ಒಂದು ಮೊಟ್ಟೆಯ ಕಥೆ ಖ್ಯಾತಿಯ ರಾಜ್ ಬಿ ಶೆಟ್ಟಿ ಮತ್ತೊಂದು ಸಿನಿಮಾದ ಮೂಲಕ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ಶೆಟ್ರು ಈ ವರೆಗೂ ರೋಮಾಂಚನಗೊಳ್ಳುವ ಅದ್ಭುತ ಸಿನಿಮಾಗಳನ್ನೇ ಹೆಚ್ಚಾಗಿ ಮಾಡಿಕೊಂಡು ಬಂದಿದ್ದಾರೆ. ಬೇರೆ ಚಿತ್ರರಂಗ ಕನ್ನಡ ಸಿನಿಮಾವನ್ನು ನೋಡುವಂತೆ ಮಾಡಿದ್ದಾರೆ. ಗರುಡ ಗಮನ ವೃಷಭ ವಾಹನ ಸಿನಿಮಾದ ಮೂಲಕ ಎಲ್ಲರನ್ನೂ ಕನ್ನಡ ಚಿತ್ರರಂಗದೆಡೆಗೆ ತಿರುಗಿ ನೋಡುವಂತೆ ಮಾಡಿದವರು ರಾಜ್ ಬಿ ಶೆಟ್ಟಿ. ಇದೀಗ ತನ್ನ ಹೊಚ್ಚ ಹೊಸ ಸಿನಿಮಾ “ಟೋಬಿ “ಯ ಮೂಲಕ ಮತ್ತೊಮ್ಮೆ ಕನ್ನಡ ಚಿತ್ರರಂಗದಲ್ಲಿ ಧೂಳೆಬ್ಬಿಸಲು ಸಿದ್ದರಾಗಿದ್ದಾರೆ.

ಈ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಿದೆ. ಪೋಸ್ಟರ್ ನಲ್ಲಿ ರಾಜ್ ಬಿ ಶೆಟ್ಟಿ ಮೂಗುತಿ ಧರಿಸಿದ್ದಾರೆ ಹಾಗೂ ಹಣೆಯ ಮೇಲೆ ಗಾಯ ಎದ್ದು ಕಾಣುತ್ತಿದೆ ಜೊತೆಗೆ ಬದಿಯಲ್ಲಿ ಹಾಗೆಯೇ ಕಾಣುವ ಕುರಿಯ ಚಿತ್ರವೂ ಇದೆ. ಪೋಸ್ಟರ್ ನಲ್ಲಿರುವ ಶೆಟ್ರ ಖಡಕ್ ಲುಕ್ ಗೆ ಈಗಾಗಲೇ ಅಭಿಮಾನಿಗಳು ಹುಬ್ಬೇರಿಸಿದ್ದಾರೆ. ಫಸ್ಟ್ ಲುಕ್ ನಲ್ಲಿ ಬಳಸಿರುವ ಹಿನ್ನೆಲೆ ಸಂಗೀತ ಹಾಗೂ ರಾಜ್ ಬಿ ಶೆಟ್ಟಿ ಯ ಮೂಗುತಿಗೆ ಜನ ಈಗಾಗಲೇ ಮೆಚ್ಚುಗೆಯನ್ನೂ ವ್ಯಕ್ತ ಪಡಿಸಿದ್ದಾರೆ. ತನ್ನ ಈ ವರೆಗಿನ ಎಲ್ಲಾ ಸಿನಿಮಾದಲ್ಲೂ ಒಂದೊಂದು ವಿಶೇಷತೆ ಇರುತ್ತಿತ್ತು.
ಒಂದು ಮೊಟ್ಟೆಯ ಕಥೆಯಲ್ಲಿ ಡಾ. ರಾಜ್ ಕುಮಾರ್ ಅಭಿಮಾನಿಯಾಗಿ, ಗರುಡ ಗಮನದಲ್ಲಿ ಹುಲಿ ನೃತ್ಯ ದ ಮೂಲಕ ಎಲ್ಲರ ಗಮನ ಸೆಳೆದಿದ್ದರು. ಈ ಸಿನಿಮಾದಲ್ಲೂ ವಿಶೇಷತೆ ಮೆರೆಯಲು ಮೂಗುತಿಯನ್ನು ಬಳಸಿದ್ದಾರೆ. ತನ್ನ ಎಲ್ಲಾ ಸಿನಿಮಾದಲ್ಲೂ ಒಂದೊಂದು ವಿಷಯಕ್ಕೂ ಒಂದೊಂದು ಕಥೆ ಇತ್ತು.ಈ ಸಿನಿಮಾದಲ್ಲಿ ಮೂಗುತಿಯ ಹಿಂದಿನ ಕಥೆ ಏನೆಂಬುದನ್ನು ಕಾದು ನೋಡಬೇಕಿದೆ. ಕುರಿಗೂ, ರಾಜ್ ಬಿ ಶೆಟ್ಟಿ ಗೂ ಒಂದೇ ರೀತಿಯ ಮೂಗುತಿ ಏಕಿದೆ? ಇದರ ಹಿಂದಿನ ಕಥೆ ಏನು? ಇವೆಲ್ಲವನ್ನೂ ಸಿನಿಮಾ ನೋಡಿಯೇ ತಿಳಿದುಕೊಳ್ಳಬೇಕು. ಎಲ್ಲಕಿಂತ ಮುಖ್ಯವಾಗಿ ರಾಜ್ ಬಿ ಶೆಟ್ಟಿ ಈ ಸಿನಿಮಾಕ್ಕಾಗಿಯೇ ಮೂಗು ಚುಚ್ಚಿಸಿ ಕೊಂಡಿದ್ದಾರೆ.
ಇದು ನೋಡುಗರಿಗೆ ಹುಚ್ಚು ಎನಿಸಬಹುದು. ಆದರೆ ಇದರ ಹಿಂದೆಯೂ ಒಂದು ದೊಡ್ಡ ಕಥೆ ಇರಬಹುದು. ಅಚ್ಚರಿ ಏನೆಂದರೆ ಸಿನಿಮಾ ಶೂಟಿಂಗ್ ಗೂ ಮೊದಲೇ ಪೋಸ್ಟರ್ ಸಿದ್ದವಾಗಿತ್ತು. ಚಿತ್ರೀಕರಣ ಸಂಪೂರ್ಣವಾದ ಮೇಲೆ ಪೋಸ್ಟರ್ ಅನ್ನು ಬಿಡುಗಡೆ ಮಾಡಿದ್ದಾರೆ. ಈ ಪೋಸ್ಟರ್ ಅನ್ನು ಮಂಗಳೂರಿನ ಕೈಕುಲ್ಲಸ್ ಸ್ಟುಡಿಯೋಸ್ ನವರು ತಯಾರು ಮಾಡಿಕೊಟ್ಟಿದ್ದಾರೆ. ಇವರು ಕಲಾವಿದರಾಗಿರುವಿದರಿಂದ ರಾಜ್ ಬಿ ಶೆಟ್ಟಿ ಇವರಲ್ಲೇ ಪೋಸ್ಟರ್ ನ ಕಾಂಟ್ರಾಕ್ಟ್ ವಹಿಸಿ ಕೊಟ್ಟಿದ್ದಾರೆ. ಖಡಕ್ ಲುಕ್ ನ “ಟೋಬಿ “ಸಿನಿಮಾ ಆಗಸ್ಟ್ 25ಕ್ಕೆ ತೆರೆ ಕಾಣಲಿದೆ ಎಂದು ರಾಜ್ ಬಿ ಶೆಟ್ಟಿ ತಿಳಿಸಿದ್ದಾರೆ.