ನಟಿ “ರಶ್ಮಿಕಾ” ಅವರ ವಿರುದ್ಧ ಮಾತುಗಳು ಹೆಚ್ಚಾಗುತ್ತಿದ್ದಂತೆ ಅವರ ಅಭಿಮಾನಿಗಳ ಬಳಗದ ಬಲ ಕೂಡ ಹೆಚ್ಚಾಗುತ್ತಿದೆ.ಇವರ ವಿರುದ್ದ ಮಾತುಗಳು ಹಾಗೂ ಆರೋಪಗಳು ಹೆಚ್ಚುತ್ತಿದ್ದಂತೆ ಅವರ ಪರ ವು ಹೆಚ್ಚಾಗುತ್ತಲೇ ಇದೆ. ಇನ್ನು ರಶ್ಮಿಕಾ ಅಭಿಮನಿಗಳಿಗೆ ಅಲ್ಲದೆ ಸಾಕಷ್ಟು ಸೆಲಬ್ರೆಟಿಗಳಿಗೂ ಕೊಡ ಇಷ್ಟ ಪಡುವವರೆ ಹೆಚ್ಚಾಗಿದ್ದಾರೆ.ಸದ್ಯದಲ್ಲಿ ರಶ್ಮಿಕಾ ಅವರು ಸ್ಯಾಂಡಲ್ವುಡ್ ಅಲ್ಲದೆ ಟಾಲಿವುಡ್,ಕಾಲಿವುಡ್ ಹಾಗೂ ಬಾಲಿವುಡ್ ನಲ್ಲಿ ಬಹಳ ಬೇಡಿಕೆಯನ್ನು ಹೆಚ್ಚಿಸಿಕೊಂಡಿದ್ದಾರೆ.ಸ್ಯಾಂಡಲ್ ವುಡ್ನ ಸಹಾಯದಿಂದ ಕೇವಲ ಕೊಡಗಿನ ಕುವರಿಯಾಗಿದ್ದ ಈ ನಟಿ ಇಂದು ಎತ್ತರಕ್ಕೆ ಬೆಳದಿದ್ದಾರೆ. ಈ ವಿಚರವನ್ನು ಈ ನಟಿ ಮರೆತಿದ್ದಾರೆ ಆದರೆ ನಮ್ಮ ಕನ್ನಡಿಗರು ಮಾಡಿದ ಸಹಾಯವನ್ನು ಇಂದಿಗೂ ಹೇಳಿಕೊಂಡು ತಿರುಗುವವರಲ್ಲ ಆದರೆ ನಮ್ಮನ್ನು ಗೌರವಿಸದೆ ಇದ್ದವರನ್ನು ನಾವು ಯೆಂದುಗೂ ಗೌರವ ನೀಡುವವರಲ್ಲ ಇದೀಗ ಅದೇ ಸಾಲಿಗೆ ರಶ್ಮಿಕಾ ಕೂಡ ಬಂದಿದ್ದಾರೆ.

ಕೊಡಗಿನ ಕುವರಿಯಾಗಿದ್ದ ರಶ್ಮಿಕಾ ಮಂದಣ್ಣ ಇಂದು ಬಹುಭಾಷಾ ನಟಿಯಾಗಿದ್ದಾರೆ.ಇದೀಗ ರಶ್ಮಿಕಾ ನಟನೆಯ ‘ಮಿಷನ್ ಮಜ್ನು’ ಸಿನಿಮಾ ಹೊಸ ವರ್ಷದ ಜನವರಿ 20ಕ್ಕೆ ಚಿತ್ರ ಮಂದಿರಗಳಲ್ಲಿ ಅಲ್ಲದೆ ಈ ಬಾರಿ ನೇರವಾಗಿ ಓಟಿಟಿಯಲ್ಲಿ ಬಿಡುಗಡೆ ಪಡೆಯುತ್ತಿದೆ.ಇನ್ನು ಕಳೆದ ತಿಂಗಳು ಬಿಡುಗಡೆಯಾಗಿದ್ದ ಅಮಿತಾಬ್ ಬಚ್ಚನ್ ಮಗಳ ಪಾತ್ರದಲ್ಲಿ ರಶ್ಮಿಕಾ ನಟಿಸಿದ್ದ ‘ಗುಡ್ಬೈ’ ನಲ್ಲಿ ನಟಿಸಿದ್ದರು. ಆದರೆ ಸಿನಿಮಾ ಪ್ರೇಕ್ಷಕರನ್ನು ಚಿತ್ರ ಮಂದಿರಗಳಲ್ಲಿ ಕರೆತರುವಲ್ಲಿ ವಿಫಲವಾಗಿತ್ತು.ಇದೀಗ ‘ಅನಿಮಲ್’ ಚಿತ್ರದಲ್ಲಿ ರಣಬೀರ್ ಕಪೂರ್ ಜೊತೆ ನಟಿಸ್ತಿದ್ದಾರೆ. ಅದರೊಟ್ಟಿಗೆ ತೆಲುಗಿನಲ್ಲಿ ‘ಪುಷ್ಪ- 2’ ಶೂಟಿಂಗ್ ಕೂಡ ಆರಂಭವಾಗಿದೆ. ಇನ್ನು ತಮಿಳಿನಲ್ಲಿ ‘ವಾರೀಸು’ ರಿಲೀಸ್ಗೆ ಸಜ್ಜಾಗಿದೆ.
ಹೀಗೆ ಸಾಕಷ್ಟು ವಿರೋಧಗಳ ನಡುವೆಯೂ ರಶ್ಮಿಕಾ ಬ್ಯಸಿ ಶೆಡ್ಯೂಲ್ ನಲ್ಲಿ ಇದ್ದಾರೆ. ಇನ್ನು ನಮ್ಮ ಸ್ಯಾಂಡಲ್ ನಲ್ಲಿ ಈ ನಟಿಗೆ ಯಾವ ಪ್ರೋತ್ಸಾಹ ಖಂಡಿತ ಇಲ್ಲ. ಇದಕ್ಕೆ ಕಾರಣ ಈ ನಟಿಯ ವರ್ತನೆ.ಇವರ ವರ್ತನೆಯಿಂದ ನಮ್ಮ ಕನ್ನಡಿಗರು ಬೇಸರಗೊಂಡ ಆ ಬೇಸರ ಇಂದು ಈ ನಟಿಯನ್ನು ಬ್ಯಾನ್ ಮಾಡಿ ಎಂಬ ಆಕ್ರೋಶವನ್ನು ಹೊರಹಾಕುವಂತೆ ಮಾಡಿದೆ.ಸದ್ಯದಲ್ಲಿ ಈ ನಟಿಯನ್ನು ಬ್ಯಾನ್ ಮಾಡಬೇಕು ಎಂಬ ಗಂಟಾ ಘೋಷ ಎಲ್ಲೆಲ್ಲೂ ಹರಿದಾಡುತ್ತಿದೆ.ಆದರೆ ಈ ಬಗ್ಗೆ ಯಾವ ಅಭಿಪ್ರಾಯವನ್ನು ಈ ನಟಿ ಹೊರಹಾಕಿಲ್ಲ.ಈ ಆರೋಪ ಮುಂದೆ ಯಾವ ರೂಪ ತೆಗೆದುಕೊಳ್ಳುತ್ತದೆ ಎಂದು ನಾವು ಕಾದುನೀಡಬೇಕಿದೆ.
ಈ ನಟಿಗೆ ಎಷ್ಟರ ಮಟ್ಟಿಗೆ ನೆರವು ಸಿಕ್ಕಿದೆ ಎಂದು ಉಧಾಹರಣೆ ನೀಡುವುದಾದರೆ ಸಿನಿಮಾ ರಂಗದಲ್ಲಿ ನಟ ನಟಿಯರಿಗೆ ಕೊಂಚ ವಿರೋಧ ಹುಟ್ಟಿಕೊಳ್ಳುತ್ತಿದ್ದಂತೆ ಆ ಕಲಾವಿದರ ಅವಕಾಶಗಳೂ ಕೂಡ ಕಡಿಮೆಯಾಗುತ್ತದೆ. ಆದರೆ ರಶ್ಮಿಕಾ ಅವರ ವಿಚಾರದಲ್ಲಿ ಎಲ್ಲವೂ ಉಲ್ಟಾ ಆಗುತ್ತಿದೆ.ಇವರಿಗೆ ವಿರೋಧಗಳು ಹುಟ್ಟಿಕೊಂಡಿದ್ದರು ಕೂಡ ಅವಕಾಶಗಳು ಏನು ಕಡಿಮೆಯಾಗಿಲ್ಲ. ಎಲ್ಲಾ ಭಾಷೆಯಲ್ಲೂ ಕೂಡ ಅವಕಾಶ ಹೆಚ್ಚುತ್ತಲೇ ಇದೆ.ಇದೀಗ ಇಲ್ಲೊಬ್ಬ ಕಾಲಿವುಡ್ ನಟ ನಾನು ರಶ್ಮಿಕಾ ಅವರೊಟ್ಟಿಗೆ ಸೆಕಬ್ರೆಟಿ ಡೇಟ್ ಹೋಗಬೇಕು ಎಂದು ತಿಳಿಸಿದ್ದಾರೆ.ಆ ನಟ ಯಾರೆಂದು ತಿಳಿಯಲು ಮುಂದಿನ ಸಾಲುಗಳನ್ನು ಓದಿ.
ನಿಮಗೆಲ್ಲರಿಗೂ ಕಾಲಿವುಡ್ ನಟ “ವಿಶಾಲ್” ಬಗ್ಗೆ ತಿಳಿದೇ ಇದೆ.ಸದ್ಯದಲ್ಲಿ ಈ ನಟ ‘ಲಾಠಿ’ ಸಿನಿಮಾ ದೊಡ್ಡಮಟ್ಟದಲ್ಲಿ ಹೆಸರು ಮಾಡ್ತಿದೆ. ಇನ್ನು ಈ ಚಿತ್ರವನ್ನು ಕನ್ನಡಕ್ಕೂ ಡಬ್ ಮಾಡಿ ರಿಲೀಸ್ ಮಾಡಲಾಗುತ್ತದೆ ಎಂಬ ಮಾತಿದೆ.ಇನ್ನು ವಿಶಾಲ್ ತಂದೆ ಕನ್ನಡಿಗರು ಅಷ್ಟೇ ಅಲ್ಲದೆ ವಿಶಾಲ್ ಸಂಬಂಧಿಕರು ಸಾಕಷ್ಟು ಜನ ಬೆಂಗಳೂರಿನ ಸ್ಥಳೀಯರು. ಹಾಗಾಗಿ ವಿಶಾಲ್ ಅವರು ಚಿಕ್ಕಂದಿನಿಂದಲೂ ಸಾಕಷ್ಟು ಬಾರಿ ಬೆಂಗಳೂರಿಗೆ ಭೇಟಿ ಕೊಟ್ಟಿದ್ದರಂತೆ. ಕನ್ನಡ ಸ್ವಲ್ಪ ಮಾತನಾಡಲು ಬರುತ್ತೆ. ಮುಂದಿನ ದಿನಗಳಲ್ಲಿ ಸಂಪೂರ್ಣವಾಗಿ ಕಲಿತು ನನ್ನ ಪಾತ್ರಕ್ಕೆ ಕನ್ನಡದಲ್ಲಿ ನಾನೇ ಡಬ್ ಮಾಡುತ್ತೀನಿ ಎಂದು ಹೇಳಿದ್ದಾರೆ.ಇದೀಗ ರಶ್ಮಿಕಾ ಅವರ ಜೊತೆ ಡೇಟ್ ಮಾಡಬೇಕು ಎಂದು ಸ್ವತಹ ತಮ್ಮ ಸಿನಿಮಾ ಪ್ರಚಾರದ ಸಮಯದಲ್ಲಿ ತಿಳಿಸಿದ್ದಾರೆ.