ಕಳೆದ ವರ್ಷ ನಮ್ಮ ರಾಜ್ಯದಲ್ಲಿ ಹೆಚ್ಚು ಚರ್ಚೆಗೆ ಒಳಗಾದ ಹೆಸರು ಪವಿತ್ರಾ ಗೌಡ ಎಂದು ಹೇಳಿದರೆ ತಪ್ಪಲ್ಲ. ಇವರು ಚಂದನವನದ ಒಬ್ಬ ನಟಿಯಾಗಿ ಗುರುತಿಸಿಕೊಂಡಿರುವುದಕ್ಕಿಂತ, ರೇಣುಕಾಸ್ವಾಮಿ ಅವರ ಕೇಸ್ ಇಂದ ಹಾಗೂ ದರ್ಶನ್ ಅವರ ವಿಚಾರಕ್ಕೆ ಸುದ್ದಿ ಆಗಿದ್ದೇ ಹೆಚ್ಚು. ಪವಿತ್ರಾ ಗೌಡ ಈಗ ಹೊರಗಡೆ ಬಂದು, ಓಡಾಡಿಕೊಂಡು ಇದ್ದಾರೆ. ದೇವಸ್ಥಾನಗಳಿಗೆ ಭೇಟಿ ನೀಡುತ್ತಿದ್ದಾರೆ. ಅದರ ಜೊತೆಗೆ ಇನ್ಸ್ಟಾಗ್ರಾಮ್ ನಲ್ಲಿ ಇತ್ತೀಚೆಗೆ ಆಕ್ಟಿವ್ ಆಗಿರುವ ಪವಿತ್ರಾ ಶೇರ್ ಮಾಡುತ್ತಿರುವ ಸ್ಟೋರಿಗಳು ಭಾರಿ ವೈರಲ್ ಆಗುತ್ತಿದ್ದು, ಚರ್ಚೆಗೆ ಕೂಡ ಕಾರಣ ಆಗಿದೆ. ಇದೀಗ ಇವರು ಭಗವಾನ್ ಶ್ರೀಕೃಷ್ಣನ ಮಾತುಗಳನ್ನು ಹಂಚಿಕೊಂಡಿದ್ದಾರೆ. ಅದರಲ್ಲಿರುವ ಮಾತುಗಳು ಭಾರಿ ಚರ್ಚೆಗೆ ಕಾರಣ ಆಗಿದ್ದು, ಪವಿತ್ರಾ ಗೌಡ ಯಾರಿಗೆ ಟಾಂಗ್ ಕೊಡುತ್ತಿದ್ದಾರೆ ಎನ್ನುವ ಪ್ರಶ್ನೆ ಶುರುವಾಗಿದೆ.

ಅಷ್ಟಕ್ಕೂ ಪವಿತ್ರಾ ಗೌಡ ಹಂಚಿಕೊಂಡಿರುವ ಪೋಸ್ಟ್ ಏನು ಎಂದು ಹೇಳಿದರೆ.. “ಕಾಣದ ಕೈಗಳಿಂದ ಸಾವಿರಾರು ಕುತಂತ್ರಗಳು ನಡೆದರೇನಂತೆ ಮೇಲೊಬ್ಬ ಎಲ್ಲವನ್ನು ವೀಕ್ಷಿಸುತ್ತಿರುವನು ನಿಮ್ಮ ಕಣ್ಣೀರಿನ ಎಲ್ಲಾ ಹನಿಗಳಿಗೆ ನ್ಯಾಯ ನೀಡುವನು..” ಎಂದು ಶ್ರೀಕೃಷ್ಣನ ಮಾತುಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಈ ಮಾತುಗಳನ್ನು ಓದಿದ ನೆಟ್ಟಿಗರು ಪವಿತ್ರಾ ಗೌಡ ಈ ರೀತಿ ಟಾಂಗ್ ಕೊಡುತ್ತಿರೋದು ಯಾರಿಗೆ ಎಂದು ಕೇಳುತ್ತಿದ್ದಾರೆ. ಈ ಮಾತನ್ನ ವಿಜಯಲಕ್ಷ್ಮಿ ಅವರಿಗೆ ಹೇಳುತ್ತಿದ್ದಾರಾ ಅಥವಾ ಬೇರೆ ಯಾರಿಗಾದರೂ ಹೇಳುತ್ತಿದ್ದಾರಾ ಎನ್ನುವ ಪ್ರಶ್ನೆ ಈಗ ಶುರುವಾಗಿದೆ. ತಮ್ಮ ಬ್ಯುಸಿನೆಸ್ ಮತ್ತೆ ಶುರುವಾಗುವುದಾಗಿ ಇತ್ತೀಚೆಗೆ ಮತ್ತೊಂದು ಸ್ಟೋರಿ ಶೇರ್ ಮಾಡಿಕೊಂಡಿದ್ದರು ಪವಿತ್ರಾ ಗೌಡ. ಈಗ ಕೃಷ್ಣನ ಮಾತುಗಳನ್ನು ಹಂಚಿಕೊಂಡಿದ್ದಾರೆ.

ಈ ನಟಿಯ ಬಗ್ಗೆ ಹೇಳೋದಾದರೆ ಚಿತ್ರರಂಗಕ್ಕೆ ಬರುವ ಮೊದಲೇ ಇವರಿಗೆ ಸಂಜಯ್ ಸಿಂಗ್ ಎನ್ನುವ ವ್ಯಕ್ತಿಯ ಜೊತೆಗೆ ಮದುವೆಯಾಗಿ, ಖುಷಿ ಗೌಡ ಹೆಸರಿನ ಮಗು ಸಹ ಜನಿಸಿದಳು. ಆದರೆ ಗಂಡನ ಜೊತೆಗೆ ಭಿನ್ನಾಭಿಪ್ರಾಯದ ಕಾರಣ ದೂರವಾಗಿ, ಒಂಟಿಯಾಗಿ ಜೀವನ ನಡೆಸುವುದಕ್ಕೆ ಶುರುವಾದ ಬಳಿಕ ಬಣ್ಣದ ಗೀಳು ಹೆಚ್ಚಾಯಿತು ಎನ್ನಲಾಗಿದೆ. ಆಡಿಷನ್ಸ್ ಕೊಡುವುದಕ್ಕೆ ಶುರು ಮಾಡಿದ್ದ ಪವಿತ್ರಾ ಹೌದ ಛತ್ರಿಗಳು ಸಾರ್ ಛತ್ರಿಗಳು ಸಿನಿಮಾದಲ್ಲಿ ಸಹ ನಟಿಸಿದರು. ಇನ್ನು ಒಂದೆರಡು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಆದರೆ ಆ ಸಿನಿಮಾಗಳು ಇವರಿಗೆ ಅಷ್ಟೇನು ಯಶಸ್ಸು ತಂದುಕೊಡಲಿಲ್ಲ. ಸಿನಿಮಾ ಆಡಿಷನ್ ಸಮಯದಲ್ಲೇ ದರ್ಶನ್ ಅವರ ಪರಿಚಯ ಸಹ ಆಗಿದೆ. ಆ ಪರಿಚಯ ಸ್ನೇಹಕ್ಕೆ ತಿರುಗಿ, ಬಳಿಕ ಪ್ರೀತಿಯಾಗಿದೆ.
ಕಳೆದ ವರ್ಷ ಪವಿತ್ರಾ ಗೌಡ ನಟ ದರ್ಶನ್ ಅವರ ಜೊತೆಗಿರುವ ಒಂದಷ್ಟು ಫೋಟೋಗಳನ್ನು ಶೇರ್ ಮಾಡಿ, 10 ವರ್ಷಗಳಿಂದ ತಾವಿಬ್ಬರು ಜೊತೆಯಾಗಿ, ರಿಲೇಶನ್ಷಿಪ್ ನಲ್ಲಿ ಇರುವುದಾಗಿ ಬಹಿರಂಗವಾಗಿ ಹೇಳಿಕೊಂಡಿದ್ದರು. ಈ ಪೋಸ್ಟ್ ಹೊರಬಂದ ಬಳಿಕ ಸಿಕ್ಕಾಪಟ್ಟೆ ಚರ್ಚೆಗೆ ಕಾರಣ ಆಗಿತ್ತು. ದರ್ಶನ್ ಅವರ ಫ್ಯಾನ್ಸ್ ಗೆ, ನೆಟ್ಟಿಗರಿಗೆ ಎಲ್ಲರಿಗೂ ಆಶ್ಚರ್ಯ ತಂದಿತ್ತು. ಇನ್ನು ವಿಜಯಲಕ್ಷ್ಮೀ ದರ್ಶನ್ ಅವರು ಈ ಪೋಸ್ಟ್ ಇಂದ ಮನನೊಂದು, ಪವಿತ್ರಾ ಗೌಡ ಮೊದಲ ಗಂಡನ ಕೆಲವು ಫೋಟೋಸ್ ಶೇರ್ ಮಾಡಿ, ಈ ರೀತಿ ಇನ್ನೊಂದು ಸಂಸಾರ ಹಾಳು ಮಾಡಲು ಪ್ರಯತ್ನ ಪಟ್ಟರೆ, ಕಾನೂನಾತ್ಮಕವಾಗಿ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದಿದ್ದರು. ಇದಕ್ಕೆ ಪವಿತ್ರಾ ಗೌಡ ಸಹ ತಿರುಗೇಟು ನೀಡಿದ್ದರು. ಇದೆಲ್ಲವೂ ಒಂದು ಕಡೆಯಾದರೆ, ಈ ಘಟನೆ ನಡೆದ ಸ್ವಲ್ಪ ದಿನಕ್ಕೆ ಮತ್ತೊಂದು ದುರ್ಘಟನೆ ನಡೆದೆ ಹೋಯಿತು.

ರೇಣುಕಾಸ್ವಾಮಿ ಎನ್ನುವ ಚಿತ್ರದುರ್ಗ ಮೂಲದ ವ್ಯಕ್ತಿ ಪವಿತ್ರಾ ಗೌಡ ಅವರಿಗೆ ಅಸಭ್ಯವಾಗಿ ಮೆಸೇಜ್ ಮಾಡಿದ್ದಾನೆ ಎನ್ನುವ ಕಾರಣಕ್ಕೆ ಆತನನ್ನು ಬೆಂಗಳೂರಿಗೆ ಕರೆಸಿ ಚೆನ್ನಾಗಿ ಹೊಡೆದು, ಆತನನ್ನು ಮುಗಿಸಲಾಗಿದೆ. ರೇಣುಕಾಸ್ವಾಮಿ ಮೆಸೇಜ್ ಬಗ್ಗೆ ದರ್ಶನ್ ಅವರಿಗೆ ಹೇಳಿ, ಇಷ್ಟೆಲ್ಲಾ ಅಗೋದಕ್ಕೆ ಕಾರಣವಾದ ಪವಿತ್ರಾ ಗೌಡ, ಆತನನ್ನು ಕರೆಸಲು ಹೇಳಿ, ಆತ ಬಂದ ಮೇಲೆ ಹುಡುಗರು ಆತನಿಗೆ ಚೆನ್ನಾಗಿ ಹೊಡೆದ ಮೇಲೆ, ದರ್ಶನ್ ಅವರು ಸಹ ಹೋಗಿ ಅವರು ಹೊಡೆದು, ಕೊನೆಗೆ ಆ ವ್ಯಕ್ತಿ ಪ್ರಾಣ ಬಿಟ್ಟಿದ್ದಾನೆ. ಇದನ್ನು ಮುಚ್ಚಿ ಹಾಕುವ ಪ್ರಯತ್ನಗಳು, ಇನ್ನು ಕೆಲವು ವಿಷಯಗಳು ಸಹ ನಡೆದಿವೆ. ಆದರೆ ಪೊಲೀಸರು ಈ ಪ್ರಕರಣವನ್ನು ಬೇಧಿಸಿ, ಇದರಲ್ಲಿ ಭಾಗಿಯಾಗಿದ್ದ ಎಲ್ಲರನ್ನು ಹಿಡಿದು, ಬಂಧಿ*ಸಿದರು. ಈ ಕೇಸ್ ನಲ್ಲಿ ನಟ ದರ್ಶನ್, ನಟಿ ಪವಿತ್ರಾ ಗೌಡ ಸೇರಿದಂತೆ ಇನ್ನಷ್ಟು ಜನರು ಬಂಧಿತರಾದರು.
ಪವಿತ್ರಾ ಗೌಡ 6 ತಿಂಗಳ ಕಾಲ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇರಬೇಕಾಯಿತು. ನಟ ದರ್ಶನ್ ಅವರು ಪರಪ್ಪನ ಅಗ್ರಹಾರದಲ್ಲಿ ಒಂದಷ್ಟು ದಿವಸ ಬಳಿಕ ಬಳ್ಳಾರಿ ಜೈಲಿನಲ್ಲಿ ಒಂದಷ್ಟು ದಿವಸ ಇರುವಂಥ ಪರಿಸ್ಥಿತಿ ಎದುರಾಯಿತು. ದರ್ಶನ್ ಅವರಿಗೆ ಆರೋಗ್ಯ ಸಮಸ್ಯೆ ಇದ್ದು, ಸರ್ಜರಿ ಆಗಬೇಕಿದೆ ಎನ್ನುವ ಕಾರಣ ಕೊಟ್ಟು ಅವರಿಗೆ ಸ್ವಲ್ಪ ದಿವಸಕ್ಕಿಂತ ಮೊದಲೇ ಕಂಡೀಷನ್ ಜಾಮೀನು ಸಿಕ್ಕಿತ್ತು, ಆದರೆ ಡಿಸೆಂಬರ್ ತಿಂಗಳ ಕೊನೆಯ ವೇಳೆ ಎಲ್ಲರಿಗೂ ಪೂರ್ಣ ಪ್ರಮಾಣದ ಜಾಮೀನು ಸಿಕ್ಕಿ ಪೂರ್ತಿಯಾಗಿ ಹೊರಗಡೆ ಬಂದಿದ್ದಾರೆ. ದರ್ಶನ್ ಅವರು ತಮ್ಮ ಸಂಪೂರ್ಣ ಸಮಯವನ್ನು ಕುಟುಂಬದ ಜೊತೆಗೆ ಕಳೆಯುತ್ತಿದ್ದಾರೆ. ಇನ್ನು ಪವಿತ್ರಾ ಗೌಡ ಸಹ ಮಗಳ ಜೊತೆಗೆ ಸಮಯ ಕಳೆಯುತ್ತಿದ್ದು, ಇವರಿಗೆ ಹೊರ ರಾಜ್ಯಕ್ಕೆ ಹೋಗುವುದಕ್ಕೂ ಕೋರ್ಟ್ ಇಂದ ಪರ್ಮಿಶನ್ ಸಿಕ್ಕಿದೆ.

ಇತ್ತೀಚೆಗೆ ಶಿರಡಿ ಸಾಯಿಬಾಬಾ ದೇವಸ್ಥಾನಕ್ಕೆ ಭೇಟಿ ನೀಡಿ, ಕೆಲವು ಫೋಟೋಸ್ ಗಳನ್ನು ಶೇರ್ ಮಾಡಿಕೊಂಡಿದ್ದರು. ಹಾಗೆಯೇ ಇವರು ತಮ್ಮ ಬ್ಯುಸಿನೆಸ್ ಮತ್ತೆ ಶುರು ಮಾಡುವುದಕ್ಕೆ ಕೆಲವು ವಸ್ತುಗಳನ್ನು ತರುವುದಕ್ಕೆ ಹೊರ ರಾಜ್ಯಕ್ಕೆ ಹೋಗಬೇಕು ಎಂದಿದ್ದು, ಓಡಾಡುತ್ತಿದ್ದಾರೆ. ಶೀಘ್ರದಲ್ಲೇ ಮತ್ತೆ ಬ್ಯುಸಿನೆಸ್ ಶುರು ಮಾಡುವುದಕ್ಕೆ , ಮರಳಿ ಬರುವುದಕ್ಕೆ ಸ್ವಲ್ಪ ಸಮಯ ಅಷ್ಟೇ ಇದೆ ಎಂದು ಪೋಸ್ಟ್ ಸಹ ಹಾಕಿಕೊಂಡಿದ್ದರು. ಇದೆಲ್ಲದರ ನಡುವೆ ಪವಿತ್ರಾ ಗೌಡ ಕೃಷ್ಣನ ವಚನ ಹಾಕಿ, ಟಾಂಗ್ ಕೊಟ್ಟಿರುವುದು ಭಾರಿ ವೈರಲ್ ಆಗಿದೆ. ನಿಜಕ್ಕೂ ಇವರು ಟಾಂಗ್ ಕೊಟ್ಟಿರೋದು ಯಾರಿಗೆ ಎಂದು ತಲೆಕೆಡಿಸಿಕೊಂಡಿದ್ದಾರೆ ಡಿಬಾಸ್ ಫ್ಯಾನ್ಸ್.