ಯಾವುದೇ ವ್ಯಕ್ತಿ ಜೈಲಿಗೆ ಹೋಗಿ, ಜೈಲಿನಲ್ಲಿ ಒಂದಷ್ಟು ದಿವಸ ಇದ್ದು ಬಂದರೆ, ಸಂಪೂರ್ಣವಾಗಿ ಬದಲಾಗಿರುತ್ತಾರೆ. ವೀಕ್ ಆಗಿರುತ್ತಾರೆ, ಒಳ್ಳೆಯ ಊಟ ಸಿಗದೇ ಸೊರಗಿ ಹೋಗಿರುತ್ತಾರೆ. ಜೈಲಿನಲ್ಲಿ ಯಾರು ಅವರ ಬೇಕು ಬೇಡಗಳನ್ನು ನೋಡಿಕೊಳ್ಳುವುದಿಲ್ಲ, ಯಾವುದೇ ಸೌಕರ್ಯ, ಸೌಲಭ್ಯಗಳು ಸಿಗುವುದಿಲ್ಲ, ಹೀಗೆ ನಾನಾ ಕಷ್ಟಗಳು ಇರುತ್ತದೆ. ಆದರೆ ಪವಿತ್ರಾ ಗೌಡ ಮಾತ್ರ ಡಿಫರೆಂಟ್. ಜೈಲಿನಿಂದ ರಿಲೀಸ್ ಆಗಿ ಹೊರಗಡೆ ಬರುವಾಗ, ಆಕೆಯ ಗ್ಲಾಮರ್ ಸ್ವಲ್ಪವು ಕಡಿಮೆ ಆಗಿರಲಿಲ್ಲ. ಒಳ್ಳೇ ಸಿನಿಮಾ ಶೂಟಿಂಗ್ ಮುಗಿಸಿಕೊಂಡು ಬರುವ ಹಾಗೆ ಕಂಡುಬಂದರು. ಇದೆಲ್ಲ ಹೇಗೆ ಸಾಧ್ಯ ಎನ್ನುವ ಪ್ರಶ್ನೆ ಶುರುವಾಗಿದೆ..

ಹೌದು, ಪವಿತ್ರಾ ಗೌಡ ಜಾಮೀನು ಸಿಕ್ಕಿ ಹೊರಬಂದ ರೀತಿಗೂ, ದರ್ಶನ್ ಅವರು ಹೊರಬಂದ ರೀತಿಗೂ ತುಂಬಾ ವ್ಯತ್ಯಾಸ ಇದೆ. ದರ್ಶನ್ ಅವರು ಆಸ್ಪತ್ರೆಯಿಂದ ಸೊಂಟ ಹಿಡಿದುಕೊಂಡು ಮಗನ ಜೊತೆಗೆ ಹೊರಗಡೆ ಬಂದರು, ಸೊರಗಿದ್ದರು, ಗಡ್ಡ ಮೀಸೆ ಬಿಟ್ಟಿದ್ದರು. ಬಹಳಷ್ಟು ಬದಲಾಗಿದ್ದರು. ಆದರೆ ಪವಿತ್ರಾ ಗೌಡ ಬಹಳ ಸುಂದರವಾಗಿ, ಒಳ್ಳೆ ಡ್ರೆಸ್ ಹಾಕೊಂಡು, ಲಿಪ್ ಸ್ಟಿಕ್ ಹಾಕೊಂಡು ಸ್ವಲ್ಪವು ಸೌಂದರ್ಯ ಮಾಸದಂತೆ, ನಗುನಗುತ್ತಾ ಜಾಮೀನು ಸಿಕ್ಕಿದೆ ಅನ್ನೋ ಸಂತೋಷದಲ್ಲಿ ತಮ್ಮನ ಜೊತೆಗೆ ಮಾತನಾಡಿಕೊಂಡು ಹೊರಬಂದರು. ಈ ದೃಶ್ಯ ನೋಡಿದರೆ, ಒಂದು ಸಿನಿಮಾ ಸೀನ್ ನೋಡಿದ ಹಾಗೆ ಅನ್ನಿಸಿತ್ತು.
ಹಲವಾರು ಜನರಿಗೆ ಇದೆಲ್ಲಾ ಹೇಗೆ ಸಾಧ್ಯ ಅಂತ ಅನ್ನಿಸಿದೆ. ದರ್ಶನ್ ಅವರ ಸ್ಥಿತಿ ಹಾಗಿದ್ದರೆ, ಪವಿತ್ರಾ ಏನು ಹೀಗಿದ್ದಾರೆ ಎನ್ನುವ ಪ್ರಶ್ನೆ ಶುರುವಾಗಿದೆ. ಅಸಲಿ ವಿಷಯ ಏನು ಎಂದರೆ, ದರ್ಶನ್ ಅವರು ಕೂಡ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇದ್ದಾಗ ಅವರಿಗೂ ಬೇಕಿದ್ದ ಎಲ್ಲವೂ ಸಿಗುತ್ತಿದ್ದು, ಸಿಗರೇಟ್, ಒಳ್ಳೆ ಊಟ, ಬೇಕಾದಾಗ ನಾನ್ ವೆಜ್, ಫೋನ್ ಎಲ್ಲವು ಒಳಗೆ ಸಿಗುತ್ತಿತ್ತು, ರಾಜ ವೈಭೋಗವೇ ಇತ್ತು. ಆದರೆ ದರ್ಶನ್ ಅವರಿಗೆ ಇದೆಲ್ಲಾ ಸಿಗುತ್ತಿರುವ ಫೋಟೋಸ್ ವೈರಲ್ ಆದ ನಂತರ, ಅವರನ್ನು ಬಳ್ಳಾರಿ ಸೆಂಟ್ರಲ್ ಜೈಲಿಗೆ ಶಿಫ್ಟ್ ಮಾಡಲಾಯಿತು. ಅಲ್ಲಿಗೆ ಹೋದ ನಂತರ ದರ್ಶನ್ ಅವರನ್ನು ಬೇರೆಲ್ಲಾ ಖೈದಿಗಳ ರೀತಿಯಲ್ಲೇ ನೋಡಿಕೊಳ್ಳಲಾಯಿತು.
ಉತ್ತಮ ಸಂಬಂಧಗಳನ್ನು ಕಾಯ್ದುಕೊಳ್ಳಲು, ವಯಸ್ಸಾದ ಕಾಲದಲ್ಲಿ ನೆಮ್ಮದಿಯಾಗಿ ಬದುಕಲು ಕೌಟುಂಬಿಕ ವಿವಾದಗಳನ್ನು ನಿರ್ವಹಿಸಿದ ಕರ್ನಾಟಕ ಉಚ್ಚ ನ್ಯಾಯಲಯದಲ್ಲಿ ಹಿರಿಯ ವಕೀಲರಾಗಿ ಸೇವೆ ಸಲ್ಲಿಸುತ್ತಿರುವ ಶ್ರೀಮತಿ ಸುಶೀಲರವರು ಕೊಟ್ಟಿದ್ದಾರೆನ್ನುವ ಸಲಹೆಗಳು ಇಲ್ಲಿವೆ.
ಸಂಗಾತಿಯ ಚುಚ್ಚು ಮಾತುಗಳಿಂದ ನರಳಬೇಡಿ..!
ಯಾವುದೇ ಸೌಲಭ್ಯ ಸಿಗದೇ ದರ್ಶನ್ ಅವರು ಸೊರಗಿದ್ದಾರೆ. ಇತ್ತ ಪವಿತ್ರಾ ಗೌಡ ಪರಪ್ಪನ ಅಗ್ರಹಾರ ಜೈ*ಲಿನಲ್ಲೇ ಇದ್ದ ಕಾರಣ ಅವರಿಗೆ ಎಲ್ಲಾ ಸೌಲಭ್ಯಗಳು ಸಿಕ್ಕಿದೆ, ದರ್ಶನ್ ಅವರೇ ಪವಿತ್ರಾ ಗೌಡ ಅವರನ್ನು ನೋಡಿಕೊಳ್ಳುವ ವ್ಯವಸ್ಥೆ ಮಾಡಿರಬಹುದು ಎನ್ನಿಸುತ್ತಿದೆ. ಅದಕ್ಕೆ ಪವಿತ್ರಾ ಗೌಡ ಅಷ್ಟು ಸಂತೋಷದಿಂದ ಆರಾಮಾಗಿ ಯಾವುದೇ ಗಿಲ್ಟ್ ಅಥವಾ ಬೇಸರ ಇಲ್ಲದೇ ಹೊರಬಂದರು. ಪವಿತ್ರಾ ಗೌಡ ಹೊರಬಂದ ನಂತರ ಅವರ ರಿಲೇಶನ್ ಗಳ ಜೊತೆಗೆ ಕಾರ್ ಹತ್ತಿ ದೇವಸ್ಥಾನಕ್ಕೆ ಹೋದರು, ಅಲ್ಲಿ ದರ್ಶನ್ ಅವರ ಹೆಸರಿನಲ್ಲಿ ಪವಿತ್ರಾ ಗೌಡ ಮತ್ತು ಅವರ ತಾಯಿ ಅರ್ಚನೆ ಮಾಡಿಸಿದ್ದನ್ನು ಸಹ ನೋಡಿದ್ದೇವೆ.

ಇದನ್ನೆಲ್ಲಾ ನೋಡಿದರೆ ಪವಿತ್ರಾ ಗೌಡ ಅವರನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂದು ದರ್ಶನ್ ಅವರೇ ವ್ಯವಸ್ಥೆ ಮಾಡಿರಬಹುದು ಎಂದು ಹೇಳಲಾಗುತ್ತಿದೆ. ಯಾಕೆಂದರೆ ದರ್ಶನ್ ಅವರಿಗೆ ಎಲ್ಲರ ಪರಿಚಯವಿದೆ, ಎಲ್ಲ ಥರ influence ಕೂಡ ಇದೆ. ಹಾಗಾಗಿ ದರ್ಶನ್ ಅವರೇ ಪವಿತ್ರಾ ಗೌಡ ಅವರಿಗೆ ಬೇಕಾಗಿದ್ದೆಲ್ಲವು ಸಿಗುವ ವ್ಯವಸ್ಥೆ ಮಾಡಿರಬಹುದು. ಅಷ್ಟೆಲ್ಲಾ ಸಪೋರ್ಟ್ ಇಲ್ಲದೆಯೇ ಹೋದರೆ, ಪವಿತ್ರಾ ಗೌಡ ಅವರಿಗೆ ಜೈ*ಲಿನಲ್ಲಿ ಲಿಪ್ ಸ್ಟಿಕ್ ಹಾಗೂ ಇನ್ನಿತರ ವಸ್ತುಗಳು ಎಲ್ಲವೂ ಹೇಗೆ ತಾನೇ ಸಿಗಬೇಕು. ಒಟ್ಟಿನಲ್ಲಿ ಈಗ ಎಲ್ಲರೂ ಕೂಡ ಹೊರಗಡೆ ಬಂದಿದ್ದು ಆಗಿದೆ.