ಕಿರುತೆರೆಯಲ್ಲಿ ನಟನಟಿಯರಿಗೆ ಬಹಳ ಬೇಡಿಕೆ ಇದೆ. ಈಗ ಧಾರಾವಾಹಿಗಳ ಸಂಖ್ಯೆ ಜಾಸ್ತಿ ಆಗಿರುವ ಕಾರಣ ಎಲ್ಲರಿಗೂ ಅವಕಾಶ ಕೂಡ ಸಿಗುತ್ತಿದೆ. ಲೈಮ್ ಲೈಟ್ ನಲ್ಲಿ ಇರುವ ಕಲಾವಿದರು ತಮ್ಮ ಮರಿಯಾದೆಗೆ ಅಂಜಿ, ಒಳ್ಳೆ ರೀತಿಯಲ್ಲಿ ಬದುಕಬೇಕು, ಯಾರಿಗೂ ತೊಂದರೆ ಮಾಡಬಾರದು ಎನ್ನುವ ಉದ್ದೇಶದಿಂದ ಬದುಕುತ್ತಿದ್ದಾರೆ. ಆದರೆ ಇನ್ನೂ ಕೆಲವರಿಗೆ ಆ ರೀತಿ ಯಾವುದೇ ಎಗ್ಗು ಸಿಗ್ಗು ಇಲ್ಲ. ಹಣಕ್ಕಾಗಿ ಏನನ್ನು ಬೇಕಾದರೂ ಮಾಡೋದಕ್ಕೆ ತಯಾರಾಗಿರುತ್ತಾರೆ. ಹಾಗೆ ಮೋಸ ಮಾಡಲು ಹೋಗಿ ಸಿಕ್ಕಿ ಹಾಕಿಕೊಳ್ಳುವಂಥ ಪ್ರಕರಣಗಳು ಕೂಡ ಆಗಾಗ ನಡೆಯುತ್ತಲೇ ಇರುತ್ತದೆ. ಇದೀಗ ಅದೇ ರೀತಿ ಆಗಿದೆ. ಕಿರುತೆರೆಯಲ್ಲಿ ಗುರುತಿಸಿಕೊಂಡಿರುವ ನಟಿ ವಿಸ್ಮಯಾ ಅವರ ಮೇಲೆ ಸಾಲ ಪಡೆದು ವಂಚನೆ ಮಾಡಿರುವ ಆರೋಪ ಬಂದಿದೆ. ಇವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ..
ವಿಸ್ಮಯಾ ಅವರು ಕಿರುತೆರೆ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದು ಹೆಚ್ಚಾಗಿ ಧಾರಾವಾಹಿಗಳಲ್ಲಿ ನಟಿಸಿಲ್ಲ. ಆದರೆ ಹಿಮಾನ್ವಿ ಎನ್ನುವವರಿಗೆ ಇನ್ಸ್ಟಾಗ್ರಾಮ್ ಮೂಲಕ ಪರಿಚಯವಾಗಿ, ಅವರಿಂದ ಸುಮಾರು 6.50 ಲಕ್ಷ ರೂಪಾಯಿ ಹಣ ಪಡೆದು ಮೋಸ ಮಾಡಿದ್ದಾರೆ ಎಂದು ಮಾಹಿತಿ ಸಿಕ್ಕಿದೆ. ವಿಸ್ಮಯಾ ವಿರುದ್ಧ ಕೋರ್ಟ್ ಮೆಟ್ಟಿಲೇರಿರುವ ಹಿಮಾನ್ವಿ ಅವರು ನಡೆದ ಪ್ರಕರಣವನ್ನು ಪೊಲೀಸರಿಗೆ ತಿಳಿಸಿ, ಈಕೆಯ ವಿರುದ್ಧ ದೂರು ನೀಡಿದ್ದಾರೆ. ಹಾಗೆಯೇ ಮಾಧ್ಯಮದ ಎದುರು ಬಂದು ನಡೆದ ಘಟನೆ ಏನು ಎನ್ನುವುದನ್ನು ವಿವರಿಸಿದ್ದಾರೆ. ಇದನ್ನೆಲ್ಲಾ ನೋಡಿದಾಗ ಅನ್ನಿಸುವುದು ಒಂದೇ ಒಂದು, ಕಲಾವಿದೆ ಸಿನಿಮಾ ನಟ ಅಥವಾ ನಟಿ ಎಂದು ಪರಿಚಯ ಮಾಡಿಕೊಂಡು, ಹಣ ಕೇಳಲು ಶುರು ಮಾಡಿದರೆ ಅಂಥವರ ವಿಷಯದಲ್ಲಿ ನಾವು ತುಂಬಾ ಹುಷಾರಾಗಿ ಇರಬೇಕು. ಈಗಿನ ಕಾಲದಲ್ಲಿ ಮೋಸ ಮಾಡುವವರೇ ಹೆಚ್ಚು..

ಇನ್ನು ವಿಸ್ಮಯಾ ಅವರ ಕೇಸ್ ನಲ್ಲಿ ನಿಜಕ್ಕೂ ನಡೆದಿರುವುದು ಏನು ಎಂದರೆ, ಹಿಮಾನ್ವಿ ಎನ್ನುವ ಮಹಿಳೆಯನ್ನು ಇನ್ಸ್ಟಾಗ್ರಾಮ್ ಮೂಲಕ ಪರಿಚಯ ಮಾಡಿಕೊಂಡಿದ್ದಾರೆ. ಈ ವಿಸ್ಮಯಾ ಎನ್ನುವ ನಟಿ ಮೂಲತಃ ಬೆಂಗಳೂರಿನವರೆ, ಇವರಿಗೆ ಈಗ 34 ವರ್ಷ ವಯಸ್ಸು, ಹಿಮಾನ್ವಿ ಅವರು ಬೆಂಗಳೂರಿನ ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ಈಕೆಯ ವಿರುದ್ಧ ದೂರು ನೀಡಿದ್ದಾರೆ. ಹಮಾನ್ವಿ ಅವರು ವಾಸವಾಗಿರುವುದು ಬೆಂಗಳೂರಿನ ಗಣಪತಿ ನಗರದಲ್ಲಿ ಎನ್ನಲಾಗಿದೆ. ಇವರು ನೇರವಾಗಿ ಕೋರ್ಟ್ ನಲ್ಲಿ ವಿಸ್ಮಯಾ ಎನ್ನುವ ನಟಿಯ ವಿರುದ್ಧ ದೂರು ದಾಖಲು ಮಾಡಿದ್ದಾರೆ. 24ನೇ ಎಸಿಎಂಎಂ ಕೋರ್ಟ್ ಈ ಪ್ರಕರಣದ ವಿಚಾರವಾಗಿ ತನಿಖೆ ನಡೆಸಬೇಕು ಎಂದು ಆದೇಶ ನೀಡಿದ ನಂತರ ಲೋಕಲ್ ಪೊಲೀಸರು ಈ ವಿಚಾರಕ್ಕೆ ಸಂಬಂಧಿಸಿದ ಹಾಗೆ ಇನ್ವೆಸ್ಟಿಗೇಶನ್ ನಡೆಸುವುದಕ್ಕೆ ಶುರು ಮಾಡಿದ್ದಾರೆ.
ಇನ್ನು ಹಿಮಾನ್ವಿ ಎನ್ನುವವರಿಗೆ ಈ ವಿಸ್ಮಯ ಪರಿಚಯ ಆಗಿದ್ದು ಹೇಗೆ, ಈ ಕೇಸ್ ನಲ್ಲಿ ನಿಜಕ್ಕೂ ನಡೆದಿರುವುದು ಏನು ಎಂದು ನೋಡುವುದಾದರೆ.. ವಿಸ್ಮಯ ಪರಿಚಯ ಆಗಿರುವುದು ನಿನ್ನೆ ಅಥವಾ ಇವತ್ತಲ್ಲ. ಇವರಿಗೆ 6 ವರ್ಷಗಳ ಹಿಂದೆಯೇ ಪರಿಚಯ ಇದೆ. 2019ರಲ್ಲಿ ಇನ್ಸ್ಟಾಗ್ರಾಮ್ ಮೂಲಕ ಇಬ್ಬರಿಗೂ ಪರಿಚಯ ಶುರುವಾಗಿದೆ. ಆ ಪರಿಚಯದಲ್ಲಿ, ವಿಸ್ಮಯ ತಾನೊಬ್ಬ ನಿರ್ದೇಶಕಿ ಆಗಿದ್ದು ಪ್ರಸ್ತುತ ಒಂದು ಸಿನಿಮಾ ನಿರ್ದೇಶನ ಮಾಡುತ್ತಿರುವುದಾಗಿಯೂ ಹಿಮಾನ್ವಿ ಜೊತೆಗೆ ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ಇನ್ಸ್ಟಾಗ್ರಾಮ್ ನಲ್ಲಿ ತಾನೊಬ್ಬ ಲೈಫ್ ಕೋಚರ್ ಎಂದು ಕೂಡ ಹಿಮಾನ್ವಿ ಜೊತೆ ಹೇಳಿಕೊಂಡಿದ್ದಾರೆ. ಇನ್ಸ್ಟಾಗ್ರಾಮ್ ನಲ್ಲಿ ಶುರುವಾದ ಪರಿಚಯ ಸ್ನೇಹವಾಗಿ, ಮುಂದುವರೆದು ಹಿಮಾನ್ವಿ ಅವರ ಕ್ಲಿನಿಕ್ಗೆ ವಿಸ್ಮಯ ಭೇಟಿ ನೀಡಿದ್ದರಂತೆ.

ಅಷ್ಟೇ ಅಲ್ಲದೇ, 2024ರಲ್ಲಿ ಅಂದರೆ ಕಳೆದ ವರ್ಷ ಫೆಬ್ರವರಿ ತಿಂಗಳಿನಲ್ಲಿ ವಿಸ್ಮಯ ಮತ್ತೊಮ್ಮೆ ಹಿಮಾನ್ವಿಯನ್ನು ಭೇಟಿಯಾಗಿ ಅವರ ಮನೆಗೆ ಕೂಡ ಹೋಗಿಬಂದಿದ್ದರಂತೆ. ಮನೆಗೆ ಹೋದ ಸಮಯದಲ್ಲಿ ಹಣಕಾಸಿನ ವಿಷಯದಲ್ಲಿ ತೊಂದರೆ ಅನುಭವಿಸುತ್ತಿರುವುದಾಗಿ ತಿಳಿಸಿದ ವಿಸ್ಮಯಾ ತಮಗೆ ಸಹಾಯ ಮಾಡಿ, ಹಣ ಕೊಡಿ ಎಂದು ಹಿಮಾನ್ವಿ ಅವರಲ್ಲಿ ಕೇಳಿಕೊಂಡಿದ್ದರಂತೆ. ಆಕೆ ಈ ರೀತಿ ಕೇಳಿಕೊಂಡ ನಂತರ ಹಿಮಾನ್ವಿ ಅವರು ತಮ್ಮ ತಾಯಿಯ ಬ್ಯಾಂಕ್ ಅಕೌಂಟ್ ಇಂದ 5 ಲಕ್ಷ, ತಮ್ಮ ಬ್ಯಾಂಕ್ ಅಕೌಂಟ್ ಇಂದ 1.50 ಲಕ್ಷ ರೂಪಾಯಿಗಳನ್ನು ವಿಸ್ಮಯ ಅವರಿಗೆ ಕೊಟ್ಟಿರುವುದಾಗಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ. ಈ ವಿಚಾರವನ್ನು ಎಫ್.ಐ.ಆರ್ ನಲ್ಲಿ ಕೂಡ ದಾಖಲು ಮಾಡಿಕೊಳ್ಳಲಾಗಿದೆ.
ಈ ಹಣವನ್ನು ವಾಪಸ್ ಕೊಡುವ ಬಗ್ಗೆ ಚರ್ಚಿಸಿದ ನಂತರ ವಿಸ್ಮಯಾ ಅವರು ಹಣ ಹಿಂದಿರುಗಿಸಲು ಹಿಮಾನ್ವಿ ಅವರಿಗೆ ಚೆಕ್ ಕೊಟ್ಟಿದ್ದರಂತೆ. ಮತ್ತೊಮ್ಮೆ ಹಣ ವಾಪಸ್ ಕೇಳಿದಾಗ ಏನೇನೋ ಕಾರಣಗಳನ್ನು ಕೊಡುವುದಕ್ಕೆ ಶುರು ಮಾಡಿದ್ದಾರೆ. ಆಕೆ ನೀಡಿದ ಚೆಕ್ ಅನ್ನು ಬ್ಯಾಂಕ್ ಗೆ ಹಾಕಿದಾಗ, ಸಹಿಯಲ್ಲಿ ವ್ಯತ್ಯಾಸ ಇರುವ ಕಾರಣ ಚೆಕ್ ರಿಜೆಕ್ಟ್ ಆಗಿದೆ. ಮೋಸ ಮಾಡುವ ಉದ್ದೇಶ ಇದ್ದ ಕಾರಣದಿಂದಲೇ ಆಕೆ ಈ ರೀತಿ ಬೇಕು ಎಂದು ಚೆಕ್ ನಲ್ಲಿ ತಪ್ಪಾಗಿ ಸಹಿ ಮಾಡಿದ್ದಾರೆ ಎಂದು ಹಿಮಾನ್ವಿ ಹೇಳಿದ್ದಾರೆ. ಚೆಕ್ ಈ ರೀತಿ ಆಗಿದೆ, ತಮ್ಮಿಂದ ಪಡೆದಿರುವ ಹಣವನ್ನು ತಮಗೆ ವಾಪಸ್ ಕೊಡಬೇಕು ಎಂದು ಕೇಳಿದ್ದಕ್ಕೆ, ಕೆಟ್ಟ ಪದಗಳನ್ನು ಬಳಸಿ ನಿಂದಿಸಿದರಂತೆ. ಅಷ್ಟೇ ಅಲ್ಲದೇ ಜೀವ ಬೆದ*ರಿಕೆ ಕೂಡ ಹಾಕಿದ್ದರಂತೆ. ಇಷ್ಟೆಲ್ಲವು ಒಬ್ಬ ಕಿರುತೆರೆಯಲ್ಲಿ ಗುರುತಿಸಿಕೊಂಡಿರುವ ಮಹಿಳೆ ಇಂದ ನಡೆದಿದೆ.

ಇಷ್ಟೆಲ್ಲ ವಿಷಯಗಳನ್ನು ಪೊಲೀಸರ ಎದುರು ತಿಳಿಸಿರುವ ಹಿಮಾನ್ವಿ ಅವರು, ಪೊಲೀಸರ ಸಹಾಯ ಕೇಳಿದ್ದು, ಆಕೆಯನ್ನು ಬಂಧಿಸಿ, ತಮಗೆ ನ್ಯಾಯ ಒದಗಿಸಿ ಕೊಡಬೇಕು, ಹಣವನ್ನು ವಾಪಾಸ್ ಸಿಗುವ ಹಾಗೆ ಮಾಡಬೇಕು ಎಂದು ಕೇಳಿಕೊಂಡಿದ್ದಾರೆ. ಪೊಲೀಸರು ಕೂಡ ಈಗಾಗಲೇ ಈ ಪ್ರಕರಣಕ್ಕೆ ಸಂಬಂಧಿಸಿದ ಹಾಗೆ ತನಿಖೆ ಶುರು ಮಾಡಿದ್ದು, ಮುಂದಿನ ದಿನಗಳಲ್ಲಿ ಯಾವ ರೀತಿಯ ತಿರುವು ಪಡೆದುಕೊಳ್ಳುತ್ತದೆ ಎಂದು ಕಾದು ನೋಡಬೇಕಿದೆ. ಇಂಥ ಘಟನೆಗಳನ್ನು ನೋಡಿದರೆ, ಸೋಷಿಯಲ್ ಮೀಡಿಯಾದಲ್ಲಿ ಎಷ್ಟೇ ಹುಷಾರಾಗಿ ಇದ್ದರೂ ಸಾಕಾಗೋದಿಲ್ಲ ಎನ್ನುವುದು ಅರ್ಥವಾಗುತ್ತದೆ. ಒಂದು ಹುಡುಗ ಆಗಲಿ ಅಥವಾ ಹುಡುಗಿಯೇ ಆಗಲಿ, ಮೆಸೇಜ್ ಮಾಡೋದಕ್ಕೆ ಶುರು ಮಾಡಿದರೆ ಹುಷಾರಾಗಿರಿ.