ಸಲ್ಮಾನ್ ಖಾನ್ ಅವರ ಬಿಗ್ ಬಾಸ್ ಶೋ ಈ ಕ್ಷಣ ಸದ್ಯ ಭಾರೀ ಸುದ್ದಿಯಲ್ಲಿದೆ. ಏಕೆಂದರೆ ಶೋನಲ್ಲಿ ವೈಲ್ಡ್ ಕಾರ್ಡ್ ಎಂಟ್ರಿಯಾಗಲಿದೆ ಎಂದು ಗೊತ್ತಾದಾಗಿನಿಂದ ಜನ ಕಾಯುತ್ತಿದ್ದಾರೆ. ಅಂದಹಾಗೆ ವೀಕೆಂಡ್ನಲ್ಲಿ ಸಲ್ಮಾನ್ ಖಾನ್ ಈ ಎಲ್ಲಾ ವೈಲ್ಡ್ ಕಾರ್ಡ್ ಸ್ಪರ್ಧಿಗಳೊಂದಿಗೆ ಬರುವುದರ ಜೊತೆಗೆ ಒಂದು ರೀತಿ ಹವಾ ಸೃಷ್ಟಿಸಲಿದ್ದಾರೆ. ಈ ಪಟ್ಟಿಯಲ್ಲಿ ಡಾಲಿ ಚಾಯ್ ವಾಲಾ, ಸಿಂಗರ್ ಖುಷಿ ಮತ್ತು ಶಾರ್ಟ್ ಟ್ಯಾಂಕ್ ಖ್ಯಾತಿಯ ಅಶ್ನೀರ್ ಗ್ರೋವರ್ ಇದ್ದಾರೆ. ಒಟ್ಟಾರೆ ಈ ವಾರ ಪ್ರೇಕ್ಷಕರಿಗೆ ಮನರಂಜನೆಯ ಡೋಸ್ ಸಿಗಲಿದೆ. ಪ್ರಸ್ತುತ ಸಲ್ಮಾನ್ ಖಾನ್ ಅಶ್ನೀರ್ ಗ್ರೋವರ್ಗೆ ಕ್ಲಾಸ್ ತೆಗೆದುಕೊಂಡಿರುವ ಪ್ರೋಮೋ ಕಾಣಿಸಿಕೊಂಡಿದೆ.
#WeekendKaVaar Promo – Salman bash Digvijay and Avinash. Ashneer Grover ko kuch yaad dilaya bhai nepic.twitter.com/YOukqCDaTZ
— #BiggBoss_Tak (@BiggBoss_Tak) November 15, 2024
ಸಲ್ಮಾನ್ ಮಾತಿಗೆ ಸೈಲೆಂಟ್ ಆದ್ರಾ ಅಶ್ನೀರ್?
ಸಲ್ಮಾನ್ ಖಾನ್ ಅವರು ಅಶ್ನೀರ್ಗೆ ಪ್ರಶ್ನೆಯೊಂದನ್ನು ಕೇಳಿದರು, ‘ನಾವು ತುಂಬಾ ಹಣಕ್ಕೆ ಸಹಿ ಹಾಕಿದ್ದೇವೆ ಎಂದು ನೀವು ಪಾಡ್ಕ್ಯಾಸ್ಟ್ನಲ್ಲಿ ತಪ್ಪಾಗಿ ವಿವರಿಸಿದ್ದೀರಿ…” ಎಂದಾಗ ಇದಕ್ಕೆ ನಯವಾಗಿ ಪ್ರತಿಕ್ರಿಯಿಸಿದ ಅಶ್ನೀರ್, ‘ಸಾರ್, ಪಾಡ್ಕಾಸ್ಟ್ನಲ್ಲಿನ ಆ ಅಂಕಿ ಸರಿಯಾಗಿಲ್ಲದಿರಬಹುದು. ನಾವು ನಿಮ್ಮನ್ನು ಬ್ರಾಂಡ್ ಅಂಬಾಸಿಡರ್ ಆಗಲು ಆಫರ್ ನೀಡಿದಾಗ ಅದು ನಮ್ಮ ಬುದ್ಧಿವಂತ ನಿರ್ಧಾರವಾಗಿತ್ತು ಎನ್ನುತ್ತಾರೆ. ಆಗ ಅಶ್ನೀರ್ ಸ್ವರವನ್ನು ಗಮನಿಸಿದ ಸಲ್ಮಾನ್, “ನೀವು ಈಗ ಮಾತನಾಡುತ್ತಿರುವ ರೀತಿ (ಈ ಧ್ವನಿ) ನಿಮ್ಮ ವಿಡಿಯೋದಲ್ಲಿ” ಇರಲಿಲ್ಲ ಎಂದು ಪ್ರತಿಕ್ರಿಯೆ ನೀಡುತ್ತಾರೆ. ಸಲ್ಮಾನ್ ಈ ರೂಪವನ್ನು ನೋಡಿದ ಎಲ್ಲರೂ ಒಂದು ಕ್ಷಣ ಸ್ಟನ್ ಆಗುತ್ತಾರೆ.
Salman khan cooked Ashneer Grover
that Doglapan meme pic.twitter.com/iedUr04mwR
— Hail Hydra (@Lordofbattles8) November 15, 2024
ಅಷ್ಟಕ್ಕೂ ಆಗಿದ್ದೇನು?
ಒಂದು ವರ್ಷದ ಹಿಂದೆ ಅಶ್ನೀರ್ ಗ್ರೋವರ್ ಅವರ ವಿಡಿಯೋ ವೈರಲ್ ಆಗಿತ್ತು. ಚಿತ್ರೀಕರಣದ ವೇಳೆ ಸಲ್ಮಾನ್ ಖಾನ್ ಅವರನ್ನು ಅಶ್ನೀರ್ ಭೇಟಿಯಾದರು. ನಂತರ ಅವರು ತಮ್ಮ ಕಾರ್ಯಕ್ರಮವೊಂದರಲ್ಲಿ, ‘ನಾವು ಸಲ್ಮಾನ್ ಖಾನ್ ಅವರನ್ನು ಬ್ರಾಂಡ್ ಅಂಬಾಸಿಡರ್ ಆಗಿ ನೇಮಿಸಿಕೊಳ್ಳಲು ಬಯಸಿದ್ದೇವೆ. ನಾವು ಅವರನ್ನು ಸಂಪರ್ಕಿಸಿದಾಗ ಅವರ ತಂಡ 7.5 ಕೋಟಿ ರೂ. ಕೇಳಿತು. ನಂತರ ನಾನು ಅವರಿಗೆ 4.50 ಕೋಟಿ ರೂ.ಗಳನ್ನು ನೀಡಿದ್ದೇನೆ ಮತ್ತು ಸಲ್ಮಾನ್ ಖಾನ್ ಸಹ ಒಪ್ಪಿಕೊಂಡರು ಎಂದು ತಿಳಿಸಿದ್ದರು. ಅಶ್ನೀರ್ ಅವರ ಈ ಹೇಳಿಕೆಗೆ ಭಾರೀ ಗದ್ದಲ ಎಬ್ಬಿಸಿತು. ಬಿಗ್ ಬಾಸ್ 18 ರಲ್ಲಿ ಸಲ್ಮಾನ್ ಪುನಃ ಈ ವಿಷಯವನ್ನು ಪ್ರಸ್ತಾಪಿಸಿರುವುದನ್ನು ನಾವಿಲ್ಲಿ ನೋಡಬಹುದು.
ಯಾರು ಈ ಅಶ್ನೀರ್?
ಅಶ್ನೀರ್ ಅವರು ಫಿನ್ಟೆಕ್ ಕಂಪನಿ ಭಾರತ್ ಪೇಯ ಮಾಜಿ ಸಹ-ಸಂಸ್ಥಾಪಕ ಮತ್ತು ವ್ಯವಸ್ಥಾಪಕ ನಿರ್ದೇಶಕ. ಶಾರ್ಕ್ ಟ್ಯಾಂಕ್ ಇಂಡಿಯಾಕ್ಕೆ ಬಂದ ನಂತರ ಅವರು ಸಾಕಷ್ಟು ಜನಪ್ರಿಯರಾದರು.