ಭಾರತದಲ್ಲಿ ಶತಮಾನಗಳಿಂದಲೂ ಸ್ತ್ರೀ ದೌರ್ಜನ್ಯ ನಡೆಯುತ್ತಲೇ ಬಂದಿದೆ. ಆದರೆ ಸ್ವಾತಂತ್ರ್ಯದ ನಂತರ ಸರ್ಕಾರಗಳು ಸ್ತ್ರೀ ಸಬಲೀಕರಣಕ್ಕಾಗಿ ಹಲವು ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ಸದ್ಯ, ಕೇಂದ್ರ ಸರ್ಕಾರವೂ ಹೆಣ್ಣು ಮಕ್ಕಳ ಶಿಕ್ಷಣ, ಹಕ್ಕು, ಆರೋಗ್ಯ, ತೆರಿಗೆ ವಿನಾಯಿತಿ, ಉತ್ತಮ ಬಡ್ಡಿ ಸೇರಿದಂತೆ 5 ಮಹತ್ವದ ಯೋಜನೆಗಳ ಮಾಹಿತಿ ಇಲ್ಲಿವೆ. ಪೋಷಕರು ಈ ಮಾಹಿತಿಗಳನ್ನು ತಿಳಿಯಲೇ ಬೇಕು.

- ಸುಕನ್ಯ ಸಮೃದ್ಧಿ ಯೋಜನೆ
ಬ್ಯಾಂಕ್ಗಳಲ್ಲಿ ಹೆಣ್ಣು ಮಗುವಿನ ಹೆಸರಿನಲ್ಲಿ ಸುಕನ್ಯಾ ಸಮೃದ್ಧಿ ಖಾತೆಯನ್ನು ತೆರೆದರೆ ಹೆಣ್ಣು ಮಗುವಿಗೆ 10 ವರ್ಷ ತುಂಬುವವರೆಗೆ ಖಾತೆಯನ್ನು ತೆರೆಯಬಹುದು. ಈ ಖಾತೆಯ ಮೆಚ್ಯೂರಿಟಿ ಅವಧಿ 21 ವರ್ಷಗಳು, ಅಥವಾ 18 ವರ್ಷ ವಯಸ್ಸಿನ ನಂತರ ಹುಡುಗಿಯ ಮದುವೆಯಾಗುವವರೆಗೆ. ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಹೂಡಿಕೆ ಮಾಡುವ ಮೊತ್ತಕ್ಕೆ ವಾರ್ಷಿಕವಾಗಿ 7.6 ಶೇಕಡಾ ಬಡ್ಡಿದರ ದೊರೆಯಲಿದೆ. - CBSE ಉಡಾನ್ ಯೋಜನೆ
ಈ ಯೋಜನೆಯನ್ನು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಅಡಿಯಲ್ಲಿ ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ 2014 ರಲ್ಲಿ ಪ್ರಾರಂಭಿಸಿದೆ. ಫಲಾನುಭವಿ ವಿದ್ಯಾರ್ಥಿನಿ ಐಐಟಿ ಅಥವಾ ಎನ್ಐಟಿ ಅಥವಾ ಯಾವುದೇ ಕೇಂದ್ರೀಯ ಅನುದಾನಿತ ತಾಂತ್ರಿಕ ಶಿಕ್ಷಣ ಸಂಸ್ಥೆಗಳಲ್ಲಿ ಸೀಟು ಪಡೆದರೆ ಮತ್ತು ಉಡಾನ್ ತರಗತಿಗಳಲ್ಲಿ ಕನಿಷ್ಠ 75% ಗಳಿಸಿದರೆ, ಅವರ ಬೋಧನಾ ಶುಲ್ಕಗಳು, ಪ್ರವೇಶ ಶುಲ್ಕಗಳು ಮತ್ತು ಹಾಸ್ಟೆಲ್ ಫೀಸ್ ವಿಷಯದಲ್ಲಿ ಹಣಕಾಸಿನ ನೆರವು ದೊರೆಯುತ್ತದೆ.
3.ಬಾಲಿಕಾ ಸಮೃದ್ಧಿ ಯೋಜನೆ
ಈ ಬಾಲಿಕಾ ಸಮೃದ್ಧಿ ಯೋಜನೆಯನ್ನು ಭಾರತ ಸರ್ಕಾರವು ಬಡತನ ರೇಖೆಗಿಂತ ಕೆಳಗಿರುವ ಕುಟುಂಬದಲ್ಲಿ ಜನಿಸಿದ ಎರಡು ಹೆಣ್ಣು ಮಕ್ಕಳಿಗಾಗಿ ಜಾರಿಗೊಳಿಸಿದೆ. BPL ಕುಟುಂಬಗಳ ಹೆಣ್ಣು ಮಗುವಿಗೆ ಜನ್ಮ ನೀಡುವ ತಾಯಿಗೆ 500/- ರೂಗಳನ್ನು ಈ ಯೋಜನೆಯಡಿಯಲ್ಲಿ ನೀಡಲಾಗುತ್ತದೆ.
4.ಧನಲಕ್ಷ್ಮಿ ಯೋಜನೆ
2008ರಲ್ಲಿ ಭಾರತದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಂಸ್ಥೆಯು ಈ ಯೋಜನೆಯನ್ನು ಪ್ರಾರಂಭಿಸಿತು. ನವೆಂಬರ್ 8, 2008 ರ ನಂತರ ಜನಿಸಿದ ಎಲ್ಲಾ ಹೆಣ್ಣು ಮಕ್ಕಳಿಹೆ 5,000 ರೂಪಾಯಿ ದೊರೆಯುತ್ತದೆ. ಹೆಣ್ಣು ಮಗುವಿನ ಜನನ ನೋಂದಣಿಯ ವೇಳೆ 5,000 ರೂ. ನೀಡಲಾಗುವುದು. ನಂತರ ಶಿಶು ಅವಸ್ಥೆಯ ವಿವಿಧ ಹಂತಗಳಲ್ಲಿ 1,250 ರೂ. ಪಾವತಿಸಲಾಗುವುದು. ಜೊತೆಗೆ ಶೈಕ್ಷಣಿಕ ಬೆಳವಣಿಗೆಗೆ ಹಂತ ಹಂತವಾಗಿ ಸಹಾಯಧನ ನೀಡಲಾಗುತ್ತದೆ.
5.ಪ್ರೌಢ ಶಿಕ್ಷಣಕ್ಕಾಗಿ ರಾಷ್ಟ್ರೀಯ ಪ್ರೋತ್ಸಾಹಕ ಯೋಜನೆ
ಶಿಕ್ಷಣ ಸಚಿವಾಲಯವು 14 ರಿಂದ 18 ವರ್ಷ ವಯಸ್ಸಿನ ಹೆಣ್ಣು ಮಕ್ಕಳ ಶಿಕ್ಷಣವನ್ನು ಉತ್ತೇಜಿಸುವ ಉದ್ದೇಶದಿಂದ ಈ ಯೋಜನೆ ಜಾರಿಗೊಳಿಸಿದೆ. ಒಂಬತ್ತನೇ ತರಗತಿಗೆ ದಾಖಲಾದ ಮೇಲೆ 3000 ರೂ ಮೊತ್ತವನ್ನು ಅರ್ಹ ಅವಿವಾಹಿತ ಹುಡುಗಿಯರ ಹೆಸರಿನಲ್ಲಿ ಸ್ಥಿರ ಠೇವಣಿಯಾಗಿ ಠೇವಣಿ ಮಾಡಲಾಗುತ್ತದೆ. ಆ ಹೆಣ್ಣು ಮಗುವಿಗೆ 18 ವರ್ಷ ತುಂಬಿದ ನಂತರ ಹಾಗೂ 10 ನೇ ತರಗತಿಯಲ್ಲಿ ಉತ್ತೀರ್ಣರಾದ ನಂತರ ಅದನ್ನು ಬಡ್ಡಿಯೊಂದಿಗೆ ಅವರಿಗೆ ದೊರೆಯುತ್ತದೆ.