ಬಿಗ್ ಬಾಸ್ ದೊಡ್ಮನೆಗೆ ಕನ್ನಡದ ಖ್ಯಾತ ನಿರೂಪಕಿ ರಾಧಾ ಹಿರೇಗೌಡರ್ ಅವರು ಎಂಟ್ರಿ ಕೊಟ್ಟಿದ್ದಾರೆ. ಇದಕ್ಕೆ ಸಂಬಂಧಿಸಿದ ಪ್ರೋಮೋವನ್ನು ಕಲರ್ಸ್ ಕನ್ನಡ ಬಿಡುಗಡೆ ಮಾಡಿದೆ. ಬಿಗ್ ಬಾಸ್ ಮನೆಯಲ್ಲಿ ನಿರೀಕ್ಷೆ ಮಾಡದೇ ಇರೋದೇ ಆಗುತ್ತಿದೆ. ರಾಜಕೀಯ ಪಕ್ಷಗಳ ಆಟವನ್ನ ಇದೀಗ ಆಡಲಾಗುತ್ತಿದೆ. ಈ ಮಧ್ಯೆ ಆಯಂಕರ್ ರಾಧಾ ಹಿರೇಗೌಡರ್ ಎಂಟ್ರಿ ಕೊಟ್ಟಿದ್ದಾರೆ.

ಮನೆಗೆ ಎಂಟ್ರಿ ಕೊಡುತ್ತಿದ್ದಂತೆ ಎಂದಿನಂತೆ ತಮ್ಮ ಖಡಕ್ ಮಾತುಗಳಿಂದಲೇ ಬಿಗ್ಬಾಸ್ ಮನೆ ಮಂದಿಗೆ ರಾಧಾ ಚಳಿ ಬಿಡಿಸಿದ್ದಾರೆ. ನೀವು ಬಂದಿದ್ದೀರಿ ಅಂದ್ರೆ ನಮಗೆ ನೀರು ಕುಡಿಸ್ತೀರಿ ಎಂದು ಸ್ಪರ್ಧಿಗಳು ಹೇಳಿದ್ದಾರೆ. ಬರ್ತಿದಂಗೆ ಬಿಗ್ಬಾಸ್ ಮನೆಯ ರಾಜಕೀಯ ಬಗ್ಗೆ ರಾಧಾ ಅವರು ತಮ್ಮ ಮೊನೆಚಾದ ಮಾತುಗಳನ್ನಾಡಿದ್ದಾರೆ. ನಮಗೆಲ್ಲ ಪಕ್ಷಗಳೆಲ್ಲ ಹೊಸದಲ್ಲ, ಭಾಷಣ ಹಾಗೂ ಜೈಕಾರ ಇದೆಲ್ಲ ಸಾಕಷ್ಟು ನೋಡಿದ್ದೀವಿ ಎಂದರು. ರಾಧಾ ಅವರು ಕೇಳಿದ ನೇರವಾದ ಪ್ರಶ್ನೆಗಳಿಗೆ ಸ್ಪರ್ಧಿಗಳು ಕಕ್ಕಾಬಿಕ್ಕಿಯಾದರು. ಅದರಲ್ಲೂ ರಾಧಾ ಅವರ ಮಾತಿಗೆ ಐಶ್ವರ್ಯಾ ಕಣ್ಣೀರಾಕಿದರು. ತಮ್ಮ ಹರಿತವಾದ ಮಾತುಗಳಿಂದಲೇ ಸ್ಪರ್ಧಿಗಳ ಎದೆಯಲ್ಲಿ ರಾಧಾ ಅವರು ನಡುಕು ಹುಟ್ಟಿದ್ದಾರೆ.
ಬಿಗ್ ಬಾಸ್ ನಲ್ಲಿ ಈ ವಾರ ಸ್ಪರ್ಧಿಗಳಿಗೆ ರಾಜಕೀಯದ ಟಾಸ್ಕ್ ನೀಡಿದ್ದಾರೆ. ಅದರಂತೆ ಎರಡು ಪಕ್ಷಗಳನ್ನು ರಚಿಸಿ ಕೆಲವು ಟಾಸ್ಕ್ ನೀಡಿದ್ದಾರೆ. ಈ ನಡುವೆ ಬಿಗ್ ಬಾಸ್ ನಲ್ಲಿ ನಡೆಯುತ್ತಿರುವ ರಾಜಕೀಯ ವಿಚಾರಿಸಿಕೊಳ್ಳಲು ಬಿಗ್ ಬಾಸ್ ನ್ಯೂಸ್ ಆಯಂಕರ್ ರಾಧಾ ಹಿರೇಗೌಡರ್ ಅವರನ್ನು ಬಿಗ್ ಬಾಸ್ ಮನೆಗೆ ಕಳುಹಿಸಿದೆ.
ರಾಧಾ ಅವರು ಸ್ಪರ್ಧಿಯಾಗಿ ಬಂದಿದ್ದಾರಾ? ಅಥವಾ ಅತಿಥಿಯಾಗಿ ಬಂದಿದ್ದಾರಾ? ಎಂಬ ಪ್ರಶ್ನೆ ಹುಟ್ಟಿಕೊಂಡಿದ್ದು, ಇದಕ್ಕೆ ಇಂದಿನ ಸಂಚಿಕೆಯಲ್ಲಿ ಉತ್ತರ ಸಿಗುವ ಸಾಧ್ಯತೆ ಇದೆ. ಒಂದು ವೇಳೆ ಸ್ಪರ್ಧಿಯಾಗಿ ಬಂದಿದ್ದರೆ ಬಿಗ್ಬಾಸ್ ಶೋಗೆ ಮತ್ತೆ ಬೂಸ್ಟ್ ಸಿಗುವ ಸಾಧ್ಯತೆ ಇದೆ.