ಮಲ್ಟಿಫ್ಲೆಕ್ಸ್ ಗಳಲ್ಲಿ ದರ ನಿಗದಿ ಮಾಡಬೇಕು ಎಂಬ ಕೂಗು ಹಿಂದಿನಿಂದಲೂ ಇತ್ತು. ಆದರ ಅದನ್ನ ಕಾರ್ಯಗತ ಮಾಡಲು ಸರ್ಕಾರಗಳ ಕೈಲಿ ಆಗಿರಲಿಲ್ಲ. ಈ ಬಾರಿ ಧೃಡ ನಿರ್ಧಾರ ಮಾಡಿದ್ದ ಸಿಎಂ ಸಿದ್ದರಾಮಯ್ಯ ದರ ನಿಗದಿ ಮಾಡಿಯೇ ಬಿಟ್ರು. ಮಲ್ಟಿಪ್ಲೆಕ್ಸ್ ಸೇರಿದಂತೆ ಎಲ್ಲಾ ಥಿಯೇಟರ್ಗಳಲ್ಲಿ ಟಿಕೆಟ್ ದರವನ್ನು ರೂ.ಗೆ ಮಿತಿಗೊಳಿಸುವುದಾಗಿ ಸಿಎಂ ಮೊನ್ನೆ ನಡೆದ ಬಜೆಟ್ ಮಂಡನೆ ದಿನ ಘೋಷಿಸಿದ್ದಾರೆ.

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಹಿಂದಿನ ಅವಧಿಯಲ್ಲೇ ಇದನ್ನ ಮಾಡಲಾಗಿತ್ತು. ಆದರೆ ಈ ಕುರಿತು ಹೊರಡಿಸಿದ ಆದೇಶವನ್ನು ನ್ಯಾಯಾಲಯದ ಮುಂದೆ ಪ್ರಶ್ನಿಸಲಾಗಿತ್ತು. ಹೀಗಾಗಿ ಅದನ್ನು ಕಾರ್ಯಗತಗೊಳಿಸಲು ಸಾಧ್ಯವಾಗಿರಲಿಲ್ಲ, ಈ ಬಾರಿ ಮಂಡಿಸಿರುವ ಬಜೆಟ್ ನಲ್ಲಿ ದರ ನಿಗದಿ ಮಾಡಿದ್ದಾರೆ ಸಿಎಂ.

ಸದ್ಯ ಘೋಷಣೆ ಏನೋ ಆಗಿದೆ ಆದರೆ ಅದರ ಅನುಷ್ಠಾನ ಯಾವಾಗ ಅನ್ನೋದೆ ಸದ್ಯಕ್ಕಿರೋ ಪ್ರಶ್ನೆ. ಇತ್ತ ಈ ವಿಚಾರವಾಗಿ ಒಂದಿಷ್ಟು ಹಳೆಯ ಘಟನೆಗಳನ್ನ ಮೆಲಕು ಹಾಕಿದ್ದಾರೆ ರಾಜೇಂದ್ರ ಸಿಂಗ್ ಬಾಬು. ಐದಾರು ಕೊಡುಗೆ ಒಂದೇ ಬಾರಿ ಕೊಟ್ಟಿದ್ದಾರೆ ಅಂದರೆ ಅದು ಸಿದ್ದರಾಮಯ್ಯ. ಹಿಂದೆ ಅವರು ಸಿಎಂ ಆಗಿದ್ದಾಗಲೂ ನಮ್ಮ ಬಳಿ ಮಾತನಾಡುತ್ತಿದ್ದರು. ಆಗ ಒಂದು ಸಭೆ ನಡೆದಿತ್ತು. ಆಗ ಪರಭಾಷೆ ಸಿನಿಮಾಗಳು ನಾಲ್ಕು ವಾರದ ಬಳಿಕ ಇಲ್ಲಿಗೆ ಬರಬೇಕು ಅಂತ ಆರ್ಡರ್ ಪಾಸ್ ಮಾಡಲು ಮುಂದಾದರು. ಆಗ ನಮ್ಮವರೇ ಸ್ವಲ್ಪ ಜನ ರಾಜಕುಮಾರ್ ಬೆನ್ನಿಗೆ ಚೂರಿ ಹಾಕಿದರು. ಈ ಆರ್ಡರ್ ಗೆ ಕೋರ್ಟ್ ನಿಂದ ಸ್ಟೇ ತಂದರು. ಅಂತವರೇ ಇರೋದು ಅಂತ ಕೆಲ ಸಿನಿಮಾ ಮಂದಿ ವಿರುದ್ದ ಗುಡುಗಿದರು.

ಇನ್ನು ಮೈಸೂರಿನಲ್ಲಿ ಅಂತಾರಾಷ್ಟ್ರೀಯ ಮಟ್ಟದ ಫಿಲ್ಮ್ ಸಿಟಿಯನ್ನು ಅಭಿವೃದ್ಧಿಪಡಿಸಲು 150 ಎಕರೆ ಜಾಗವನ್ನು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಗೆ ವರ್ಗಾಯಿಸಿ 500 ಕೋಟಿ ರೂ. ವೆಚ್ಚದಲ್ಲಿ ಸಾರ್ವಜನಿಕ ಖಾಸಗಿ ಸಹಭಾಗಿತ್ವ ಮಾದರಿಯಲ್ಲಿ ಪಿಲ್ಮ್ ಸಿಟಿ ನಿರ್ಮಾಣ ಮಾಡಲು ಬಜೆಟ್ ನಲ್ಲಿ ಘೋಷಣೆ ಮಾಡಲಾಗಿದೆ. ಈ ಬಗ್ಗೆಯೂ ರಾಜೇಂದ್ರ ಸಿಂಗ್ ಬಾಬು ಮಾತನಾಡಿದ್ದಾರೆ.

2013 ರಲ್ಲಿ ಈ ವಿಚಾರ ಚರ್ಚೆಗೆ ಬಂತು. ಅಲ್ಲಿ ಫಿಲ್ಮ್ ಸಿಟಿ ಮಾಡಬೇಕು ಅಂತ ಮಹದೇವಪ್ಪ ಹೇಳಿದ್ದರು. ಅವರು ಕೊಟ್ಟ ಚೀಟಿಯನ್ನ ನಾನು ಸಿಎಂ ಬಳಿ ತಂದು ಕೊಟ್ಟೆ. ತಕ್ಷಣ ಸಿಎಂ ಸಭೆ ಮಾಡಿದರು. ಸಭೆ ಬಳಿಕ ಜಾಗ ಹುಡುಕಲು ಅಂದಿನ ಜಿಲ್ಲಾಧಿಕಾರಿಗೆ ಹೇಳಿದರು. ಆದರೆ ಬಳಿಕ ಕಾಂಗ್ರೆಸ್ ಸರಕಾರ ಬರಲಿಲ್ಲ. ಕುಮಾರಸ್ವಾಮಿ ರಾಮನಗರಕ್ಕೆ ಇದು ಬೇಕು ಅಂದರು. ಆದರೆ ನಾನು ಸುತ್ತೂರು ಶ್ರೀಗಳನ್ನ ಭೇಟಿ ಮಾಡಿ ಇದರ ಬಗ್ಗೆ ಮಾತಾಡಿದ್ವಿ. ಆಗ ಸುತ್ತೂರು ಶ್ರೀಗಳು ಇದನ್ನ ಮಾಡಲು ಮುಂದಾದರು. ಆದರೆ ದುರಾದೃಷ್ಟಾತ್ ಆಗಲೂ ಆಗಲಿಲ್ಲ.
ಈಗ ಸಿದ್ದರಾಮಯ್ಯರೇ ಬಂದಿದ್ದರಿಂದ ಅವರೇ ಮಾಡುವಂತೆ ಆಗಿದೆ. ಮಲ್ಟಿಫೆಕ್ಸ್ ದು ಅಬ್ಬರ ಜೋರಾಗಿತ್ತು. ಎಷ್ಟು ಬೇಕೋ ಅಷ್ಟು ದರ ಏರಿಕೆ ಮಾಡ್ತಾ ಇದ್ರು. ಆದರೆ ಈಗ ಸಿದ್ದರಾಮಯ್ಯ ಒಂದು ದರ ನಿಗದಿ ಮಾಡಿದ್ದಾರೆ.