ಸಾಕಷ್ಟು ಮಕ್ಕಳಲ್ಲಿ ಹೊಟ್ಟೆ ನೋವು ಅನ್ನುವುದು ಬಾದಿಸುತ್ತದೆ. ಆಗಾಗ ಮಕ್ಕಳು ಹೊಟ್ಟೆನೋವಿನಿಂದ ಅನುಭವಿಸುತ್ತದಲೇ ಇರುತ್ತಾರೆ. ಜಂತುಹುಳುಗಳು ಹೆಚ್ಚಾಗಿ ಕಂಡುಬರುವುದು ಊಟ ಸರಿಯಾಗಿ ಮಾಡದೆ ,ಸರಿಯಾದ ನಿದ್ರೆ ಮಾಡದೆ ,ಏನು ಒಂದು ರೀತಿಯ ಕಿರಿಕಿರಿಗಳು ಮತ್ತು ಹೆಚ್ಚಾದ ಹಠ ಸ್ವಭಾವಗಳು ಕಂಡುಬರುತ್ತದೆ. ಮಕ್ಕಳು ತಮ್ಮ ದೈನಂದಿನ ವಿಸರ್ಜನೆಗೆ ಮೂರು ಬಾರಿ ನೀಡಬೇಕು. ಸರಿಯಾದ ಸಮಯಕ್ಕೆ ಊಟ ಮಾಡುವುದು, ಇವೆಲ್ಲವೂ ಮಕ್ಕಳ ಬೆಳವಣಿಗೆಯಲ್ಲಿ ಸಾಮಾನ್ಯವಾಗಿ ಕಂಡುಬರುತ್ತದೆ. ಮತ್ತು ದೇಹ ಶಕ್ತಿಯಾಗಿದ್ದರೆ ಮಾತ್ರ ಚರ್ಮ ಕಾಂತಿಯನ್ನು ನೋಡಲು ಸಾಧ್ಯ.
ಎಷ್ಟೋ ಮಕ್ಕಳು ಒಣಗಿದೆ ಚರ್ಮ, ಕಪ್ಪು ಬಣ್ಣ ,ದೇಹದ ತೂಕ ಕಡಿಮೆ ,ನೋಡಲು ಸಣಕಲು, ನಿದ್ರೆ ಸರಿಯಾಗಿ ಮಾಡದೆ ಇದ್ದರೆ ದೇಹದಲ್ಲಿ ಉಷ್ಣತೆ ಈ ರೀತಿ ಹಲವಾರು ತೊಂದರೆಗಳು ಬಾದಿಸುತ್ತದೆ. ಇದಕ್ಕೆ ಮೂಲ ಕಾರಣ ಮಕ್ಕಳ ಆಹಾರ ಪದ್ಧತಿ ಮತ್ತು ಜೀರ್ಣಾಂಗ ವ್ಯವಸ್ಥೆ. ಹೊರಗಿನ ತಿಂಡಿ ತಿನಿಸುಗಳನ್ನು ಹೆಚ್ಚಾಗಿ ತಿನ್ನುವುದು, ನೀರನ್ನು ಕಮ್ಮಿ ಪ್ರಮಾಣದಲ್ಲಿ ಕುಡಿಯುವುದರಿಂದ ಸಮಸ್ಯೆಗಳು ಕಾಣಿಸುತ್ತದೆ. ಇವುಗಳನ್ನು ನೀವು ಬದಲಾಯಿಸಿಕೊಳ್ಳಬೇಕಾಗುತ್ತದೆ. ನಿಮ್ಮ ಆಹಾರ ಪದ್ಧತಿ ಜೊತೆಗೆ ಮಗುವಿನ ಆಹಾರ ಪದ್ಧತಿ ಬದಲಾಗಬೇಕು.
ಹಾಲು,ಹಣ್ಣು,ಎಳನೀರು ಮತ್ತು ತಂಪು ಮಾಡುವ ಆಹಾರಗಳನ್ನು ತೆಗೆದುಕೊಳ್ಳುವುದರಿಂದ, ಆ ಮಗುವಿನ ದೇಹ ಶುದ್ದಿಯಾದಾಗ ಮಾತ್ರ ಈ ತೊಂದರೆಯಿಂದ ಪರಿಹಾರಸಿಗಲು ಸಾಧ್ಯ. ಹರಳೆಣ್ಣೆ,ಕೊಬ್ಬರಿ ಅಥವಾ ತುಪ್ಪ ಇವುಗಳನ್ನು ಮಕ್ಕಳಿಗೆ ಕೊಡಿಸುವುದರಿಂದ ಹೊಟ್ಟೆ ಶುದ್ದಿಯಾಗುತ್ತದೆ. ಈ ರೀತಿ ಶುದ್ಧತೆ ಮಾಡಿಕೊಳ್ಳುವುದು ಅತೀ ಮುಖ್ಯವಾದ ಅಂಶ. ಎರಡು ಬೆಳ್ಳುಳ್ಳಿಯನ್ನು ಹುರಿದು, ಸ್ವಲ್ಪ ಕಲ್ಲು ಸಕ್ಕರೆ ಜೇನು ಅಥವಾ ಬೆಲ್ಲವನ್ನು ಸೇರಿಸಿ ಕುಡಿಸುವುದರಿಂದ ಹೊಟ್ಟೆ ನೋವು ಕಡಿಮೆಯಾಗುತ್ತದೆ.
ಸಣ್ಣ ಮಕ್ಕಳಿಗೆ ಏನಾದರೂ ಹೊಟ್ಟೆ ನೋವಿದ್ದರೆ ತುಳಸಿ ಶುಂಠಿಯನ್ನು ಜಜ್ಜಿ ಜೇನಿನೊಂದಿಗೆ ಕೊಡಬೇಕು. ಇದರಿಂದ ಜೀರ್ಣಶಕ್ತಿಯಾಗುತ್ತದೆ. ಹೊಟ್ಟೆ ನೋವು ಕಡಿಮೆಯಾಗುತ್ತದೆ. ತುಳಸಿ , ವೀಳ್ಯದೆಲೆ ರಸವನ್ನು ಕುಡಿಸುವುದರಿಂದ ಜೀರ್ಣಶಕ್ತಿಯನ್ನು ಹೆಚ್ಚಿಸಬಹುದು. ಪಪ್ಪಾಯ ಹಣ್ಣನ್ನು ಜೇನಿನಲ್ಲಿ ಸೇರಿಸಿ ಮಕ್ಕಳಿಗೆ ಕೊಡುವುದರಿಂದ ಜಂತುಹುಳಗಳು ನಾಶವಾಗುತ್ತದೆ. ಈ ರೀತಿ ಮಕ್ಕಳಿಗೆ ತಮಗೂ ದೇಹ ಶುದ್ದಿ, ಜೀರ್ಣಕ್ರಿಯೆಗೋಸ್ಕರ ಮನೆಮದ್ದುಗಳನ್ನು ಮಾಡುವುದರಿಂದ ಮಕ್ಕಳು ಹೊಟ್ಟೆ ನೋವಿನಿಂದ ಬಳಲುತ್ತಿದ್ದರೆ ಅತಿ ವೇಗವಾಗಿ ಕಡಿಮೆಯಾಗುತ್ತದೆ. ಜೀರ್ಣಕ್ರಿಯೆ ಆಗದೆ ಇದ್ದರೆ ಜೀರ್ಣಕ್ರಿಯೆಯಾಗುತ್ತದೆ.