ಕಮಲಿ ಧಾರಾವಾಹಿಯ ಮೂಲಕ ಬಹಳ ಫೇಮಸ್ ಆದವರು ನಟಿ ಅಮೂಲ್ಯ ಗೌಡ. ಮೂಲತಃ ಮೈಸೂರಿನವರಾದ ಅಮೂಲ್ಯ ಇಂದು ಕನ್ನಡ ಕಿರುತೆರೆಯಲ್ಲಿ ಗುರುತಿಸಿಕೊಂಡಿದ್ದಾರೆ. ಕಮಲಿ ಧಾರಾವಾಹಿಯ ಹಳ್ಳಿ ಹುಡುಗಿ ಕಮಲಿ ಪಾತ್ರ ಇವರಿಗೆ ಒಳ್ಳೆಯ ಅವಕಾಶ, ಹೆಸರು, ಜನಪ್ರಿಯತೆ ಎಲ್ಲವನ್ನು ತಂದುಕೊಟ್ಟಿತು. ಕಮಲಿ ಪಾತ್ರದಲ್ಲಿ ಇವರ ಅಭಿನಯ ಮುಗ್ಧವಾಗಿ ನೈಜವಾಗಿ ಕಾಣುತ್ತಿತ್ತು, ರಿಷಿ ಸರ್ ಮತ್ತು ಕಮಲಿ ಜೋಡಿಯ ಪ್ರೀತಿ, ಸ್ಪೋರ್ಟ್ಸ್ ಬಗ್ಗೆ ಕಮಲಿಗೆ ಇದ್ದ ಆಸಕ್ತಿ, ಕಮಲಿಯ ಧೈರ್ಯ ಇದೆಲ್ಲವನ್ನು ಇಂದಿಗೂ ಜನರು ಮರೆತಿಲ್ಲ. ಧಾರಾವಾಹಿಯಲ್ಲಿ ಅವರನ್ನು ಕೆಸರಿನ ಕಮಲಿ ಎಂದೇ ಕರೆಯಲಾಗುತ್ತಿತ್ತು. ಹೀಗೆ ಹೆಚ್ಚಿನ ಜನಪ್ರಿಯತೆ ಪಡೆದಿದ್ದರು ಅಮೂಲ್ಯ.

ಕಮಲಿ ಧಾರಾವಾಹಿ ಮುಗಿದ ನಂತರ ಇವರಿಗೆ ಬಿಗ್ ಬಾಸ್ ಗೆ ಹೋಗೋ ಅವಕಾಶ ಸಿಕ್ಕಿತು. ಬಿಗ್ ಬಾಸ್ ಮನೆಯೊಳಗೆ ಒಬ್ಬ ವ್ಯಕ್ತಿಯಾಗಿ ಅಮೂಲ್ಯ ಗೌಡ ಹೇಗಿರುತ್ತಾರೆ ಅನ್ನೋದನ್ನ ಜನರಿಗೆ ತಿಳಿಸಬೇಕು ಎನ್ನುವ ಆಶಯ ಅವರಿಗೆ ಇತ್ತು. ಅದೇ ರೀತಿ ಬಿಗ್ ಬಾಸ್ ಶೋ ಇಂದ ಅವರಿಗೆ ಒಳ್ಳೆಯ ಜನಪ್ರಿಯತೆ, ಹೆಸರು, ಜನರ ಪ್ರೀತಿ ಎಲ್ಲವೂ ಸಿಕ್ಕಿತು. ಬಿಗ್ ಬಾಸ್ ನಂತರ ಸ್ವಲ್ಪ ಗ್ಯಾಪ್ ತೆಗೆದುಕೊಂಡ ಅಮೂಲ್ಯ ನಂತರ ಕಂಬ್ಯಾಕ್ ಮಾಡಿದ್ದು ಕಲರ್ಸ್ ಕನ್ನಡ ವಾಹಿನಿಯ ಶ್ರೀಗೌರಿ ಧಾರಾವಾಹಿಯ ಮೂಲಕ. ಈ ಧಾರವಾಹಿ ಸಹ ವಿಭಿನ್ನವಾದ ಕಥೆ ಹೊಂದಿದೆ. ಮನೆಯವರ ಯಾರ ಪ್ರೀತಿಯು ಸಿಗದ ಗೌರಿಯ ಕಥೆ ಇದು.
ತಾಯಿಯನ್ನು ಕಳೆದುಕೊಂಡಿರೋ ಗೌರಿಗೆ ಮನೆಯವರ ಪ್ರೀತಿಯೇ ಇಲ್ಲ, ಮನೆಯವರೆ ಗೌರಿ ಲೈಫ್ ಗೆ ವಿಲ್ಲನ್ ಗಳು. ಇಂಥ ಗೌರಿಗೆ ಒಂದು ರೀತಿಯಲ್ಲಿ ಪ್ರೀತಿ ಸಿಕ್ಕಿದ್ದು ಅಪ್ಪು ಇಂದ. ಇತ್ತ ಅಪ್ಪು ಖಡಕ್ ಆದ ಕೋಪಿಷ್ಠ ಹಳ್ಳಿ ಹುಡುಗ. ಅಮ್ಮನ ಆರೋಗ್ಯದ ಕಾರಣಕ್ಕೆ ಗೌರಿಯನ್ನು ಪ್ರೀತಿಸುತ್ತಿರುವುದಾಗಿ ಸುಳ್ಳು ಹೇಳಿ, ಅವಳಲ್ಲಿ ಕೂಡ ಪ್ರೀತಿ ಮೂಡುವ ಹಾಗೆ ಮಾಡಿದ ಅಪ್ಪು, ಅಮ್ಮನ ವಿರೋಧವನ್ನೇ ಕಟ್ಟಿಕೊಂಡು, ಗೌರಿಯನ್ನು ಮದುವೆಯಾಗುತ್ತಾನೆ. ನಂತರ ಗೌರಿಯ ಮೇಲೆ ನಿಜವಾಗಿಯು ಪ್ರೀತಿ ಶುರುವಾಗುತ್ತದೆ. ಇತ್ತ ಅಪ್ಪು ಅಮ್ಮ ಮಂಗಳಮ್ಮ ಪಾತ್ರ ಸಹ ಅಷ್ಟೇ ಪ್ರಾಮುಖ್ಯತೆ ಹೊಂದಿದ್ದ ಪಾತ್ರ, ಗೌರಿಯನ್ನು ಆರಂಭದಲ್ಲಿ ಒಪ್ಪಿಕೊಳ್ಳದೆ ಹೋದರು, ಗೌರಿಯ ಒಳ್ಳೇತನ ಮಂಗಳಮ್ಮನ ಮನಸ್ಸನ್ನು ಕರಗಿಸಿತ್ತು.
ಉತ್ತಮ ಸಂಬಂಧಗಳನ್ನು ಕಾಯ್ದುಕೊಳ್ಳಲು, ವಯಸ್ಸಾದ ಕಾಲದಲ್ಲಿ ನೆಮ್ಮದಿಯಾಗಿ ಬದುಕಲು ಕೌಟುಂಬಿಕ ವಿವಾದಗಳನ್ನು ನಿರ್ವಹಿಸಿದ ಕರ್ನಾಟಕ ಉಚ್ಚ ನ್ಯಾಯಲಯದಲ್ಲಿ ಹಿರಿಯ ವಕೀಲರಾಗಿ ಸೇವೆ ಸಲ್ಲಿಸುತ್ತಿರುವ ಶ್ರೀಮತಿ ಸುಶೀಲರವರು ಕೊಟ್ಟಿದ್ದಾರೆನ್ನುವ ಸಲಹೆಗಳು ಇಲ್ಲಿವೆ.
ಸಂಗಾತಿಯ ಚುಚ್ಚು ಮಾತುಗಳಿಂದ ನರಳಬೇಡಿ..!
ಗೌರಿಯನ್ನು ಮನಸ್ಪೂರ್ತಿಯಾಗಿ ಒಪ್ಪಿಕೊಂಡಳು ಮಂಗಳಮ್ಮ. ಗೌರಿಯ ತಾಯಿಯ ಪ್ರೀತಿಯನ್ನು ಕಾಣದೇ, ತಾಯಿಯನ್ನು ಕಳೆದುಕೊಂಡು ಬೆಳೆದ ಹುಡುಗಿ. ಆ ತಾಯಿಯ ಪ್ರೀತಿಯನ್ನ ಸ್ವಂತ ಅಜ್ಜಿ ಕೂಡ ಕೊಡದೇ ಇದ್ದಾಗ, ಅತ್ತೆಯಾಗಿದ್ದ ಮಂಗಳಮ್ಮನೆ ಗೌರಿಗೆ ತಾಯಿಯ ಪ್ರೀತಿಯನ್ನು ಸಹ ಕೊಟ್ಟವರು. ಹೀಗೆ ವಿಭಿನ್ನವಾಗಿ ಜನರಿಗೆ ಇಷ್ಟವಾಗುವ ಹಾಗಿದ್ದ ಶ್ರೀಗೌರಿ ಧಾರಾವಾಹಿ ಇದ್ದಕ್ಕಿದ್ದಂತೆ ಅಂತ್ಯವಾಗಲಿದೆ. ಇಂದು ಶ್ರೀಗೌರಿ ಧಾರಾವಾಹಿಯ ಕೊನೆಯ ಸಂಚಿಕೆ ಪ್ರಸಾರವಾಗಲಿದೆ. ಇದರಿಂದ ನಟಿ ಅಮೂಲ್ಯ ಅವರ ಫ್ಯಾನ್ಸ್ ಬೇಸರಗೊಂಡಿದ್ದಾರೆ. ಚೆನ್ನಾಗಿ ಹೋಗುತ್ತಿದ್ದ ಕಥೆಯನ್ನು ನಿಲ್ಲಿಸಿದ್ದು ಯಾಕೆ ಎನ್ನುವ ಕುತೂಹಲ ಜನರಲ್ಲಿ ಶುರುವಾಗಿದೆ..

ಹೌದು, ನಾಳೆ ಸೋಮವಾರದಿಂದ ರಾತ್ರಿ 8:30ಕ್ಕೆ ಹೊಸ ಹಾರರ್ ಧಾರಾವಾಹಿ ನೂರು ಜನ್ಮಕೂ ಪ್ರಸಾರವಾಗಲಿದೆ. ಆ ಧಾರಾವಾಹಿಗೆ ಜಾಗ ಕೊಟ್ಟು ಶ್ರೀಗೌರಿ ಧಾರಾವಾಹಿಯನ್ನು ಅಂತ್ಯಗೊಳಿಸಲಾಗಿದೆ. ಇದರಿಂದ ಅಮೂಲ್ಯ ಅವರ ಫ್ಯಾನ್ಸ್ ಗೆ ನಿರಾಸೆಯಾಗಿದ್ದು, ತಮ್ಮ ಮೆಚ್ಚಿನ ನಾಯಕಿಯನ್ನು ಇನ್ನು ಮುಂದೆ ಟಿವಿಯಲ್ಲಿ ನೋಡೋಕೆ ಆಗೋದಿಲ್ಲ. ಅವರನ್ನ ಮತ್ತೆ ಧಾರಾವಾಹಿಯಲ್ಲಿ ನೋಡಬೇಕು ಅಂದ್ರೆ ಇನ್ನು ಎಷ್ಟು ದಿನ ಕಾಯಬೇಕೋ ಎಂದು ಅಭಿಮಾನಿಗಳು ಬೇಸರ ಹೊರ ಹಾಕಿದ್ದಾರೆ. ಒಟ್ಟಿನಲ್ಲಿ ಕಲರ್ಸ್ ಕನ್ನಡ ವಾಹಿನಿಯ ಈ ನಿರ್ಧಾರ ಹಲವು ಅಭಿಮಾನಿಗಳಿಗೆ ನಿರಾಸೆ ಉಂಟು ಮಾಡಿದೆ.