ಪುಶ್ಪ2 ಸಿನಿಮಾಗೆ ಬಂದಿದ್ದು ಮಿಶ್ರ ಪ್ರೀತಿಕ್ರಿಯೆ, ಆದರೆ ಸಿನಿಮಾಗೆ ಇರೋ ಕ್ರೇಜ್ ಮಾತ್ರ ಕಡಿಮೆ ಆಗುತ್ತಲೇ ಇಲ್ಲ. ವಿಶ್ವದ ಹಲವೆಡೆ ತೆರೆಕಂಡಿರುವ ಪುಶ್ಪ2 ಸಿನಿಮಾ, ಹಣಗಳಿಕೆಯಲ್ಲಿ ಮುಂದಿದೆ. ಒಂದೊಂದಾಗಿ ಬೇರೆ ಸಿನಿಮಾ ರೆಕಾರ್ಡ್ ಗಳನ್ನು ಬ್ರೇಕ್ ಮಾಡುತ್ತಾ ಹೋಗುತ್ತಿದೆ ಪುಷ್ಪ2. ಇದೀಗ ಬಿಡುಗಡೆಯಾಗಿ 2ವಾರಕ್ಕೆ ಅದ್ಭುತವಾಗಿ ಗಳಿಕೆಯೊಂದಿಗೆ ಸ್ಟ್ರಾಂಗ್ ಆಗಿ ನಿಂತಿದೆ. ಪುಶ್ಪ2 ಸಿನಿಮಾ ಕ್ರೇಜ್ ವಿಚಾರದಲ್ಲಿ ದೊಡ್ಡ ಮಟ್ಟಕ್ಕೆ ತಲುಪಿದೆ. ಇದೀಗ ಈ ಸಿನಿಮಾ ಹಣಗಳಿಕೆ ಬಗ್ಗೆ ಮುಖ್ಯವಾದ ಮಾಹಿತಿ ಸಿಕ್ಕಿದ್ದು, ಪ್ರಭಾಸ್ ಅವರ ಸಿನಿಮಾ ಕಲೆಕ್ಷನ್ ಮುರಿಯುವ ಎಲ್ಲಾ ಲಕ್ಷಣ ತೋರುತ್ತಿದೆ ಪುಷ್ಪ2.

ನಟ ಅಲ್ಲು ಅರ್ಜುನ್ ಅವರ ಕೆರಿಯರ್ ನ ಅತಿದೊಡ್ಡ ಸಿನಿಮಾ ಆಗಿ ನಿಂತಿದೆ ಪುಷ್ಪ2. 2021ರಲ್ಲಿ ತೆರೆಕಂಡ ಪುಷ್ಪ1 ಸಿನಿಮಾ ಎಷ್ಟು ದೊಡ್ಡ ಕ್ರೇಜ್ ಸೃಷ್ಟಿಸಿತ್ತೋ, ಎಷ್ಟು ಹಣಗಳಿಕೆ ಮಾಡಿತ್ತೋ, ಅದಕ್ಕಿಂತ ಡಬಲ್ ಆಗಿ ಮುನ್ನುಗ್ಗುತ್ತಿದೆ ಪುಷ್ಪ2. ಹೌದು, ಡಿಸೆಂಬರ್ 5ರಂದು ಬಿಡುಗಡೆಯಾದ ಪುಷ್ಪ2, 2 ವಾರದ ಗಳಿಕೆಯಲ್ಲಿ ಬಹುತೇಕ ರೆಕಾರ್ಡ್ಸ್ ಗಳನ್ನು ಬ್ರೇಕ್ ಮಾಡಿದೆ. ಕೆಜಿಎಫ್2 ರೆಕಾರ್ಡ್ ಹಿಂದಿಕ್ಕಿ, ಇದೀಗ ಪ್ರಭಾಸ್ ಅವರ ಸಿನಿಮಾ ರೆಕಾರ್ಡ್ ಬ್ರೇಕ್ ಮಾಡುವುದಕ್ಕೆ ಸನಿಹದಲ್ಲಿದೆ. 2 ವಾರಗಳ ಕೊನೆಗೆ ಪುಷ್ಪ2 ಸಿನಿಮಾ ಬರೋಬ್ಬರಿ ₹1500 ಕೋಟಿ ಹಣಗಳಿಕೆ ಮಾಡಿದೆ ಎಂದು ಮಾಹಿತಿ ಸಿಕ್ಕಿದೆ. ಇದು ಬಹಳ ಹೆಮ್ಮೆಯ ವಿಷಯ..
ಉತ್ತಮ ಸಂಬಂಧಗಳನ್ನು ಕಾಯ್ದುಕೊಳ್ಳಲು, ವಯಸ್ಸಾದ ಕಾಲದಲ್ಲಿ ನೆಮ್ಮದಿಯಾಗಿ ಬದುಕಲು ಕೌಟುಂಬಿಕ ವಿವಾದಗಳನ್ನು ನಿರ್ವಹಿಸಿದ ಕರ್ನಾಟಕ ಉಚ್ಚ ನ್ಯಾಯಲಯದಲ್ಲಿ ಹಿರಿಯ ವಕೀಲರಾಗಿ ಸೇವೆ ಸಲ್ಲಿಸುತ್ತಿರುವ ಶ್ರೀಮತಿ ಸುಶೀಲರವರು ಕೊಟ್ಟಿದ್ದಾರೆನ್ನುವ ಸಲಹೆಗಳು ಇಲ್ಲಿವೆ.
ಸಂಗಾತಿಯ ಚುಚ್ಚು ಮಾತುಗಳಿಂದ ನರಳಬೇಡಿ..!
ದಕ್ಷಿಣ ಭಾರತದ ಒಂದು ಸಿನಿಮಾ ಈ ಮಟ್ಟಕ್ಕೆ ಯಶಸ್ವಿಯಾಗಿ, ಹೆಸರು ಮಾಡಿ, ಅದ್ಭುತವಾದ ಕ್ರೇಜ್ ನ ಜೊತೆಗೆ ಹಣಗಳಿಕೆ ಮಾಡುತ್ತಿರುವುದನ್ನು ನಾವು ಹೆಮ್ಮೆ ಪಡಬೇಕು. ಈಗಾಗಲೇ ಕೆಜಿಎಫ್2 ರೆಕಾರ್ಡ್ಸ್ ಬ್ರೇಕ್ ಮಾಡಿರುವ ಪುಷ್ಪ2, ಇದೀಗ ಬಾಹುಬಲಿ2 ಸಿನಿಮಾದ ರೆಕಾರ್ಡ್ಸ್ ಬ್ರೇಕ್ ಮಾಡುವುದಕ್ಕೆ ಸನಿಹದಲ್ಲಿದೆ. ಇದು ನಿಜಕ್ಕೂ ಐತಿಹಾಸಿಕ ವಿಚಾರ ಎಂದರೆ ತಪ್ಪಲ್ಲ. ಸಿನಿಮಾ ನೋಡಿದ ಪ್ರೇಕ್ಷಕವರ್ಗ ಅಷ್ಟೇನು ಒಳ್ಳೆಯ ಪ್ರತಿಕ್ರಿಯೆ ನೀಡಿರಲಿಲ್ಲ. ಕೆಲವರಿಗೆ ಸಿನಿಮಾ ಇಷ್ಟವಾದರೆ, ಇನ್ನು ಕೆಲವರಿಗೆ ಇಷ್ಟವಾಗಿರಲಿಲ್ಲ. ಅಲ್ಲು ಅರ್ಜುನ್ ಅವರ ಅಭಿಮಾನಿ ವಲಯಕ್ಕೆ ಇದೊಂದು ಅದ್ಭುತ ಸಿನಿಮಾ ಎನ್ನಿಸುತ್ತದೆ ಎನ್ನುವ ಅಭಿಪ್ರಾಯ ವ್ಯಕ್ತವಾಗಿತ್ತು.

ರಿವ್ಯೂ ಹೇಗೆ ಬರಲಿ, ಕಥೆ ಹೇಗೆ ಇರಲಿ.. ಪುಷ್ಪ2 ಅಬ್ಬರ ಮಾತ್ರ ಕಡಿಮೆ ಆಗುತ್ತಿಲ್ಲ. ಸಿನಿಮಾ ಬಿಡುಗಡೆ ಆದ ನಂತರ ಕೆಲವು ಅಹಿತಕರ ಘಟನೆಗಳು ಸಹ ನಡೆದು ಹೋದವು. ಆದರೆ ಅದು ಯಾವುದು ಕೂಡ ಪ್ರೇಕ್ಷಕರು ಸಿನಿಮಾ ನೋಡುವುದು ಮತ್ತು ಹಣಗಳಿಕೆಯ ಮೇಲೆ ಯಾವುದೇ ಪ್ರಭಾವ ಬೀರಿಲ್ಲ. ಪುಷ್ಪ2 ದೇಶದ ಎಲ್ಲೆಡೆ ಮಾತ್ರವಲ್ಲ, ಹೊರದೇಶದಲ್ಲಿ ಕೂಡ ಒಳ್ಳೆಯ ಪ್ರದರ್ಶನ ಕಾಣುತ್ತಾ, ದಾಖಲೆ ಮಾಡುತ್ತಿದೆ. ಸಿನಿಮಾ ನೋಡಿದ ಅಭಿಮಾನಿಗಳು ಮಾಸ್ ಮಸಾಲಾವನ್ನು ಮೆಚ್ಚಿಕೊಂಡಿದ್ದಾರೆ. ಪುಷ್ಪ2 ಎಲ್ಲಾ ರೆಕಾರ್ಡ್ಸ್ ಗಳನ್ನು ಬ್ರೇಕ್ ಮಾಡಲಿ ಎನ್ನುವುದು ಅಲ್ಲು ಅರ್ಜುನ್ ಅವರ ಅಭಿಮಾನಿಗಳ ಆಸೆ.
ಪುಷ್ಪ2 ಇಂದ ನಿರ್ದೇಶಕ ಸುಕುಮಾರ್, ನಟಿ ರಶ್ಮಿಕಾ ಹಾಗೂ ಇನ್ನು ಹಲವು ಕಲಾವಿದರಿಗೆ ಒಳ್ಳೆಯ ಅವಕಾಶಗಳು ಸಿಕ್ಕಿದೆ. ಪುಷ್ಪ2 ನಲ್ಲಿ ನಟ ಡಾಲಿ ಧನಂಜಯ್, ತಾರಕ್ ಪೊನ್ನಪ್ಪ ಸೇರಿದಂತೆ ಕನ್ನಡ ಕಲಾವಿದರು ಇದ್ದು, ಅವರಿಗೆಲ್ಲಾ ಒಳ್ಳೆಯ ಹೆಸರು ಮತ್ತು ಕೀರ್ತಿ ಸಿಕ್ಕಿದೆ ಎನ್ನುವುದು ಸಂತೋಷ ಪಡಬೇಕಾದ ವಿಷಯ. ಒಂದು ಸಿನಿಮಾ ಗೆದ್ದರೆ ಹಲವರ ಭವಿಷ್ಯ ಉಜ್ವಲವಾಗುತ್ತದೆ, ಈ ಹಿಂದೆ ಕೆಜಿಎಫ್ ಯಶಸ್ಸಿನಿಂದ ಹಲವರ ಬದುಕು ಬದಲಾಯಿತು, ಈಗ ಪುಷ್ಪ2 ಇಂದ ಇನ್ನಷ್ಟು ಕಲಾವಿದರ ಮತ್ತು ತಂತ್ರಜ್ಞರ ಬದುಕು ಬದಲಾಗುತ್ತದೆ. ಒಟ್ಟಿನಲ್ಲಿ ಎಲ್ಲರಿಗೂ ಒಳ್ಳೆಯದಾಗಲಿ.