ಚಿನ್ನ ಅಥವಾ ಬಂಗಾರ ರಸ್ತೆಯ ತುಂಬೆಲ್ಲ ಬಿದ್ದಿದೆ ಎಂದೆ ನೀಎಲ್ಲ ಏನು ಮಾಡಬಹುದು. ಸಹಜವಾಗಿಯೇ ಮುಗಿಬಿದ್ದು ಅದಕ್ಕಾಗಿ ಹುಡುಕಾಡುತ್ತೀರಿ . ಅಂತಹದ್ದೇ ಘಟನೆಯೊಂದರ ವಿಡಿಯೋ ಇದೀಗ ಸದ್ದು ಮಾಡುತ್ತಿದೆ. ವಜ್ರಗಳ ಮಾರಾಟ ಹಾಗೂ ಖರೀದಿಯ ಮಿನಿ ಬಜಾರ್ ಪ್ರದೇಶವಾದ ಗುಜರಾತ್ ನ ವರಾಚ್ಚಾ ಪ್ರದೇಶದಲ್ಲಿ ವ್ಯಕ್ತಿಯೊಬ್ಬರು ಆಕಸ್ಮಿಕವಾಗಿ ವಜ್ರದ ಪ್ಯಾಕೇಟ್ ವೊಂದು ಬಿದ್ದು ಹೋಗಿದೆ ಎಂಬ ವದಂತಿ ಹಬ್ಬಿದ ಪರಿಣಾಮ ರಸ್ತೆಯಲ್ಲಿ ಜನರು ಗುಂಪು, ಗುಂಪಾಗಿ ವಜ್ರ ಹುಡುಕುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ವರದಿಗಳ ಪ್ರಕಾರ, ವಜ್ರ ಮಾರಾಟದ ಉದ್ಯಮಿಯೊಬ್ಬರು ಬೈಕ್ ನಲ್ಲಿ ಬರುತ್ತಿದ್ದ ವೇಳೆ ಕೋಟ್ಯಂತರ ರೂಪಾಯಿ ಮೌಲ್ಯದ ವಜ್ರದ ಪ್ಯಾಕೇಟ್ ಬಿದ್ದು ಹೋಗಿದೆ ಎಂಬ ಸುದ್ದಿ ಎಲ್ಲೆಡೆ ಹಬ್ಬಿರುವುದಾಗಿ ತಿಳಿಸಿದೆ. ವಜ್ರದ ಚೀಲ ಕಳೆದುಹೋಗಿದೆ ಎಂಬ ಸುದ್ದಿ ವೈರಲ್ ಆಗುತ್ತಿದ್ದಂತೆಯೇ ಜನರು ಗುಂಪು, ಗುಂಪಾಗಿ ರಸ್ತೆಯಲ್ಲಿ ವಜ್ರಕ್ಕಾಗಿ ಹುಡುಕುತ್ತಿರುವ ಫೋಟೋ ಮತ್ತು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಈ ಸುದ್ದಿ ಹಬ್ಬುತ್ತಿದ್ದಂತೆ ಸುತ್ತಮುತ್ತಲಿನ ಜನರೆಲ್ಲ ಗುಂಪು ಗುಂಪಾಗಿ ಬಂದು ಮಾರ್ಕೆಟ್ ರಸ್ತೆಯಲ್ಲಿನ ಧೂಳನ್ನು ಸಂಗ್ರಹಿಸುತ್ತಿರುವುದು ವಿಡಿಯೋದಲ್ಲಿ ಕಂಡುಬಂದಿದೆ. ಇದರಲ್ಲಿ ಕೆಲವರಿಗೆ ವಜ್ರಗಳು ಸಿಕ್ಕಿರುವುದಾಗಿ ವರದಿಯಾಗಿದೆ. ಆದರೆ ಇಲ್ಲಿ ಸಿಕ್ಕಿದ ವಜ್ರದ ಹರಳುಗಳು ‘ಅಮೆರಿಕನ್ ಡೈಮಂಡ್ಸ್’ ಅಂದರೆ ನಕಲಿ ವಜ್ರಗಳು ಎಂಬುರು ತಡವಾಗಿ ಬೆಳಕಿಗೆ ಬಂದಿದೆ. ಆದರೆ ಈ ವಿಡಿಯೋ ಮಾತ್ರ ವೈರಲ್ ಆಗುತ್ತಿದೆ.