ಕಳೆದ ಸುಮಾರು ವರ್ಷಗಳಿಂದ “ಪ್ರಭಾಸ್” ಸದಾ ಸುದ್ದಿಯಲ್ಲಿ ಇರುತ್ತಾರೆ. ಈ ಹಿಂದೆ ಅವರ ಪ್ಯಾನ್ ಇಂಡಿಯಾ ಸಿನಿಮಾಗಳಿಂದ ಸುದ್ದಿಯಲ್ಲಿ ಇದ್ದಾರೆ. ಕಳೆದ 5ವರ್ಷಗಳಿಂದ ಕೂಡ ಪ್ರಭಾಸ್ ಕೇವಲ ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.”ಬಾಹುಬಲಿ 1″ ಇಂದ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಗುರುತಿಸಿಕೊಂಡ ಪ್ರಭಾಸ್ ಅಲ್ಲಿಂದ ಮಾಡಿದ “ಬಾಹುಬಲಿ 2 ,ಸಾಹೋ, ರಾಧೆ ಶ್ಯಾಮ್” ಈಗ ಬಿಡುಗಡೆಗೆ ಸಜ್ಜಾಗುತ್ತಿರುವ “ಸಲಾರ್ ಹಾಗೂ ಆದಿಪುರುಷ” ಎಲ್ಲಾ ಸಿನಿಮಾಗಳು ಕೂಡ ಪ್ಯಾನ್ ಇಂಡಿಯಾ ಮಟ್ಟದಲ್ಲಿಯೇ ಬಿಡುಗಡೆ ಮಾಡುತ್ತಿದ್ದಾರೆ.

ಇನ್ನು ಅವರ ಮುಂಬರುವ ಚಿತ್ರಗಳಾದ ಸಲಾರ್ ಹಾಗೂ ಆದಿಪುರುಷ ಸಿನಿಮಾಗಾಗಿ ಬಹಳ ಸ್ಕ್ರಿಪ್ಟ್ ವರ್ಕ್ ಮಾಡಿದ್ದಾರೆ.ಹೀಗಿದ್ದರೂ ಕೂಡ ಬಿಡುಗಡೆ ಮುನ್ನವೇ ಸಾಕಷ್ಟು ವಿರೋದಗಳನ್ನು ಹುಟ್ಟಿಹಾಕಿಕೊಂಡಿದೆ ಆದಿಪುರುಷ ಸಿನಿಮಾ.ಕೇವಲ ಪೋಸ್ಟರ್ ನಿಂದಲೇ ಹೆಚ್ಚು ನೆಗಟಿವ್ ಕಾಮೆಂಟ್ಸ್ ಹುಟ್ಟಿಕೊಂಡಿರುವ ಈ ಸಿನಿಮಾ ಬಿಡುಗಡೆ ನಂತರ ಯಾವ ತರಹದ ರೆಸ್ಪಾನ್ಸ್ ಪಡೆಯಬಹುದು ಎನ್ನುವ ಭಯ ಉಂಟಾಗಿದೆ.ಮುಂದಿನ ವರ್ಷದ ಮಧ್ಯದಲ್ಲಿ ಈ ಎರಡು ಸಿನಿಮಾಗಳು ತೆರೆಗೆ ಅಪ್ಪಳಿಸಲಿದೆ ಎನ್ನಲಾಗುತ್ತಿದೆ.
ಸದ್ಯ ದಲ್ಲಿ ಟಾಲಿವುಡ್ ಅಂಗಳದಲ್ಲಿ ‘ಅನ್ಸ್ಟಾಪಬಲ್’ -2 ಶೋ ಭಾರಿ ಸದ್ದು ಮಾಡುತ್ತಿದೆ.ಇನ್ನು ಈ ಶೋ ಗೆ ಐದನೇ ವಾರದ ಅತಿಥಿಯಾಗಿ ಬಂದಿದ್ದರು. ಈಗಾಗಲೇ ಪ್ರಭಾಸ್ ಎಪಿಸೋಡ್ ಪ್ರೋಮೊ ರಿಲೀಸ್ ಆಗಿದೆ. ಕೆಲವೊಮ್ಮೆ ಶೋನಲ್ಲಿ ಅತಿಥಿಗಳ ಆತ್ಮೀಯರಿಗೆ ಫೋನ್ ಮಾಡಿ ಬಾಲಯ್ಯ ಮಾತನಾಡುವ ವಾಡಿಕೆ ಇದೆ. ಅದೇ ರೀತಿ ಪ್ರಭಾಸ್ ಎಪಿಸೋಡ್ನಲ್ಲಿ ನಟ ರಾಮ್ಚರಣ್ಗೆ ಕಾಲ್ ಮಾಡಿದ್ದಾರೆ. ಈ ವೇಳೆ ಪ್ರಭಾಸ್ ಸೀಕ್ರೆಟ್ ಹೇಳುವಂತೆ ಚರಣ್ ಬಳಿ ಬಾಲಯ್ಯ ಕೇಳಿದಾಗ, ಇನ್ನೆರಡು ತಿಂಗಳಲ್ಲಿ ಪ್ರಭಾಸ್ ಮದುವೆ ಎಂದು ರಾಮ್ಚರಣ್ ತಿಳಿಸಿದ್ದಾರೆ.
ಅದಕ್ಕೆ ಪ್ರೋಮೊದಲ್ಲಿ ‘ಏನ್ ಹೇಳ್ತಿದ್ದಿಯಾ ಡಾರ್ಲಿಂಗ್?’ ಪ್ರಭಾಸ್ ಕೇಳಿರುವುದನ್ನು ನೋಡಬಹುದು ಎನ್ನುತ್ತಿದ್ದಾರೆ. ಈ ಶೋ ನ ಪ್ರೊಮೋ ಈಗಾಗಲೇ ಕೋಟಿ ಗಟ್ಟಲೆ ವ್ಯುಸ್ ಪಡೆದುಕೊಂಡಿದೆ.ಇನ್ನು ಈ ಶೋ ಡಿಸಂಬರ್ 30 ರಂದು ಬಿಡುಗಡೆ ಪಡೆಯಲಿದೆ.ಇದೀಗ ಈ ಶೋ ಮತ್ತೊಂದು ಪ್ರೊಮೋ ಬಿಡುಗಡೆ ಮಾಡಲಿದೆ ಆ ಪ್ರೊಮೋ ಮೊದಲಿನ ಪ್ರೊಮೋ ಗಿಂತ ಬಹಳ ನಗು ತರಿಸಿ ಎಲ್ಲರೂ ಹೊಟ್ಟೆ ಹುನ್ನಾಗಿಸುವಷ್ಟು ನಕ್ಕು ನಾಗಿಸುವಂತೆ ಮಾಡಿದೆ.
ಈಗಾಗಲೇ ಪ್ರಭಾಸ್ ಅವರ ಮದುವೆಯ ಬಗ್ಗೆ ಚರ್ಚೆ ನಡೆಯುವ ವೇಳೆ ಗೋಪಿಚಂದ್ ಒಟ್ಟಿಗೆ ಬಾಲಯ್ಯನ ಅನ್ಸ್ಟಾಪಬಲ್ ಶೋನಲ್ಲಿ ಕಾಣಿಸಿಕೊಂಡಿದ್ದಾರೆ. ಇವರಿಗೂ ತಮ್ಮ ಮದುವೆಯ ಬಗ್ಗೆ ಕೇಳಿದಾಗ ನಾನು ಪ್ರಭಾಸ್ ಅವರ ಮದುವೆಯ ನಂತರ ನಾನು ಮದುವೆಯಾಗುತ್ತೇನೆ ಎಂದು ಉತ್ತರಿಸಿದ್ದಾರೆ. ಇನ್ನು ಇದೇ ಪ್ರಶ್ನೆಯನ್ನು ಪ್ರಭಾಸ್ ಅವರಿಗೆ ಕೇಳಿದಾಗ ನಾನು “ಸಲ್ಮಾನ್ ಖಾನ್” ಅವರ ಮದುವೆಯ ನಂತರ ನಾನು ಕೂಡ ವೈವಾಹಿಕ ಜೀವನಕ್ಕೆ ಕಾಲಿಡುತ್ತೇನೆ ಎಂದು ಉತ್ತರಿಸಿ ಎಲ್ಲರೂ ನಗುವಂತೆ ಮಾಡಿದ್ದಾರೆ.
ಈ ಹಿಂದೆ ಕೃತಿ ಸೇನನ್ ಅವರೊಟ್ಟಿಗೆ ಡೇಟ್ ಮಾಡುತ್ತಿದ್ದಾರೆ ಎಂದು ಸುದ್ದಿಯಾಗಿತ್ತು.ವರುಣ್ ಧವನ್ ಮಾಡಿದ ಕಾಲೆಳೆದ ವಿಷಯಕ್ಕೆ ಇಂದು ದೊಡ್ಡ ಮಟ್ಟದ ಸುದ್ದಿಯಾಗಿತ್ತು ಇನ್ನು ಆ ವಿಚರವಾಗಿ ಕೃತಿ ಮಾತನಾಡಿ ಎಲ್ಲಾ ಗಾಳಿ ಸುದ್ದಿಗೆ ಬ್ರೇಕ್ ಹಾಕಿದ್ದಾರೆ. ಈಗ ಹುಟ್ಟಿರುವ ವೈರಲ್ ಟಾಪಿಕ್ ಸಧ್ಯದಲ್ಲಿ ಯಾವ ತಿರುವು ಪಡೆದುಕೊಳ್ಳಲಿದೆ ಎಂದು ನಾವು ಕಾಡುನೋಡಬೇಕಿದೆ.



