ಇಂದು ಬಾಲಿವುಡ್ನಲ್ಲಿ ಸಿನಿಮಾಗಳನ್ನು ತಾವೇ ಹಿಟ್ ಮಾಡುವ ಶಕ್ತಿ ಹೊಂದಿರುವ ಅನೇಕ ನಟಿಯರಿದ್ದಾರೆ. ಶ್ರದ್ಧಾ ಕಪೂರ್, ದೀಪಿಕಾ ಪಡುಕೋಣೆಯಿಂದ ಹಿಡಿದು ಆಲಿಯಾ ಭಟ್ ವರೆಗೆ ಅನೇಕ ಮಹಿಳಾ ತಾರೆಯರು ಬಿ-ಟೌನ್ ಅನ್ನು ಆಳುತ್ತಿದ್ದಾರೆ. ಆದರೆ, ಕೇವಲ 3 ಬಾಲಿವುಡ್ ಚಿತ್ರಗಳಲ್ಲಿ ಕೆಲಸ ಮಾಡಿದ ಮತ್ತು ಕೇವಲ ಮೂರರ ಆಧಾರದ ಮೇಲೆ ಅಂತಹ ಛಾಪು ಮೂಡಿಸಿರುವ ಓರ್ವ ನಟಿಯಿದ್ದು, ಆ ನಟಿ ಯಾರೆಂದು ನೀವು ಹೇಳಬಲ್ಲಿರಾ…?. ಇಂದು ಇವರು ಸಿನಿ ಜಗತ್ತಿನಿಂದ ಸಂಪೂರ್ಣವಾಗಿ ದೂರವಾಗಿದ್ದಾರೆ. ಆದರೂ ಈ ನಟಿಯನ್ನು ಅವರ ಅಭಿಮಾನಿಗಳು ಇನ್ನೂ ಪ್ರೀತಿಸುತ್ತಿದ್ದಾರೆ. ಜನಪ್ರಿಯತೆಯಲ್ಲಿ ಯಾವುದೇ ಕ್ರೇಜ್ ಕಡಿಮೆಯಾಗಿಲ್ಲ. ಈಗ ಫೋಟೋದಲ್ಲಿ ಕಾಣುತ್ತಿರುವ ಈ ಮುದ್ದು ಪುಟಾಣಿಯೇ ಆ ನಟಿ. ಬಾಲ ಕಲಾವಿದೆಯಾಗಿಯೂ ನಟಿಸಿರುವ ಇವರ 2 ಚಿತ್ರಗಳು ಬಾಕ್ಸ್ ಆಫೀಸ್ನಲ್ಲಿ 3000 ಕೋಟಿ ರೂ.ಬಾಚಿವೆ. ಹಾಗಾದ್ರೆ ಈ ನಟಿ ಯಾರೆಂದು ಹೇಳಬಲ್ಲಿರಾ?

ನಾವಿಂದು ಹೇಳಲು ಹೊರಟಿರುವ, ಫೋಟೋದಲ್ಲಿ ಕಾಣುತ್ತಿರುವ ಈ ಪುಟಾಣಿ ಬೇರೆ ಯಾರೂ ಅಲ್ಲ, ಇಸ್ಲಾಂ ಧರ್ಮದ ಹಾದಿಯನ್ನು ಅನುಸರಿಸಲು ಚಿತ್ರರಂಗದಿಂದ ದೂರ ಸರಿದ ಝೈರಾ ವಾಸಿಮ್. ಝೈರಾ ವಾಸಿಮ್ ಬಾಲಿವುಡ್ಗೆ ಪಾದಾರ್ಪಣೆ ಮಾಡಿದಾಗ ಅವರಿಗೆ 16 ವರ್ಷ. ಆಕೆಯ ಮೊದಲ ಚಿತ್ರ ‘ದಂಗಲ್’. ಇದರಲ್ಲಿ ಅವರು ಸೂಪರ್ಸ್ಟಾರ್ ಅಮೀರ್ ಖಾನ್ ಅವರೊಂದಿಗೆ ಪರದೆಯನ್ನು ಹಂಚಿಕೊಂಡಿದ್ದಾರೆ. ದಂಗಲ್ನಲ್ಲಿ ಅವರು ಅಮೀರ್ ಖಾನ್ ಅವರ ಮಗಳ ಪಾತ್ರವನ್ನು ನಿರ್ವಹಿಸಿದ್ದಾರೆ. ದಂಗಲ್ ಇಂದಿಗೂ ದೇಶದ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರ.
2016 ರಲ್ಲಿ ಬಿಡುಗಡೆಯಾದ ‘ದಂಗಲ್’ ವಿಶ್ವಾದ್ಯಂತ ಬಾಕ್ಸ್ ಆಫೀಸ್ನಲ್ಲಿ 2024 ರೂ. ಕಲೆಕ್ಷನ್ ಮಾಡಿತ್ತು. ಭಾರತದಲ್ಲಿಯೂ ಈ ಚಿತ್ರವು ಭಾರಿ ಗಳಿಕೆಯನ್ನು ಗಳಿಸಿತು. ನಂತರ ಅವರ ‘ಸೀಕ್ರೆಟ್ ಸೂಪರ್ಸ್ಟಾರ್’ ಬಿಡುಗಡೆಯಾಯಿತು. ಅದು ಸಹ ಉತ್ತಮ ಗಳಿಕೆಯನ್ನು ಗಳಿಸಿತು. ಭಾರತದಲ್ಲಿ ಈ ಚಿತ್ರ ಅಷ್ಟು ಗಳಿಸಲು ಸಾಧ್ಯವಾಗದಿದ್ದರೂ ಚೀನಾದಲ್ಲಿ ಯಶಸ್ಸಿನ ಪತಾಕೆ ಹಾರಿಸಿದೆ. ಈ ಚಿತ್ರ ಬಾಕ್ಸ್ ಆಫೀಸ್ನಲ್ಲಿ 900 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ. ಇಂಟರೆಸ್ಟಿಂಗ್ ವಿಷಯ ಏನಪ್ಪಾ ಅಂದ್ರೆ ಈ ಚಿತ್ರ ಚೀನಾದಲ್ಲಿ ಬರೋಬ್ಬರಿ 748 ಕೋಟಿ ಗಳಿಸಿತ್ತು.

4 ವರ್ಷಗಳ ವೃತ್ತಿ ಜೀವನದಲ್ಲಿ ಮೂರು ಸಿನಿಮಾ
ಝೈರಾ ವಾಸಿಂ ಕೊನೆಯದಾಗಿ ‘ದಿ ಸ್ಕೈ ಈಸ್ ಪಿಂಕ್’ ನಲ್ಲಿ ನಟಿಸಿದರು. ಇದರಲ್ಲಿ ಅವರು ಪ್ರಿಯಾಂಕಾ ಚೋಪ್ರಾ, ಫರ್ಹಾನ್ ಅಖ್ತರ್ ಮತ್ತು ರೋಹಿತ್ ಸರಾಫ್ ಅವರಂತಹ ನಟರೊಂದಿಗೆ ಕಾಣಿಸಿಕೊಂಡಿದ್ದಾರೆ. ಈ ಚಿತ್ರದ ನಂತರ, ಝೈರಾ ವಾಸಿಮ್ ಚಲನಚಿತ್ರ ರಂಗದಿಂದ ಹಿಂದೆ ಸರಿದರು. ಝೈರಾ ತನ್ನ ನಿರ್ಧಾರದಿಂದ ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ. ಅವರು ತಮ್ಮ 4 ವರ್ಷಗಳ ವೃತ್ತಿಜೀವನದಲ್ಲಿ ಕೇವಲ 3 ಚಿತ್ರಗಳನ್ನು ಮಾಡಿದರು ಮತ್ತು ಎಲ್ಲಾ ಮೂರು ಚಿತ್ರಗಳಲ್ಲಿ ಅವರ ನಟನೆಯು ಉತ್ತಮ ಪ್ರತಿಕ್ರಿಯೆಯನ್ನು ಪಡೆದುಕೊಂಡಿದೆ.