ನಟ ಶಾರುಖ್ ಖಾನ್ ಅವರಿಗೆ ದೇಶ ಮಾತ್ರವಲ್ಲ, ವಿದೇಶಗಳಲ್ಲಿಯೂ ಸಾಕಷ್ಟು ಅಭಿಮಾನಿಗಳು ಇದ್ದಾರೆ. ಅವರು ಎಲ್ಲಿಗೆ ಹೋದರೂ ನೋಡಲು ಜನಸಮೂಹ ಸೇರುತ್ತದೆ. ಶಾರುಖ್ ಬಂಗಲೆಯ ಹೊರಗೆ ಜನರು ಗಂಟೆಗಟ್ಟಲೆ ಕಾಯುತ್ತಾರೆ. ಅವರ ಒಂದು ಲುಕ್ಗಾಗಿ ಚಿತ್ರದ ಸೆಟ್ಗಳಿಗೆ ಭೇಟಿ ನೀಡುತ್ತಾರೆ. ಫೋಟೋ ತೆಗೆದುಕೊಳ್ಳಲು ಜನಸಂದಣಿ ಎಷ್ಟಿರುತ್ತೆಂದರೆ ನಿಯಂತ್ರಿಸುವುದು ಕಷ್ಟವಾಗುತ್ತದೆ. ಅಂದಹಾಗೆ, ಬಾಂಗ್ಲಾದೇಶದಲ್ಲೂ ಇದೇ ರೀತಿಯ ಸೂಪರ್ಸ್ಟಾರ್ ಇದ್ದಾರಂತೆ. ಅವರೊಂದಿಗೆ ಜನರು ಫೋಟೋಕ್ಕಾಗಿ ಗಂಟೆಗಟ್ಟಲೆ ಕಾಯುತ್ತಾರೆ. ಜನರು ಈ ನಾಯಕನನ್ನು ಬಾಂಗ್ಲಾದೇಶದ ಶಾರುಖ್ ಖಾನ್ ಎಂದೂ ಕರೆಯುತ್ತಾರೆ ಮತ್ತು ಅವರ ಫಾಲೋರ್ಸ್ ಸಂಖ್ಯೆ ನೋಡಿದರೆ ನೀವು ಬೆರಗಾಗುತ್ತೀರಿ. ಅವರು ಬೇರಾರೂ ಅಲ್ಲ ಬಾಂಗ್ಲಾದೇಶದ ‘ಸೂಪರ್ ಸ್ಟಾರ್’ ಅಶ್ರಫುಲ್ ಅಲೋಮ್ ಸಯೀದ್ ಅಲಿಯಾಸ್ ಅಲೋಮ್ ಬೋಗ್ರಾ.
ಅತ್ಯಂತ ಬಡ ಕುಟುಂಬದಲ್ಲಿ ಜನಿಸಿದ ನಟ
ಅಲೋಮ್ ಬೋಗ್ರಾ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಪ್ರತಿದಿನ ಅವರ ಬಗ್ಗೆ ಚರ್ಚೆಯಾಗುತ್ತದೆ. ಅಲೋಮ್ ಬೋಗ್ರಾ ಬಾಂಗ್ಲಾದೇಶದಲ್ಲಿ ಸಾಕಷ್ಟು ಜನಪ್ರಿಯ. ಅಲೋಮ್ ನಟನೆಯ ಜೊತೆಗೆ ಮಾಡೆಲಿಂಗ್ ಕೂಡ ಮಾಡುತ್ತಾರೆ. ಬಾಂಗ್ಲಾದೇಶದ ಕ್ರಿಕೆಟಿಗರು ಕೂಡ ಅಲೋಮ್ ಬೋಗ್ರಾ ಅವರ ಅಭಿಮಾನಿಗಳು. ಅಲೋಮ್ ಅವರ ಪೂರ್ಣ ಹೆಸರು ಅಶ್ರಫುಲ್ ಅಲೋಮ್ ಸಯೀದ್. ಅಲೋಮ್ ಅತ್ಯಂತ ಬಡ ಕುಟುಂಬದಲ್ಲಿ ಜನಿಸಿದರು. ತಂದೆ ಖಾರ ತಿಂಡಿ ಮಾರುವ ಮೂಲಕ ಸಂಸಾರ ನಡೆಸುತ್ತಿದ್ದರು. ಅಲೋಮ್ 10 ವರ್ಷದವರಾಗಿದ್ದಾಗ, ಅವರ ತಂದೆ ಅವರನ್ನು ಮತ್ತು ಅವರ ತಾಯಿಯನ್ನು ತೊರೆದರು. ಎರಡನೇ ಮದುವೆಯಾಗಿ ಸ್ವಂತ ಮನೆಯಲ್ಲಿ ನೆಲೆಸಿದರು. ಬಡತನದಿಂದ ಹೊರಬರಲು, ಅಲೋಮ್ ತನ್ನ ಸ್ವಂತ ವ್ಯವಹಾರವನ್ನು ಪ್ರಾರಂಭಿಸಿದರು. ಕೆಲಸದ ಕಾರಣದಿಂದ ಓದಲು ಸಾಧ್ಯವಾಗದೆ ಏಳನೇ ತರಗತಿಯಲ್ಲಿ ಅನುತ್ತೀರ್ಣನಾದರು.

ಮಾಡೆಲ್ ಆಗಬೇಕೆಂಬ ನಿರ್ಧಾರ
ಅಲೋಮ್ ಸಿಡಿ ಮತ್ತು ಕ್ಯಾಸೆಟ್ಗಳನ್ನು ಮಾರಾಟ ಮಾಡಲು ಪ್ರಾರಂಭಿಸಿದರು. ಕೊನೆಗೆ ಈ ಕೆಲಸ ಕೈಗೂಡದೇ ಕೇಬಲ್ ನೆಟ್ ವರ್ಕ್ ವ್ಯವಹಾರ ಆರಂಭಿಸಿದರು. ಅಲೋಮ್ ತನ್ನ ಗ್ರಾಮ ಇರುಲಿಯಾದಿಂದ ಇದನ್ನು ಪ್ರಾರಂಭಿಸಿದರು. ಈ ಕೆಲಸದಲ್ಲಿ ಅವರು ಹೆಚ್ಚು ಗಳಿಸಲು ಸಾಧ್ಯವಾಗಲಿಲ್ಲ. ಗಳಿಸಿದ್ದು ಕೇವಲ 70-80 ರೂ. ಅಷ್ಟರಲ್ಲಿ ಅಲೋಮ್ ಮನದಲ್ಲಿ ಮಾಡೆಲ್ ಆಗಬೇಕೆಂಬ ಆಸೆ ಹುಟ್ಟಿತು. ಅವರು ಕ್ಯಾಸೆಟ್ಗಳಲ್ಲಿ ಮಾಡೆಲ್ ಗಳನ್ನು ನೋಡಿದರು. ನಂತರ ತಾವೂ ಮಾಡೆಲ್ ಆಗಬೇಕೆಂದು ನಿರ್ಧರಿಸಿದರು. ಆರಂಭದಲ್ಲಿ ಜನರು ಅವರನ್ನು ತಡೆದರು. ಆದರೆ ಅವರ ನೈತಿಕತೆ ಹೆಚ್ಚಿತ್ತು.
ಚಲನಚಿತ್ರಗಳಲ್ಲಿ ಕೆಲಸ
2008 ರಲ್ಲಿ ಅಲೋಮ್ ತನ್ನ ಮ್ಯೂಸಿಕ್ ವಿಡಿಯೋವನ್ನು ಪ್ರಾರಂಭಿಸಿದರು. ತಮ್ಮ ಸ್ಥಳೀಯ ಕೇಬಲ್ ಟಿವಿ ನೆಟ್ವರ್ಕ್ನಲ್ಲಿ ಈ ಹಾಡನ್ನು ತೋರಿಸಲು ಪ್ರಾರಂಭಿಸಿದರು. ಜನರು ಅವರ ಹಾಡನ್ನು ಇಷ್ಟಪಡಲಾರಂಭಿಸಿದರು. ಸ್ವಲ್ಪ ಸಮಯದ ನಂತರ ಅವರು ಜನಪ್ರಿಯವಾಗಲು ಪ್ರಾರಂಭಿಸಿದರು. ಇದಾದ ಬಳಿಕ ಅಲೋಮ್ ಅವರ ವಿಡಿಯೋ ಕೂಡ ಯೂಟ್ಯೂಬ್ ನಲ್ಲಿ ಅಪ್ಲೋಡ್ ಆಗಿದ್ದು, ಇಲ್ಲಿಂದ ಇಂಟರ್ ನೆಟ್ ಸೆನ್ಸೇಷನ್ ಆಗಿದ್ದಾರೆ. ಇದರ ನಂತರ, ಅವರು ಚಲನಚಿತ್ರಗಳು ಮತ್ತು ಮ್ಯುಸಿಕ್ ವಿಡಿಯೋಗಳಲ್ಲಿ ಕೆಲಸ ಮಾಡಲು ಆಫರ್ಗಳನ್ನು ಪಡೆಯಲು ಪ್ರಾರಂಭಿಸಿದರು. ಇದರ ನಂತರ ಅಲೋಮ್ ಅನೇಕ ಚಿತ್ರಗಳಲ್ಲಿ ಕಾಣಿಸಿಕೊಂಡರು. ಅಲೋಮ್ ‘ಮಾರ್ ಚೌಕ್’, ‘ಶಾಹೋಶಿ ಹೀರೋ ಅಲೋಮ್’, ‘ಟೋಕೈ’, ‘ಬಾದ್ಶಾ ದಿ ಕಿಂಗ್’ ಮುಂತಾದ ಚಿತ್ರಗಳಲ್ಲಿ ಪ್ರಸಿದ್ಧರಾದರು. ಅವರ ಜನಪ್ರಿಯತೆ ಹೆಚ್ಚುತ್ತ ಅವರು ಸೂಪರ್ ಸ್ಟಾರ್ ಆದರು. ಇವರ ಪತ್ನಿ ಸುಮಿ ಅಖ್ತರ್. ಇವರಿಗೆ ಇಬ್ಬರು ಮಕ್ಕಳಿದ್ದಾರೆ.