ರಾಕಿಂಗ್ ಸ್ಟಾರ್ ಯಶ್ ಅವರು ಎಷ್ಟು ಒಳ್ಳೆಯ ಡ್ಯಾನ್ಸರ್ ಎಂದು ನಮಗೆಲ್ಲಾ ಗೊತ್ತೇ ಇದೆ. ಸ್ಯಾಂಡಲ್ ವುಡ್ ನಲ್ಲಿರುವ ಒಳ್ಳೆಯ ಡ್ಯಾನ್ಸರ್ ಗಳಲ್ಲಿ ಇವರು ಕೂಡ ಒಬ್ಬರು. ಯಶ್ ಅವರು ಹಿಂದಿನ ಹಲವು ಸಿನಿಮಾಗಳಲ್ಲಿ ಅದ್ಭುತವಾಗಿ ಡ್ಯಾನ್ಸ್ ಮಾಡಿರುವುದನ್ನು ನೋಡಿದ್ದೇವೆ. ಇದೀಗ ಶಿವಣ್ಣ ಅವರ ಟಗರು ಬಂತು ಟಗರು ಹಾಡಿಗೆ ಹೆಜ್ಜೆ ಹಾಕಿದ್ದಾರೆ. ರಾಕಿ ಭಾಯ್ ಡ್ಯಾನ್ಸ್ ನೋಡಿ ಅಭಿಮಾನಿಗಳು ಫಿದಾ ಆಗಿದ್ದು, ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ..
ಮೊನ್ನೆಯಷ್ಟೇ ರಾಕಿ ಭಾಯ್ ಹಾಗೂ ರಾಧಿಕಾ ಪಂಡಿತ್ ದಂಪತಿಯ ಮಗ ಯಥರ್ವ್ 5ನೇ ವರ್ಷದ ಹುಟ್ಟುಹಬ್ಬ ನಡೆದಿದೆ. ಮಗನ ಹುಟ್ಟುಹಬ್ಬವನ್ನು ದೊಡ್ಡದಾಗಿ ಆಚರಣೆ ಮಾಡಿದ್ದಾರೆ ರಾಕಿ ಭಾಯ್. ಈ ಕಾರ್ಯಕ್ರಮದಲ್ಲಿ ರಾಧಿಕಾ ಅವರು ಹಾಗೂ ಯಶ್ ಅವರ ಫ್ರೆಂಡ್ಸ್ ಕೂಡ ಇದ್ದಾರೆ. ಮಗನ ಬರ್ತ್ ಡೇ ಸೆಲೆಬ್ರೇಷನ್ ನಲ್ಲಿ ಟಗರು ಸಿನಿಮಾದ ಟಗರು ಬಂತು ಟಗರು ಹಾಡಿಗೆ ಸೂಪರ್ ಆಗಿ ಡ್ಯಾನ್ಸ್ ಮಾಡಿದ್ದಾರೆ.

ಯಶ್ ಅವರ ಸ್ಟೆಪ್ಸ್ ನೋಡಿ, ಸೋಶಿಯಲ್ ಮೀಡಿಯಾ ಶೇಕ್ ಆಗಿದೆ ಎಂದರೆ ತಪ್ಪಲ್ಲ. ಎಲ್ಲೆಡೆ ಈಗ ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ. ಇನ್ನು ಯಶ್ ಅವರ ಕೆರಿಯರ್ ಬಗ್ಗೆ ಅಂತೂ ನಮಗೆಲ್ಲಾ ಗೊತ್ತೇ ಇದೆ. ಕೆಜಿಎಫ್2 ಸಿನಿಮಾ ಸೂಪರ್ ಹಿಟ್ ಆದ ನಂತರ ಯಶ್ ಅವರು ದೊಡ್ಡ ಗ್ಯಾಪ್ ತೆಗೆದುಕೊಂಡು ಮಾಸ್ಟರ್ ಪ್ಲಾನ್ ಮಾಡಿ, ಟಾಕ್ಸಿಕ್ ಸಿನಿಮಾ ಮೂಲಕ ಮುಂದಿನ ವರ್ಷ ತೆರೆಮೇಲೆ ಬರಲಿದ್ದಾರೆ.
ಈ ಸಿನಿಮಾಗೆ ಮಲಯಾಳಂ ನ ಪ್ರತಿಭಾನ್ವಿತ ಮಹಿಳಾ ಡೈರೆಕ್ಟರ್ ಗೀತು ಮೋಹನ್ ದಾಸ್ ಅವರು ನಿರ್ದೇಶನ ಮಾಡುತ್ತಿದ್ದು, ಭಾರತ ಚಿತ್ರರಂಗದ ಹಲವು ಸೂಪರ್ ಸ್ಟಾರ್ ಗಳು ಈ ಸಿನಿಮಾದಲ್ಲಿ ನಟಿಸಲಿದ್ದಾರೆ ಎಂದು ತಿಳಿದುಬಂದಿದೆ. ಯಶ್ ಅವರು ಸಿನಿಮಾ ಶೂಟಿಂಗ್ ನಲ್ಲಿ ಪಾಲ್ಗೊಳ್ಳುವುದರ ಜೊತೆಗೆ ಮನೆಯವರ ಬಗ್ಗೆ ಕೂಡ ಗಮನ ಹರಿಸುತ್ತಿದ್ದಾರೆ. ಮಕ್ಕಳ ಬರ್ತ್ ಡೇ, ಹಬ್ಬ ಇಂಥ ವಿಶೇಷ ದಿನಗಳನ್ನು ಯಶ್ ಅವರು ಮಿಸ್ ಮಾಡಿಕೊಳ್ಳುವುದಿಲ್ಲ. ಮಕ್ಕಳೊಡನೆ ಬಹಳ ಪ್ರೀತಿಯಿಂದ ಇರುತ್ತಾರೆ..
ಯಶ್ ಅವರು ಪಕ್ಕಾ ಫ್ಯಾಮಿಲಿ ಮ್ಯಾನ್, ಪತ್ನಿ ರಾಧಿಕಾ ಅವರನ್ನು ಎಷ್ಟು ಪ್ರೀತಿ ಮಾಡುತ್ತಾರೆ ಎಂದು ನಮಗೆಲ್ಲಾ ಗೊತ್ತೇ ಇದೆ. ಇನ್ನು ಸೋಶಿಯಲ್ ಮೀಡಿಯಾದಲ್ಲಿ ಆಗಾಗ ಕೆಲವು ವಿಚಾರಗಳನ್ನು ಶೇರ್ ಮಾಡಿಕೊಳ್ಳುತ್ತಾರೆ ಯಶ್. ಮಕ್ಕಳೊಡನೆ ಇವರು ಸಮಯ ಕಳೆಯುವ ಫೋಟೋಸ್ ಮತ್ತು ವಿಡಿಯೋಗಳು ಸಿಕ್ಕಾಪಟ್ಟೆ ವೈರಲ್ ಆಗುತ್ತದೆ.