ಸಿನಿಮಾರಂಗ ಎಂದರೆ ಹಾಗೆಯೇ ಅಲ್ಲಿ ಎಷ್ಟೇ ದೊಡ್ಟ ಸೆಲೆಬ್ರಿಟಿಗಳಾದರೂ ಕೂಡ ಟೀಕೆಗಳು ತಪ್ಪಿದ್ದಲ್ಲ. ಜೊತೆಗೆ ಸಿನಿ ಕ್ಷೇತ್ರಕ್ಕೆ ಕಾಲಿಡಲು ಬಯಸುವವರು ಎಲ್ಲದಕ್ಕೂ ಸಿದ್ದರಾಗಿಯೇ ಇರಬೇಕು. ದಿನಕ್ಕೊಂದು ವಿವಾದವನ್ನು ಮೈಮೇಲೆ ಎಳೆದುಕೊಳ್ಳುವ ಸೆಲೆಬ್ರಿಟಿಗಳು ಸಾಕಷ್ಟಿದ್ದಾರೆ. ಸದ್ಯ, ಭಾರತೀಯ ಸಿನಿರಂಗದ ಅತ್ಯದ್ಭುತ ಕಲಾವಿದ ಎನಿಸಿಕೊಂಡಿರುವ ಬಹುಭಾಷಾ ನಟ ನವಾಜುದ್ದೀನ್ ಸಿದ್ದಿಕಿ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರಿಂದ ತೀವ್ರ ಟೀಕೆಗಳನ್ನು ಎದುರಿಸುತ್ತಿದ್ದಾರೆ. ಹೀಗಾಗಲು ಕಾರಣ ಏನು ಅನ್ನುವ ಪ್ರಶ್ನೆ ನಿಮ್ಮಲ್ಲಿದ್ರೆ ಈ ವರದಿ ಓದಿ.

ಬಾಲಿವುಡ್ ನಟ ನವಾಜುದ್ದೀನ್ ಸಿದ್ದಿಕಿ ಇದೀಗ ‘ಟೀಕು ವೆಡ್ಸ್ ಶೇರು’ ಎಂಬ ವೆಬ್ ಸೀರಿಸ್ ಒಂದರಲ್ಲಿ ನಟಿಸುತ್ತಿದ್ದು, ಇದನ್ನು ಕಂಗನಾ ರಾಣಾವತ್ ನಿರ್ಮಿಸುತ್ತಿದ್ದಾರೆ.ಈ ವೆಬ್ ಸೀರಿಸ್ ವಿಚಾರವಾಗಿ ಸಿದ್ದಿಕಿ ಸದ್ಯ ಭಾರೀ ವಿವಾದಕ್ಕೀಡಾಗಿದ್ದಾರೆ. ಹೌದು, ಇತ್ತೀಚೆ ‘ಟೀಕು ವೆಡ್ಸ್ ಶೇರು’ ವೆಬ್ ಸೀರಿಸ್ ಟ್ರೇಲರ್ ರಿಲೀಸ್ ಆಗಿದ್ದು ಇದರಲ್ಲಿ ನವಾಜುದ್ದೀನ್ ಸಿದ್ದಿಕಿ ಇದರ ನಾಯಕಿಗೆ ಲಿಪ್ ಲಾಕ್ ಮಾಡುವ ದೃಶ್ಯವಿದೆ. ವೆಬ್ ಸೀರಿಸ್ ನಾಯಕಿ ಅವನಿತ್ ಕೌರ್ ಕೇವಲ 21 ವಯಸ್ಸಿನ ಯುವತಿಯಾಗಿರುವುದೆ ಸಿದ್ದಿಕಿ ಟೀಕೆಗೆ ಒಳಗಾಗಲು ಕಾರಣ.
ಇಲ್ಲಿ ನವಾಜುದ್ದೀನ್ ಸಿದ್ದಿಕಿಗೆ ವಯಸ್ಸು 49 ಮತ್ತು ಅವನಿತ್ ಕೌರ್ ಗೆ 21 ವಯಸ್ಸಾಗಿರುವುದೇ ಈ ವಿವಾದಕ್ಕೆ ಪ್ರಮುಖ ಕಾರಣ. ಟ್ರೇಲರ್ ನಲ್ಲಿನ ಈ ದೃಶ್ಯ ವೈರಲ್ ಆಗುತ್ತಿದ್ದಂತೆ ಕೆಂಡಾಮಂಡಲವಾದ ನೆಟ್ಟಿಗರು ‘ಮಗಳ ವಯಸ್ಸಿನ ಹುಡುಗಿಯೊಂದಿಗೆ ಸಿದ್ದಿಕಿ ಲಿಪ್ ಲಾಕ್ ಮಾಡಿದ್ದು ಅಸಹ್ಯ’ ಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಟ್ರೇಲರ್ ನಲ್ಲಿ ಸಿದ್ದಿಕಿ ಹಾಗೂ ಕೌರ್ ಸಮುದ್ರ ದಡದಲ್ಲಿ ನಿಂತು ಪರಸ್ಪರ ಡೀಪ್ ಲಿಪ್ ಲಾಕ್ ಮಾಡುವ ದೃಶ್ಯವಿದೆ. ಕೆಲವರು ‘ಸಿದ್ದಿಕಿ ಈ ಹಿಂದೆ ರೋಮ್ಯಾಂಟಿಕ್ ಚಿತ್ರದಲ್ಲಿ ನಟಿಸುವುದಕ್ಕೆ ನನಗೆ ಇಷ್ಟ ಎಂದಿದ್ದರು. ಅದು ಇದಕ್ಕೆ ಆಗಿರಬೇಕು’ ಎಂದರೆ, ಮತ್ತೆ ಕೆಲವರು ‘ಸಿದ್ದಿಕಿಯ ಇಂತಹ ಅತಿರೇಕದ ವರ್ತನೆಗಳನ್ನು ಇನ್ನು ಸಹಿಸುವುದಿಲ್ಲ’ ಎಂದಿದ್ದಾರೆ.
ಬಿಡುಗಡೆಗೂ ಮುನ್ನ ವಿವಾದ ಕಿಡಿ ಹೊತ್ತಿಸಿರುವ ಈ ವೆಬ್ ಸೀರಿಸ್ ನೆಟ್ ಫ್ಲಿಕ್ಸ್ ನಲ್ಲಿ ಜೂ.23ರಂದು ಬಿಡುಗಡೆಯಾಗಲಿದ್ದು, ಬಾಲಿವುಡ್ ಕ್ವೀನ್ ಕಂಗನಾ ರಾಣಾವತ್ ನಿರ್ಮಿಸಿದ್ದಾರೆ. ಇದರಲ್ಲಿ ನವಾಜುದ್ದೀನ್ ಸಿದ್ದಿಕಿ ಹಾಗೂ ಅವನಿತ್ ಕೌರ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಸದ್ಯ, ಟ್ರೇಲರ್ ನಲ್ಲಿ ಕಂಡು ಬಂದಿರುವ ಈ ಕಿಸ್ಸಿಂಗ್ ಸೀನ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಟೀಕೆ, ಆಕ್ರೊಶಗಳು ವ್ಯಕ್ತವಾಗುತ್ತಿದೆ. ಆದರೆ ಇದ್ಯಾವುದಕ್ಕೂ ಚಿತ್ರತಂಡ ತುಟಿಕ್ ಪಿಟಿಕ್ ಎಂದಿಲ್ಲ.