ಮನೆಯಲ್ಲಿ ಅತ್ತಿಂದಿತ್ತ ಓಡುವ ಜಿರಳೆ ಕಂಡರೆ ಹೆದರಿ ಓಡುವವರಿದ್ದಾರೆ. ಪರಿಸ್ಥಿತಿ ಹೀಗಿರುವಾಗ ಪುಟ್ಟ ಬಾಲಕನೊಬ್ಬ ಕೊರಳಲ್ಲಿ ಹಾವನ್ನು ಸುತ್ತಿಕೊಂಡು, ಮಡಿಲಲ್ಲಿ ಮೊಸಳೆಯನ್ನು ಮಲಗಿಸಿಕೊಂಡಿ, ಬೆನ್ನ ಹಿಂದೆ ಹುಲಿಯನ್ನು ನಿಲ್ಲಿಸಿಕೊಂಡು ಒಂದಿಷ್ಟೂ ಭಯ ಪಡದೆ ಅವುಗಳನ್ನು ಮುದ್ದಾಡುತ್ತಿದ್ದಾನೆ. ಸದ್ಯ, ಈ ಅಪರೂಪದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಈ ವೈರಲ್ ವಿಡಿಯೋವನ್ನ ನೋಡಿದ್ರೆ ನೀವು ದಂಗಾಗೋದು ಗ್ಯಾರಂಟಿ.
@nouman.hassan1 ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿರುವ ವಿಡಿಯೋವೊಂದರಲ್ಲಿ ಪುಟ್ಟ ಬಾಲಕನೊಬ್ಬ ಬೃಹತ್ ಗಾತ್ರದ ಹಾವು ತನ್ನ ಕೊರಳನ್ನು ಸುತ್ತುವರಿದಿದ್ದರೂ, ತನ್ನ ಹಿಂಭಾಗದಲ್ಲಿ ಹುಲಿಯೊಂದು ಇದ್ದರೂ, ಈತ ಮಾತ್ರ ಮಡಿಲ ಮೇಲೆ ಮೊಸಳೆ ಮರಿಯನ್ನು ಮಲಗಿಸಿಕೊಂಡು ಹಾವು-ಮೊಸಳೆ ಜೊತೆ ನಿರ್ಭಯವಾಗಿ ಆಟವಾಡುತ್ತಾ ಕುರ್ಚಿ ಮೇಲೆ ಕುಳಿತಿರುವುದು ಕಂಡುಬಂದಿದೆ.ಅಕ್ಟೋಬರ್ 15 ರಂದು ಈ ವಿಡಿಯೋ ಶೇರ್ ಆಗಿದ್ದು, ಆರೂವರೆ ಲಕ್ಷಕ್ಕೂ ಅಧಿಕ ಲೈಕ್ಸ್ಗಳನ್ನು ಪಡೆದಿದೆ.
ಈ ವಿಡಿಯೋ ಕಂಡು ಕೆಲ ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಇನ್ನೂ ಕೆಲವರು ಬಾಲಕನ ಕಾಳಜಿ ಕುರಿತು ಮಾತನಾಡಿದ್ದಾರೆ. , “ಇದು ಅಪಾಯಕಾರಿ ಮತ್ತು ಮೂರ್ಖತನವಾಗಿದೆ” ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.ಇನ್ನೊಬ್ಬರು, ‘ನಿಜವಾದ ಜಂಗಲ್ ಬುಕ್ ಇದು, ಬಾಲಕನ ಧೈರ್ಯವನ್ನು ಮೆಚ್ಚಲೇ ಬೇಕು’ ಎಂದಿದ್ದಾರೆ. ಒಟ್ಟಾರೆಯಾಗಿ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸೌಂಡ್ ಮಾಡುತ್ತಿದೆ.