ಸಲ್ಮಾನ್ ಖಾನ್ ಹುಟ್ಟುಹಬ್ಬದ ದಿನ ಅವರ ಹಳೆಯ ಹೇಳಿಕೆಯೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಸಲ್ಮಾನ್ ಖಾನ್ ಹುಟ್ಟುಹಬ್ಬದ ದಿನ ಅವರ ಹಳೇಯ ಹೇಳಿಕೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಸಲ್ಮಾನ್ ಖಾನ್ ಬಾಲಿವುಡ್ನ ಮೋಸ್ಟ್ ಎಲಿಜೆಬೆಲ್ ಬ್ಯಾಚುಲರ್. ಮದುವೆ ಬಗ್ಗೆ ಮಾತನಾಡದ ಸಲ್ಮಾನ್ ಖಾನ್ ಈ ಹಿಂದೆ ಮಕ್ಕಳ ಬಗ್ಗೆ ಮಾತನಾಡಿದ್ದ ಹೇಳಿಕೆ ಈಗ ಮತ್ತೆ ವೈರಲ್ ಆಗಿದೆ. ಮಕ್ಕಳು ಬೇಕು ಆದರೆ ಅವರ ತಾಯಿ ಬೇಡ ಎಂದು ಸಲ್ಮಾನ್ ಖಾನ್ ಒಮ್ಮೆ ಹೇಳಿದ್ದರು. ಈ ಮಾತು ಈಗ ಬಾರಿ ವೈರಲ್ ಆಗಿದೆ.

2019ರಲ್ಲಿ ಮುಂಬೈ ಮಿರರ್ ಜೊತೆ ಮಾತನಾಡಿದ ಸಲ್ಮಾನ್, ನಾನು ಮಕ್ಕಳನ್ನು ಪ್ರೀತಿಸುತ್ತೇನೆ. ನನಗೆ ಮಕ್ಕಳು ಬೇಕು, ಆದರೆ ಮಕ್ಕಳೊಂದಿಗೆ ತಾಯಿ ಕೂಡ ಬರ್ತಾರೆ. ನನಗೆ ತಾಯಿ ಬೇಡ, ಆದರೆ ಮಕ್ಕಳಿಗೆ ತಾಯಿ ಬೇಕು. ಅವರನ್ನು ನೋಡಿಕೊಳ್ಳಲು ನನ್ನ ಜೊತೆ ಇಡೀ ಹಳ್ಳಿಯಿದೆ ಎಂದು ಹೇಳಿದ್ದರು. ಸಲ್ಮಾನ್ ಖಾನ್ ಅವರ ಹಳೆಯ ಹೇಳಿಕೆ ಈಗ ಮತ್ತೆ ಸಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಸಲ್ಮಾನ್ ಖಾನ್ ಇನ್ನೂ ಮದುವೆಯಾಗಿಲ್ಲ, ಮದುವೆ ಯಾವಾಗ ಎನ್ನುವ ಪ್ರಶ್ನೆ ಎದುರಾಗುತ್ತಲೇ ಇರುತ್ತದೆ.
ಕೆಲ ಬಾಲಿವುಡ್ ಬೆಡಗಿಯರ ಜೊತೆ ಸಲ್ಲು ಡೇಟಿಂಗ್ ಸಹ ಮಾಡಿದ್ದಾರೆ. ಸಲ್ಮಾನ್ ಖಾನ್ ಅವರ ಜೀವನದಲ್ಲಿ ಹಲವು ಹುಡುಗಿಯರು ಬಂದು ಹೋಗಿದ್ದಾರೆ. ಆದರೆ ಯಾರ ಜೊತೆಗೂ ಕಂಕಣ ಭಾಗ್ಯ ಕೂಡಿಬರಲಿಲ್ಲ. ಸಲ್ಲು ಮದುವೆ ಯಾವಾಗ ಎಂಬುದು ಒಂದು ಯಕ್ಷ ಪ್ರಶ್ನೆಯಾಗಿಯೇ ಉಳಿದುಕೊಂಡಿದೆ. ಈ ಬಗ್ಗೆ ಕೇಳಿದಾಗಲೆಲ್ಲ ಸಲ್ಮಾನ್ ಖಾನ್ ಅವರು ಜೋರಾಗಿ ನಕ್ಕು ಸುಮ್ಮನಾಗುತ್ತಾರೆ. ಸದ್ಯ ಒಂಟಿಯಾಗಿಯೇ ಹ್ಯಾಪಿ ಆಗಿರುವುದಾಗಿ ಅವರು ಹೇಳುತ್ತಾ ಬಂದಿದ್ದಾರೆ.