ಕಿರುತೆರೆ ನಟಿ ವೈಷ್ಣವಿ ಗೌಡ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್ ಆಗಿದ್ದಾರೆ. ಅಗ್ನಿಸಾಕ್ಷಿ ಖ್ಯಾತಿಯ ವೈಷ್ಣವಿ ಪ್ರೇಕ್ಷಕರಿಗೆ ಸನ್ನಿಧಿಯಂತಲೇ ಫೇಮಸ್. ವೈಷ್ಣವಿ ಕನ್ನಡ ಕಿರುತೆರೆಲೋಕದ ಜನಪ್ರಿಯ ನಟಿಯಾಗಿದ್ದು, ಅಗ್ನಿಸಾಕ್ಷಿ ಸೀರಿಯಲ್ ಮೂಲಕ ಜನರ ಮನಸ್ಸಿನಲ್ಲಿ ನೆಲೆಯೂರಿದ್ದಾರೆ. ಸದ್ಯ, ನಟಿ ವೈಷ್ಣವಿ ಗೌಡ ಫೋಟೋಶೂಟ್ ನಡೆಸಿಕೊಂಡಿದ್ದು, ಫೋಟೋಗಳನ್ನು ಕಂಡಿರುವ ನೆಟ್ಟಿಗರು ‘ಈಕೆ ಮಾಡರ್ನ್ ಸೀತೆ’ ಎಂದಿದ್ದಾರೆ.

ಅಗ್ನಿಸಾಕ್ಷಿ ಸೀರಿಯಲ್ ಮುಗಿದ ಬಳಿಕ ತನ್ನದೇ ಯೂಟ್ಯೂಬ್ ಚಾನೆಲ್ ನಲ್ಲಿ ಬ್ಯುಸಿ ಆಗಿದ್ದ ನಟಿ ವೈಷ್ಣವಿ ಗೌಡ ಇದೀಗ ಮತ್ತೆ ಕಿರುತೆರೆಗೆ ರೀ ಎಂಟ್ರಿ ಕೊಟ್ಟಿದ್ದಾರೆ. ಜೀ ಕನ್ನಡದ ಸೀತಾ ರಾಮ ಸೀರಿಯಲ್ ಮೂಲಕ ಮತ್ತೆ ಟಿವಿ ಪರದೆ ಮೇಲೆ ಮಿಂಚುತ್ತಿದ್ದಾರೆ. ಈ ನಡುವೆ ನಟಿ ತಮ್ಮ ಹೊಸ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಮಾರ್ಡನ್ ಡ್ರೆಸ್ ನಲ್ಲಿ ಫೋಟೋಗಳಿಗೆ ವಿಭಿನ್ನವಾಗಿ ಪೋಸ್ ಕೊಟ್ಟಿದ್ದು, ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ.
ಅಗ್ನಿಸಾಕ್ಷಿ ಸೀರಿಯಲ್ ಬಳಿಕ ವೈಷ್ಣವಿ ಸೀತಾ-ರಾಮ ಸೀರಿಯಲ್ ಮೂಲಕ ಕಿರುತೆರೆಯಲ್ಲಿ ಕಮಾಲ್ ಮಾಡ್ತಿದ್ದಾರೆ. ಅಗ್ನಿಸಾಕ್ಷಿ ಸದ್ದು ಕೇಳ್ತಿದ್ದಂತೆ ಟಿವಿ ಮುಂದೆ ಹಾಜರಾಗ್ತಿದ್ದ ಜನ ಈಗ ಸೀತಾ-ರಾಮ ಸೀರಿಯಲ್ ಟೈಮ್ಗೆ ಫಿಕ್ಸ್ ಆಗಿದ್ದಾರೆ. ಜೀ ಕನ್ನಡದ ದೇವಿ ಸೀರಿಯಲ್ನಿಂದ ವೈಷ್ಣವಿ ಗೌಡ ಕಿರುತೆರೆ ಪಯಣ ಆರಂಭವಾಯಿತು. ನಂತರ `ಪುನರ್ ವಿವಾಹ’ದಲ್ಲಿ ನಟಿಸಿ ಜನರ ಮನಸ್ಸು ಗೆದ್ದರು. ನಂತರ ಅಗ್ನಿಸಾಕ್ಷಿಯಲ್ಲಿ ನಟಿಸಿ ಕರುನಾಡ ಮನೆ ಮಗಳಾದರು. ಈಗ ಸೀತೆಯಾಗಿ ಮಿಂಚುತ್ತಿದ್ದಾರೆ. ಸದ್ಯ, ವೈಷ್ಣವಿ ಗೌಡ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ಸೌಂಡ್ ಮಾಡುತ್ತಿದೆ.