ಜಗತ್ತಿನಲ್ಲಿ ಅನಿರೀಕ್ಷಿತವಾಗಿ ನಡೆಯುವ ಕೆಲವೊಂದು ವಿಚಿತ್ರ ಘಟನೆಗಳನ್ನು ನಂಬಲಾಗದಿದ್ದರೂ ನಂಬಲೇ ಬೇಕು. ಅಂತಹದ್ದೊಂದು ಅಚ್ಚರಿಯ ಘಟನೆ ಇದೀಗ ಬೆಳಕಿಗೆ ಬಂದಿದ್ದು ಜಗತ್ತಿನ್ನೆಲ್ಲಡೆ ಆಶ್ಚರ್ಯಕರ ವಾತಾವರಣ ಸೃಷ್ಟಿಸಿದೆ. ಹೌದು ಕಿನ್ಯಾ ದೇಶದ ಶಾಲೆಯೊಂದರಲ್ಲೆ ಏಕಕಾಲಕ್ಕೆ ಹಲವು ವಿದ್ಯಾರ್ಥಿನಿಯರ ಮೇಲೆ ಪಾರ್ಶ್ವವಾಯು ದಾಳಿನಡೆಸಿದೆ. ವಿದ್ಯಾರ್ಥಿನಿಯರು ದೇಹದ ನಿಯಂತ್ರಣ ಕಳೆದುಕೊಂಡು ಕುಂಟುತ್ತಾ ಬೀಳುವ ಭಯಾನಕ ಘಟನೆಯ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ.
ಈ ಘಟನೆ ಪೂರ್ವ ಆಫ್ರಿಕಾದ ಕೀನ್ಯಾದಲ್ಲಿ ನಡೆದಿದೆ. ಅಲ್ಲಿನ ಶಾಲೆಯ ಅನೇಕ ಹೆಣ್ಣುಮಕ್ಕಳನ್ನು ನೀವು ಈ ವಿಡಿಯೋದಲ್ಲಿ ನೋಡಬಹುದು. ಆಕಸ್ಮಿಕವಾಗಿ ಅಲ್ಲಿ ಏನಾಗಿದೆ ಎಂಬುದು ತಿಳಿಯುತ್ತಿಲ್ಲ. ಆದರೆ ಎಲ್ಲಾ ಹುಡುಗಿಯರು ಕುಂಟಲು ಪ್ರಾರಂಭಿಸುತ್ತಾರೆ ಮತ್ತು ಸಂಪೂರ್ಣವಾಗಿ ನಡೆದಾಡಲು ಸಾಧ್ಯವಾಗದೆ ಅವರು ನೆಲಕ್ಕೆ ಕುಸಿಯುತ್ತಿದ್ದಾರೆ. ಈ ವೇಳೆ ಅನೇಕ ಹುಡುಗಿಯರು ನೆಲದ ಮೇಲೆ ಬಿದ್ದಿದ್ದಾರೆ. ವೀಡಿಯೋದಲ್ಲಿ ಕಾಣುವ ದೃಶ್ಯ ಕರಳು ಹಿಂಡುವಂತಿದೆ. ಈ ಬಾಲಕಿಯರು ಪಾರ್ಶ್ವವಾಯು ದಾಳಿಗೆ ಗುರಿಯಾಗಿದ್ದಾರೆ ಎನ್ನಲಾಗುತ್ತಿದೆ.
ಸದ್ಯ, ದಿಢೀರ್ ಪಾರ್ಶ್ವವಾಯುವಿಗೆ ಗುರಿಯಾಗಿ ಕುಸಿದು ಬಿದ್ದಿರುವ ವಿದ್ಯಾರ್ಥಿನಿಯರು ಸೇಂಟ್ ಥೆರೆಸಾ ಅರೆಗಿ ಶಾಲೆಯ ವಿದ್ಯಾರ್ಥಿನಿಯರು ಎನ್ನಲಾಗಿದೆ.ಈ ಭಯಾನಕ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಭಯದ ವಾತಾವರಣ ಸೃಷ್ಟಿಸಿದೆ. ಈ ಘಟನೆಯಿಂದಾಗಿ ಅಲ್ಲಿನ ಕೆಲವೊಂದು ಶಾಲೆಗಳಿಗೆ ಮುಂಜಾಗ್ರತಾ ರಜೆಗಳನ್ನು ನೀಡಲಾಗಿದೆ ಎನ್ನಲಾಗುತ್ತಿದೆ. ಈ ಘಟನೆಗೆ ನಿಖರ ಇನ್ನೂ ಕಾರಣ ತಿಳಿದುಬಂದಿಲ್ಲ.