ಭಾರತೀಯ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಉಡಾಯಿಸಿದ ಚಂದ್ರಯಾನ-3 ಯಶಸ್ಸಿಯಾಗಿ ಚಂದಿರನ ಅಂಗಳದಲ್ಲಿ ಲ್ಯಾಂಡ್ ಆಗಿದೆ. ಈ ಐತಿಹಾಸಿಕ ಕ್ಷಣಕ್ಕೆಇಡೀ ಭಾರತ ಸಾಕ್ಷಿಯಾಗಿತ್ತು. ವಿಶ್ವವೇ ಭಾರತದ ಸಾಧನೆಯನ್ನು ಕೊಂಡಾಡಿತ್ತು. ಸದ್ಯ, ಪ್ರಗ್ಯಾನ್ ರೋವರ್ ತನ್ನ ಕೆಲಸ ಆರಂಭಿಸಿದ್ದು, ಈ ವಿಡಿಯೋವನ್ನು ಇಸ್ರೋ ಹಂಚಿಕೊಂಡಿದೆ.
ಚಂದ್ರಯಾನ-3 ಚಂದ್ರನ ಅಂಗಳಕ್ಕೆ ಇಳಿದ ದಿನದಿಂದಲೂ ರೋವರ್ ಮುಂದಿನ ಕಾರ್ಯಚರಣೆ ಹೇಗಿರಲಿದೆ ಎಂಬ ಕುತೂಹಲ ಎಲ್ಲರಲ್ಲೂ ಇತ್ತು. ಇದೀಗ ಪ್ರಗ್ಯಾನ್ ರೋವರ್ ಚಂದ್ರನ ಮೇಲೆ 8ಮೀ ಸಂಚರಿಸಿದ್ದು, ಈ ವಿಡಿಯೋ ಹಂಚಿಕೊಂಡ ಇಸ್ರೋ ‘ಚಂದ್ರನ ದಕ್ಷಿಣ ಧ್ರುವದ ರಹಸ್ಯಗಳನ್ನು ಅಧ್ಯಯನ ಮಾಡುವ ನಿಮಿತ್ತ ರೋವರ್ ಸಂಚರಿಸುತ್ತಿದ್ದು, ‘ಶಿವಶಕ್ತಿ ಪಾಯಿಂಟ್’ ಸುತ್ತಲೂ ತಿರುಗುತ್ತಿದೆ ಎಂದು’ ಬಾಹ್ಯಾಯ ಸಂಸ್ಥೆ ಹೇಳಿಕೊಂಡಿದೆ.
ದಕ್ಷಿಣ ಧ್ರುವದಲ್ಲಿ ಚಂದ್ರನ ರಹಸ್ಯಗಳನ್ನು ಅಧ್ಯಯನ ಮಾಡಲು ಶಿವಶಕ್ತಿ ಪಾಯಿಂಟ್ನ ಸುತ್ತಲೂ ಪ್ರಜ್ಞಾನ್ ರೋವರ್ ತಿರುಗುತ್ತಿದೆ’ ಎಂದು ಇಸ್ರೋ ಟ್ವಿಟರ್ ನಲ್ಲಿ ಬರೆದು ವಿಡಿಯೋವನ್ನು ಹಂಚಿಕೊಂಡಿದ್ದು ,40 ಸೆಕೆಂಡ್ಗಳ ವಿಡಿಯೋದಲ್ಲಿ ರೋವರ್ ಚಂದ್ರನ ಮೇಲ್ಮೈಯಲ್ಲಿ ಚಲಿಸುತ್ತಿರುವುದನ್ನು ಕಾಣಬಹುದಾಗಿದೆ. ಜೊತೆಗೆ ಅದು ಚಲಿಸಿದ ಜಾಗದಲ್ಲಿ ಅದರ ಹೆಜ್ಜೆ ಗುರುತುಗಳೂ ಮೂಡುತ್ತಿವೆ.