ನಮ್ಮ ಸ್ಯಾಂಡಲ್ವುಡ್ ನ ಮತ್ತೊಂದು ಹೆಮ್ಮೆಯ ಚಿತ್ರ ಎಂದರೆ ಅದು “ಕಾಂತರ”.ಈ ಸಿನಿಮಾ ಈಗ ನಮ್ಮ ರಾಜ್ಯದಲ್ಲಿ ಅಲ್ಲದೆ ಹೊರ ರಾಜ್ಯಗಳಲ್ಲಿ ಕೊಡ ಬಹಳ ಬೇಡಿಕೆ ಹಾಗೂ ಹೆಸರು ಮಾಡುತ್ತಿದೆ.ಈ ಹಿಂದೆ ನಮ್ಮ ಸ್ಯಾಂಡಲ್ವುಡ್ ನ ಗೌರವ ಹಾಗೂ ಪ್ರತಿಷ್ಠೆಯನ್ನು ಹೆಚ್ಚು ಮಾಡಿಸಿದ್ದ ಸಿನಿಮಾ ಎಂದರೆ ಅದು ಕೆಜಿಎಫ್ ನ ಎರಡು ಭಾಗಗಳು. ಎರಡು ಚಪ್ಟರ್ ಗಳಾಗಿ ಬಂದ ಕೆಜಿಎಫ್ ಚಿತ್ರ ನಮ್ಮ ದೇಶವಲ್ಲದೆ ಹೊರ ದೇಶದಲ್ಲೂ ಕೊಡ ಬಹಳಷ್ಟು ದಾಖಲೆಗಳನ್ನು ಮಾಡಿತು.ಈಗ ಆ ದಾಖಲೆಗಳನ್ನು ಕೊಡ ಹಿಂದಕ್ಕೆ ಇಕ್ಕಿ ಭರ್ಜರಿ ಪ್ರದರ್ಶನ ಪಡೆದುಕೊಳ್ಳುತ್ತಿದೆ. ಇದೆ ಸೆಪ್ಟೆಂಬರ್ 30ರಲ್ಲಿ ಕೇವಲ ಕನ್ನಡದಲ್ಲಿ ಮಾತ್ರ ಬಿಡುಗಡೆ ಪಡೆದಿತ್ತು ಈ ಕಾಂತರ ಸಿನಿಮಾ.ಈ ಸಿನಿಮಾ ಇಷ್ಟು ಒಳ್ಳೆಯ ಕಥೆ ಹಂದರಗಳಿಂದ ಒಳಗೊಂಡಿದ್ದರು ಈ ಸಿನಿಮಾ ಪ್ಯಾನ್ ಇಂಡಿಯಾ ಮಾಡಲು ಯಾಕೆ ಮುಂದಾಗಿಲ್ಲ ರಿಷಬ್ ಶೆಟ್ಟಿ ಎಂದು ಹಲವಾರು ಪ್ರಶ್ನೆಗಳು ಬಂದಿದ್ದವು.

ಆಗ ರಿಷಬ್ ಹೇಳಿದ ಉತ್ತರ ಕನ್ನಡಿಗರ ಮನಸ್ಸು ಗೆದ್ದಿತ್ತು.ಅವರು ಏನೆಂದು ಹೇಳಿದ್ದರೆಂದರೆ ನಾವು ಯಾವಾಗಲೂ ಬೇರೆ ಭಾಷೆಯ ಸಿನಿಮಾವನ್ನು ಅವರದೇ ಭಾಷೆಯಲ್ಲಿ ಹೋಗಿ ನೋಡುತ್ತೇವೆ ಆದರೆ ನಮ್ಮ ಭಾಷೆಯ ಸಿನಿಮಾವನ್ನು ಅವರಿಗೆ ಪರಿಚಯಿಸಲು ಅವರ ಭಾಷೆಗೆ ಡಬ್ ಮಾಡಿ ಕೊಡಬೇಕು.ಹಾಗಾಗಿ ನನ್ನ ಸಿನಿಮಾ ವನ್ನು ಕೇವಲ ಕನ್ನಡದಲ್ಲಿ ಬಿಡುಗಡೆ ಮಾಡಿದ್ದೇನೆ ಎಂದು ಉತ್ತರಿಸಿದರು. ಈ ಚಿತ್ರ ನೋಡಿದ ಎಲ್ಲರೂ ಬಹಳ ಒಳ್ಳೆ ಒಳ್ಳೆ ಮಾತುಗಳನ್ನು ಹೇಳುತ್ತಿದ್ದಾರೆ.
ಇನ್ನು ಈ ಸಿನಿಮಾವನ್ನು ಪ್ಯಾನ್ ಇಂಡಿಯಾ ಚಿತ್ರವನ್ನಾಗಿ ಮಾಡಲು ಪ್ರೇಕ್ಷಕರಿಂದ ಡಿಮ್ಯಾಂಡ್ ಕ್ರಿಯೇಟ್ ಆಗಿದೆ. ಈ ಚೆಂದದ ದೈವಾರದನೆಯ ಕತೆಗೆ ಇಡೀ ಕರ್ನಾಟಕದ ಜನರು ಫಿಧಾ ಆಗಿದ್ದಾರೆ. ಇನ್ನು ಈ ಸಿನಿಮಾ ನಮ್ಮ ಸ್ಯಾಂಡಲ್ವುಡ್ ಗೆ ಬಹಳ ದೊಡ್ಡ ಮಟ್ಟದ ಹೆಸರನ್ನು ತಂದುಕೊಟ್ಟಿದೆ.ಇಂತಹ ಸಿನಿಮಾಗಳು ನಮ್ಮ ಸ್ಯಾಂಡಲ್ವುಡ್ ಗೆ ಗೌರವವನ್ನು ಹೆಚ್ಚಿಸುವಲ್ಲಿ ಮೆಟ್ಟಿಲಗಿದೆ.ಪ್ರೇಕ್ಷಕರು ಅಲ್ಲದೆ ಸಾಕಷ್ಟು ಸೆಲಬ್ರೆಟಿ ಗಳು ಕೊಡ ಈ ಸಿನಿಮಾ ಬಗ್ಗೆ ಒಳ್ಳೆಯ ಮಾತುಗಳನ್ನು ಹೇಳುತ್ತಿದ್ದಾರೆ.
ಕನ್ನಡದಲ್ಲಿ ಬಿಡುಗಡೆ ಪಡೆದ ಈ ಕಾಂತರ ಸಿನಿಮಾ ಬಹಳ ಒಳ್ಳೆಯ ಪ್ರತಿಕ್ರಿಯೆ ಪಡೆದುಕೊಂಡಿತು. ಅಷ್ಟೇ ಅಲ್ಲದೆ ಪ್ಯಾನ್ ಇಂಡಿಯಾ ಸಿನಿಮಾ ಮಾಡಲು ಪರ ಭಾಷೆಯವರಿಂದಲೇ ಬೇಡಿಕೆ ಹೆಚ್ಚಾಗಿತ್ತು.ಹಾಗಾಗಿ ಅವರೆಲ್ಲರ ಮನವಿಯನ್ನು ಸ್ವೀಕರಿಸಿ ಈ ವಾರದಲ್ಲಿ ಈ ಸಿನಿಮಾವನ್ನು ಡಬ್ ಮಾಡಿ ಬಿಡುಗಡೆ ಮಾಡಲು ಸಿದ್ಧತೆಗಳನ್ನು ನಡೆಸುತ್ತಿದ್ದಾರೆ. ಈಗಾಗಲೇ ಎಲ್ಲಾ ಭಾಷೆಯಲ್ಲೂ ಪ್ರಮೋಷನ್ ಶುರುವಾಗಿದ್ದು ಬಹಳ ಬಿರುಸಿನಲ್ಲಿ ಕೆಲಸಗಳು ಸಾಗುತ್ತಿದೆ.ಹೀಗೆ ಕನ್ನಡ ಅಲ್ಲದೆ ತೆಲಗು ತಮಿಳು ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ಬಿಡುಗಡೆ ಪಡೆಯುತ್ತಿದೆ.
ಈ ಎಲ್ಲಾ ಭಾಷೆಗಳಲ್ಲು ಕೊಡ ಪ್ರಮೋಷನ್ ಶುರುವಾಗಿದ್ದು. ಈ ಹಿಂದೆ ತೇಲಗುವಿನಲ್ಲಿ “ಅಲ್ಲು ಅರ್ಜುನ್” ಅವರ ಅಪ್ಪ “ಅಲ್ಲು ಅರವಿಂದ” ಅವರು ಕೊಡ ಬಹಳ ಒಳ್ಳೆಯ ಮಾತುಗಳನ್ನು ಹೇಳಿದ್ದಾರೆ. ಇದೀಗ ಹಿಂದಿಯಲ್ಲೂ ಕೊಡ ಅದಕ್ಕಿಂತ ಒಂದು ಪಟ್ಟು ಹೆಚ್ಚು ಗೌರವನ್ನು ನೀಡಿದ್ದಾರೆ ಎಂದೇ ಹೇಳಬಹುದು. ಹಿಂದಿಯಲ್ಲಿ ಪ್ರಮೋಷನ್ ಮಾಡಲು ‘ಸೂರಜ್ ಕುಮಾರ್’ ಎಂಬ ಯೂಟ್ಯೂಬ್ ಚಾನೆಲ್ ನಿರ್ವಹಿಸುತ್ತಿರುವ ಚಾನಲ್ ಒಂದರ ಇಂಟರ್ವ್ಯೂ ಅಟೆಂಡ್ ಮಾಡಲು ಈ ಚಿತ್ರ ತಂಡ ತೆರಳಿತ್ತು ಆ ಸಂಧರ್ಭದಲ್ಲಿ ನಿರೂಪಕ ರಿಷಬ್ ಅವರನ್ನು ಎದ್ದೇಳಿ ಎಂದು ಹೇಳುತ್ತಾರೆ ನಂತರ ಅವರನ್ನು ತಬ್ಬಿ ಮೆಚ್ಚುಗೆ ಸೂಚಿಸಿ ಅವರ ಕಾಲಿಗೆ ನಮಸ್ಕಾರ ಮಾಡುತ್ತಾರೆ.ನಾನು ನಿಮ್ಮನ್ನು ನನ್ನ ಪ್ರೇಯಸಿಗಿಂತ ಹೆಚ್ಚಾಗಿ ಪ್ರೀತಿಸುತ್ತೇನೆ ಎಂದು ಹೇಳಿಕೆ ನೀಡಿದ್ದಾರೆ. ಸದ್ಯ ಸೂರಜ್ ಕುಮಾರ್ ರಿಷಬ್ ಶೆಟ್ಟಿ ಕಾಲಿಗೆ ಬಿದ್ದಿರುವ ವಿಡಿಯೋ ದೊಡ್ಡ ಮಟ್ಟದಲ್ಲಿ ವೈರಲ್ ಪಡೆದುಕೊಂಡಿದೆ.