ನಟ ಶಿವ ರಾಜ್ ಕುಮಾರ್ ಅವರ ಆರೋಗ್ಯದ ವಿಷಯ ಬಹಳಷ್ಟು ಚರ್ಚೆಗೆ ಒಳಗಾಗಿದೆ. ಶಿವಣ್ಣ ಅವರು ಬೇಗ ಹುಷಾರಾಗಿ ಬರಲಿ ಎನ್ನುವುದೊಂದೆ ಅಭಿಮಾನಿಗಳ ಕೋರಿಕೆ ಆಗಿದೆ ಎಂದು ಹೇಳಬಹುದು. ಶಿವಣ್ಣ ಅವರು ಈ ತಿಂಗಳು ಅಮೆರಿಕಾಗೆ ಹೋಗುತ್ತಾರೆ, ಅವರಿಗೆ ಅಲ್ಲಿ ಸರ್ಜರಿ ನಡೆಯಲಿದೆ, ಒಂದು ತಿಂಗಳ ನಂತರ ವಾಪಸ್ ಬರುತ್ತಾರೆ , ಅಷ್ಟರಲ್ಲಿ ಶಿವಣ್ಣ ಬ್ಯಾಕ್ ಟು ನಾರ್ಮಲ್ ಆಗಿರುತ್ತಾರೆ ಎಂದು ಸ್ವತಃ ಶಿವಣ್ಣ ಹೇಳಿದ್ದರು. ಭೈರತಿ ರಣಗಲ್ ಸಿನಿಮಾ ಪ್ರೊಮೋಷನ್ ವೇಳೆ ಈ ವಿಚಾರಗಳನ್ನು ಶಿವಣ್ಣ ತಿಳಿಸಿದ್ದರು. ಇದೀಗ ಜೀಕನ್ನಡ ವಾಹಿನಿಯ ಡಿಕೆಡಿ ಫಿನಾಲೆ ವೇದಿಕೆಯಲ್ಲಿ ಶಿವಣ್ಣ ಅವರ ಪತ್ನಿ ಗೀತಾ ಶಿವ ರಾಜ್ ಕುಮಾರ್ ಅವರು ಸಹ ಶಿವಣ್ಣನ ಆರೋಗ್ಯದ ಬಗ್ಗೆ ಮಾತನಾಡಿ ಭಾವುಕರಾಗಿದ್ದಾರೆ..

ಜೀಕನ್ನಡ ವಾಹಿನಿಯ ಜೊತೆ ಶಿವಣ್ಣ ಅವರಿಗೆ ಒಳ್ಳೆಯ ಬಾಂಧವ್ಯ ಇದೆ. ಕೆಲವು ಸೀಸನ್ ಗಳಿಂದ ಡಿಕೆಡಿ ಶೋ ಜಡ್ಜ್ ಆಗಿದ್ದಾರೆ ಶಿವಣ್ಣ. ಈ ಶೋ ಅನ್ನು ಸಿಕ್ಕಾಪಟ್ಟೆ ಎಂಜಾಯ್ ಕೂಡ ಮಾಡುತ್ತಿದ್ದಾರೆ. ಶಿವಣ್ಣ ಅವರ ಆರೋಗ್ಯದ ಬಗ್ಗೆ ಈಗಾಗಲೇ ಹಲವು ಇಂಟರ್ವ್ಯೂ ಗಳಲ್ಲಿ ಶಿವಣ್ಣ ಅವರೇ ತಿಳಿಸಿದ್ದಾರೆ. ಈ ತಿಂಗಳು ವಿದೇಶಕ್ಕೆ ಟ್ರೀಟ್ಮೆಂಟ್ ಗಾಗಿ ಹೋಗುವುದಾಗಿ ತಿಳಿಸಿದ್ದರು. ಕಳೆದ ಭಾನುವಾರ ಡಿಕೆಡಿ ಶೋನ ಗ್ರ್ಯಾಂಡ್ ಫಿನಾಲೆ ಸಂಚಿಕೆಯಲ್ಲಿ ಶಿವಣ್ಣ ಭಾಗಿಯಾಗಿದ್ದರು, ಅಂದು ಗೀತಕ್ಕ ಕೂಡ ಸ್ಪೆಷಲ್ ಗೆಸ್ಟ್ ಆಗಿ ಶೋಗೆ ಬಂದಿದ್ದರು. ವೇದಿಕೆ ಮೇಲೆ ಶಿವಣ್ಣ ಅವರ ಬಗ್ಗೆ ಮಾತನಾಡಿರುವ ಗೀತಕ್ಕ, ಶಿವಣ್ಣ ಅವರ ಆರೋಗ್ಯದ ಬಗ್ಗೆ ತಿಳಿಸಿ ಭಾವುಕರಾಗಿ ಕಣ್ಣೀರು ಹಾಕಿದ್ದಾರೆ..
ಉತ್ತಮ ಸಂಬಂಧಗಳನ್ನು ಕಾಯ್ದುಕೊಳ್ಳಲು, ವಯಸ್ಸಾದ ಕಾಲದಲ್ಲಿ ನೆಮ್ಮದಿಯಾಗಿ ಬದುಕಲು ಕೌಟುಂಬಿಕ ವಿವಾದಗಳನ್ನು ನಿರ್ವಹಿಸಿದ ಕರ್ನಾಟಕ ಉಚ್ಚ ನ್ಯಾಯಲಯದಲ್ಲಿ ಹಿರಿಯ ವಕೀಲರಾಗಿ ಸೇವೆ ಸಲ್ಲಿಸುತ್ತಿರುವ ಶ್ರೀಮತಿ ಸುಶೀಲರವರು ಕೊಟ್ಟಿದ್ದಾರೆನ್ನುವ ಸಲಹೆಗಳು ಇಲ್ಲಿವೆ.
ಸಂಗಾತಿಯ ಚುಚ್ಚು ಮಾತುಗಳಿಂದ ನರಳಬೇಡಿ..!
ಹೌದು, ಶಿವಣ್ಣ ಅವರ ಆರೋಗ್ಯದ ಬಗ್ಗೆ ವೇದಿಕೆಯ ಮೇಲೆ ಗೀತಕ್ಕ ಮಾತನಾಡಿ ಭಾವುಕರಾಗಿದ್ದಾರೆ, ಹಾಗೆಯೇ ಶಿವಣ್ಣ ಅವರ ಆರೋಗ್ಯದ ಬಗ್ಗೆ ಕೆಲವು ವಿಷಯಗಳನ್ನು ಸಹ ತಿಳಿಸಿದ್ದಾರೆ. ಶಿವಣ್ಣ ಹಾಗೂ ಗೀತಕ್ಕ ಇಬ್ಬರೂ ಸಹ ಡಿಸೆಂಬರ್ 18ರಂದು ಶಿವಣ್ಣ ಅವರ ಆರೋಗ್ಯದ ಕಾರಣಕ್ಕಾಗಿ, ಚಿಕಿತ್ಸೆ ಮತ್ತು ಸರ್ಜರಿಗಾಗಿ ಅಮೆರಿಕಾಗೆ ಹೋಗುತ್ತಿದ್ದಾರೆ. ಡಿಸೆಂಬರ್ 24ರಂದು ಶಿವಣ್ಣ ಅವರಿಗೆ ಸರ್ಜರಿ ನಡೆಯಲಿದೆ ಎಂದು ತಿಳಿಸಿದ್ದಾರೆ. ಹಾಗೆಯೇ ಜೀಕನ್ನಡ ವಾಹಿನಿಗೆ ಶಿವಣ್ಣ ಬಂದ ಕಾರಣ ಅವರಿಗೆ ತುಂಬಾ ಸಹಾಯ ಆಗಿದೆ, ಶಿವಣ್ಣ ಎಲ್ಲವನ್ನು ಮರೆತು ಸಂತೋಷವಾಗಿ ಇರುವುದಕ್ಕೆ ಸಾಧ್ಯ ಆಯಿತು ಎಂದು ಹೇಳಿದ್ದಾರೆ ಗೀತಕ್ಕ. ವೇದಿಕೆ ಮೇಲೆ ಭಾವುಕರಾಗಿ ಕಣ್ಣೀರು ಹಾಕಿದ್ದಾರೆ.

ಶಿವಣ್ಣ ಅವರು ಪತ್ನಿ ಅಳುವುದನ್ನು ನೋಡಿ, ವೇದಿಕೆಗೆ ಬಂದು ಸಮಾಧಾನ ಮಾಡಿದ್ದಾರೆ. ಶಿವಣ್ಣ ಅವರಿಗೆ ಆರೋಗ್ಯದಲ್ಲಿ ಬಹಳ ಸಮಸ್ಯೆ ಇದ್ದರು ಸಹ ಭೈರತಿ ರಣಗಲ್, 45 ಸಿನಿಮಾಗಳನ್ನು ಮುಗಿಸಿದ್ದಾರೆ. ಭೈರತಿ ರಣಗಲ್ ತೆರೆಕಂಡು ಎಷ್ಟು ದೊಡ್ಡ ಮಟ್ಟದಲ್ಲಿ ಹಿಟ್ ಆಗಿದೆ, ಪ್ಯಾನ್ ಇಂಡಿಯಾ ಲೆವೆಲ್ ಗೆ ರೀಚ್ ಆಗಿದೆ ಎನ್ನುವ ವಿಷಯ ಗೊತ್ತೇ ಇದೆ. ಹಾಗೆಯೇ ಜೀಕನ್ನಡ ವಾಹಿನಿಯ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಶೋ ಅನ್ನು ಸಹ ಪೂರ್ಣಗೊಳಿಸಿದ್ದಾರೆ. ಡಿಕೆಡಿ ಶೋ ಫಿನಾಲೆ ಆದ ನಂತರವೇ ಶಿವಣ್ಣ ಅವರು ಅಮೆರಿಕಾಗೆ ಕೂಡ ಚಿಕಿತ್ಸೆಗಾಗಿ ಹೋಗುತ್ತಿದ್ದಾರೆ. ಇದೆಲ್ಲವನ್ನು ನೋಡಿದರೆ ಶಿವಣ್ಣ ಅವರಿಗೆ ಕೆಲಸದ ಬಗ್ಗೆ ಎಷ್ಟು ಶ್ರದ್ಧೆ ಇದೆ ಎನ್ನುವುದು ಗೊತ್ತಾಗುತ್ತದೆ.
ಯಾವತ್ತೂ ಯಾರಿಗೂ ಕೆಟ್ಟದ್ದು ಮಾಡಿದವರಲ್ಲ, ಕೆಟ್ಟದ್ದು ಬಯಸಿದವರಲ್ಲ ಶಿವಣ್ಣ. ಅಂಥವರಿಗೆ ಈಗ ಆರೋಗ್ಯದ ಸಮಸ್ಯೆ ಎದುರಾಗಿದೆ. ಅಭಿಮಾನಿಗಳ ಪ್ರೀತಿಯ ಶಿವಣ್ಣ ಅವರಿಗೆ ಅಮೆರಿಕಾದಲ್ಲಿ ಒಳ್ಳೆಯ ಚಿಕಿತ್ಸೆ ಸಿಗಲಿ, ಅವರು ಬೇಗ ಹುಷಾರಾಗಿ ಬರಲಿ ಎಂದು ಎಲ್ಲರೂ ಬಯಸುತ್ತಿದ್ದಾರೆ. ಶಿವಣ್ಣ ಸಹ ಈ ಬಗ್ಗೆ ಮಾತನಾಡಿ, ಡಾಕ್ಟರ್ ತುಂಬಾ ಪಾಸಿಟಿವ್ ಆಗಿದ್ದಾರೆ. ಅವರ ಮಾತನ್ನ ನಂಬಿದ್ದೇನೆ, ಅವರ ಮಾತಿನ ಮೇಲೆ ನಂಬಿಕೆ ಇಡಬೇಕು ಎಂದು ಹೇಳಿದ್ದರು. ವೈದ್ಯರು ಸಹ ಏನು ಆಗುವುದಿಲ್ಲ ಎಂದು ಭರವಸೆ ನೀಡಿದ್ದಾರಂತೆ. ಶಿವಣ್ಣ ಈ ಸಮಸ್ಯೆಯನ್ನು ಗೆದ್ದು ಬರಲಿ ಎಂದು ಹಾರೈಸೋಣ.