ಬಿಗ್ ಬಾಸ್ ಸೀಸನ್ 9 ತನ್ನ ಶುರುವಿನಲ್ಲಿ ಬಹಳ ಹೈಪ್ ಪಡೆದುಕೊಂಡಿತ್ತು.ಆದರೆ ದಿನ ಕಳೆಯುತ್ತಿದ್ದಂತೆ ಅದರ ಛಾಪು ಕಳೆದುಕೊಳ್ಳುತ್ತಿದೆ.ಈ ಸೀಸನ್ ನ ನವೀನರ ಹಾಗೂ ಪ್ರವೀಣರ ಆಟ ಬಹಳ ಕುತೂಹಲ ಹಾಗೂ ರೋಚಕ ವಾಗಿರಬಹುದು ಎಂದು ಪ್ರೇಕ್ಷಕರು ಬಯಸಿದ್ದರು.ಆದರೆ ದಿನೇ ದಿನೇ ಪ್ರೇಕ್ಷಕರ ಎಸ್ಪಿಏಕಟೇಶನ್ ತುಂಬಲಾರದೆ ಬಿಗ್ ಬಾಸ್ ಸೀಸನ್ 9 ವೀಕ್ಷಕರ ಸಂಖ್ಯೆ ಕಡಿಮೆ ಮಾಡಿಕೊಂಡಿತ್ತು.ಆದರೆ ಇದೀಗ ಅಲ್ಲಿನ ಸ್ಫರ್ದಿಗಳು ಮನೋರಂಜನೆ ನೀಡುವಲ್ಲಿ ವಿಫಲರಾದ ಕಾರಣ ಬಿಗ್ ಬಾಸ್ ತಮ್ಮ ಚಾತುರ್ಯತೆ ಯಿಂದ ಅಲ್ಲಿನ ಬಿಗ್ ಬಾಸ್ ಸ್ಪರ್ದಿಗಳಿಂದ ಮನೋರಂಜನೆ ದುಪ್ಪಟ್ಟು ಮಾಡುವಂತಹ ಟಾಸ್ಕ್ ನೀಡುತ್ತಿದ್ದಾರೆ.

ಸಾಮಾನ್ಯವಾಗಿ ಬಿಗ್ ಬಾಸ್ ದೊಡ್ಡ ಮನೆ ಎಂದ ಕೂಡಲೇ ರಾಯಲ್ ಲೈಫ್ ಹಾಗೂ ರಾಯಲ್ ಆಗಿಯೇ ವಾತಾವರಣ ಕೊಡ ಇರತ್ತದೆ.ವಾರದ ಮೂರು ದಿನ ಅಷ್ಟೇ ಟಾಸ್ಕ್ ಎಂದೆಲ್ಲಾ ಹೊರಗಿನ ಜನ ಅನಿಸಿಕೆ ಎತ್ತಿಕೊಂಡಿರುತ್ತಾರೆ.ಆದರೆ ಅದರ ನೈಜತೆ ಅನುಭವಿಸಿದವರಿಗೆ ಮಾತ್ರ ತಿಳಿದಿದೆ.ಇನ್ನು ಇಲ್ಲಿಗೆ ಬಂದು ಹೋದವರಿಗೆ ತಮ್ಮ ಜೀವನದಲ್ಲಿ ಕಲಿಸುವ ಪಾಠ ಇಡೀ ಜೀವನದ ವರೆಗೂ ಅನುಸರಿಸುವಂತೆ ಮಾಡುತ್ತದೆ.ಇಲ್ಲಿ ಬಂದವರಿಗೆ ಸಮಯದ ಊಟದ ಸಂಭದ ಎಲ್ಲದಕ್ಕಿಂತ ಹೆಚ್ಚಾಗಿ ತಮ್ಮ ಬೆಲೆ ಯನ್ನು ತಿಳಿದುಕೊಳ್ಳುವ ಒಂದು ಅದ್ಭುತ ವೇದಿಕೆ ಎಂದರೆ ತಪ್ಪಾಗಲಾರದು.
ಈ ಬಾರಿ ಬಿಗ್ ಬಾಸ್ ಸೀಸನ್ ಒಂಬತ್ತು ಬಹಳ ಕ್ಲಿಷ್ಟ ವಾದ ಟಾಸ್ಕ್ ನೀಡುತ್ತಿದ್ದಾರೆ.ಇದೀಗ ಅದೇ ಸಾಲಿಗೆ ಕಾಡು ಮನುಷಯರ ಜೀವನ ವನ್ನು ಅನುಭವ ಮಾಡುವಂಥ ಟಾಸ್ಕ್ ನೀಡಿದ್ದಾರೆ ಬಿಗ್ ಬಾಸ್.ಈ ವಾರ ಮನೆ ಮಂದಿ ಎದ್ದೇಳುತ್ತಿದ್ದಂತೆ ಎಲ್ಲರಿಗೂ ಅಚ್ಚರಿ ಕಾದಿತ್ತು.ಸುಂದರವಾಗಿದ್ದ ಗಾರ್ಡನ್ ಏರಿಯಾ ಕಾಡಾಗಿ ಬದಲಾಗಿತ್ತು.ಇದೇನಿದು ಎಂದು ಯೋಚಿಸುವಷ್ಟರಲ್ಲಿ ಬಿಗ್ ಬಾಸ್ ಎಲ್ಲರೂ ಗಾರ್ಡನ್ ಏರಿಯಾಗೆ ಬರಲು ಅದೇಶಿಸುತ್ತಾರೆ.ಆಗ ಬಿಗ್ ಬಾಸ್ ಕೊಟ್ಟ ಟ್ವಿಸ್ಟ್ ಮನೆಯವರು ಆರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.
ಬಿಗ್ ಬಾಸ್ ತಿಳಿಸಿರುವ ಹಾಗೆ ಮನೆಯ ಮಂದಿ ಇನ್ನು ಮೂರು ದಿನಗಳ ಕಾಲ ಗಾರ್ಡನ್ ಏರಿಯಾದಲ್ಲಿ ಕಾಡು ಮನುಷ್ಯರಂತೆ ವಾಸಿಸಬೇಕು.ಮನೆಯ ಎಲ್ಲಾ ಮೂಳೆಗಳನ್ನು ಲಾಕ್ ಮಾಡಲಾಗಿದೆ.ಮಲಗುವುದು ಕೂರುವುದು ಎಲ್ಲವೂ ಗಾರ್ಡನ್ ನಲ್ಲಿಯೇ.ಇನ್ನು ಊಟದ ವಿಚಾರಕ್ಕೆ ಬಂದರೆ ಮನೆಯಲ್ಲಿರುವ ತರಕಾರಿ ಮನೆಯೊಳಗೆ ಲಾಕ್ ಆಗಿದೆ.ಬೆಳಿಗ್ಗಿನ ಉಪಹಾರಕ್ಕೆ ಮಾತ್ರ ಬೆಳೆ ಮತ್ತು ಅಕ್ಕಿಯನ್ನು ಕಳಿಸಿಕೊಡಲಾಗಿತ್ತು.ಆಗ ಅದರಿಂದ ಬೆಳೆಕಟ್ಟು ಅನ್ನ ತಿಂದು ತೃಪ್ತಿ ಪಟ್ಟುಕೊಂಡರು.ಮದ್ಯಾನಕ್ಕೆ ಏನಪ್ಪಾ ಎನ್ನುತ್ತಿದ್ದಂತೆ.
ಬಿಗ್ ಬಾಸ್ ನಿಮಗೆ ಸೌಕರ್ಯಗಳನ್ನು ಪಡೆಯಲು ಟಾಸ್ಕ್ ನೀಡಲಾಗುತ್ತದೆ ಗೆದ್ದರೆ ಮಾತ್ರ ಆ ಸೌಕರ್ಯ ನಿಮ್ಮದಾಗುತ್ತದೆ ಎಂದು ಆದೇಶ ಕೊಟ್ಟರು.ಆಗ ಕೊಟ್ಟ ಟಾಸ್ಕ್ ನನ್ನು ಸೋತ ಮನೆ ಮಂದಿ ಮುಂದೆ ಏನಪ್ಪಾ ಗತಿ ಎಂದು ತಲೆ ಮೇಲೆ ಕೈ ಇಟ್ಟು ಕೂತಾಗ. ವೈಲ್ಡ್ ಕಾರ್ಡ್ ಎಂಟ್ರಿ ಪಡೆದ “ದೀಪಿಕಾ ದಾಸ್” ಕ್ಯಾಪ್ಸಿಕಂ ಗೆದ್ದು ಕೊಟ್ಟರು.ಆಗ ಉಪ್ಪಿನಲ್ಲಿ ಉರಿದು ಅನ್ನಕ್ಕೆ ಬೆರಸಿ ತಿಂದ ಸ್ಪಿರದಿಗಳ ಮುಖದಲ್ಲಿ ನಾನಾ ತರಹದ ಭಾವನೆಗಳನ್ನು ನಾವು ಕಂಡೆವು.ಇನ್ನು ಕೆಲವರು ಕ್ಯಾಮೆರಾ ಮುಂದೆ ಬಂದು ಬಿಗ್ ಬಾಸ್ ಗೆ ಊಟ ಕಲ್ಪಿಸಿಕೊಡಿ ಎಂದು ಮನವಿ ಮಾಡುತ್ತಿದ್ದರು.