ಜೀವನದಲ್ಲಿ ಏನಾದರೂ ಸಮಸ್ಯೆಗಳು ಬಂದು ಅವು ಪರಿಹಾರವಾಗದೆ ಬಹಳಷ್ಟು ದಿನ ಉಳಿದಾಗ ಶನಿ ಬೆನ್ನು ಬಿದ್ದಿದ್ದಾನೆ ಎಂದು ಹಲವರು ಹೇಳುವುದನ್ನು ಕೇಳಿರುತ್ತೇವೆ. ಶನಿಯನ್ನು ಕರ್ಮಕಾರಕ ಎಂದು ಕರೆಯಲಾಗುತ್ತದೆ. ಸೂರ್ಯಪುತ್ರ ಶನಿಯು ಯಾರದ್ದೇ ಜೀವನದಲ್ಲಿ ವಕ್ರದೃಷ್ಟಿ ಬೀರಿದರೆ ಅವರ ಜೀವನ ಕಷ್ಟಗಳಿಂದಲೇ ತುಂಬಿರುತ್ತದೆ. ಇದನ್ನು ಸಾಡೇಸಾತಿ ಎಂದೂ ಕರೆಯುತ್ತಾರೆ. ಸಾಡೇಸಾತಿ ಇದ್ದವರಿಗೆ ಶನಿ ಬಹಳ ಕಷ್ಟಗಳನ್ನು ನೀಡುತ್ತಾನೆ. ಹಣಕಾಸು, ಕುಟುಂಬ, ಪ್ರೀತಿ, ವೈವಾಹಿಕ ಜೀವನ, ಉದ್ಯೋಗ ಎಲ್ಲಾ ಕ್ಷೇತ್ರಗಳಲ್ಲೂ ಪ್ರಭಾವ ಬೀರುತ್ತಾನೆ. ಇದರಿಂದ ಎಲ್ಲಿ ಹೋದರೂ ನೆಮ್ಮದಿಯೇ ಇಲ್ಲದಂತೆ ಆಗುತ್ತದೆ. ಆದರೆ ಕಷ್ಟಗಳನ್ನು ನೀಡುವ ಶನಿ, ಸಂತೋಷವನ್ನೂ ನೀಡುತ್ತಾನೆ. ಶನಿಯು ಕರ್ಮಗಳನ್ನು ಮಾಡುವವರಿಗೆ ಮಾತ್ರ ಶಿಕ್ಷಿಸುತ್ತಾನೆ. ಆದರೆ ಮತ್ತೊಬ್ಬರಿಗೆ ಒಳ್ಳೆಯದು ಬಯಸುವವರಿಗೆ ದುಪ್ಪಟ್ಟು ಉತ್ತಮ ಫಲ ನೀಡುತ್ತಾನೆ.
ಇನ್ನು ಒಂದು ತಿಂಗಳಲ್ಲಿ ನಾವು ಹೊಸ ವರ್ಷಕ್ಕೆ ಕಾಲಿಡುತ್ತಿದ್ದೇವೆ. ಹೊಸ ವರ್ಷದಲ್ಲಿ ಹಲವು ಪ್ರಮುಖ ಗ್ರಹಗಳ ಚಲನೆಯಲ್ಲಿ ಬದಲಾವಣೆಗಳಾಗಲಿವೆ. ಈ ಹಿನ್ನೆಲೆಯಲ್ಲಿ 2025ರಲ್ಲಿ ಕರ್ಮ ಮತ್ತು ನ್ಯಾಯದ ಅಧಿಪತಿ ಶನಿಯು ತನ್ನ ಸ್ಥಾನವನ್ನು ಬದಲಾಯಿಸಲಿದ್ದಾನೆ. ಎಲ್ಲಾ ಗ್ರಹಗಳಲ್ಲಿ ನಿಧಾನವಾಗಿ ಚಲಿಸುವ ಗ್ರಹವಾದ ಶನಿಯು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಚಲಿಸಲು ಎರಡೂವರೆ ವರ್ಷಗಳ ಸಮಯ ತೆಗೆದುಕೊಳ್ಳುತ್ತಾನೆ. ಅದರಂತೆ ಮುಂದಿನ ವರ್ಷ ಮಾರ್ಚ್ 25 ರಂದು ತನ್ನ ಸ್ವಂತ ರಾಶಿ ಕುಂಭದಿಂದ ಮೀನ ರಾಶಿಯನ್ನು ಪ್ರವೇಶಿಸುತ್ತಾನೆ. ಇದೇ ರಾಶಿಯಲ್ಲಿ 3 ಜೂನ್ 2027 ರವರೆಗೂ ನೆಲೆಸುತ್ತಾನೆ. ಎರಡೂವರೆ ವರ್ಷಗಳ ನಂತರ ಶನಿಯು ತನ್ನ ಸ್ಥಾನವನ್ನು ಬದಲಾಯಿಸುತ್ತಿರುವುದರಿಂದ ಕೆಲವು ರಾಶಿಗಳಿಗೆ ಶನಿ ಸಾಡೇಸಾತಿ ಕೊನೆಗೊಳ್ಳುತ್ತದೆ. ಇನ್ನು ಕೆಲವರಿಗೆ ಶನಿ ಸಾಡೇಸಾತಿ ಆರಂಭವಾಗುತ್ತದೆ. ಈ ಸಂದರ್ಭದಲ್ಲಿ ಶನಿದೇವನ ಪ್ರಭಾವದಿಂದ ಯಾವ ರಾಶಿಯವರಿಗೆ ಪರಿಹಾರ ಸಿಗಲಿದೆ, ಈ ರಾಶಿಯವರಿಗೆ ಏನೆಲ್ಲಾ ಶುಭ ಫಲಗಳು ದೊರೆಯುತ್ತದೆ ನೋಡೋಣ.

ವೃಷಭ ರಾಶಿ
ಶನಿಯು ವೃಷಭ ರಾಶಿಯಿಂದ 11 ಸ್ಥಾನದಲ್ಲಿ ಸಾಗುತ್ತಾನೆ. ಈ ಸಮಯದಲ್ಲಿ ವೃಷಭ ರಾಶಿಯವರಿಗೆ ಉತ್ತಮ ಫಲಿತಾಂಶಗಳು ದೊರೆಯುತ್ತದೆ. ಈ ರಾಶಿಯ ಜನರು ವ್ಯಾಪಾರ, ವ್ಯವಹಾರದಲ್ಲಿ ಲಾಭ ಪಡೆಯಲಿದ್ದಾರೆ. ಆರ್ಥಿಕ ಪರಿಸ್ಥಿತಿ ಉತ್ತಮವಾಗಿರುತ್ತದೆ. ಹಳೆಯ ಸಾಲಗಳನ್ನೆಲ್ಲಾ ತೀರಿಸಲಿದ್ದಾರೆ. ವಿವಿಧ ಮೂಲಗಳಿಂದ ಧನಲಾಭವಾಗಲಿದೆ. ಪೂರ್ವಿಕರ ಆಸ್ತಿಯಿಂದ ನಿಮಗೆ ಪಾಲು ದೊರೆಯುವ ಸಾಧ್ಯತೆಗಳಿವೆ. ಇಷ್ಟು ದಿನಗಳಿಂದ ನೀವು ಎದುರಿಸುತ್ತಿದ್ದ ಸಮಸ್ಯೆಗಳು ತನ್ನಿಂದ ತಾನೇ ಪರಿಹಾರವಾಗುತ್ತದೆ. ನೀವು ಬಹಳ ದಿನಗಳಿಂದ ಕೋರ್ಟ್ ವ್ಯಾಜ್ಯ ಎದುರಿಸುತ್ತಿದ್ದರೆ ಅದೂ ಕೂಡಾ ನಿಮ್ಮ ಪರವಾಗಿ ಆಗಲಿದೆ. ಒಟ್ಟಿನಲ್ಲಿ ಶನಿಯ ರಾಶಿ ಬದಲಾವಣೆಯಿಂದ ವೃಶಭ ರಾಶಿಯವರಿಗೆ ಶುಭಕಾಲ ಆರಂಭವಾಗಲಿದೆ.
ಮಿಥುನ ರಾಶಿ
ಶನಿಯು ಮಿಥುನ ರಾಶಿಯಿಂದ10 ಸ್ಥಾನದಲ್ಲಿ ಮೀನ ರಾಶಿಯಲ್ಲಿ ಸಂಚರಿಸುತ್ತಾನೆ. ಶನಿ ಸಂಚಾರವು ಮಿಥುನ ರಾಶಿಯವರಿಗೆ ಬಹಳ ಲಾಭದಾಯಕವಾಗಿರುತ್ತದೆ. ಈ ಅವಧಿಯಲ್ಲಿ ನಿಮ್ಮ ಎಲ್ಲಾ ಕೆಲಸಗಳು ಯಾವುದೇ ಅಡೆತಡೆಗಳಿಲ್ಲದೆ ಸಮಯಕ್ಕೆ ಸರಿಯಾಗಿ ಪೂರ್ಣಗೊಳ್ಳುತ್ತವೆ. ನಿಮ್ಮ ಮೇಲಿನ ಕೆಲಸದ ಒತ್ತಡ ಕಡಿಮೆಯಾಗುತ್ತದೆ. ನಿಮ್ಮ ಎಲ್ಲಾ ಆಸೆಗಳು ಈಡೇರುತ್ತವೆ. ನಿರುದ್ಯೋಗಿಗಳಿಗೆ ಉದ್ಯೋಗಾವಕಾಶಗಳು ದೊರೆಯುತ್ತದೆ. ನಿಮಗೆ ಹೊಸ ವ್ಯಕ್ತಿಗಳು ಪರಿಚಯವಾಗಲಿದ್ದಾರೆ. ಪ್ರೀತಿಪಾತ್ರರೊಂದಿಗೆ ಪ್ರವಾಸಕ್ಕೆ ತೆರಳಲಿದ್ದೀರಿ, ಆರ್ಥಿಕ ಲಾಭ ಇರುತ್ತದೆ. ನೀವು ವ್ಯಾಪಾರಸ್ಥರಾದರೆ ಹಣದ ಹೊಳೆಯೇ ಹರಿಯಲಿದೆ.
ಕರ್ಕಾಟಕ ರಾಶಿ
ಶನಿಯು ಕರ್ಕಾಟಕ ರಾಶಿಯಿಂದ 9 ಸ್ಥಾನದಲ್ಲಿ ಸಾಗುತ್ತಾನೆ . ಈ ಸಮಯದಲ್ಲಿ ನಿಮಗೆ ಶನಿದೇವನ ಸಂಪೂರ್ಣ ಆಶೀರ್ವಾದ ದೊರೆಯುತ್ತದೆ. ಇದರೊಂದಿಗೆ ನೀವು ವಿಶೇಷ ಪ್ರಯೋಜನಗಳನ್ನು ಪಡೆಯಲಿದ್ದೀರಿ. ವ್ಯಾಪಾರಿಗಳಿಗೆ ಉತ್ತಮ ಲಾಭ. ನಿರುದ್ಯೋಗಿಗಳಿಗೆ ದೊಡ್ಡ ಕಂಪನಿಯಲ್ಲಿ ಕೈ ತುಂಬಾ ಸಂಬಳ ದೊರೆಯುವ ಕೆಲಸ ದೊರೆಯಲಿದೆ. ಬಾಕಿಯಿರುವ ಎಲ್ಲಾ ಕೆಲಸಗಳು ಪೂರ್ಣಗೊಳ್ಳುವ ಸಾಧ್ಯತೆ ಇದೆ. ಶನಿದೇವನ ಸ್ಥಾನ ಬದಲಾವಣೆಯಿಂದ ನಿಮಗಿದ್ದ ಎಲ್ಲಾ ಅಡೆತಡೆಗಳು ನಿವಾರಣೆಯಾಗುತ್ತವೆ. ಸಂಬಂಧಗಳು ಸುಧಾರಿಸುತ್ತವೆ.
ಮಕರ ರಾಶಿ
ಶನಿ ಸಂಚಾರದಿಂದ ಮುಂದಿನ ವರ್ಷ ಮಕರ ರಾಶಿಯವರು ಶನಿ ಸಾಡೇಸಾತಿಯಿಂದ ಮುಕ್ತಿ ಪಡೆಯುತ್ತಾರೆ. ಶನಿಯು ಬರುವಾಗ ಕಷ್ಟಗಳನ್ನು ನೀಡಿದರೂ , ಹೋಗುವಾಗ ಸುಖ, ಸಂತೋಷ ನೀಡಿ ಆಶೀರ್ವದಿಸಿ ಹೋಗುತ್ತಾನೆ. ನಿಮ್ಮ ಕುಟುಂಬದಲ್ಲಿ ಸಂತೋಷ ಹೆಚ್ಚುತ್ತದೆ, ಶಾಂತಿ ನೆಲೆಸುತ್ತದೆ. ಕೆಲಸದಲ್ಲಿ ನೀವು ಉತ್ತಮ ಯಶಸ್ಸನ್ನು ಪಡೆಯುತ್ತೀರಿ. ಆರ್ಥಿಕ ಪರಿಸ್ಥಿತಿ ಉತ್ತಮವಾಗಿರುತ್ತದೆ. ಉದ್ಯೋಗಿಗಳಿಗೆ ತಮ್ಮ ಇಷ್ಟದ ಸ್ಥಳಕ್ಕೆ ವರ್ಗಾವಣೆಯಾಗಲಿದೆ. ವಿದೇಶ ಪ್ರಯಾಣ ಮಾಡುವ ಸಾಧ್ಯತೆ ಕೂಡಾ ಇದೆ.
ಇನ್ನಷ್ಟು ಶುಭಫಲಕ್ಕಾಗಿ ಪ್ರತಿ ಮಂಗಳವಾರ ಹನುಮಾನ್ ಚಾಲೀಸಾ ಪಠಿಸಿ, ಶನಿವಾರ ನಿರ್ಗತಿಕರಿಗೆ ಆಹಾರ ಪದಾರ್ಥಗಳನ್ನು ದಾನ ಮಾಡಿ.
ಗಮನಿಸಿ
: ಇಲ್ಲಿ ತಿಳಿಸಿರುವ ಮಾಹಿತಿಯು ಜ್ಯೋತಿಷ್ಯ ಶಾಸ್ತ್ರ, ಪುರಾಣ ಕಥೆಗಳನ್ನು ಆಧರಿಸಿದ್ದು, ನಿಮ್ಮ ನಂಬಿಕೆ, ವಿವೇಚನೆಗೆ ತಕ್ಕಂತೆ ನಿರ್ಧಾರ ತೆಗೆದುಕೊಳ್ಳಿ.