ಸಿನಿಮಾ ತಾರೆಯರು ಸಿನಿಮಾ ಅಥವಾ ಇನ್ನಾವುದೇ ಕಾರ್ಯಕ್ರಮಗಳಿಗೆ ಹೋಗಿದ್ದಾಗ ತಮ್ಮದೇ ಆದ ಶೈಲಿಯಲ್ಲಿ ಭಿನ್ನ ವಿಭಿನ್ನವಾಗಿ ಉಡುಪುಗಳನ್ನು ಧರಿಸುತ್ತಾರೆ. ಹೀಗೆ ಕೆಲವರು ಚಿತ್ರ ವಿಚಿತ್ರವಾಗಿ ಬಟ್ಟೆಗಳನ್ನು ತೊಟ್ಟು ಸಾಕಷ್ಟು ಸುದ್ದಿಯಾಗುತ್ತಾರೆ. ಅದೇ ರೀತಿ ಕೆಲ ನಟಿಯರು ತಾವು ಉಡುಪುಗಳನ್ನು ಧರಿಸಿ ಪೇಚಿಗೆ ಸಿಲುಕಿಕೊಂಡಿರುವುದು ಉಂಟು. ಕೆಲವರಂತೂ ಎಡವಿ ಬೀಳುವುದು ಮಾಮೂಲಿ ಆಗಿ ಬಿಟ್ಟಿದೆ. ಇದೀಗ ಬಾಲಿವುಡ್ ನಟಿ ರಾಣಿ ಮುಖರ್ಜಿಯವರ ಸಾರಿ ಸೆರಗು ಹಿಡಿದುಕೊಂಡು ಶಾರುಖ್ ಖಾನ್ ವೇದಿಕೆಗೆ ಬಂದಿದ್ದು, ಈ ವಿಡಿಯೋ ವೈರಲ್ ಆಗುತ್ತಿದೆ.
ಬಾಲಿವುಡ್ ನಟಿ ರಾಣಿ ಮುಖರ್ಜಿ ಅವರು ಅಂದವಾದ ಸೀರೆ ಉಟ್ಟು ಬಂದಿದ್ದರು. ಆದರೆ ಸೀರೆ ಸೆರಗು ಮಾತ್ರ ಅತಿ ಉದ್ದಕ್ಕೆ ಬಿಟ್ಟುಕೊಂಡಿದ್ದರು. ಹಿಂದೆಗಡೆ ಅವರ ಸೆರಗು ನೆಲವನ್ನು ಗುಡಿಸುತ್ತಾ ಹೋಗುತ್ತಿತ್ತು. ಆಕಸ್ಮಿಕವಾಗಿ ಆ ಸೆರಗಿನ ಮೇಲೆ ಯಾರಾದರೂ ಕಾಲಿಟ್ಟರೆ ರಾಣಿ ಮುಖರ್ಜಿ ಎಡವಿ ಬೀಳುತ್ತಿದ್ದರು. ಇದನ್ನು ನೋಡಿದ ಬಾಲಿವುಡ್ ನಟ ಶಾರುಖ್ ಖಾನ್ ಅವರು ರಾಣಿ ಮುಖರ್ಜಿಯವರ ಸೀರೆಯ ಸೆರಗನ್ನು ಹಿಡಿದುಕೊಂಡು ವೇದಿಕೆ ಮೇಲೆ ಏರಿದ್ದರು. ಈ ದೃಶ್ಯ ಕ್ಯಾಮರಾ ಕಣ್ಣುಗಳಲ್ಲಿ ಸೆರೆಯಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಸೌಂಡ್ ಮಾಡುತ್ತಿದೆ.
ಬಾಲಿವುಡ್ ಕಿಂಗ್ ನಟ ಶಾರುಖ್ ಖಾನ್ ಅವರು ಯಾವುದೇ ಹಿಂಜರಿಕೆ ಇಲ್ಲದೆ ಹೀಗೆ ನಟಿಯೊಬ್ಬರ ಸೀರೆ ಸೆರಗನ್ನು ಹಿಡಿದು ಬಂದಿರುವುದಕ್ಕೆ ಸಾಕಷ್ಟು ಅಭಿಮಾನಿಗಳಿಂದ ಮೆಚ್ಚುಗೆ ಸೂಚಿಸಿದ್ದಾರೆ. ಜೊತೆಗೆ ಈ ವಿಡಿಯೋ ನೋಡಿದ ಅದೆಷ್ಟೋ ನೆಟ್ಟಿಗರು ಇವರನ್ನು ಜಂಟಲ್ ಮ್ಯಾನ್ ಎಂದು ಕರೆಯುತ್ತಿದ್ದಾರೆ. ಇಡೀ ಭಾರತದಲ್ಲೇ ಅತೀ ಹೆಚ್ಚು ಫ್ಯಾನ್ಸ್ ಫಾಲೋಯಿಂಗ್ ಹೊಂದಿದ್ದಾರೆ ನಟ ಶಾರುಖ್ ಖಾನ್.ನೆಚ್ಚಿನ ನಟನ ಸರಳತೆಯ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಬಗೆ ಬಗೆಯಾಗಿ ಕಾಮೆಂಟ್ ಮಾಡುತ್ತಿದ್ದಾರೆ.