಗೆ ಪ್ರಿಯಾ ಅವರೇ ಹಣ ಕೊಡುತ್ತಿದ್ದರಂತೆ. ಸುದೀಪ್ ಅವರು ಏನು ಅಲ್ಲದೇ ಇದ್ದ ಸಮಯದಿಂದಲೂ ಜೊತೆಯಲ್ಲಿರುವವರು ಪ್ರಿಯಾ. ಹಲವು ವರ್ಷಗಳ ಇವರಿಬ್ಬರ ಪ್ರೀತಿ, ಮದುವೆಯಲ್ಲಿ ಶುರುವಾಯಿತು. ಸುದೀಪ್ ಅವರ ಸ್ಪರ್ಶ, ಹುಚ್ಚ ಬಿಡುಗಡೆಯಾದ ನಂತರ ಪ್ರಿಯಾ ಅವರೊಡನೆ ಮದುವೆಯಾದರು.

2001ರ ಆಕ್ಟೊಬರ್ 18ರಂದು ಅದ್ಧೂರಿಯಾಗಿ ನಡೆಯಿತು ಸುದೀಪ್ ಹಾಗೂ ಪ್ರಿಯಾ ಅವರ ಮದುವೆ. ಆಗಿನಿಂದ ಸುದೀಪ್ ಅವರ ಬೆನ್ನೆಲುಬಾಗಿ ನಿಂತಿದ್ದಾರೆ ಪ್ರಿಯಾ. ಇಬ್ಬರು ಬಹಳ ಪ್ರೀತಿಯಿಂದ ಇದ್ದವರು, ಈ ಜೋಡಿಗೆ ಸಾನ್ವಿ ಹೆಸರಿನ ಮುದ್ದಾದ ಮಗಳು ಕೂಡ ಇದ್ದಾಳೆ. ಇವರಿಬ್ಬರ ಮದುವೆಯಾಗಿ 14 ವರ್ಷಗಳ ಸಮಯಕ್ಕೆ ಅಂದರೆ 2015ರ ವೇಳೆಗೆ ಕಿಚ್ಚ ಸುದೀಪ್ ಹಾಗೂ ಪ್ರಿಯಾ ಅವರ ನಡುವೆ ಭಿನ್ನಾಭಿಪ್ರಾಯಗಳು ಶುರುವಾಗಿ ಇಬ್ಬರು ವಿಚ್ಛೇದನ ಪಡೆಯಲು ನಿರ್ಧರಿಸಿದ್ದರು. ಇಬ್ಬರು ಕೋರ್ಟ್ ಗೆ ಹೋದ ಸುದ್ದಿ ಮಾಧ್ಯಮಗಳಲ್ಲಿ ಪ್ರಸಾರವಾಗಿತ್ತು.
ಆ ವೇಳೆ ಸುದೀಪ್ ಅವರು ಒಂದು ಇಂಟರ್ವ್ಯೂ ನಲ್ಲಿ ಪಾಲ್ಗೊಂಡಾಗ, ಫ್ರೆಂಡ್ಶಿಪ್ ನಲ್ಲಿ ಭಿನ್ನಾಭಿಪ್ರಾಯ ಬಂದ್ರೆ ಸ್ವಲ್ಪ ದಿವಸ ಮಾತಾಡೋದನ್ನ ನಿಲ್ಲಿಸಬಹುದು. ಆದರೆ ದಾಂಪತ್ಯ ಜೀವನದಲ್ಲಿ ಬಂದ್ರೆ ಏನಾಗುತ್ತದೆ ಗೊತ್ತಿಲ್ಲ, ನೋಡೋಣಾ ಎಂದಿದ್ದರು. ಆ ವೇಳೆ ಸುದೀಪ್ ಅವರು ಮಗಳ ಜವಾಬ್ದಾರಿಯನ್ನು ಪ್ರಿಯಾ ಅವರಿಗೆ ಕೊಡಬೇಕೆಂದು ನಿರ್ಧಾರ ಮಾಡಿದ್ದರು. ಹಾಗೆಯೇ ಅಂದು ಸುದೀಪ್ ಅವರು ವಿಚ್ಛೇದನ ಕೊಟ್ಟಿದ್ದರೆ, ಪ್ರಿಯಾ ಅವರಿಗೆ 19 ಕೋಟಿ ಜೀವನಾಂಶ ಕೊಡಬೇಕಿತ್ತು ಎನ್ನುವ ಮಾತಾಗಿತ್ತು. ಆದರೆ ಇಬ್ಬರು ಆ ನಿರ್ಧಾರ ತೆಗೆದುಕೊಳ್ಳಲಿಲ್ಲ.

ತಮ್ಮ ನಿರ್ಧಾರವನ್ನು ಬದಲಾಯಿಸಿ, ಪ್ರಿಯಾ ಹಾಗೂ ಸುದೀಪ್ ಇಬ್ಬರೂ ಕೂಡ ಮತ್ತೆ ಒಂದಾದರು. ಇವರಿಬ್ಬರು ಜೊತೆಯಾಗೋ ಹಾಗೆ ಮಾಡಿದ್ದು ಅವರ ಮಗಳು ಸಾನ್ವಿ. ಮಗಳಿಗೋಸ್ಕರ ಇಬ್ಬರು ತಮ್ಮ ದಾಂಪತ್ಯಕ್ಕೆ ಮತ್ತೊಂದು ಅವಕಾಶ ಕೊಟ್ಟರು, ಇಂದು ಅಷ್ಟೇ ಪ್ರೀತಿಯಿಂದ ಅನ್ಯೋನ್ಯತೆಯಿಂದ ಬದುಕುತ್ತಿದ್ದಾರೆ. ಇವರಿಬ್ಬರ ಮದುವೆಯಾಗಿ 23 ವರ್ಷ ಕಳೆದಿದೆ. ಮಗಳು ಸಾನ್ವಿ ಹೈದರಾಬಾದಿನಲ್ಲಿ ಓದುತ್ತಿದ್ದು, ಒಳ್ಳೆಯ ಹಾಡುಗಾರ್ತಿ ಹಾಗೂ ನಟಿ ಕೂಡ ಹೌದು. ಕಿಚ್ಚನ ಮಗಳು ಸ್ಯಾಂಡಲ್ ವುಡ್ ಗೆ ಬರುತ್ತಾರಾ ಎಂದು ಕಾದು ನೋಡಬೇಕಿದೆ. ಸುದೀಪ್ ಅವರ ಮುಂದಿನ ಸಿನಿಮಾ ಮ್ಯಾಕ್ಸ್, ಶೀಘ್ರಲ್ಲೇ ತೆರೆಗೆ ಬರುವ ಸಾಧ್ಯತೆ ಇದೆ.